ದೀಪದ ಗೊಂಚಲು

– ಆಕರ : ವಿಚಿತ್ರ ವೀರ್ಯದಾಸರ ಸಂದರ್ಶನ ಟಿಪ್ಪಣಿಗಳು

ಇಂಗ್ಲೆಂಡಿನ ಇಸ್ಕಾನ್ ದೇಗುಲದ ಮೇಲ್ವಿಚಾರಕರಾಗಿದ್ದ ಶಾಮಸುಂದರ ದಾಸರು ಮೂರು ಸಾವಿರ ಪೌಂಡ್ ಹಣ ನೀಡಿ ಹರಳುಗಳಿಂದ ಅಲಂಕೃತವಾದ ದೊಡ್ಡ ದೀಪದ ಗೊಂಚಲನ್ನು ದೇವಾಲಯಕ್ಕೆ ತಂದರು.

ಆದರೆ ಆ ಹೊತ್ತಿಗೆ ಅದಕ್ಕೆ ಹಣ ಒದಗಿಸಲು ಭಕ್ತರಿಗೆ ಅವಕಾಶವಾಗಲಿಲ್ಲ. ಆಗ ಶೀಲ ಪ್ರಭುಪಾದರು ಶ್ಯಾಮಸುಂದರ ದಾಸರನ್ನು ಹಾಸ್ಯ ಮಾಡುತ್ತ, ಹೆಚ್ಚು ಹಣವಿರುವ ವ್ಯಕ್ತಿಗೆ ಅದರ ಬೆಲೆ ತಿಳಿದಿರುವುದಿಲ್ಲ ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಅವರು ಹೇಳಿದ ಕಥೆ, ಒಬ್ಬಶ್ರೀಮಂತ ನವಾಬನದು:

ಒಂದೂರಿನಲ್ಲಿ ಒಬ್ಬ ಶ್ರೀಮಂತ ನವಾಬನಿದ್ದ. ಅವನಿಗೆ ತನ್ನಲ್ಲಿ ಎಷ್ಟು ಸಂಪತ್ತಿದೆ ಎಂಬ ಲೆಕ್ಕವೇ ತಿಳಿದಿರಲಿಲ್ಲ. ಅದನ್ನು ಹೇಗೆ ಖರ್ಚು ಮಾಡಿ ಕರಗಿಸಬೇಕೆಂದೂ ಅವನಿಗೆ ಹೊಳೆಯುತ್ತಿರಲಿಲ್ಲ.

ನವಾಬನ ಬಳೆ ಬೆಲೆ ಬಾಳುವ ಹರಳುಗಳಿಂದ ಮಾಡಿದ ದೊಡ್ಡ ದೊಡ್ಡ ದೀಪದ ಗೊಂಚಲುಗಳ ಸಂಗ್ರಹವಿತ್ತು. ಅವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಲೆಂದೇ ಒಬ್ಬ ಆಳು ಇದ್ದ.

ಒಮ್ಮೆ ಅವನು ಒಂದು ಗೊಂಚಲನ್ನು ಒರೆಸುತ್ತಿದ್ದಾಗ ಹರಳೊಂದು ಕಳಚಿ ಬಿತ್ತು. ಅದು ನೆಲದ ಮೇಲೆ ಬಿದ್ದಾಗ ಚೆಂದದ ಕಿಣಿ ಕಿಣಿ ನಾದ ಹೊಮ್ಮಿತು. ತನ್ನ ಕೋಣೆಯಲ್ಲಿ ಈ ಸದ್ದು ಆಲಿಸಿದ ನವಾಬ ಓಡುತ್ತ ಬಂದು, ”ಅದೇನು ಸದ್ದು? ಈಗ ಬಂದಿದ್ದು?” ಎಂದು ಪ್ರಶ್ನಿಸಿದ. ಹೆದರಿದ ಆಳು ನಡುಗುತ್ತಾ “ದಯವಿಟ್ಟು ಕ್ಷಮಿಸಿ, ದೀಪ ಒರೆಸುವಾಗ ಒಂದು ಹರಳು ಕಳಚಿಬಿತ್ತು” ಎಂದು ವಿನೀತವಾಗಿ ನುಡಿದ. ಮತ್ತೆ ಮತ್ತೆ ನಡು ಬಗ್ಗಿಸಿ ಕ್ಷಮೆ ಕೇಳಿದ.

ಆದರೆ ನವಾಬ ಮಾತ್ರ ಮೆಚ್ಚುಗೆ ಸೂಚಿಸುತ್ತ, ”ಬಹಳ ಮಧುರ ದನಿ ಇದು, ಎಲ್ಲಿ ಮತ್ತೊಂದು ಹರಳು ಬೀಳಿಸು” ಎಂದ. ಆಳು ಮತ್ತೊಂದು ಹರಳು ಬೀಳಿಸಿದ.

“ಬಹಳ ಇಂಪಾಗಿದೆ, ಮತ್ತೊಂದು ಕಳಚು” ಎಂದ ನವಾಬ. ಹೀಗೆ ಆ ಶಬ್ದ ಸವಿಯಲು ಇಡಿಯ ದೀಪದ ಗೊಂಚಲಿನ ಹರಳುಗಳನ್ನೆಲ್ಲ ನೆಲಕ್ಕೆ ಬೀಳಿಸಲಾಯಿತು. ಆದರೆ ಆತ ಕೊಂಚವೂ ಬೇಸರಿಸದೆ ಅದರ ನಿನಾದವನ್ನು ಆನಂದಿಸಿದ.

ನೀತಿ : ಹೆಚ್ಚು ಸಂಪತ್ತು ಇರುವವರಿಗೆ ಅದರ ಬೆಲೆ ತಿಳಿದಿರುವುದಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi