ಸ್ಥಳ: ಮೆಲ್ಬರ್ನ್, ಆಸ್ಟ್ರೇಲಿಯಾ, ದಿನಾಂಕ: 20ನೇ ಜೂನ್, 1974 ಶ್ರೀಲ ಪ್ರಭುಪಾದರು ಮತ್ತು ಪತ್ರಿಕಾ ವರದಿಗಾರರೊಂದಿಗೆ ನಡೆದ ಸಂವಾದ
ವರದಿಗಾರ 1: ಪರಮ ಪೂಜ್ಯರೇ, ಜನರು ಪದೇ ಪದೇ ನಿಮ್ಮನ್ನು ಆಧ್ಯಾತ್ಮಿಕ ಜೀವನ ಎಂದರೇನು? ಎಂದು ಬೆನ್ನಟ್ಟಿ ಕೇಳುತ್ತಿರುತ್ತಾರೆ. ಆದರೆ ಅವರು ಈ ಜಗತ್ತನ್ನು ಸುಖಕರವಾಗಿಸಲು ಜಗತ್ತಿನ ವಸ್ತುಗಳ ಹಿಂದೆ ಬೆನ್ನಟ್ಟಿ ಹೋಗುತ್ತಿರುವುದನ್ನು ಮರೆತಿರುತ್ತಾರೆ.

ಶ್ರೀಲ ಪ್ರಭುಪಾದ: ಈ ಜಗತ್ತನ್ನು “ಸುಖಕರವಾಗಿಸುವುದೇ? ಇದು ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಯಿತೇ? ಉದಾಹರಣೆಗೆ ನೀರಿನಿಂದ ಮೀನನ್ನು ತೆಗೆದು ಭೂಮಿಯ ಮೇಲೆ ಹಾಕಿ. ಮೀನಿಗೆ ಮೆತ್ತನೆಯ ಹಾಸಿಗೆ ಮತ್ತು ಎಲ್ಲ ಒಳ್ಳೆಯದನ್ನು ಕೊಟ್ಟು ನೋಡಿ. ಆಗ ಮೀನು ಸುಖಕರವಾಗಿರುತ್ತದೆಯೇ?
ವರದಿಗಾರ 1: ಇಲ್ಲ, ಅದು ಅಸ್ತಿತ್ವ ಕಳೆದುಕೊಳ್ಳುತ್ತದೆ.
ಶ್ರೀಲ ಪ್ರಭುಪಾದ: ಅದೇ ರೀತಿ ನಾವು ಜೀವಿಗಳು ಚೇತನಾತ್ಮಗಳಾಗಿದ್ದೇವೆ. ಆದುದರಿಂದ ಈ ಭೌತಿಕ ಜಗತ್ತಿನಲ್ಲಿ ನಾವು ಈ ಐಹಿಕ ದೇಹದಲ್ಲಿ ಇರುವುದೆಂದರೆ ನೈಜ ಅಸ್ತಿತ್ವದಿಂದ ಹೊರತಾಗಿದ್ದೇವೆ. ಆದರೆ ದುರದೃಷ್ಟದ ಸ೦ಗತಿಯೆ೦ದರೆ ನಮ್ಮ ಶಿಕ್ಷಣ ಮುಂದ ಮತಿಯಿಂದಾಗಿದೆಯೆಂದರೆ ಅಧಿಕೃತರೆನಿಸಿಕೊಂಡವರಿಗೇ ನಾವು ಈ ದೇಹವಲ್ಲ ನಾವು ಚೇತನಾತ್ಮಗಳಾಗಿದ್ದೇವೆ ಎಂಬುದೇ ಗೊತ್ತಿಲ್ಲ.
ಅವರು ತಮ್ಮನ್ನು ತಾವು ದೊಡ್ಡ ದೊಡ್ಡ ತತ್ತ್ವಜ್ಞಾನಿಗಳು, ರಾಜತಾಂತ್ರಿಕರು, ಸಾಮಾಜಿಕ ಯೋಜನಾಗಾರರು ಎಂದು ನಿರೂಪಿಸುತ್ತಿದ್ದಾರೆ. ಆದರೆ ನಾವು ಈ ದೇಹದೊಳಗೆ ಚೇತನಾತ್ಮಗಳೆಂಬುದನ್ನೇ ಮರೆಯುತ್ತಿದ್ದಾರೆ. ಇಂದಿನ ನಾಯಕರೂ ಕೂಡ ಈ ದೇಹವನ್ನೇ ನಿಜವಾದ ಆತ್ಮ ಎಂದು ಸ್ವೀಕರಿಸುತ್ತಿದ್ದಾರೆ.
ಮತ್ತು ಅವರು ಈ ದೈಹಿಕ ಸೌಲಭ್ಯಗಳು ನಮ್ಮನ್ನು ಸಂತೋಷವಾಗಿಸುತ್ತಿದೆ” ಎಂದು ಆಲೋಚಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ದೇಹ ಮತ್ತು ಅದರ ಸುಖ ಸಾಧನಗಳು ಜಡದಿಂದ ಆಗಿವೆ ಮತ್ತು ನಾವು ಚೇತನಾತ್ಮಗಳಾಗಿದ್ದೇವೆ. ಇದೇ ಉದಾಹರಣೆಯನ್ನು ತೆಗೆದುಕೊಳ್ಳಿ, ಮೀನನ್ನು ಅದರ ನೈಸರ್ಗಿಕ ಪರಿಸರವಾದ ನೀರಿನಿಂದ ಹೊರತೆಗೆದು ಭೂಮಿಯ ಮೇಲೆ ಹಾಕಿದರೆ ಅದು ಸಂತೋಷವಾಗಿರುವುದಿಲ್ಲ.
ಅದೇ ರೀತಿ ಈ ಐಹಿಕ ದೇಹದಲ್ಲಿ ಎಲ್ಲಿಯವರೆಗೆ ನೀವು ಇರುತ್ತೀರೋ ಅಲ್ಲಿಯವರೆಗೆ ನೀವು ಶಾಶ್ವತವಾದ, ನಿಜವಾದ ಸುಖವನ್ನು ಅನುಭವಿಸುವುದಿಲ್ಲ ಮತ್ತು ನಿಮಗೆ ಜನನ -ವೃದ್ಧಾಪ್ಯ – ಮರಣಗಳಂತಹ ಅನೇಕ ಸಮಸ್ಯೆಗಳು ಬರುತ್ತವೆ. ಈ ಸಮಸ್ಯೆಗಳಿಗೆ ಕಾರಣ ನಾವು ಐಹಿಕ ದೇಹವನ್ನು ಹೊಂದಿರುವುದು.
ಆದುದರಿಂದ ಬುದ್ಧಿವಂತ ಮನುಷ್ಯನಿಗೆ ನಾನು ಈ ದೇಹವಲ್ಲ ನಾನು ಚೇತನಾತ್ಮ. ನನ್ನ ಚಟುವಟಿಕೆಗಳ ನೈಜವಾದ ಕ್ಷೇತ್ರ ಆಧ್ಯಾತ್ಮಿಕ ವೇದಿಕೆಯ ಮೇಲಿದೆ. ನಾನು ಒಂದು ವೇಳೆ ಹೇಗಾದರೂ ಆಧ್ಯಾತ್ಮಿಕ ವೇದಿಕೆಗೆ ಮರಳಿದರೆ ಸಂತೋಷವಾಗಿರುತ್ತೇನೆ”, ಎಂದು ತಿಳಿದಿರಬೇಕು. ಈ ಕೃಷ್ಣಪ್ರಜ್ಞಾ ಚಳವಳಿಯ ಸಾರಾಂಶವೇನೆಂದರೆ ಜನರಿಗೆ ಹೇಗೆ ಆಧ್ಯಾತ್ಮಿಕ ವೇದಿಕೆಯನ್ನು ತಲಪುವುದು ಮತ್ತು ಸಂತೋಷಪಡಬೇಕು? ಎಂಬುದರ ಬಗ್ಗೆ ಶಿಕ್ಷಣವನ್ನು ಕೊಡುವುದು.
ವರದಿಗಾರ 2: ಪರಮ ಪೂಜ್ಯರೇ, ಜಡದಿಂದ ಮೋಕ್ಷವನ್ನು ಹೊಂದುವ ಮಾರ್ಗ ಕೇವಲ ಹರೇ ಕೃಷ್ಣ ಮಂತ್ರದ ಜಪದಿಂದ ಮಾತ್ರ ಎಂದು ನಿಮಗೆ ಅನಿಸುತ್ತದೆಯೇ? ”ಆಧ್ಯಾತ್ಮಿಕ ವೇದಿಕೆಯನ್ನು ಹೊಂದಲು ಮಾರ್ಗ ಕೇವಲ
ಜಪಮಾರ್ಗ ಒಂದೇಯೇನು?
ಶ್ರೀಲ ಪ್ರಭುಪಾದ: ಹೌದು, ಹರೇ ಕೃಷ್ಣ ಮಂತ್ರದ ಜಪವೆಂದರೆ ಪರಮ ಪ್ರಭುವಾದ ಶ್ರೀ ಕೃಷ್ಣನ ಪವಿತ್ರನಾಮಗಳ ಜಪ – ಮತ್ತು ಅವನ ಆಧ್ಯಾತ್ಮಿಕ ವ್ಯಕ್ತಿರೂಪ ಶಕ್ತಿಯಾದ ರಾಧೆ ಅಥವಾ ತಾಯಿ ಹರಾ. ಆದ್ದರಿಂದ ಹರೇಕೃಷ್ಣ ಮಂತ್ರದ ಜಪವೆಂದರೆ ಪ್ರಭುವಿನ ಆಧ್ಯಾತ್ಮಿಕ ಶಕ್ತಿಯ ಆಶ್ರಯದಲ್ಲಿ ಅವನ ನೇರ ಸಂಪರ್ಕಕ್ಕೆ ನೀವು ಬರುತ್ತೀರಿ.

ಹರೇ ಕೃಷ್ಣ “ಓಂ ಪ್ರಭುವೇ ದಯವಿಟ್ಟು ನನ್ನನ್ನು ನಿನ್ನ ಭಕ್ತಿ ಸೇವೆಯಲ್ಲಿ ತೊಡಗಿಸು, ಓ ಪ್ರಭುವಿನ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯೇ ನಿನ್ನ ಆಶ್ರಯದಲ್ಲಿ ತೆಗೆದುಕೋ”, ಆಧ್ಯಾತ್ಮಿಕ ವೇದಿಕೆಯನ್ನು ಹೊಂದುವುದೆಂದರೆ ನೀವು ಪ್ರಭುವಿನ ಆಧ್ಯಾತ್ಮಿಕ ಶಕ್ತಿಯ ಆಶ್ರಯವನ್ನು ತೆಗೆದುಕೊಳ್ಳುವುದು.
ಉದಾಹರಣೆಗೆ ನೀವು ಹೀಟರ್ ಬಳಿ ಹೋದರೆ ಆ ಹೀಟರ್‌ನ ಶಕ್ತಿಯ ಆಶ್ರಯವನ್ನು ತೆಗೆದುಕೊಳ್ಳುತ್ತೀರಿ, ಅದೇ ರೀತಿ ನೀವು ಕೃಷ್ಣನ ಬಳಿ ಹೋದರೆ ಅವನ ಆಧ್ಯಾತ್ಮಿಕ ಶಕ್ತಿಯ ಆಶ್ರಯವನ್ನು ಪಡೆಯುತ್ತೀರಿ ಅಥವಾ ನೀವು ಉರಿಯುವ ಗ್ರಹವಾದ ಸೂರ್ಯನ ಉದಾಹರಣೆಯನ್ನು ತೆಗೆದುಕೊಳ್ಳಿ.
