ಜನನ, ಮರಣಗಳ ಮೀರಿ…

ಆಕರ : ಶ್ರೀ ಮಧುಪಂಡಿತ ದಾಸ, ಅಧ್ಯಕ್ಷರು, ಇಸ್ಕಾನ್ ಬೆಂಗಳೂರು ಇವರ ಭಾಗವತ ಪ್ರವಚನ

ಮರ್ತ್ಯೋ ಮೃತ್ಯುವ್ಯಾಲಭೀತಃ ಪಲಾಯನ್

ಲೋಕಾನ್ ಸರ್ವಾನ್ನಿರ್ಭಯಂ ನಾಧ್ಯಗಚ್ಛತ್ |

ತತ್ಪಾದಾಬ್ಜಂ ಪ್ರಾಪ್ಯ ಯದೃಚ್ಛಯಾದ್ಯ

ಸುಸ್ಥಃ ಶೇತೇ ಮೃತ್ಯುರಸ್ಮಾದಪೈತಿ ||27||

(ಸ್ಕಂಧ: 10, ಅಧ್ಯಾಯ-3, ಶ್ಲೋಕ 27)

”ಯಾವೊಬ್ಬ ವ್ಯಕ್ತಿಯೂ ತಾನು ಬೇರೆ ಬೇರೆ ಗ್ರಹಗಳಿಗೆ ಹಾರಿಹೋದರೂ ಕೂಡ ಜನನ, ಮರಣ, ವೃದ್ಧಾಪ್ಯ ಮತ್ತು ರೋಗಗಳೆಂಬ ನಾಲ್ಕು ನಿಯಮಗಳಿಂದ ಮುಕ್ತನಾಗಲು ಸಾಧ್ಯವಿಲ್ಲ. ನನ್ನ ಪ್ರಭುವೇ, ಈಗ ಮೃತ್ಯುವೇ ನಿನ್ನ ಭಯದಿಂದ ಹೆದರಿ ಹಾರಿಹೋಗುತ್ತಿದೆ. ಜೀವಿಗಳು ನಿನ್ನ ದಯೆಯಿಂದ, ನಿನ್ನ ಪಾದಪದ್ಮಗಳಲ್ಲಿ ಆಶ್ರಯ ಪಡೆದು ನೆಮ್ಮದಿಯ ನಿದ್ರೆ ಮಾಡುತ್ತಿವೆ.”

ಈ ಭೌತಿಕ ಜಗತ್ತಿನಲ್ಲಿ ಜೀವಿಗಳು ನಿರಂತರವಾಗಿ ಜನನ, ಮರಣ, ಜರಾ, ರೋಗಗಳನ್ನು ಅನುಭವಿಸುತ್ತಲೇ ಇವೆ. ಯಾರೊಬ್ಬರೂ ಇದಕ್ಕೆ ಹೊರತಾಗಿಲ್ಲ. ಪ್ರಭುಪಾದರು ವಿವರಿಸುವಂತೆ – ಅತಿದೀರ್ಘ ಆಯುಷ್ಮಾನದ ಇತರ ದೈವೀಗ್ರಹಗಳಲ್ಲಿ ಕೂಡ ವ್ಯಕ್ತಿಯು ಅಂತ್ಯವನ್ನು ಹೊಂದಲೇಬೇಕು. ಆಧ್ಯಾತ್ಮಿಕ ಧಾಮದ ಭಾಗಗಳಾದ ನಾವು ಈ ಭೌತಿಕ ಜಗತ್ತಿಗೆ ಬಿದ್ದಿದ್ದು, ಪ್ರತಿಯೊಬ್ಬರು ನಮ್ಮ ವೈಯುಕ್ತಿಕ ಬಯಕೆಗಳಿಗನುಗುಣವಾಗಿ ವಿಭಿನ್ನ ದೇಹಗಳನ್ನು ಹೊಂದಿರುತ್ತೇವೆ.

ಈ ದೇಹ, ಈ ಭೌತಿಕ ಜಗತ್ತು ದೇವೋತ್ತಮ ಪರಮಪುರುಷ ಶ್ರೀಕೃಷ್ಣನ ಪ್ರತಿನಿಧಿಯಾದ ‘ಕಾಲ’ನಿಂದ ನಡೆಸಲ್ಪಡುತ್ತದೆ. ಕಾಲನ ಬಲದಿಂದ ಭೌತಿಕ ಶಕ್ತಿ ದೇಹ ಮತ್ತು ಜೀವರಾಶಿಗಳ ಮನಸ್ಸುಗಳು ಚಾಲನೆಗೊಳ್ಳುತ್ತವೆ, ಮತ್ತು ಜೀವರಾಶಿಗಳು ಈ ಅನುಭವದಲ್ಲಿ ಸಿಲುಕಿಕೊಳ್ಳುತ್ತವೆ. ಜೀವನು ಇದನ್ನು ಬಯಸುವುದಿಲ್ಲ ಯಾಕೆಂದರೆ, ಅವನು ಶಾಶ್ವತ ಬದುಕನ್ನು ಬಯಸುತ್ತಾನೆ. ನಿತ್ಯತೆಯನ್ನು ಬಯಸುವುದು ಜೀವಿಯ ಸಹಜ ಪ್ರಕೃತಿಯೇ ಆಗಿದೆ. ಯಾಕೆಂದರೆ ಅವನು ಸ್ವಭಾವತಃ ಶಾಶ್ವತನು.

ಯಾವಾಗ ನಾವು ಈ ದೇಹದೊಳಗೆ ಹಾಕಲ್ಪಡುತ್ತೇವೋ, ಆಗ ನಮ್ಮಲ್ಲಿ ಸಾಯದೆ ಇರುವ ಆಸೆ ಮೂಡುತ್ತದೆ. ನಾವು ವೃದ್ಧರಾಗಬಾರದೆಂದು ಬಯಸುತ್ತೇವೆ, ಮತ್ತು ರೋಗಗಳಿಂದ ಬಾಧೆಗೊಳಗಾಗಬಾರದೆ೦ದು ಆಶಿಸುತ್ತೇವೆ. ವಾಸ್ತವವಾಗಿ ಈ ಎಲ್ಲ ಸಂದರ್ಭಗಳಲ್ಲಿ ಕ್ಷಣಿಕ ಪ್ರಕೃತಿಯು ಆರೋಪವಾಗಿರುತ್ತದೆ.

ಎಲ್ಲವೂ ಕ್ಷಣಿಕ. ಈ ದೇಹ ಕೂಡ. ವೃದ್ಧಾಪ್ಯವು ಬಂದೇ ಬರುವಂಥದ್ದು, ರೋಗಗಳಂತೂ ದೇಹದೊಳಗೆ ನಡೆಯುವ ನಿರಂತರ ಬದಲಾವಣೆಯ ಕಾರಣದಿಂದ ಸದಾ ದಾಳಿ ಮಾಡುತ್ತಲೇ ಇರುತ್ತವೆ. ನಮ್ಮ ಆಂತರ್ಯದಲ್ಲೆಲ್ಲೋ ಈ ವ್ಯವಸ್ಥೆಯ ಹೊರತಾದ ಒಂದು ಉನ್ನತ ಜೀವನ ರೀತಿಯನ್ನು ಬಯಸುತ್ತಿರುತ್ತೇವೆ. ವಾಸ್ತವವಾಗಿ ಸದಾ ಅದಕ್ಕೆ ವಿರುದ್ಧ ಗುಣಗಳೇ ನಮಗೆ ಒದಗುತ್ತಿರುತ್ತದೆ.

ಇಲ್ಲಿ ಎರಡು ಬಗೆಗಳಿವೆ. ಒಂದು, ಪ್ರಕೃತಿಯು ‘ಸಚ್ಚಿದಾನಂದ’ ಎಂದು ಕರೆಯಲ್ಪಡುತ್ತದೆ. ಮತ್ತೊಂದು, ಅದಕ್ಕೆ ವಿರುದ್ಧವಾದುದು. ಈ ಎರಡು ಅಂಶಗಳು ಭೌತಿಕ ಜಗತ್ತಿನಲ್ಲಿ ಸದಾ ದ್ವಂದ್ವವನ್ನು ಹುಟ್ಟಿಸುತ್ತವೆ.

ಆದ್ದರಿಂದ ನಮ್ಮ ಪ್ರಕೃತಿಯು ಈ ದ್ವಂದ್ವದಿಂದ ಹೊರತಾಗಿರಬೇಕು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಹೃದಯದ ಆಂತರ್ಯದಲ್ಲಿ, ನಾವು ಶಾಶ್ವತ ಜಿಜ್ಞಾಸೆ ಮತ್ತು ಆನಂದಗಳನ್ನು ಅನುಭವಿಸುವುದನ್ನು ಬಯಸುವೆವು. ಅದು, ಆಧ್ಯಾತ್ಮಿಕ ಲೋಕದಲ್ಲಿ ಸಹಜವಾಗಿ ದೊರೆಯುತ್ತದೆ.

ಕಾಲನ ಬಲದಿಂದ ಇಂದು ವಿಶ್ವಾದ್ಯಂತ ಮಿಲಿಯಾಂತರ ಜೀವಿಗಳು ತ್ರಿಗುಣಗಳಿಗೆ ಒಳಗಾಗಿ ವಿವಿಧ ಬಗೆಯ ದೇಹ ತಳೆದು ಸುತ್ತುತ್ತಿದ್ದಾರೆ, ಮತ್ತು ಕಾಲನ ಪ್ರಭಾವದಿಂದ ತಾನು ಯಾವ ಮೂಲದವನು ಎಂಬುದೇ ಮರೆತಿದ್ದಾನೆ.

ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ನಡೆದುಕೊಳ್ಳುವನೆಂದು ನೋಡಿ. ಆ ಪ್ರಾಣಿಗೇನು ಗೊತ್ತು? ನಾಯಿಗೇನು ಗೊತ್ತು? ಎಂದು ಅವನು ಭಾವಿಸುವನು. ನಾಯಿಯೆದುರು ಸುಮ್ಮನೆ ಒಂದು ಮೂಳೆಯನ್ನು ಎಸೆಯಿರಿ. ನಾಯಿ ಕೂಡಲೇ ಅದರತ್ತ ಧಾವಿಸುತ್ತದೆ. ಈ ಪ್ರಾಣಿಗಳಿಗೆ ಸ್ವಾತಂತ್ರ್ಯವೇ ಇಲ್ಲ. ಅವು ಕೇವಲ ಇಂದ್ರಿಯಗಳ ಹಿಂದೆ ಓಡುತ್ತಿರುತ್ತವೆ. ನಾವು ಪ್ರಾಣಿಯನ್ನು ಹೀಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಹೀಗೆಯೇ ನಾವು ಕೂಡ. ಯಾರಿಗೆ ತಾವು ಯಾರು ಎಂಬ ಅರಿವಿಲ್ಲವೋ, ಮೌಢ್ಯಕ್ಕೆ ಒಳಗಾಗಿರುತ್ತಾರೋ, ತಮ್ಮ ಪ್ರಕೃತಿಯ ಬಗ್ಗೆಯೇ ತಿಳುವಳಿಕೆ ಇರುವುದಿಲ್ಲವೋ ತಾವು ಯಾರೆಂದು ತಿಳಿಯುವ ಕೃಪೆ ಆಗಿರುವುದಿಲ್ಲವೋ, ಅವರು ಮನುಷ್ಯರಾಗಿದ್ದರೂ ಕೂಡ ಪ್ರಾಣಿಗಳಂತೆಯೇ ಸರಿ. ಆದರೆ ಯಾರು ಭಗವಂತನ ಭಕ್ತನ ಸತ್ಸಂಗಕ್ಕೆ ಒಳಗಾಗುತ್ತಾರೋ, ಭಗವದ್ಗೀತೆ ಅಥವಾ ಭಗವಂತನಿಂದ ಹೇಳಲ್ಪಟ್ಟದ್ದನ್ನು ಶ್ರವಣ ಮಾಡುತ್ತರೋ ಕೂಡಲೇ ಅವರು ತಾವು ಯಾರೆಂದು ಕಂಡುಕೊಳ್ಳುವ ಸದವಕಾಶ ಪಡೆಯುತ್ತಾರೆ.

ಅವರಿಗೆ ತಿಳಿದಿರಲಿ, ತಿಳಿಯದೆ ಇರಲಿ, ತಾನು ಏನೆಂದು ತಿಳಿಯುತ್ತಾನೋ ಅದು ಆಗಿಬಿಡುವುದಿಲ್ಲ. ಅವನು ಬೇಕಾದಷ್ಟು ಯೋಚಿಸಬಹುದು. “ನಾನು ಈ ದೇಹ” ಎಂದು ತಿಳಿಯಬಹುದು. ಏನು ಬೇಕಾದರೂ ತಿಳಿಯಬಹುದು. ಹಾಗಂದ ಮಾತ್ರಕ್ಕೆ ವಾಸ್ತವ ಬದಲಾಗುವುದಿಲ್ಲ. ನಾವೆಲ್ಲರೂ ಭಗವಂತನ ಅಂಶಗಳು ಎಂಬ ಸತ್ಯ ಬದಲಾಗುವುದಿಲ್ಲ. ನಾವು ಶಾಶ್ವತ ಜೀವರು.

ಪ್ರತಿಯೊಂದಕ್ಕೂ ತನ್ನದೇ ಆದ ನಡಾವಳಿಗಳಿವೆ. ಕಬ್ಬಿಣ ಎಂದಿಗೂ ಕಬ್ಬಿಣವೇ. ಅದರ ಸ್ವಭಾವವೂ ಕಬ್ಬಿಣವೇ. ನೀನು ಅದನ್ನು ಕಬ್ಬಿಣ’ ಎಂದು ಕರೆಯುವೆಯಾದರೆ, ಅದರ ಗುಣಗಳು ಕಬ್ಬಿಣವೇ ಆಗಿರಬೇಕು.

ಬಂಗಾರವು ಬಂಗಾರವೇ, ಇದೇ ರೀತಿ, ದೇಹದ ಒಳಗಿನ ಚೇತನದ ವಿಷಯದಲ್ಲು ಕೂಡ. ಯಾವ ರೀತಿಯ ಭ್ರಮೆಗೊಳಗಾಗಿದ್ದರೋ ನಾವು ಶಾಶ್ವತ ಜ್ಞಾನ ಮತ್ತು ಆನಂದದ ಪ್ರಕೃತಿ ಹೊಂದಿರುವೆಂಬುದು ಸತ್ಯ – ಆದರೆ ನಾವು ಭೌತಿಕ ಶಕ್ತಿಯ ಮುಸುಕಿಗೆ ಒಳಗಾಗಿದ್ದೇವೆ. ಈ ಮುಸುಕು ನಮ್ಮನ್ನು ಅನಪೇಕ್ಷಿತವಾದ ಜನನ, ಜರಾ, ಮೃತ್ಯು ರೋಗಗಳಿಂದೊಡಗೂಡಿದ ಮತ್ತೊಂದು ಜಗತ್ತಿಗೆ ಸೆಳೆಯುತ್ತದೆ.

ಯಾರೂ ಬಯಸದಿದ್ದರೂ ಕೂಡಾ ಅವು ಬರುತ್ತವೆ. ಸಾವು ಕೂಡ ಇಂಥದೊಂದು ಅನುಭವವೇ ಆಗಿದೆ. ಜೀವನು ಈ ಭ್ರಾಮಕ ಜಗತ್ತಿನೊಳಗೆ ಹಾಕಲ್ಪಡುತ್ತಾನೆ. ಮತ್ತು ಈ ಭ್ರಾಮಕ ಜಗತ್ತಿನ ಜಗತ್ತು, ಭ್ರಮೆಯಲ್ಲ. ಜಗತ್ತಿನ ಶಕ್ತಿ ಭ್ರಮೆಯಲ್ಲ. ಕೃಷ್ಣನ ಶಕ್ತಿಯ ಹೊರತಾಗಿ ನಾವು ನಮ್ಮ ಮನಸ್ಸಿನೊಳಗೆ ಕಲ್ಪಿಸಿಕೊಳ್ಳುವ ಜಗತ್ತು,  ಭ್ರಾಮಕ ಜಗತ್ತು. ಪ್ರತಿಯೊಬ್ಬನೂ ಈ ಬಗೆಯ ಭ್ರಾಮಕ ಜಗತ್ತೊಂದನ್ನು ಸೃಷ್ಟಿಸಿಕೊಂಡಿದ್ದಾನೆ. ನನ್ನ ಜಗತ್ತು. ನಿನ್ನ ಜಗತ್ತೂ ಆಗಿದೆ. ಇದುವೇ ಪ್ರತಿಯೊಬ್ಬರದೂ ಆಗಿದೆ.

ಒಂದು ಮಗು ತನ್ನದೇ ಆದ ಜಗತ್ತನ್ನು ಹೊಂದಿರುತ್ತದೆ. ನೀವು ನಿಮ್ಮದೇ ಜಗತ್ತನ್ನು ಸೃಷ್ಟಿಸಿಕೊಂಡಿರುತ್ತೀರಿ. ಮುಂಜಾನೆ ನೀವು ದಿನಪತ್ರಿಕೆಯೊಂದನ್ನು ಕೊಳ್ಳುತ್ತೀರಿ. ಅದನ್ನು ಓದಿದ ಅನಂತರ ಮತ್ತೆ ನಿಮ್ಮ ಜಗತ್ತನ್ನು ಹೊಸ ಸಂಗತಿಗಳಿಂದ ಕಟ್ಟಲಾರಂಭಿಸುತ್ತೀರಿ.

ಮಗುವಿಗೆ ದಿನಪತ್ರಿಕೆ ಹೇಗೆ ಓದುವುದು ಎಂದು ತಿಳಿಯದು. ಅವನು ತನ್ನದೇ ಜಗತ್ತಿನ ಗಣಿಕೆಯಲ್ಲಿ ತೊಡಗುವನು. ಹೀಗೆ ಪ್ರತಿಯೊಬ್ಬರೂ ಈ ಭೌತಿಕ ಜಗತ್ತಿನೊಳಗೊಂದು ಜಗತ್ತನ್ನು ಹೆಣೆಯುತ್ತಿರುವರೇ. ಯಾಕೆಂದರೆ, ಜಗತ್ತಿನೊಳಗೆ ವಾಸಿಸುವುದು ನಮ್ಮ ಸ್ವಭಾವ.

ಆಧ್ಯಾತ್ಮಿಕ ಜಗತ್ತು ವಾಸ್ತವವಾದುದು. ಅಲ್ಲಿ ಭಗವಂತನಿದ್ದಾನೆ, ಭಕ್ತರಿದ್ದಾರೆ, ವೈವಿಧ್ಯವಿದೆ. ಹೀಗಾಗಿ, ಜಗತ್ತನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಸ್ವಭಾವ. ನಮ್ಮ ಹೃದಯಗಳಲ್ಲಿ ಶ್ರೀಕೃಷ್ಣನು ಪರಮಾತ್ಮನಾಗಿ ವಿರಾಜಮಾನನಾಗಿದ್ದಾನೆ ಮತ್ತು ಪ್ರಕೃತಿ ನಿಯಮದಂತೆ ನಮ್ಮ ಬಯಕೆಯ ಜಗತ್ತನ್ನು ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾನೆ. ಪ್ರಕೃತಿ ನಿಯಮಗಳಿಗೆ ಅನುಗುಣವಾಗಿ ನಾವು ಏನನ್ನೇ ಬೇಡಿದರೂ ಅವನು ಅದನ್ನು ನೆರವೇರಿಸುತ್ತಾನೆ.

ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ – ”ಈ ಭೌತಿಕ ಜಗತ್ತಿನ ಪ್ರತಿಯೊಂದೂ ಭೌತಿಕ ಪ್ರಕೃತಿಯ ಮೂರು ಗುಣಗಳ ಪ್ರತಿಕ್ರಿಯೆಯೇ ಆಗಿದೆ” ಎಂದು.

ಕ್ರಿಯೆ-ಪ್ರತಿಕ್ರಿಯೆ ಎಲ್ಲವೂ ನಡೆಯುವುದು ಭೌತಿಕ ಪ್ರಕೃತಿಯೊಳಗೆ, ಆದರೆ ಯಾತನೆ, ಸಂತೋಷ ಮೊದಲಾದವುಗಳ ಅನುಭೋಕ್ತ ಮಾತ್ರ ಆಯಾ ವ್ಯಕ್ತಿಯೇ ಆಗಿರುತ್ತಾನೆ. ಯಾಕೆಂದರೆ, ವಸ್ತುಗಳಿಗೆ ಅನುಭವ ದಕ್ಕುವುದಿಲ್ಲ.

ಪ್ರಕೃತಿಯು ಎಲ್ಲ ಭೌತಿಕ ಕ್ರಿಯೆಗಳಿಗೆ ಕಾರಣಕರ್ತೃವಾಗಿದೆ. ಆದರೆ ಜೀವನು ಸಂತೋಷ ಮತ್ತು ಯಾತನೆಗಳ ಕರ್ತೃವಾಗಿದ್ದಾನೆ. ಆದರೆ ಇದು ಪ್ರತ್ಯಕ್ಷ ಪರಿಣಾಮವಾಗಿರದೆ, ಪರೋಕ್ಷ ಕಾರಣ ಮಾತ್ರವಾಗಿದೆ.

ಜೀವನು ‘ಸುಖ’ ಮತ್ತು ‘ದುಃಖ’ ಗಳನ್ನು ಈ ಭೌತಿಕ ಜಗತ್ತಿನಲ್ಲಿ ಅಪರೋಕ್ಷವಾಗಿ ಅನುಭವಿಸುತ್ತಾನೆ. ಪ್ರಭುಪಾದರು ಹೇಳುವಂತೆ ಕನಸಿನಲ್ಲಿ ಯಾತನೆಪಟ್ಟರೂ, ಎಚ್ಚರಿಸುವಾಗ ಯಾತನೆಪಟ್ಟರೂ ಅದು ‘ ಯಾತನೆ’ ಯೇ ಆಗಿರುತ್ತದೆ.

ಹೀಗೆ ಜೀವನು ಕೇವಲ ಊಹಾತ್ಮಕವಾಗಿ ಸಂತೋಷ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದಾನೆ. ಯಾವಾಗ ಅವನು ತಾನಾಗಿಯೇ ಅದನ್ನು ನಿಲ್ಲಿಸುತ್ತಾನೋ, ಆಗ ಅದು ನಿಲ್ಲುತ್ತದೆ.

ಬ್ರಹ್ಮಾಣ್ಡ ಭ್ರಮಿತೇ ಕೋನ ಭಾಗ್ಯವಾನ್ ಜೀವ |

ಗುರು-ಕೃಷ್ಣ-ಪ್ರಸಾದೇ ಪಾಯ ಭಕ್ತಿ-ಲತಾ-ಬೀಜ ||

(ಚೈ.ಚ.ಮಧ್ಯಲೀಲಾ 19.151)

ಪ್ರತಿಯೊಬ್ಬನೂ ಈ ವಿಶ್ವದೊಳಗೆ ಮೇಲೆ ಕೆಳಗೆ ಅಲೆಯುತ್ತಿರುವನು. ಆದರೆ ಸಾಕಷ್ಟು ಪುಣ್ಯಶಾಲಿಯಾದವನು ಮಾತ್ರ ಈ ಅಲೌಕಿಕ ಜ್ಞಾನದ ಸಂಪರ್ಕಕ್ಕೆ ಬರುತ್ತಾನೆ. ಎಲ್ಲರಿಗೂ ಈ ಅವಕಾಶ ಒದಗದು. ಒಮ್ಮೆ ಇಂತಹ ಸಂಪರ್ಕಕ್ಕೆ ಬಂದರೆ ಸಾಕು, ನಮಗೆ ಈ ಅಲೌಕಿಕ ಜ್ಞಾನದ ಅಮೂಲ್ಯತೆ ಅರಿವಾಗುತ್ತದೆ.

”ನಾವು ಭಗವಂತನ ಅಂಶಗಳು, ಅವನ ಸೇವಕರು” ಎಂದು ಅರ್ಥೈಸಿಕೊಳ್ಳುವುದು ಎಷ್ಟು ಸುಲಭ ಎಂಬುದು ತಿಳಿಯುತ್ತದೆ. ಕೃಷ್ಣನೇ ದೇವೋತ್ತಮ ಪರಮಪುರುಷ. ಅವನೇ ಸಕಲವೂ ಆಗಿದ್ದಾನೆ ಎಂಬ ಅರಿವು ಮೂಡುತ್ತದೆ. ಆದರೆ, ನಮಗಿಂತ ಕೆಲವೇ ಮಾರು ದೂರ ನಿಂತ ವ್ಯಕ್ತಿಗೆ ಈ ಯಾವ ತಿಳುವಳಿಕೆ ಇರದು.

ಆದ್ದರಿಂದ, ಭಗವಂತನ ಪ್ರತಿನಿಧಿಗಳ ಕರುಣೆಯಿಂದ ಮಾತ್ರ ಇಂತಹ ತಿಳುವಳಿಕೆ ಸಾಧ್ಯ ಎಂಬುದು ಸ್ಪಷ್ಟ. ನಾನು ಯಾರು, ಎಲ್ಲಿಂದ ಬಂದಿರುವೆ, ತೆರಳಬೇಕಾಗಿರುವುದು ಎಲ್ಲಿಗೆ – ಈ ಎಲ್ಲ ಅರಿವುಗಳು ಭಕ್ತನೊಬ್ಬನ ಕರುಣೆಯಿಂದ ನಮಗೆ ಲಭಿಸುತ್ತದೆ.

ಮೇಲೆ ಹೇಳಿದಂತೆ, “ದೇವಾ! ನಿನ್ನೆದುರು ಮೃತ್ಯುವು ಭಯದಿಂದ ಹಾರಿ ಹೋಗುತ್ತದೆ…” ಯಾಕೆ? ಯಾಕೆಂದರೆ, ಭಗವಂತನು ಆನಂದಮಯನಾಗಿದ್ದಾನೆ. ನೋಡುವ ಯೋಗ್ಯತೆ ನಮ್ಮಲ್ಲಿದ್ದರೆ, ಭಗವಂತ ಕಾಣಿಸಿಕೊಳ್ಳುತ್ತಾನೆ. ಅವನು ಅಲೌಕಿಕನೂ, ನಿತ್ಯನೂ, ಎಲ್ಲ ಸೃಷ್ಟಿಯ ಮೂಲವೂ ಆಗಿದ್ದಾನೆ. ಅವನು ಶಾಶ್ವತ ಮಾತ್ರನಲ್ಲ, ಎಲ್ಲ ಶಾಶ್ವತ ಸಂಗತಿಗಳ ಆಕರವೂ ಆಗಿದ್ದಾನೆ.

ಭಗವಂತ ಎಂದರೆ ಶಾಶ್ವತ. ಶಾಶ್ವತವಾದುದರೆದುರು ಸಾವು ಎಲ್ಲಿ? ಅಲ್ಲಿ ಸಾವಿಗೆ ಸ್ಥಳವೇ ಇಲ್ಲ. ಅದೊಂದು ಕೇವಲ ಅನುಭವ ಮಾತ್ರ. ನಿಜವಾದ ಸಾವು ಎಂಬುದಿಲ್ಲ. ವಾಸ್ತವವಾಗಿ ಯಾರೂ ಸಾಯುವುದಿಲ್ಲ. ಹುಟ್ಟುವುದೂ ಇಲ್ಲ. ಎಲ್ಲರೂ ನಿತ್ಯತೆಯಲ್ಲಿ ಅಸ್ತಿತ್ವ ಪಡೆದವರೇ.

ದೇಹ ಸಾಯುತ್ತದೆ, ಮತ್ತು ನಾವು, “ನಾವೇ ಸಾಯುತ್ತೇವೆ” ಎಂದು ತಿಳಿಯುತ್ತೇವೆ. ಬೇರೆಯದೊಂದು ದೇಹ ಧರಿಸಿ ಬಂದಾಗ, ‘ನಾವು ಹುಟ್ಟಿದೆವು’ ಎಂದುಕೊಳ್ಳುತ್ತೇವೆ. ಇದು ನಡೆಯುತ್ತಲೇ ಇರುತ್ತದೆ.

ಈ ಭೌತಿಕ ಶಕ್ತಿ, ಪ್ರಭುಪಾದರು ಹೇಳುವಂತೆ, “ಬಯಕೆಗಳನ್ನು ಈಡೇರಿಸುವ ಯಂತ್ರ”, ನಾವು ಈ ಯಂತ್ರದೊಳಗೆ ಕುಳಿತಿದ್ದೇವೆ, ಮತ್ತು ಬಗೆ ಬಗೆಯ ಬಯಕೆಗಳನ್ನು ಈಡೇರಿಸಿಕೊಳ್ಳಲು ಕಾತರರಾಗಿದ್ದೇವೆ. ಈ ಬಯಕೆ ಈಡೇರಿಕೆ ಯಂತ್ರವು ಕೆಲವು ನಿಯಮಗಳಿಗನುಗುಣವಾಗಿ ಕೆಲಸ ಮಾಡುತ್ತದೆ.

ಅದು ‘ಕರ್ಮ’ ದ ನಿಯಮ, ಯಾವಾಗ ಜೀವಿಗೆ ಈ ಬಯಕೆ ಈಡೇರಿಕೆ ಯಂತ್ರದಿಂದ ತಾನು ಸುಖವಾಗಿರಲಾರೆ ಎಂದು ಅರಿವಾಗುತ್ತದೆಯೋ, ಆಗ ಅವನು ಭಗವಂತನೆಡೆಗೆ ಮುಖ ಮಾಡುತ್ತಾನೆ. ಭಗವಂತನು ಜೀವನ ಹೃದಯದಲ್ಲೇ ನೆಲೆಸಿದ್ದು, ಅವನಿಗೆ ತನ್ನ ಆಧ್ಯಾತ್ಮಿಕ ಜಗತ್ತಿನ ನೈಜ ಶರೀರವನ್ನು ಹೊಂದುವಂತೆ ನಿರ್ದೇಶನ ನೀಡಲು ಕಾಯುತ್ತಿರುತ್ತಾನೆ.

ಭಗವಂತನು ಬಹಳ ದಯಾಳು. ಅವನು ಯಾವಾಗಲೂ ಜೀವನ ಜೊತೆಯಲ್ಲಿರುತ್ತಾನೆ. ಪರಮಾತ್ಮನ ಕರುಣೆಯಿಲ್ಲದೆ ಎಲ್ಲ ನಾಟಕವನ್ನು, ಈ ಭ್ರಮೆಯನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಭಗವಂತನ ಅನುಗ್ರಹವಿಲ್ಲದೆ ಯಾವ ಯಾತನೆಯನ್ನೂ ಯಾವ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ.

ಈ ಬಯಕೆ ಈಡೇರಿಕೆ ಯಂತ್ರದಲ್ಲಿ ಆಡುವ ಅವಕಾಶ ನಮಗೆ ಭಗವಂತನ ಕರುಣೆಯಿಂದಲಷ್ಟೆ ದೊರೆಕಿದೆ. ಯಾವಾಗ ನಾವು ಇದರಿಂದ ಬೇಸತ್ತು ಭಗವಂತನೆಡೆಗೆ ತಿರುಗುತ್ತೇವೋ, ಭಕ್ತಿಸೇವೆಯಲ್ಲಿ ತೊಡಗುತ್ತೇವೋ, ಆಗ ಆಟ ಮುಗಿಯುತ್ತದೆ. ಭಗವಂತನು ಅದಾಗಲೇ ತನ್ನ ವಿಶೇಷ ಕರುಣೆ ಹರಿಸಿ, ನಮ್ಮನ್ನು ನಮ್ಮ ನೈಜಧಾಮಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾನೆ. ಈ ವ್ಯವಸ್ಥೆಗಳಲ್ಲಿ ಅಲೌಕಿಕ ಜ್ಞಾನವೂ ಒಂದು.

ಪ್ರಭುಪಾದರು ಹೇಳುತ್ತಾರೆ, ನಾವು ದೇವೋತ್ತಮ ಪರಮಪುರುಷನ ಸಾಂಗತ್ಯದಲ್ಲಿ ಜ್ಞಾನ ಪಡೆದರೆ, ನಾವೆಂದಿಗೂ ನಮ್ಮ ಪರಿಸ್ಥಿತಿಯ ಬಗ್ಗೆ ಮೂಢರಾಗಲು ಸಾಧ್ಯವಿಲ್ಲ. ನಾವು ಭಗವ೦ತನ ಜೊತೆಯಲ್ಲಿ ಕಲಿಯುವುದೆಂದರೆ, ಭಗವದ್ಗೀತೆಯನ್ನು ನಿಯಮಿತವಾಗಿ ಪಠಿಸುವುದು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವುದನ್ನು ಕೇಳುತ್ತ ಅವನ ಜ್ಞಾನವನ್ನು ನಾವು ಪಡೆಯಲು ಯತ್ನಿಸುವುದು.

ಭಗವಂತನಿಂದ ಹೇಳಲ್ಪಟ್ಟಿರುವುದನ್ನು ಓದುತ್ತ ಕಲಿಯುವುದೆಂದರೆ, ಭಗವಂತನೊಂದಿಗೆ ಕಲಿಯುವುದೇ ಆಗಿದೆ. ಈ ಜಗತ್ತಿನ ಚಾಲಕ ಶಕ್ತಿ ಯಾವುದು? ಈ ಭೌತಿಕ ಜಗತ್ತು ಅಂದರೇನು? ಇವೆಲ್ಲ ಪ್ರಶ್ನೆಗಳು ನಮ್ಮನ್ನು ಮುತ್ತಿಕೊಂಡಿವೆ. ಭಗವದ್ಗೀತೆಯಲ್ಲಿ ಇದಕ್ಕೆ ಸ್ಪಷ್ಟ ಉತ್ತರ ನೀಡಲಾಗಿದೆ.

“…ಮೃತ್ಯು ಭಯದಿಂದ ಹಾರಿಹೋಯಿತು.” ಈಗಾಗಲೇ ಇದರ ವಿವರಣೆ ಬಂದಿದೆ. ನಾವು ಭಗವಂತನ ಸಾಂಗತ್ಯದಲ್ಲಿ ಜ್ಞಾನಿಗಳಾದಾಗ ಮೌಢ್ಯ ಅಳಿದು, ‘ಸಾವು’ ಕೇವಲ ಒಂದು ಅನುಭವವೆಂಬ ಅರಿವು ಮೂಡುತ್ತದೆ.

ಮೌಢ್ಯ… ಬಯಕೆ ಈಡೇರಿಕೆ ಯಂತ್ರದೊಳಗೆ ಸಿಲುಕಿ, ‘ಇದು ನನ್ನದು’ ಎಂದು ತಿಳಿಯುವ ಮೌಢ್ಯ.

ನಾವು ಒಂದು ಕಾರ್ ಅನ್ನು ಯಾವುದೇ ಬೆಲೆ ಬಾಳುವ ವಸ್ತುವನ್ನು ಕೊಂಡಾಗ ಮೊದಲು ಮೂಡುವ ಭಾವವೇ “ಇದು ನನ್ನದು” ಎಂಬುದು. ಯಾವಾಗ ‘ನನ್ನದು’ ಎಂಬ ಭಾವ ಅಳವಾಗುತ್ತ – ಗಾಢವಾಗುತ್ತ ಸಾಗುತ್ತದೆಯೋ, ಆಗ ಅದು ‘ನಾನು’ ಎಂದುಕೊಳ್ಳುವ ಹಂತ ತಲಪುತ್ತದೆ.

ಈ ಬಯಕೆ ಈಡೇರಿಕೆ ಯಂತ್ರ ಎನಿಸಿದ ದೇಹವೂ ಕೂಡ ಮೊದಲು, “ಇದು ನಾನು” ಎನಿಸುತ್ತದೆ. ಅನಂತರ ‘ಇದೇ ನಾನು’ ಎನ್ನುವ ಮೌಢ್ಯ. ನಮ್ಮ ಹಿಡಿತದೊಳಗೆ ಇರುವ ಯಾವುದೇ ವಸ್ತುವಾದರೂ ಅದು ನನ್ನದೆಂದುಕೊಳ್ಳುವ ಯೋಚನೆ ಆರಂಭವಾಗುತ್ತದೆ. ನನ್ನ ಹಿಡಿತದಲ್ಲಿರುವ ಈ ದೇಹ ನನ್ನದು. ಆದ್ದರಿಂದ ಈ ಮಮಕಾರದ ಪರಿಸ್ಥಿತಿಯಿಂದ ಹೊರಬರುವುದು ಅತಿಮುಖ್ಯ. ಇದರಿಂದ ಹೊರಬರಬೇಕು ಮತ್ತು “ನಾನು”, “ನನ್ನದು” ಎನ್ನುವುದನ್ನು ಕಳೆದು, ಪರಿಶುದ್ಧ ಪ್ರಜ್ಞೆ ಬೆಳೆಸಿಕೊಳ್ಳಬೇಕು.

ಈ ಮೊದಲೇ ಹೇಳಿದ ಹಾಗೆ, ನಮ್ಮ ನಿಯಂತ್ರಣದಲ್ಲಿರುವ ವಸ್ತುಗಳ ಮೇಲೆ ನಮಗೆ ಇದು ‘ನನ್ನದು’ ಎನ್ನುವ ಭಾವ ಮೂಡುತ್ತದೆ. ನಮ್ಮ ನಿಯಂತ್ರಣದಲ್ಲಿರುವ ದೇಹ ನಮ್ಮದು. ಇನ್ಯಾರದೋ ನಿಯಂತ್ರಣದ ದೇಹ “ನಮ್ಮದು” ಎನಿಸುವುದಿಲ್ಲ. ಹೀಗೆ, ನಮ್ಮ ಅಡಿಯಾಳಾಗಿರುವ ಪ್ರತಿಯೊಂದು ಸಂಗತಿಯೂ ನಮಗೆ ಸೇರಿದುದಾಗಿಯೇ ತೋರುತ್ತ, ಪ್ರತಿಯೊಂದೂ ‘ಇದು ನನ್ನದು’ ಎನಿಸಲಾರಂಭಿಸುತ್ತದೆ. ಕ್ರಮೇಣ ನಾವು ನಮ್ಮ ಪರಿಚಯವನ್ನೇ ಅದರೊಂದಿಗೆ ತಾದಾತ್ಮ್ಯಗೊಳಿಸುವಷ್ಟು ಅದು ಹೆಚ್ಚುತ್ತದೆ.

ಪ್ರಭುಪಾದರು ಇಂಥ ಮನಃಸ್ಥಿತಿಗೊಂದು ಸುಂದರವಾದ ಉದಾಹರಣೆ ಕೊಡುತ್ತಾರೆ.

ವ್ಯಕ್ತಿಯೊಬ್ಬ ತನ್ನ ಹೊಸ ಕಾರ್ ಕುರಿತು ತೀವ್ರ ಮೋಹಿತನಾಗಿದ್ದ. ನಿತ್ಯ ತಾನೇ ಅದನ್ನು ಒರೆಸುತ್ತಿದ್ದ, ಅದನ್ನು ಚಂದವಾಗಿಡಲು ಯತ್ನಿಸುತ್ತಿದ್ದ. ಅಂದಿನಿಂದ, ಅವನಿಗೆ “ಇದು ನನ್ನದು” ಎನ್ನುವ ಚಾಳಿ ಶುರುವಾಯ್ತು. “ಇದು ನನ್ನ ಕಾರು…” ಹೀಗೆ.

ಹೀಗೆ ಒಂದು ದಿನ ಯಾರೋ ಒಬ್ಬತನ್ನ ಕಾರಿನಿಂದ ಇವನ ಕಾರಿಗೆ ಗುದ್ದಿದ.

ಈ ಕಾರಿನವ ಜೋರಾಗಿ ಕಿರುಚುತ್ತಾ ‘ನನಗೇಕೆ ಗುದ್ದಿದೆ? (Why did you hit me?) ಎಂದು ಜಗಳಕ್ಕೆ ನಿಂತ!

ಹಿಂದಿನವ ಗುದ್ದಿದ್ದು ಕಾರಿಗೆ. ಇವನು ಕೇಳುತ್ತಿದ್ದಾನೆ, ‘ನನ್ನನ್ನೇಕೆ ಗುದ್ದಿದೆ?’ ಮಮಕಾರ (attachment) ಬರುವುದು ಹೀಗೆ.

ನಾವು ಕೃಷ್ಣ ಹೇಳಿರುವುದನ್ನು ಅರಿತುಕೊಳ್ಳಬೇಕು. ನಾನು ವಿಭಿನ್ನ ಪ್ರಕೃತಿಯವನಾಗಿದ್ದೇನೆ. ಈ ದೇಹ ಪ್ರಕೃತಿ ನನ್ನದಲ್ಲ. ನನ್ನ ನೈಜ ಪ್ರಕೃತಿಯು, ನಾನು ಹೇಳಿದ ಹಾಗೆ ಆಧ್ಯಾತ್ಮಿಕ ಪ್ರಕೃತಿಯಾಗಿದೆ.

ಅವನು ಶಾಶ್ವತನು. ಪರಮ ಜ್ಞಾನಿಯೂ, ಆನಂದಮಯನೂ ಆಗಿರುವನು. ನಾವು ಈ ಎಲ್ಲ ‘ನಾನು’, ‘ನನ್ನದು’, ಭಾವವನ್ನು ತ್ಯಜಿಸಬೇಕು. ಇದಕ್ಕೆ ಹಲವು ಮಾರ್ಗಗಳಿವೆ. (ಯಜಮಾನಿಕೆಯು ಈ ಎಲ್ಲವನ್ನು ನಿಯಂತ್ರಿಸುತ್ತದೆ.)

ಜ್ಞಾನ – ಅಲೌಕಿಕ ಜ್ಞಾನ, ಕರ್ಮ- ನಿಷ್ಕಾಮ ಕರ್ಮ ಅಥವಾ ಭಗವಂತನಿಗೆ ಸಮರ್ಪಣಾ ಭಾವದಿಂದ ಮಾಡುವ ಸೇವೆಗಳು ಇತ್ಯಾದಿ. ಇದಕ್ಕೆ ನಾವು ಅನುಸರಿಸುತ್ತಿರುವ ಮಾರ್ಗ- ‘ಶರಣಾಗತಿ’. ಶ್ರೀಕೃಷ್ಣನಲ್ಲಿ ದೇಹದ ಶರಣಾಗತಿ, ಮನಸ್ಸಿನ ಶರಣಾಗತಿ, ಇಂದ್ರಿಯಗಳ ಶರಣಾಗತಿ,

ಶರಣಾಗತಿಯ ಅತ್ಯುನ್ನತ ಲಕ್ಷಣವೆಂದರೆ, ಪ್ರತಿಯೊಂದಕ್ಕೂ ‘ಇದು ನನ್ನದಲ್ಲ’ ಎಂದು ತಿಳಿಯುವುದು.

ಕೇವಲ ಶರಣಾಗತಿ ದೊಡ್ಡ ವಿಷಯವಲ್ಲ. ಏನನ್ನಾದರೂ ಕದ್ದಾಗಲೂ ಶರಣಾಗತರಾಗುತ್ತೇವೆ ಅಲ್ಲವೇ? ನೀವು ಧನಾತ್ಮಕ ಮನಸ್ಸಿನಿಂದ ಪ್ರಭುವಿನ ಸೇವೆ ಮಾಡುವುದೊಂದೆ ಅತಿಶಯ ಸಂಗತಿಯಾಗಬಲ್ಲದು.

ಪ್ರಭುಪಾದರು ಹೇಳಿರುವಂತೆ, ಭಗವದ್ಗೀತೆಯು ಎಲ್ಲಿಗೆ ಮುಕ್ತಾಯವಾಗುತ್ತದೋ ಭಾಗವತವು ಅಲ್ಲಿಂದ ಆರಂಭಗೊಳ್ಳುತ್ತದೆ. “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಮ್ ಶರಣಮ್ ವ್ರಜ.” ಮೊದಲು ಶರಣಾಗತನಾಗು ಅನಂತರ ಭಕ್ತಿಸೇವೆಯನ್ನು ಸಲ್ಲಿಸು. ಕೇವಲ ಶರಣಾಗತಿಯೇ ಎಲ್ಲವೂ ಆಗುವುದಿಲ್ಲ ಯಾಕೆ?

ಯಾಕೆಂದರೆ, ನಾವು “ನಾನು ಸ್ವತಂತ್ರ” ಎಂದು ತಿಳಿದುಕೊಳ್ಳುವ ಮೂಲಕ ಋಣಾತ್ಮಕ ಭಾವವನ್ನು ವ್ಯಕ್ತಪಡಿಸಿರುತ್ತೇವೆ. ಅನಂತರ, ನಾನು ಭಗವಂತನಿಗೆ ಅಧೀನ ಎಂದು ತಿಳಿದು, ನಾವು ಯಾರಿಗೆ ಸೇರಿದವರಾಗಿದ್ದೇವೋ, ಆ ಭಗವಂತನಿಗೆ ಭಕ್ತಿಸೇವೆ ಸಲ್ಲಿಸುವ ಮೂಲಕ ಧನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ನಾನು ಶ್ರೀಕೃಷ್ಣನ ಸೇವಕ ಎಂದು ತಿಳಿದು ಪ್ರಾಯೋಗಿಕವಾಗಿ ಶ್ರೀಕೃಷ್ಣ ಸೇವೆಯಲ್ಲಿ ತೊಡಗಬೇಕು. ಹೀಗೆ ನಿರಂತರವಾಗಿ ಇದನ್ನು ಮಾಡುತ್ತಲೇ ಇರಬೇಕು.

ಹೃಷೀಕೇನ ಹೃಷೀಕೇಶ ಸೇವನಮ್ ಭಕ್ತಿರುಚ್ಯತೇ |

ಸರ್ವೋಪಾಧಿ ವಿನಿರ್ಮುಕ್ತಮ್ ತತ್ ಪರತ್ವೇನ ನಿರ್ಮಲಮ್ ||

‘ಸರ್ವೋಪಾಧಿ’ – ಈ ಎಲ್ಲ ಉಪಾಧಿಗಳು – ನಾನು ನನ್ನದೆಂಬ ಉಪಾಧಿಗಳು… ನಾವು ನಮ್ಮ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಬದಲಿಸಿಕೊಳ್ಳಬೇಕು. ಪ್ರಮಾಣೀಕೃತ ಮೂಲಗಳಿಂದ ಶುದ್ಧ ಜ್ಞಾನದ ಅರಿವು ದೊರೆತಾಗ ನಮ್ಮ ಚಿಂತನೆಗಳು ಬದಲಾಗುತ್ತವೆ.

ಇಂತಹಾ ಉಪದೇಶಗಳನ್ನು ಕೇಳುತ್ತ ಮತ್ತು ಪ್ರಾಯೋಗಿಕವಾಗಿ ಶ್ರೀಕೃಷ್ಣ ಸೇವೆಯಲ್ಲಿ ತೊಡಗಿಕೊಂಡು ನಾವು ನಮ್ಮ ಚಿತ್ತ ಶುದ್ಧಿಮಾಡಿಕೊಳ್ಳಬಹುದು. ಈ ಕೆಲಸಗಳಲ್ಲಿ ನಾವು ಇಂದ್ರಿಯ ತೃಪ್ತಿಗಾಗಿ ತೊಡಗಿಕೊಳ್ಳುವುದಲ್ಲ ಆದರೆ ಭಗವಂತನ ತೃಪ್ತಿಗಾಗಿ ತೊಡಗಿಕೊಳ್ಳಬೇಕು. ಹೀಗೆ ಮಾಡುವುದರಿಂದ ಈ ಭ್ರಮಾತ್ಮಕತೆಯೊಂದಿಗಿನ ಸಂಬಂಧ ಕಳಚುತ್ತದೆ.

ಈ ದೇಹವೇ ನಾನು. ಈ ಮನಸ್ಸೇ ನಾನು. ಇದೇ ಅತಿದೊಡ್ಡ ಭ್ರಮೆಯಾಗಿದೆ. ಮೌಢ್ಯದ ಪರಮಾವಧಿಯಾಗಿದೆ. ಆದ್ದರಿ೦ದ, ಮೌಢ್ಯದಲ್ಲಿರುವವನು ಭಕ್ತಿಸೇವೆಯಲ್ಲಿ ಅಥವಾ ಕೃಷ್ಣಪ್ರಜ್ಞೆಯಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ಭಕ್ತಿ ಮತ್ತು ಮೌಢ್ಯ ಎಂದೂ ಜೊತೆಯಲ್ಲಿ ಸಾಗಲಾರವು. ಅದು ಎಂದಿಗೂ ಬೆಳಕಿನೊಂದಿಗೆ ಅಲೌಕಿಕ ಪ್ರಕಾಶದೊಂದಿಗೆ ಇರುವಂಥದ್ದು.

ಆದ್ದರಿಂದ, ನಾವು ಸದಾ ಕೃಷ್ಣನ ಮಾತುಗಳನ್ನು ಆಲಿಸುತ್ತಿರಬೇಕು. ಅದನ್ನು ಅರಿಯಲು ಯತ್ನಿಸಬೇಕು. ಬುದ್ಧಿಶಕ್ತಿಯನ್ನು ಅದಕ್ಕಾಗಿಯೇ ವ್ಯಯಿಸಬೇಕು. ನಮ್ಮ ಸ್ಥಿತಿಯನ್ನೇ ಅರಿಯಲು ಪ್ರಯತ್ನಿಸಬೇಕು. ಅದೃಷ್ಟವಶಾತ್‌ ನಾವು ಉತ್ತಮ ಸಾಂಗತ್ಯವನ್ನು, ಮಾರ್ಗದರ್ಶನವನ್ನು ಹೊಂದಿದ್ದೇವೆ.

ಶ್ರೀಚೈತನ್ಯ ಮಹಾಪ್ರಭುಗಳ ಭಕ್ತರೆಲ್ಲರೂ ಅವರ ಕರುಣೆಯಿಂದ ನಾವು ಜನನ, ಮರಣ, ಜರಾ, ರೋಗಗಳ ಭಯವನ್ನು ನೀಗಲು ಸಾಧ್ಯವಾಗಿದೆ. ಆದರೆ ಈಗ, ಹೇ ಭಗವಾನ್! ನಿನ್ನನ್ನು ನೋಡಿ ಮೃತ್ಯುವೇ ಭಯದಿಂದ ಹಾರಿ ಹೋಗುತ್ತಿದೆ!”

