ಲೇಖನಗಳು


  • ಸಾಷ್ಟಾಂಗ ಪ್ರಣಾಮ

    ಸಾಷ್ಟಾಂಗ ಪ್ರಣಾಮ

    ಪರಾತ್ಪರನ ಪ್ರೀತಿಯ ಅಪೇಕ್ಷೆಗೆ ನಾವೆಲ್ಲರೂ ಮಣಿಯುವ ಸರಳಿ ಆದರೆ ಭವ್ಯ ವಿಧಾನ. ಶರಣಾಗತಿ, ಅಧೀನವಾಗುವುದು, ಇಂತಹ ಪದಗಳು ಯುದ್ಧ ಮತ್ತು ಆಕ್ರಮಣದ ಚಿತ್ರಗಳ ಕಲ್ಪನೆಯನ್ನು ನೀಡಬಹುದು. ಅಲ್ಲಿ ದುರ್ಬಲರು ಬಹುಶಃ ಭವಿಷ್ಯದ ವಿಜಯ ಅಥವಾ ವಿದ್ವೇಷದ ಆಲೋಚನೆಗಳೊಂದಿಗೆ ಶಕ್ತಿವಂತರಿಗೆ ವಿಷಾದದಿಂದ ಮಣಿಯಬಹುದು. ಮನಸ್ಸಿನಲ್ಲಿ ಅಂತಹ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತ ನಾವು ಕೃಷ್ಣನಿಗೆ ಶರಣಾಗಬೇಕೆಂದು ಭಗವದ್ಗೀತೆಯಲ್ಲಿ ಓದಿದಾಗ ನಮಗೆ ಅಸಹ್ಯ ಭಾವ ಮೂಡಬಹುದು. ನಮ್ರತೆಯಿಂದ ತಲೆಬಾಗಬಹುದು. ಭಕ್ತರು ಭಗವಂತನಿಗೆ ತಮ್ಮನ್ನು ಒಪ್ಪಿಸಿಕೊಳ್ಳಲು ಸಾಷ್ಟಾಂಗ ಮಾಡುತ್ತ ಶರಣಾಗುವುದನ್ನು ನೋಡಿದಾಗ ನಮಗೆ ಶರಣಾಗತಿ…


  • ಭಕ್ತವತ್ಸಲ ಜಗನ್ನಾಥ

    ಭಕ್ತವತ್ಸಲ ಜಗನ್ನಾಥ

    ಅದು 15ನೇ ಶತಮಾನ. ಆಗ ಜಗನ್ನಾಥ ಪುರಿಯ ಆಸುಪಾಸಿನ ಪ್ರದೇಶದಲ್ಲಿ ಭೀಕರ ಬರಗಾಲ. ಬರಗಾಲ ಎಷ್ಟೊಂದು ತೀವ್ರವಾಗಿತ್ತೆಂದರೆ…


  • ಕಳ್ಳರಲ್ಲಿ ನೈತಿಕತೆ!

    ಕಳ್ಳರಲ್ಲಿ ನೈತಿಕತೆ!

    ಇಲ್ಲಿ ಕಳ್ಳರ ತಂಡದ ಕತೆ ಇದೆ. ಈ ಕಳ್ಳರು ಅನೇಕ ಮನೆಗಳಲ್ಲಿ ವಸ್ತುಗಳನ್ನು ಕಳವು ಮಾಡಿದರು. ಅದನ್ನು ಹಂಚಿಕೊಳ್ಳಲು ಊರಿನ ಆಚೆಗೆ ಹೋದರು. ಆಗ ಒಬ್ಬ ಕಳ್ಳ, “ಯಾರಿಗೂ ಮೋಸವಾಗದಂತೆ ನೈತಿಕವಾಗಿ ಇದನ್ನು ಹಂಚಬೇಕು” ಎಂದ. ಅದು ಕದ್ದ ಆಸ್ತಿ. ಇದರಲ್ಲಿ ನೈತಿಕತೆ ಎಲ್ಲಿ ಬಂತು? ಆದರೆ ಹಂಚಿಕೊಳ್ಳುವಾಗ ಮಾತ್ರ ಅವರು ನೈತಿಕತೆ ಕುರಿತು ಯೋಚಿಸುತ್ತಿದ್ದಾರೆ. ಮೂಲ ತತ್ತ್ವವೇ ಅನೈತಿಕತೆ. ನೈತಿಕತೆಯನ್ನು ಕಾಣುವುದೆಲ್ಲಿ? ಅದೇ ರೀತಿ, ವೈದಿಕ ಆದೇಶದ ಈಶಾವಾಸ್ಯಂ ಇದಂ ಸರ್ವಂ-ಎಲ್ಲವೂ ದೇವೋತ್ತಮ ಪರಮ ಪುರುಷನಿಗೆ…


  • ಪರೀಕ್ಷಿತನಿಗೆ ಕಲಿ ಶರಣು

    ಪರೀಕ್ಷಿತನಿಗೆ ಕಲಿ ಶರಣು

    -ಶ್ರೀ ಚಂಚಲಾಪತಿ ದಾಸ “ಮರೆಹೊಕ್ಕವರಿಗೆ ಆಸರೆಕೊಡುವ ಸ್ವಭಾವದ ಮತ್ತು ಚರಿತ್ರೆಯಲ್ಲಿ ಶ್ಲಾಘನೆಗೆ ಪಾತ್ರನಾದ ಪರೀಕ್ಷಿತ ಮಹಾರಾಜನು ಶರಣಾಗತನಾದ ಮತ್ತು ಕಾಲಿಗೆ ಬಿದ್ದ ಬಡ ಕಲಿಯನ್ನು ಕೊಲ್ಲಲಿಲ್ಲ. ಆದರೆ, ಸಹಾನುಭೂತಿಯಿಂದ ನಸುನಕ್ಕನು. ಏಕೆಂದರೆ, ಅವನು ಬಡವರಲ್ಲಿ ಕರುಣೆ ಉಳ್ಳವನಾಗಿದ್ದನು.” (ಭಾಗವತ, 1.17.30) ಸಾಮಾನ್ಯ ಕ್ಷತ್ರಿಯನೂ ಕೂಡ ಶರಣಾಗತನನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಸ್ವಾಭಾವಿಕವಾಗಿ ದೀನರಲ್ಲಿ ದಯೆ ಮತ್ತು ಸಹಾನುಭೂತಿ ಉಳ್ಳ ಮಹಾರಾಜ ಪರೀಕ್ಷಿತನ ಬಗ್ಗೆ ಹೇಳುವುದೇನು! ಅವನು ನಗುತ್ತಿದ್ದುದು ಏಕೆಂದರೆ ಕೃತಕ ವೇಷಧಾರಿಯಾದ ಕಲಿಯು ತಾನು ತಳ ವರ್ಗದವ ಎಂದು…


  • ಎಲ್ಲ ಸಂಕಷ್ಟಕ್ಕೆ ಪರಿಹಾರ

    ಎಲ್ಲ ಸಂಕಷ್ಟಕ್ಕೆ ಪರಿಹಾರ

    -ಶ್ರೀ ಚಂಚಲಾಪತಿ ದಾಸ ಮುಖವು ಮನಸ್ಸಿನ ಕನ್ನಡಿ ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು. ಕಲಿಯುಗದಲ್ಲಿ ಜನರು ಅನೇಕ ರೀತಿಯ ಸಂಕಷ್ಟದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ. ಜನರನ್ನು ಸಂತೋಷಪಡಿಸಲು ಜಗತ್ತಿನಲ್ಲಿ ಈಗ ನಡೆಯುತ್ತಿರುವ ಪ್ರಯತ್ನಗಳು ಚರಿತ್ರೆಯಲ್ಲಿ ಹಿಂದೆಂದೂ ಕಾಣದಂತಹುದು. ಆದರೂ ಜನರು ಸಂತೋಷದಿಂದ ಇಲ್ಲದಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳು. ಈ ವಿಶ್ವದ ಎಲ್ಲ ಸಂಕಷ್ಟಗಳಿಗೆ ಮೂಲ ಕಾರಣ ಕೃಷ್ಣನನ್ನು ಮರೆತಿರುವುದೇ ಆಗಿದೆ. ಇದು ಭಾಗವತ ಮತ್ತು ಆಚಾರ್ಯರ ವಿಶ್ಲೇಷಣೆ. ನಾವು ಕೃಷ್ಣನೊಂದಿಗಿನ ನಮ್ಮ…


  • ಮಹಾಪುರುಷ ಅಂಬರೀಷ! – ಭಾಗ 2

    ಮಹಾಪುರುಷ ಅಂಬರೀಷ! – ಭಾಗ 2

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋ‌ರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 2 ರಿಂದ 4ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಅಂಬರೀಷ ಮಹಾರಾಜನ ರಾಜ್ಯಭಾರದ ವರ್ಣನೆ…


  • ಶ್ರೀ ರಘುನಾಥ ದಾಸ ಗೋಸ್ವಾಮಿ

    ಶ್ರೀ ರಘುನಾಥ ದಾಸ ಗೋಸ್ವಾಮಿ

    ವೃಂದಾವನದ ಆರು ಗೋಸ್ವಾಮಿಗಳಲ್ಲಿ ಶ್ರೀಲ ರಘುನಾಥದಾಸ ಗೋಸ್ವಾಮಿಯವರು ಕೂಡ ಒಬ್ಬರು. ಶ್ರೀ ರಘುನಾಥದಾಸ ಗೋಸ್ವಾಮಿಯವರು ಶ್ರೀ ಕೃಷ್ಣನ ನಿತ್ಯ ಮುಕ್ತ ಸಂಗಡಿಗರಾಗಿದ್ದರು. ಐದುನೂರು ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದಾಗ ಇವರು ಕೂಡ ಅವತರಿಸಿ ಅವರ ಜೊತೆಗಾರರಾಗಿದ್ದರು. ಶ್ರೀ ರಘುನಾಥದಾಸ ಗೋಸ್ವಾಮಿಯವರು ಒಬ್ಬ ಶ್ರೀಮಂತ ಜಮೀನ್ದಾರರ ಮಗನಾಗಿದ್ದರು. ಬಾಲ್ಯದಿಂದಲೂ ರಘುನಾಥದಾಸ ಈ ಐಹಿಕ ಜಗತ್ತಿನ ವಸ್ತುಗಳಲ್ಲಿ ಅಷ್ಟೊಂದು ಆಸಕ್ತಿಯನ್ನು ಪಡೆದಿರಲಿಲ್ಲ. ಅವನ ಆತ್ಮವು ಯಾವಾಗಲೂ ತಾನು ಶ್ರೀ ಚೈತನ್ಯ ಮಹಾಪ್ರಭುಗಳ ಒಡನಾಡಿಯಾಗಿರಬೇಕೆಂದು ಬಯಸುತ್ತಿತ್ತು ಮತ್ತು ಪ್ರಭುಗಳ…


  • ಶರಣಾಗತ ರಕ್ಷಕ

    ಶರಣಾಗತ ರಕ್ಷಕ

    ಬಂಗಾಳ ಕೊಲ್ಲಿ ಪ್ರಶಾಂತವಾಗಿತ್ತು. ಸಮುದ್ರಕ್ಕೇ ಸವಾಲೆಸೆಯುವಂತೆ ನೀಲಾಕಾಶ ಹರಡಿಕೊಂಡಿತ್ತು. ಅಲ್ಲೊಂದು ಇಲ್ಲೊಂದು ಬೀಡಾಡಿ ಮೊಡಗಳು ಕಾಣಿಸುತ್ತಿದ್ದವಾದರೂ ಮಳೆ ಬರುವ ಯಾವುದೇ ಮುನ್ಸೂಚನೆ ಇರಲಿಲ್ಲ. ಆ ಬೃಹತ್ ನಾವೆ ಆಗ ತಾನೇ ಚಂದನಪುರದಿಂದ ಹೊರಟಿತ್ತು. ನೂರಾರು ಪ್ರಯಾಣಿಕರು, ಆ ಕಾಲದಲ್ಲೇ ಲಕ್ಷಾಂತರ ರೂ ಬೆಲೆಬಾಳುವ ಸರಕು ಸರಂಜಾಮುಗಳನ್ನು ಹೇರಿಕೊಂಡ ಹಡಗು ಫ್ರಾನ್ಸ್‌ನಿಂದ ಭಾರತದತ್ತ ಹೊರಟಿತ್ತು. ಕ್ಯಾಪ್ಟನ್ ಬೀಟ್ಸ್ ಆ ಹಡಗಿನ ಮುಖ್ಯ ನಾವಿಕ. ಆಗೆಲ್ಲಾ ಈಗಿನಂತೆ ಹಡಗು ಪ್ರಯಾಣ ಪ್ರತಿಶತ ನೂರರಷ್ಟು ಸುರಕ್ಷಿತವೇನಲ್ಲ. ಆದರೂ ದೂರ ಪ್ರಯಾಣಕ್ಕೆ, ಅದರಲ್ಲೂ…


  • ಭೂ ಮಾತೆಗೆ ನಮೋ ನಮೋ!

    ಭೂ ಮಾತೆಗೆ ನಮೋ ನಮೋ!

    ಭೂ ತಾಯಿಯೊಂದಿಗೆ ಪುನರ್‌ ಮಿಲನ ಮತ್ತು ಅವಳ ಉತ್ಪನ್ನಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ನಮ್ಮ ಬದುಕಿನ ಕರ್ತವ್ಯವಾಗಬೇಕು. ಭೂಮಿಯಿಂದ (ಮಣ್ಣಿನಿಂದ) ಉತ್ಪನ್ನವಾಗುವ ನಮ್ಮ ದೇಹ ಈ ಲೋಕದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಮೇಲೆ ಬೂದಿಯಾಗಿ ಮಣ್ಣನ್ನೇ ಸೇರುತ್ತದೆ.  ಹೀಗಾಗಿ “ಮಣ್ಣಿನಿಂದ ಬಂದೆವು, ಮಣ್ಣನ್ನೇ ಸೇರುತ್ತೇವೆ” ಎಂದು ಹೇಳುತ್ತಾರೆ. ಆದುದರಿಂದ ಭೂಮಿಯೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಭೂಮಿಯು ಒದಗಿಸುವ ಹಣ್ಣು, ತರಕಾರಿ, ಧಾನ್ಯಗಳು ನಮಗೆ ಪೌಷ್ಟಿಕಾಂಶ ನೀಡುತ್ತವೆ. ಆದುದರಿಂದ ಭೂಮಿಯ ಯೋಗಕ್ಷೇಮ ನಮ್ಮ ಕರ್ತವ್ಯ. ನಮ್ಮ ಮನೋಭಾವವು ಅನಾರೋಗ್ಯಕರವಾಗಿದ್ದರೆ…


  • ಹರಿನಾಮದ ಏಳು ಅದ್ಭುತಗಳು

    ಹರಿನಾಮದ ಏಳು ಅದ್ಭುತಗಳು

    ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ಆಗುವ  ಪ್ರಯೋಜನವೇನು? ಮಹಾ ಮಂತ್ರದಲ್ಲಿನ ಹರೇ, ಕೃಷ್ಣ, ರಾಮ ನಾಮಗಳಲ್ಲಿ ಭಗವಂತನ ಪೂರ್ಣ‌ ಶಕ್ತಿಯನ್ನು ವಿನಿಯೋಗಿಸಲಾಗಿದೆ. ಆದುದರಿಂದ ಭಗವಂತನ ಪವಿತ್ರನಾಮವನ್ನು ಪಠಿಸುವುದು ಭಗವಂತನೊಂದಿಗೆ ನೇರವಾಗಿ ಸಂಪರ್ಕ‌ ಪಡೆದಷ್ಟೇ ಪರಿಣಾಮಕಾರಿ. ಶ್ರೀ ಚೈತನ್ಯ ಮಹಾಪ್ರಭು ಬರೆದಿರುವ ಈ ಸುಂದರ ಶ್ಲೋಕವು ಜಪಿಸುವವರ ಮೇಲೆ ಹರೇ ಕೃಷ್ಣ ಮಂತ್ರದ ಏಳು ಪ್ರಭಾವಗಳನ್ನು ವರ್ಣಿಸುತ್ತದೆ.‌ ಚೇತೋ ದರ್ಪಣ ಮಾರ್ಜನಂ ಭವ ಮಹಾ ದಾವಾಗ್ನಿ ನಿರ್ವಾಪಣಂ‌ ಶ್ರೇಯಃ ಕೈರವ ಚಂದ್ರಿಕಾ ವಿತರಣಂ ವಿದ್ಯಾ ವಧೂ ಜೀವನಂ ಆನಂದಾಂಬುಧಿ…