ಹಲಸಿನ ಹಣ್ಣಿನ ಸ್ವಾದ !

ಕಥಾಮೃತ ಬಿಂದು

– ಆಕರ: ಜದುರಾಣಿದೇವಿ ದಾಸಿ ಮತ್ತು ಹರಿಕೇಶದಾಸರ ಸಂದರ್ಶನ ಟಿಪ್ಪಣಿಗಳು

ಒಮ್ಮೆ ಶ್ರೀಲ ಪ್ರಭುಪಾದರು ಹಲಸಿನ ಹಣ್ಣು ತಿನ್ನುತ್ತಿದ್ದರು. ಹಣ್ಣಿನ ವಿಶಿಷ್ಟ ಸ್ವಾದದ ಬಗ್ಗೆ ಅವರು ವಿನೋದದಿಂದ ಹೇಳಿದ ಚಿಕ್ಕ ದೃಷ್ಟಾಂತ ಇದು:

ವಿದೇಶಕ್ಕೆ ಹೋದ ಒಬ್ಬ ವ್ಯಕ್ತಿ, ಅಲ್ಲಿ ತನ್ನ ಸ್ನೇಹಿತನಿಗೆ ಹಲಸಿನ ಹಣ್ಣಿನ ಸ್ವಾದದ ಬಗ್ಗೆ ವಿವರಿಸಲು ಯತ್ನಿಸುತ್ತಿದ್ದ. ಅದು ಸಾಧ್ಯವಾಗದೆ ಸೋತು, “ನೀನು ಅದನ್ನು ತಿನ್ನದೆ, ಅದರ ಸ್ವಾದವನ್ನು ಗ್ರಹಿಸಲಾರೆ” ಎಂದು ಹೇಳಿ ಸುಮ್ಮನಾದ.

ಆದರೆ ಅವನ ಸ್ನೇಹಿತ, “ಅದರ ರುಚಿಯನ್ನು ವಿವರಿಸಲು ಯಾವುದೂ ಪದಗಳೇ ಇಲ್ಲವೇ?” ಎಂದು ಒತ್ತಾಯ ಪಡಿಸಿದ. ಏನೂ ಹೇಳಲು ತೋಚದೆ, ಆ ಮೊದಲನೆ ವ್ಯಕ್ತಿ “ನೀನೆಂದಾದರೂ ಸಾಬಿಯ ಗಡ್ಡವನ್ನು ಕಬ್ಬಿನ ಹಾಲಿನಲ್ಲಿ ಅದ್ದಿ ಹೀರಿದ್ದರೆ, ನಿನಗೆ ಹಲಸಿನ ಹಣ್ಣಿನ ರುಚಿ ತಿಳಿದಿರುತ್ತಿತ್ತು’ ಎಂದು ಹೇಳಿಬಿಟ್ಟ.

”ಕೃಷ್ಣಪ್ರಜ್ಞೆಯಿರದ ಜನರು ರಾಸಲೀಲೆಯನ್ನು ವರ್ಣಿಸಲು ಮಾಡುವ ಪ್ರಯತ್ನ ಇಂಥದ್ದು! ಕಥೆ ಹೇಳಿದ ಮೇಲೆ ಪ್ರಭುಪಾದರಿಂದ ಈ ಉದ್ಗಾರ ಹೊರಟಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi