ಅನಿರೀಕ್ಷಿತ ಅವಕಾಶ

ಸಂಕೀರ್ತನ ಯಶೋಗಾಥೆಗಳು

– ಆಧಾರ: ಸರ್ವಾತ್ಮದಾಸರ ದಿನಚರಿ

ಒಂದೇ ಮರದ ಮೇಲಿನ ಎರಡು ಹಕ್ಕಿಗಳಂತೆ ನಮ್ಮೊಡನೆ, ನಮ್ಮ ಬಳಿಯಲ್ಲೇ ಕೃಷ್ಣ ಸದಾ ಇರುತ್ತಾನೆ. ತಮ್ಮ ಧಾಮಕ್ಕೆ ನಮ್ಮನ್ನು ಮರಳಿ ಕರೆದೊಯ್ಯಲು ನಮ್ಮನ್ನು ಸೆಳೆಯುತ್ತಿರುತ್ತಾನೆ. ಆದರೆ ಅದನ್ನು ಅರಿಯುವ ಪ್ರಜ್ಞೆ ನಮಗೆ ಇರಬೇಕಷ್ಟೆ.

ತಮ್ಮ ಪಾಡಿಗೆ ಬೀದಿಯಲ್ಲಿ ಅಡ್ಡಾಡುತ್ತ ಪುಸ್ತಕ ವಿತರಿಸುತ್ತಿದ್ದ ಪೂರ್ಣತತ್ತ್ವ ದಾಸರಿಗೆ ‍ಶ್ರೀ ಕೃಷ್ಣ ಬೃಹತ್‌ ಅವಕಾಶವನ್ನೇ ಒದಗಿಸಿಕೊಟ್ಟ. ಇಂಥದೊಂದು ರೋಮಾಂಚಕ ಘಟನೆಯ ವಿವರ ಹೀಗಿದೆ.

ಒಮ್ಮೆ ಪೂರ್ಣತತ್ತ್ವ ದಾಸರು ಎಂದಿನಂತೆ ಪುಸ್ತಕಗಳನ್ನು ಹಿಡಿದುಕೊಂಡು ಜನರನ್ನು ನಿರೀಕ್ಷಿಸುತ್ತ ನಿಂತಿದ್ದರು. ಅವರ ಎದುರು, ಕೊಂಚ ದೂರದಲ್ಲಿದ್ದ ದೊಡ್ಡ ಹೋಟೆಲೊಂದಕ್ಕೆ ತಂಡೋಪತಂಡವಾಗಿ ಜನರು ಹೋಗುತ್ತಿದ್ದುದು, ಬರುತ್ತಿದ್ದುದು ಕಂಡಿತು. ಜನರು ಇರುವಡೆಯಲ್ಲೇ ಅಲ್ಲವೆ ಪುಸ್ತಕ ವಿತರಣೆ ಸಲೀಸಾಗಿ ನಡೆಯುವುದು? ಹೀಗಾಗಿ ಪೂರ್ಣತತ್ತ್ವರು ಆ ಹೋಟೆಲಿನ ಕಟ್ಟಡದ ಒಳಹೊಕ್ಕರು.

ಅವರು ಹೋಗುತ್ತಿದ್ದ ಎದುರು ದಿಕ್ಕಿನಲ್ಲಿ ನಾಲ್ಕಾರು ಹೋಟೆಲ್‌ ಸಿಬ್ಬಂದಿಗಳು ಬರುತ್ತಿದ್ದುದನ್ನು ಅವರು ಗಮನಿಸಿದರು. ಇನ್ನು ತಪಾಸಣೆ ಮುಂತಾದ ರಗಳೆಗಳನ್ನು ಪುಸ್ತಕ ವಿತರಣೆಯ ಪುಣ್ಯಕಾರ್ಯಕ್ಕೆ ಅಡ್ಡಿಯಾಗುವುದಲ್ಲ ಎಂದು ಚಿಂತಿಸಿ ಪೂರ್ಣತತ್ತ್ವರು ಅಲ್ಲಿಯೇ ಇದ್ದ ಇನ್ನೊಂದು ಬಾಗಿಲನ್ನು ತೆರೆದು ಒಳಹೊಕ್ಕರು.

ಆದರೆ ಅದೊಂದು ದೊಡ್ಡ ಕೋಣೆಯಾಗಿತ್ತು. ಬಹಳಷ್ಟು ಜನ ಅಲ್ಲಿ ಸೇರಿದ್ದರು. ಅವರೆಲ್ಲರೂ ಉದ್ದನೆಯ ಮೇಜಿನ ಮುಂದೆ ನಿಂತು ಬಿಂಗೋ ಆಟ ಆಡುತ್ತಿದ್ದರು. ಅವರು ಒಳಹೊಕ್ಕ ಬಾಗಿಲು, ಆಟದಲ್ಲಿ ವಿಜೇತರಾದವರ ಹೆಸರುಗಳನ್ನು ಘೋಷಿಸುತ್ತಿದ್ದವನ ಬಳಿಯಲ್ಲಿ ಇತ್ತು. ಹೀಗಾಗಿ ಅವರು ಕೋಣೆಯನ್ನು ಪ್ರವೇಶಿಸುತ್ತಲೇ, ಆ ಉದ್ಘೋಷಕನ ಕಣ್ಣಿಗೆ ಬಿದ್ದರು.

ಆತ ಪೂರ್ಣತತ್ತ್ವರನ್ನು, ನೋಡುತ್ತಲೇ, “ನೀವು ಬಹುಮಾನಗಳನ್ನು ತಂದಿರುವಿರೇನು?” ಎಂದು ಪ್ರಶ್ನಿಸಿದ. ಅವರು ಕೂಡಲೇ ತಮ್ಮ ಕೈಲಿದ್ದ ಅಷ್ಟೂ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ತಲೆಯಾಡಿಸಿದರು. ಆ ವ್ಯಕ್ತಿ ಅವೆಲ್ಲವನ್ನು ಕೊಂಡು ಕೊಂಡ, ಮತ್ತು ಅವುಗಳನ್ನೇ ಬಹುಮಾನವಾಗಿ ನೀಡಿದ!

ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೇನೆಂದು ವಿಚಾರಸಲಾಗಿ, ಅದು ಆ ಪ್ರಾಂತ್ಯದ ಕಸಾಯಿ ವ್ಯಾಪಾರಿಗಳ ಮನರಂಜನಾ ಕೂಟ ಎಂದು ತಿಳಿದುಬಂತು.

ಕೃಷ್ಣನ ಕರುಣೆ ಅಪರಿಮಿತವಾದುದು. ಕಸಾಯಿಗಳಂತಹ ಕಠಿಣ ಹೃದಯಿಗಳಿಗೂ ತನ್ನ ಕುರಿತಾದ ಸಾಹಿತ್ಯ ಓದಲು ದೊರಕುವಂತೆ ಮಾಡಿತ ಆತನ ಕೃಪೆಯನ್ನು ಬಣ್ಣಿಸುವುದು ಹೇಗೆ?

ಶ್ರೀಕೃಷ್ಣನಿಗೆ ಸಂಪೂರ್ಣ ಶರಣಾಗಿಬಿಟ್ಟರಾಯಿತು. ಉಳಿದದ್ದನ್ನು ಸ್ವತಃ ಆತನೇ ನೋಡಿಕೊಳ್ಳುತ್ತಾನೆ. ತಾನೇ ಸಾರಥಿಯಾಗಿ, ತನ್ನ ಭಕ್ತರ ಜೀವನ ರಥವನ್ನು ನಡೆಸುತ್ತಾನೆ. ತನಗೆ ಶರಣಾದ ಅರ್ಜುನನ ರಥ ನಡೆಸಿ, ಯುದ್ಧವನ್ನು ಗೆಲ್ಲಿಸಿಕೊಟ್ಟಂತೆ, ಭಕ್ತರೂ ಶರಣಾಗತರಾದಾಗ ಅವರೆದುರು ಪವಾಡಗಳ ಪರ್ವವೇ ತೆರೆದುಕೊಳ್ಳುತ್ತದೆ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi