– ಆಕರ: ಸತ್ಸ್ವರೂಪದಾಸರ ಸ್ಮೃತಿಪಟಲದಿಂದ
ಶ್ರೀಲ ಪ್ರಭುಪಾದರು ಅವಕಾಶವಿದ್ದೆಡೆಯಲ್ಲ ಭಕ್ತರು ವೈಷ್ಣವ ಲಾಂಛನಗಳನ್ನು ಧರಿಸಲು ಹುರಿದುಂಬಿಸುತ್ತಿದ್ದರು. ಅದಕ್ಕಾಗಿ ಅವರೊಂದು ಪುಟ್ಟ ಕಥೆ ಹೇಳಿದರು:
ಒಂದಾನೊಂದು ಕಾರ್ಖಾನೆಯಲ್ಲಿ ಬಹುಸಂಖ್ಯೆಯ ಹಿಂದೂ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯ ವೈಷ್ಣವರಿದ್ದರು ಅವರು ಪ್ರತಿದಿನ ತಮ್ಮ ಲಾಂಛನವಾದ ‘ತಿಲಕ’ವನ್ನು ಧರಿಸಿಯೇ ಕೆಲಸಕ್ಕೆ ಬರುತ್ತಿದ್ದರು.
ಕೆಲ ಕಾಲದ ಅನಂತರ ಕಾರ್ಖಾನೆಯ ಆಡಳಿತ – ವ್ಯವಹಾರಗಳು ಬದಲಾಗಿ, ಮುಸ್ಲಿಮನೊಬ್ಬನ ತೆಕ್ಕೆಗೆ ಬಿತ್ತು. ಆಡಳಿತ ವಹಿಸಿಕೊಂಡ ಆತ, ಕಾರ್ಮಿಕರಾರು ವೈಷ್ಣವ ತಿಲಕ ಧರಿಸಬಾರದೆಂದು ಆದೇಶ ಹೊರಡಿಸಿದ.

ಕಾರ್ಮಿಕರಲ್ಲಿ ಬಹುತೇಕರು ಆದೇಶಕ್ಕೆ ತಲೆಬಾಗಿ, ನಿಗದಿತ ದಿನದಂದು ತಿಲಕ ಧರಿಸದೆ ಕೆಲಸಕ್ಕೆ ಹಾಜರಾದರು. ಆದರೆ ಒಬ್ಬ ಮಾತ್ರ ಕೃಷ್ಣನ ಮೇಲೆ ಭಾರ ಹಾಕಿ, ತಿಲಕ ಇಟ್ಟುಕೊಂಡೇ ಕೆಲಸಕ್ಕೆ ಬಂದ.
ಅವನ ಹಣೆಯಲ್ಲಿ ಬಿಳಿಯ ತಿಲಕ ಎದ್ದು ತೋರುತ್ತಿತ್ತು. ಸಾಲಾಗಿ ನಿಂತ ಕಾರ್ಮಿಕರನ್ನೆಲ್ಲ ಪರಿಶೀಲಿಸಿದ ಮುಸ್ಲಿಂ ನಿರ್ವಾಹಕ ‘ಈ ತಿಲಕ ಧರಿಸಿರುವ ವ್ಯಕ್ತಿ ನಿಜಕ್ಕೂ ಧೈರ್ಯಶಾಲಿ. ಇವನೊಬ್ಬನಿಗೆ ಪ್ರತಿನಿತ್ಯ ಅದಕ್ಕೆ ಅನುಮತಿ ನೀಡಲಾಗುವುದು. ಆದರೆ ಉಳಿದೆಲ್ಲರಿಗೂ ತಿಲಕ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ’ ಎಂದ.
ನೀತಿ : ನಾವು ಅನಗತ್ಯವಾಗಿ ನಮ್ಮ ಸಂಪ್ರದಾಯಗಳನ್ನು ಬಿಟ್ಟು ಕೊಡಬಾರದು.






Leave a Reply