ಹಿಮಾಲಯದ ಸಂತಾನ

ಆಕರ: ರುಕ್ಮಿಣಿ ದೇವಿದಾಸಿ ಮತ್ತು ರಾಮೇಶ್ವರ ದಾಸರ ಸಂದರ್ಶನ ಟಿಪ್ಪಣಿಗಳು

ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭ. ಶ್ರೀಲ ಪ್ರಭುಪಾದರು ಅಲ್ಲಿನ ಭಾರೀ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡಿದರು.

ಆದರೆ ಹಾರ್ವರ್ಡ್‌ ನಂತಹ ಮಹಾನ್‌ ವಿಶ್ವವಿದ್ಯಾಲಯದಿಂದ ಹೊರಬರುವ ವಿದ್ಯಾರ್ಥಿಗಳು ಸತ್ತ್ವಶಾಲಿಗಳಾಗಿರಬೇಕು, ಹಾಗೆ ಪರಿಪೂರ್ಣರಾಗಲು ಅವರು ಕೃಷ್ಣಪ್ರಜ್ಞೆ ಹೊಂದಿರಬೇಕು ಎನ್ನುವುದು ಅವರ ಆಶಯವಾಗಿತ್ತು. ಅದನ್ನು ಮನದಟ್ಟು ಮಾಡಿಸಲು ಅವರು “ಹಿಮಾಲಯ ಸಂತಾನವನ್ನು ಹೆತ್ತ” ಕಥೆ ಹೇಳಿದರು.

ಅಂದೊಮ್ಮೆ ಎಲ್ಲೆಡೆಗಳಲ್ಲಿ ಹಿಮಾಲಯ ಪರ್ವತವು ಸಂತಾನವನ್ನು ಹೆರಲಿದೆ ಎನ್ನುವ ಸುದ್ದಿ ಹಬ್ಬಿತು. ಅದನ್ನು ಕೇಳಿ ಕುತೂಹಲಿಗಳಾದ ಜನರು ಪರ್ವತದ ಬುಡದಲ್ಲಿ ಜಮಾಯಿಸಿದರು. ಹಾಗೆ ಅವರೆಲ್ಲರು ಕಾತರದಿಂದ ಕಾಯುತ್ತಿದ್ದಾಗ, ಬೆಟ್ಟದ ತುತ್ತ ತುದಿಯಲ್ಲಿ ಕಪ್ಪನೆಯ ಭಾರೀ ಅಲೆಯೊಂದು ಕೆಳಗೆ ದೌಡಾಯಿಸುತ್ತಿರುವುದು ಕಾಣಿಸಿತು.

ಜನರ ಕುತೂಹಲ ಹೆಚ್ಚಿತು. “ಹಿಮಾಲಯದ ಸಂತಾನ ಕೆಳಗಿಳಿದು ಬರುತ್ತಿದೆ” ಎಂದು ಕಾದರು. ಅದು ಕೆಳಗೆ, ಬೆಟ್ಟದ ಬುಡ ತಲಪಿದಾಗ ಕಂಡಿದ್ದೇನು ಗೊತ್ತೇ? ಸಾವಿರ ಸಾವಿರ ಸಂಖ್ಯೆಯ ಇಲಿ ಮರಿಗಳು!

ನೀತಿ: ಎಂತಹಾ ಉನ್ನತ ಹಿನ್ನಲೆಯಿಂದ ಬಡಮೂಡಿದ್ದರೂ ಕೃಷ್ಣಪ್ರಜ್ಞೆಯಿಲ್ಲದವರು ಸತ್ತ್ವ ಹೀನರೇ ಆಗಿರುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi