ಲೇಖನಗಳು


  • ನರಸಿಂಹಾವತಾರ

    ನರಸಿಂಹಾವತಾರ

    ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ಸಮಾಗಮ ಸಹಸ್ರಾರು ವರ್ಷಗಳ ಹಿಂದೆ ನರಸಿಂಹನ ರೂಪದಲ್ಲಿ ಅವತರಿಸಿದ ಭಗವಂತನು ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ನಡುವಿನ ಸಂಬಂಧವನ್ನು ಜಗತ್ತಿಗೆ ನಿರೂಪಿಸಿದ. ಅದು ನಿಜಕ್ಕೂ ಉಗ್ರ ಸೌಂದರ್ಯ; ರುದ್ರ ರಮಣೀಯ ನೋಟ. ಕೋಪದ ಬೆಂಕಿಯುಗುಳುತ್ತಿರುವ ಕೆಂಪು ಕಣ್ಣುಗಳು. ಅರ್ಧ ಮನುಷ್ಯ; ಇನ್ನರ್ಧ ಸಿಂಹದ ಶರೀರ ಎಲ್ಲ ದಿಕ್ಕುಗಳಿಗೂ ಚಾಚಿಕೊಂಡಿರುವ ಬಲಿಷ್ಠ ಬಾಹುಗಳು. ಶಿರದ ಮೇಲೆ ನೆರಳಿನಂತೆ ನಿಂತು ಬುಸುಗುಡುತ್ತಿರುವ ಅಸಂಖ್ಯಾತ ಹೆಡೆಗಳ ಸರ್ಪ. ಅದೊಂದು ದೈತ್ಯ ದೇಹ. ಅವನೇ…


  • ಜನನ ಮರಣಗಳಾಚೆ

    ಜನನ ಮರಣಗಳಾಚೆ

    -ಡಾ|| ಸಿ. ಅನ್ನಪೂರ್ಣಮ್ಮ ವಿಜ್ಞಾನ ಮತ್ತು ವೇದಾಂತ- ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಯು ಬ್ರಹ್ಮಾಂಡದ, ಚರಾಚರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಒಂದು ನಿರ್ಧಾರಿತ ಸತ್ಯದ ಅರಿವನ್ನು ಪಡೆಯುತ್ತಾನೆ, ನಿಜ. ಆದರೆ ಬ್ರಹ್ಮಾಂಡದ ಆಚೆಗಿರುವ ಮುಂದಿನ ವ್ಯೋಮವನ್ನು ಕುರಿತು ಆತ ಏನನ್ನೂ ಹೇಳಲಾರ. ವಾಸ್ತವದಲ್ಲಿ ವೇದಾಂತದ ಆರಂಭ ಇಲ್ಲಿಂದಲೇ ಆಗುತ್ತದೆ. ಅಂದರೆ, ವಿಜ್ಞಾನದ ಎಲ್ಲೆಯಲ್ಲಿ ಆರಂಭಗೊಂಡು, ಮುಂದಿನ ಸ್ಥೂಲ-ಸೂಕ್ಷ್ಮಗಳ ಎಳೆ ಎಳೆಗಳನ್ನು ಬಿಡಿಸಿ ಮತ್ತೊಂದು ವಿಶಾಲ ಬ್ರಹ್ಮಾಂಡಕ್ಕೆ ವೇದಾಂತ ಆಹಾರ ಒದಗಿಸುತ್ತದೆ.…


  • ಮೊದಲು ಅರ್ಹತೆ, ಬಳಿಕ ಅಪೇಕ್ಷೆ

    ಮೊದಲು ಅರ್ಹತೆ, ಬಳಿಕ ಅಪೇಕ್ಷೆ

    ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಸಂವಾದ, ಸ್ಥಳ: ಡೆನ್‌ವರ್‌, ಜುಲೈ 1975 ಶ್ರೀಲ ಪ್ರಭುಪಾದ : ನಮ್ಮ ಈ ದೇಹ ಒಂದು ಯಂತ್ರವಲ್ಲದೆ ಬೇರೇನೂ ಅಲ್ಲ ಎಂಬ ಕಲ್ಪನೆಯನ್ನು ನಿನ್ನೆಯ ಮಾತುಕತೆಯಲ್ಲಿ ಮುಂದಿಟ್ಟಿರಿ. ಈ ಅಭಿಪ್ರಾಯವನ್ನು ನಾವೂ ಒಪ್ಪುತ್ತೇವೆ. ಯಂತ್ರಾರೂಢಾನಿ ಎಂಬ ಮಾತು ಭಗವದ್ಗೀತೆಯಲ್ಲಿ ಬಂದಿದೆ. ”ಈ ದೇಹವೆಂಬುದು ಒಂದು ಯಂತ್ರ.” ಯಂತ್ರ ಎಂಬ ಪದಕ್ಕೆ ಒಂದು ಉಪಕರಣ ಎಂದು ಅರ್ಥ ಹೇಳಬಹುದು. ಅದೇ ಮಾತಿನ ವೇಳೆ ನೀವು ಈ ದೇಹ ಬೆಳೆಯುತ್ತಿದೆಯೆಂದೂ ಹೇಳಿದಿರಿ. ಕಾರ್‌ನಂಥ…


  • ಪತಿತರಿಗೆ ಮುಕ್ತಿ

    ಪತಿತರಿಗೆ ಮುಕ್ತಿ

    ದೇವೋತ್ತಮ ಪರಮಪುರುಷನು ನಮ್ಮ ಮೇಲೆ ತೋರುವ ಕರುಣೆಯೇ ಕೃಪೆ. ಜನ ಅದನ್ನು ಗುರುತಿಸಬಹುದು; ಗುರುತಿಸದೇ ಹೋಗಬಹುದು. ಆದರೆ ಕೃಷ್ಣನ ಕೃಪೆ ಅವರ ಮೇಲೆ ಸದಾ ಇದ್ದೇ ಇರುತ್ತದೆ. ಜಗತ್ತಿನ ಸಕಲ ಕ್ರಿಯೆಗಳಿಗೂ ಕೃಷ್ಣನ ಕೃಪೆಯೇ ಕಾರಣ. ನಮ್ಮದು ಐಹಿಕ ಶರೀರ. ವೇದ ಜ್ಞಾನಗಳ ಪ್ರಕಾರ ಇದು ನಾವು ಬಯಸಿ, ನಮ್ಮ ಕರ್ಮಾನುಸಾರ ಪಡೆದು ಬಂದಿದ್ದು. ದ್ವಂದ್ವದಿಂದ ಉಂಟಾಗುವ ಆಸೆ ಮತ್ತು ತಿರಸ್ಕಾರಗಳೆಂಬ ಮಾಯೆಯಿಂದ ಎಲ್ಲ ಜೀವಿಗಳೂ, ಆವೃತರಾಗಿದ್ದಾರೆ, ಹೇ ಭರತನೇ ಎಂದು ಭಗವದ್ಗೀತೆ (7.27) ಹೇಳುತ್ತದೆ. “ಓ…


  • ರಘುನಾಥದಾಸರು

    ರಘುನಾಥದಾಸರು

    ಸುಂದರ ಪತ್ನಿ, ಲಕ್ಷಾಂತರ ರೂಪಾಯಿಗಳ ಆಸ್ತಿ, ಕೈಗೊಂದು ಕಾಲಿಗೊಂದು ಆಳು, ಐಷಾರಾಮಿ ಜೀವನ – ಇವೆಲ್ಲವನ್ನೂ ಪಡೆಯಬೇಕೆಂಬುದು ಜನಸಾಮಾನ್ಯನ ಕನಸು. ಆದ್ದರಿಂದಲೇ ಅವನು ‘ಜನ ಸಾಮಾನ್ಯ’̤ ಲೌಕಿಕ ಆಸೆಗಳನ್ನು ದೂರ ಮಾಡಿ ತ್ಯಾಗವೇ ಜೀವನದ ಆಧಾರ, ವೈರಾಗ್ಯವೇ ಭಗವದ್ಭಕ್ತಿಯ ಕುರುಹು ಎಂದು ಬಗೆದು ಪರಮ ಪುರುಷನಲ್ಲಿಯೇ ತಲ್ಲೀನನಾದವನೇ ಮಹಾತ್ಮ. ಶ್ರೀ ಚೈತನ್ಯರ ಶಿಷ್ಯರೆಲ್ಲರೂ ಅಂತಹ ಮಹಾತ್ಮರೇ. ಸ್ವತಃ ಶ್ರೀ ಚೈತನ್ಯರು ‘ವೈರಾಗ್ಯಾ ವಿದ್ಯ ನಿಜ ಭಕ್ತಿಯೋಗ’ ಎಂದು ಬೋಧಿಸಿದರು. ಆ ಆದರ್ಶಕ್ಕೆ ತಕ್ಕ ಹಾಗೆ ತಮ್ಮ ಜೀವನವನ್ನು…


  • ಧರ್ಮ-ಪ್ರ‍ಶ್ನೆ

    ಧರ್ಮ-ಪ್ರ‍ಶ್ನೆ

    ವೇದವ್ಯಾಸ ವಿರಚಿತ ಮಹಾಭಾರತದ ಗ್ರಂಥಾವಲೋಕನ ಮಾಡುತ್ತಾ ಮುಂದುವರಿದಂತೆ ಅತ್ಯಪರೂಪದ ಭಾಗವೊಂದು ಗೋಚರವಾಗುವುದು. ಪಾಂಡವರು ಕೌರವರೊಡನೆ ದ್ಯೂತವಾಡಿ ತಮ್ಮ ರಾಜ್ಯಕೋಶ ಕಳೆದುಕೊಂಡು ವನವಾಸದಲ್ಲಿರುವಾಗ ಸ್ವತಃ ಯಮಧರ್ಮರಾಜನಿಂದ ಪರೀಕ್ಷೆಗೊಳಗಾಗಬೇಕಾದ ಘಟನೆಯಿಂದ ವಿದ್ವತ್ಪೂರ್ಣ ಪ್ರ‍ಶ್ನೋತ್ತರವೊಂದು ಯಕ್ಷರೂಪಿ ಯಮಧರ್ಮರಾಯ ಹಾಗೂ ಧರ್ಮರಾಯನ ನಡುವೆ ನಡೆದಿರುವುದು, ಜಗತ್ತಿಗೆ ಮಾರ್ಗದರ್ಶನ ನೀಡಿರುವುದು ಪ್ರಸ್ತುತ ಲೇಖನ. ಒಂದೊಮ್ಮೆ ಬ್ರಾಹ್ಮಣನೊಬ್ಬನು ತನ್ನಯಜ್ಞ ಯಾಗಾದಿಗಳಲ್ಲಿ ನಿರತನಾಗಿ ವನವಾಸಿಯಾಗಿದ್ದಾಗ – ಯಜ್ಞಾಗ್ನಿ ಉತ್ಪಾದಿಸುವ ‘ಅರಣಿ’ಯನ್ನು ಪಕ್ಕದ ಮರದ ಕೊಂಬೆಯೊಂದರ ಸಂದಿಯಲ್ಲಿಟ್ಟಾಗ – ಎಲ್ಲಿಂದಲೋ ಆಗಮಿಸಿದ ಜಿಂಕೆಯೊಂದು ತನ್ನ ಕೋಡುಗಳನ್ನು ಮರಕ್ಕೆ ಉಜ್ಜಿದ…


  • ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

    ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

    ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ : ಮುಂಬೈ, 17ನೇ ಏಪ್ರಿಲ್ 1977 ಶ್ರೀಲ ಪ್ರಭುವಾದ : ಈ ದಿನಗಳಲ್ಲಿ ಪ್ರಶಾಂತಚಿತ್ತವುಳ್ಳ ಮನುಷ್ಯರಿರುವುದು ವಿರಳ. ಎಲ್ಲರೂ ಚಪಲಚಿತ್ತವುಳ್ಳ ಹಂದಿ, ನಾಯಿಗಳಂತಾಗಿದ್ದಾರೆ. ಹಂದಿಗಳು ಮತ್ತು ನಾಯಿಗಳಂತೆ ಸದಾ ಚಂಚಲರಾಗಿರುವುದೇ ಇವರ ಕಸುಬಾಗಿದೆ. ಆದರೂ ಹಂದಿಗಳು, ನಾಯಿಗಳಂತೆ ಜೀವಿಸುತ್ತಾ ತಾವು ಬಹಳ ದೊಡ್ಡ ನಾಗರಿಕರು ಎಂದು ಹೇಳಿಕೊಳ್ಳುತ್ತಾರೆ. ವಿಶ್ಲೇಷಣಾತ್ಮಕವಾಗಿ ನೀವು ಅಧ್ಯಯನ ಮಾಡಿ ನೋಡಿದರೆ ಈ ಹಂದಿ ನಾಯಿಗಳಂತಹ ಪ್ರಾಣಿಜೀವನಕ್ಕೂ, ಆಧುನಿಕ ಮನುಷ್ಯನ ಜೀವನದ…


  • ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

    ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

    ಶ್ರೀರಾಮಚಂದ್ರನು ರಾಜ್ಯವನ್ನು ತೊರೆದು ಹೊರನಡೆದಿದ್ದ. ಆದರೂ ಅವನು ಈ ಪವಿತ್ರ ಸ್ಥಳದಲ್ಲಿ ಸುಖದಿಂದ ಜೀವಿಸಿದ. ಶ್ರೀರಾಮಚಂದ್ರನು ತನ್ನ ಮಡದಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ಚಿತ್ರಕೂಟ ವನದಲ್ಲಿ ಹನ್ನೆರಡು ವರ್ಷಕಾಲ ವಾಸ ಮಾಡಿದ. ಈ ಮೂವರೂ ಚಿತ್ರಕೂಟಕ್ಕೆ ಹೇಗೆ ಬಂದರೆಂಬ ಕಥೆಯನ್ನು ರಾಮಾಯಣದಲ್ಲಿ ವಿಸ್ತಾರವಾಗಿ ವರ್ಣಿಸಲಾಗಿದೆ. ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ರಾಜ್ಯ ಬಿಟ್ಟು ಹೊರಗಿರಬೇಕಾಯಿತು. ಅವನು ಸೀತಾ ಲಕ್ಷ್ಮಣರೊಂದಿಗೆ ವನವನ್ನು ಪ್ರವೇಶಿಸಿದಾಗ ತಾವೆಲ್ಲಾ ಎಲ್ಲಿ ವಾಸಮಾಡಬೇಕೆಂದು ಭರದ್ವಾಜ ಮುನಿಗಳನ್ನು ಕೇಳಿದನು. ತನ್ನ ಆಶ್ರಮದಿಂದ ಸುಮಾರು ಹತ್ತು…


  • ಊರ್ವಶಿಗೆ ಮನಸೋತ ಪುರೂರವ ರಾಜ!

    ಊರ್ವಶಿಗೆ ಮನಸೋತ ಪುರೂರವ ರಾಜ!

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 14ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಊರ್ವಶಿಗೆ ಮನಸೋತ ಪುರೂರವ ರಾಜ! ಕಥೆಯನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. “ಇಂದಿನ ಅಧ್ಯಾಯದಲ್ಲಿ ಶ್ರೀವ್ಯಾಸದೇವರು…


  • ಪ್ರಭುಪಾದರು ಹೇಳಿದ ಸಣ್ಣಕಥೆಗಳು

    ಪ್ರಭುಪಾದರು ಹೇಳಿದ ಸಣ್ಣಕಥೆಗಳು

    ಕೈಲಾಗದವನು “ಬೇರೆಯವರ” ಮೈ ಪರಚಿದನು ಕೆಲವರು ಸ್ವಯಂ ತಾವೇ ಏನನ್ನೂ ಮಾಡಲಾರರು. ಬೇರೆ ಯಾರೋ ಏನನ್ನಾದರೂ ಒಳಿತನ್ನು ಮಾಡಿದರೆ ಇವರು ಮತ್ಸರ ತೋರಿಸುತ್ತಾರೆ. ಇಂತಹದು ಮೂರನೆಯ ದರ್ಜೆ ಮನುಷ್ಯನ ನಡವಳಿಕೆ ಎಂದು ಪ್ರಭುಪಾದರು ಒಮ್ಮೆ ಹೇಳಿದರು. ತಮ್ಮ ಮಾತಿಗೆ ಸಾದೃಶ್ಯ ನೀಡಲು ತಾವು ತಮ್ಮ ಗುರುಗಳ ಬಾಯಿಂದ ಕೇಳಿದ್ದ ಒಂದು ಕಥೆಯನ್ನು ಪ್ರಭುಪಾದರು ಹೇಳಿದರು: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುದ್ದೇಶಿಸಿ, “ಅಯ್ಯಾ, ನಮ್ಮಿಬ್ಬರಿಗೂ ಚೆನ್ನಾಗಿ ತಿಳಿದಿರುವ ಒಬ್ಬನು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಪದವಿ ಅಲಂಕರಿಸಿದ್ದಾನೆ” ಎಂದನು. ಈ…