ನೀವು ಸೂರ್ಯನ ಹತ್ತಿರ ಹೋದರೆ ಆಗ ಸೂರ್ಯನ ತಾಪ ಮತ್ತು ಬೆಳಕಿನ ಶಕ್ತಿಯ ಆಶ್ರಯವನ್ನು ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ? ನೀವು ಸೂರ್ಯನ ಪ್ರಕಾಶದಲ್ಲಿದ್ದೀರಿಯೆಂದರೆ ಒಂದು ಅರ್ಥದಲ್ಲಿ ನೀವು ಸೂರ್ಯನಲ್ಲಿದ್ದೀರಿಯೆಂದು ಅರ್ಥವಾಗುತ್ತದೆ. ಇನ್ನೊಂದು ಅರ್ಥದಲ್ಲಿ ನೀವು ನಿಜವಾಗಲೂ ಸೂರ್ಯನಲ್ಲಿ ಇಲ್ಲ.
ಏಕೆಂದರೆ ಇಲ್ಲಿ ಸೂರ್ಯನ ಉರಿಯುವ ತಾಪಮಾನ ಜಾಸ್ತಿಯಿರುವುದರಿಂದ ನೀವು ಸೂರ್ಯನೊಳಗೆ ಇರುವುದು ನಿಜವೇ ಆದರೆ ಆಗ ನಿಮ್ಮನ್ನು ಕೂಡಲೇ ಅದು ಸುಟ್ಟು ಬೂದಿ ಮಾಡಿ ಬಿಡುತ್ತದೆ. ಆದರೂ ನಾವು ಸೂರ್ಯನ ಬೆಳಕಿನ ಆಶ್ರಯ ಮತ್ತು ಸೂರ್ಯನ ಆಶ್ರಯವನ್ನು ತೆಗೆದುಕೊಳ್ಳುತ್ತೇವೆ.
ಆದ್ದರಿಂದ ಪರಮಪ್ರಭುವಾದ ಕೃಷ್ಣನು ಪರಮ ಅಗ್ನಿಯಾಗಿದ್ದಾನೆ. ನಾವು ಏನಾದರೂ ಅನುಭವಿಸುತ್ತಿದ್ದೇವೆಯೆಂದರೆ ಅದು ಅವನ ಶಕ್ತಿಯ ಕಿಡಿ ಮಾತ್ರ. ಸೂರ್ಯನು ಈ ಭೂಮಿಯಿಂದ 93 ಮಿಲಿಯನ್ ಮೈಲಿಗಳಷ್ಟು ದೂರವಿದ್ದರೂ ನಾವು ಅವನ ಸರ್ವವ್ಯಾಪಿಯಾದಂತಹ ಉರಿಯುವ ಶಕ್ತಿಯನ್ನು ಹೇಗೆ ಪ್ರವೇಶಿಸುತ್ತಿದ್ದೇವೆಯೋ ಅದೇ ರೀತಿ ಪರಮಪ್ರಭು ನಮ್ಮಿಂದ ಬಹಳ ದೂರವಿದ್ದರೂ ಅವನ ಸರ್ವವ್ಯಾಪಿಯಾದ ಆಧ್ಯಾತ್ಮಿಕ ಶಕ್ತಿಯ ಆಶ್ರಯವನ್ನು ಅವನ ಪವಿತ್ರನಾಮಜಪದಿಂದ ಪಡೆಯಬಹುದು.
ಏಕೆಂದರೆ ಕೃಷ್ಣನು ಪರಮ ಸತ್ಯನಾಗಿರುವುದರಿಂದ ಅವನ ಹೆಸರಿನಿಂದ ಅವನು ಭಿನ್ನವಲ್ಲ. ಆದ್ದರಿಂದ ನೀವು ಹರೇಕೃಷ್ಣ ಮಹಾಮಂತ್ರವನ್ನು ಯಾವ ಅಪರಾಧವಿಲ್ಲದೆ ಜಪಿಸಿದರೆ ನೀವು ನೇರವಾಗಿ ಕೃಷ್ಣನ ಸಹವಾಸವನ್ನು ಪಡೆಯಬಹುದು. ಇದು ಜಡದಿಂದ ಮುಕ್ತಿಹೊಂದುವುದು ಅದೇ ಆಧ್ಯಾತ್ಮಿಕ ಮುಕ್ತಿ ಆಧ್ಯಾತ್ಮಿಕ ವೇದಿಕೆಯ ಮೇಲೆ ಸ್ಥಿತವಾಗುವುದು.
ವರದಿಗಾರ 2: ನಾನು ಓದಿರುವ ಎಲ್ಲ ಶಾಸ್ತ್ರಗಳಲ್ಲಿ ಶಿಷ್ಯನು ಭಗವಂತನ ನಾಮಸ್ಮರಣೆಯನ್ನು ನಿರಂತರವಾಗಿ ಸ್ಮರಿಸಬೇಕೆಂದು ಹೇಳಲಾಗಿದೆ. ನೀವು ಹರೇಕೃಷ್ಣ ಮಹಾಮಂತ್ರದಲ್ಲಿ ಭಗವಂತನ ನಾಮವಿದೆ ಎಂದು ಹೇಳುತ್ತೀರಿ. ಇದು ನಮಗೆ ಹೇಗೆ ಗೊತ್ತಾಗುತ್ತದೆ?
ಶ್ರೀಲ ಪ್ರಭುಪಾದ: ನಿನಗೆ ನಿನ್ನ ಹೆಸರು ಹೇಗೆ ಗೊತ್ತು ?
ವರದಿಗಾರ 2: ನನ್ನ ತಂದೆ ತಾಯಿಗಳು ನನಗೆ ಇದನ್ನು ಕೊಟ್ಟಿದ್ದಾರೆ.

ಶ್ರೀಲ ಪ್ರಭುಪಾದ: ಹೌದು, ನೀನು ನಿನ್ನ ತಂದೆ ತಾಯಿ ಮತ್ತು ಕುಲ ಪ್ರಮಾಣೀಕೃತರನ್ನು ನಂಬಿಕೊಂಡಿರುವೆ. ಅದೇ ರೀತಿ ನೀನು ಭಗವಂತನ ನಾಮವನ್ನು ಆಧ್ಯಾತ್ಮಿಕ ಪ್ರಮಾಣೀಕೃತರನ್ನು ನಂಬಿ ಕಲಿಯಬೇಕು.
ವರದಿಗಾರ 2: ಶಾಸ್ತ್ರಗಳಿಂದಲೇ.
ಶ್ರೀಲ ಪ್ರಭುಪಾದ: ಹೌದು.
ವರದಿಗಾರ 3: ಶ್ರೀಲ ಪ್ರಭುಪಾದರೇ ಬೇರೆ ಧರ್ಮಗಳ ಬಗ್ಗೆ ಹೇಗೆ? ಉದಾಹರಣೆಗೆ ಕ್ರಿಶ್ಚಿಯನ್ ಧರ್ಮ ಮತ್ತು …
ಶ್ರೀಲ ಪ್ರಭುಪಾದ: ಅಲ್ಲಿ ಎರಡನೆಯ ಧರ್ಮ ಎನ್ನುವುದೇ ಇಲ್ಲ. ಕೇವಲ ಒಂದೇ. ಅದುಸರಿಯಾದ ವಿಚಾರ. ಅದೇ ನಿಜವಾದ ನೈಜ ಭಗವದ್‌ಪ್ರಜ್ಞೆ.
ನೀವು ಕ್ರೈಸ್ತರು, ಹಿಂದೂಗಳು, ಮುಸಲ್ಮಾನರು ಎಂದು ಹೇಳಿದರೆ ಅದು ಕೇವಲ ಉಪಾಧಿಗಳಾಗುತ್ತವೆ. ಅದು ನಿಜವಾದ ಆಧ್ಯಾತ್ಮಿಕ ಕಲ್ಪನೆಯನ್ನು ಸಂಕುಚಿತಗೊಳಿಸುತ್ತದೆ. ಹೇಗೆ ದೇವನು ಒಬ್ಬನಿದ್ದಾನೆಯೋ ಹಾಗೆಯೇ ನಿಜವಾದ ಧರ್ಮವು ಒಂದೇ ಆಗಿದೆ. ಉಪಾಧಿ ಧರ್ಮಗಳಾದಂತಹ ”ನಮ್ಮ ಕ್ರೈಸ್ತಪ್ರಭು’ ಅಥವಾ ”ನಮ್ಮ ಹಿಂದೂಪ್ರಭು” ವೆಂಬುದು ಸಂಕುಚಿತ ಧರ್ಮವೆನಿಸುತ್ತದೆ.
ಉದಾಹರಣೆಗೆ ಈ ದಿನ ನೀನು ಕಪ್ಪು ಉಡುಪನ್ನು ಧರಿಸಿದ್ದೀಯಾ, ನಾಳೆ ನೀನು ಬಿಳಿಯ ಉಡುಪನ್ನು ಧರಿಸಬಹುದು. ಆದುದರಿಂದ ನಾನು ನಿನ್ನನ್ನು ಮಿ|| ಕರಿಯ, ಇಂತಿಂತಿಹನು ಅಥವಾ ಬಿಳಿಯ ಮಿ|| ಇಂತಿಂತಿಹನು’ ಎಂದು ಉಪಾಧಿಗಳಿಂದ ಸಂಬೋಧಿಸಬಹುದು. ಆದರೆ ಅದರ ಅವಶ್ಯಕತೆಯಿಲ್ಲ. ಏಕೆಂದರೆ ನೀವು ನಿಜವಾಗಿಯೂ ಕರಿಯ ಅಥವಾ ಬಿಳಿಯ ಉಡುಪಲ್ಲ. ಆ ಕರಿಯ ಅಥವಾ ಬಿಳಿಯ ಉಡುಪು ನೀವಲ್ಲ. ಅದು ಕೇವಲ ಸಂದರ್ಭ ಅಷ್ಟೇ.
ಅದೇ ರೀತಿ ನಮ್ಮ ಭ್ರಾಂತಿಗೊಂಡ ಅಭಾಸ ಮನಸ್ಸಿನಿಂದ ನಾವು “ಕ್ರೈಸ್ತಧರ್ಮ” “ಹಿಂದೂ ಧರ್ಮ’ ಎಂದು ಹೇಳುತ್ತೇವೆ. ನಿರ್ದಿಷ್ಟವಾದ ಐತಿಹಾಸಿಕ ಸಂದರ್ಭಗಳನ್ನು ವಿವರಿಸಲು ನಾವು ಈ ಉಪಾಧಿಗಳನ್ನು ಉಪಯೋಗಿಸಿಕೊಳ್ಳಬಹುದು. ಆದರೆ ಧರ್ಮವೆನ್ನುವುದು ಒಂದೇ. ಅದರ ಅರ್ಥ ಭಗವಂತನ ಪವಿತ್ರನಾಮದ ಜಯ ಜಯಕಾರ ಮಾಡುವುದು, ವೈಭವೀಕರಿಸುವುದು ಮತ್ತು ಅವನ ನಿಯಮಗಳನ್ನು ಅನುಸರಿಸುವುದು. ಅದುವೇ ಆಧ್ಯಾತ್ಮಿಕ ವೇದಿಕೆ.






Leave a Reply