ನಮ್ಮೊಡನೆ ಭಗವಂತನಿದ್ದಾನೆ ಎನ್ನುವ ಅರಿವು ಇರುವಾಗ ಮೃತ್ಯುವಿನ ಭಯ ಇನ್ನೆಲ್ಲಿಯದು? ಅದು ಹಾರಿ ಹೋಗುತ್ತದೆಯಷ್ಟೆ!?

“ಜೀವರಾಶಿಗಳು ನಿನ್ನ ಪಾದಪದ್ಮಗಳಲ್ಲಿ ಆಶ್ರಯ ಪಡೆದಿವೆ. ನಿನ್ನ ಕರುಣೆಯಿಂದಾಗಿ ಸಂಪೂರ್ಣ ನೆಮ್ಮದಿ ಪಡೆದು ನಿದ್ರಿಸುತ್ತಿವೆ.” ಭಕ್ತನ ನೆಮ್ಮದಿ ಇಂಥದ್ದು. ಭಕ್ತಿಸೇವೆಯ ಪಥದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದರೂ ಭಕ್ತನ ಹಿನ್ನೆಲೆಯಲ್ಲಿ ಇಂಥದೊಂದು ನೆಮ್ಮದಿ ಇದ್ದೇ ಇರುತ್ತದೆ.

ಅದು ಇಲ್ಲವಾದ ಪಕ್ಷದಲ್ಲಿ ನಾವು ಬಹಳ ಕಾಳಜಿಯಿಂದ ಇರಬೇಕಾಗುತ್ತದೆ. ಈ ಕಳವಳದ ಕಾರಣದಿಂದ ನಮಗಾಗಿಯೊಂದು ಭದ್ರ ತಳಪಾಯ ಹಾಕಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಆದರೆ ಭಕ್ತನ ಜೀವನದಲ್ಲಿ ಉಳಿದೆಲ್ಲಾ ಕಷ್ಟಕಾರ್ಪಣ್ಯದ ನಡುವೆಯೂ ನೆಮ್ಮದಿಯದೊಂದು ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ.

ಈ ನೆಮ್ಮದಿ ಎಂಥದ್ದು? ಭಗವಂತನಲ್ಲಿ ಶರಣಾಗಿ ಅವನ ಪದತಲದ ಆಶ್ರಯ ಪಡೆದ ಭಕ್ತನಿಗೆ ಯಾವ ಚಿಂತೆಯೂ ಇರುವುದಿಲ್ಲ. ಆತ ನಿಶ್ಚಿಂತನಾಗಿ ನಿದ್ದೆ ಮಾಡಬಹುದಾದ ಅವಕಾಶ ಪಡೆದಿರುತ್ತಾನೆ. ಯಾಕೆಂದರೆ ಭಕ್ತ ಯಾವುದಕ್ಕೂ ಒಡೆಯನಲ್ಲ. ಅವನು ಕ್ರಿಯೆಗೆ ಕೂಡ ಒಡೆಯನೆಂದು ಭಾವಿಸುವುದಿಲ್ಲ. ಅವನಿಗೆ ತಾನೊಂದು ಪಾತ್ರ ಮಾತ್ರ ಅನ್ನುವ ಅರಿವು ಇರುತ್ತದೆ.

ಏಕೆಂದರೆ, ಈ ಪಾತ್ರಧಾರಿಗಳಾದ ನಾವು ಗಂಡಲ್ಲ, ಹೆಣ್ಣಲ್ಲ, ಯುವಕರಲ್ಲ, ಮುದುಕರೂ ಅಲ್ಲ. ಇವೆಲ್ಲ ಭಗವಂತನ ನಿರ್ದೇಶನದಂತೆ ನಡೆಯುವ ಒಂದು ನಾಟಕವಷ್ಟೆ. ನಮ್ಮ ಜೀವನದಲ್ಲಿ ಯಾವೆಲ್ಲ ಘಟನೆಗಳು ಘಟಿಸುತ್ತವೆಯೋ ಅವೆಲ್ಲಕ್ಕೂ ಭಗವಂತನೇ ಸೂತ್ರಧಾರ.

ಯಾರಿಗೆ ಈ ಅರಿವು ಇರುವುದೋ ಆತನಿಗೆ ಮೃತ್ಯುವಿನ ಭಯವಿರುವುದಿಲ್ಲ. ಯಾರು ತನ್ನ ಸ್ಥಿತಿಯನ್ನು ಅರಿತಿರುತ್ತಾನೋ ಅವನು ಭಗವಂತನ ಭಕ್ತಿಸೇವೆಯಲ್ಲಿ ತಲ್ಲೀನನಾಗಿ, ಶರಣಾಗತನಾಗಿ ನೆಮ್ಮದಿಯಿಂದ ಇರುತ್ತಾನೆ.

ಭಕ್ತನು ತನ್ನ ನೈಜ ಅಸ್ತಿತ್ವವನ್ನು ಬಿಂಬಿಸುವ ಕನ್ನಡಿಯನ್ನು ನೋಡುತ್ತಿರುತ್ತಾನೆ. ಅವನು ತಾನು ಶಾಶ್ವತನೆಂದು ತಿಳಿಯುತ್ತಾನೆ. ಇದರಿಂದ ಅವನು ನೆಮ್ಮದಿಯನ್ನು ಮನಶ್ಯಾಂತಿಯನ್ನು ಪಡೆಯುತ್ತಾನೆ.

ಮನಸ್ಸು ಭೌತಿಕವಾದುದ್ದಾದರೂ ಆಧ್ಯಾತ್ಮಿಕ ಜ್ಞಾನವು ಮನಸ್ಸಿನ ಕನ್ನಡಿಯು ಸ್ವಚ್ಛವಾಗಿರಿಸುತ್ತದೆ. ಕನ್ನಡಿ ಸ್ವಚ್ಛವಿರುವಾಗ ಎದುರಿನ ಬಿಂಬ ಸರಿಯಾಗಿ ತೋರುತ್ತದೆ. ಹಾಗೇ ಮನಸ್ಸು ಶುದ್ಧವಾಗಿರುವಾಗ ನಮ್ಮ ನಿಜವಾದ ಅಸ್ತಿತ್ವವು ವ್ಯಕ್ತವಾಗುತ್ತದೆ.

‘ನಾನು ಕೃಷ್ಣನ ಸೇವಕ’ ಹೀಗೆ ಮತ್ತೆ ಮತ್ತೆ ಶ್ರವಣ ಮಾಡುವುದರಿಂದ ನೀವು ಅದನ್ನು ಒಪ್ಪಲಾರಂಭಿಸುತ್ತೀರಿ. ಕ್ರಮೇಣ ಅದು ವಾಸ್ತವ ಸತ್ಯವೆಂದು ನಮಗೆ ಗೋಚರವಾಗುತ್ತದೆ. ಇದು ಜ್ಞಾನ, ಇದರಿಂದ ಮನಸ್ಸಿನ ಕನ್ನಡಿ ಶುದ್ಧವಾಗುತ್ತದೆ. ‘ಚಿತ್’ ಇದು ಮನಸ್ಸು ಮನಸ್ಸಿನ ಜ್ಞಾನ.

ಚೇತೋ ದರ್ಪಣ ಮಾರ್ಜನಂ…” ಇದು ಆ ಕ್ರಿಯೆ. ನಾಮ ಸಂಕೀರ್ತನೆಯಿಂದ, ನಾನು ಕೃಷ್ಣನ ಸೇವಕನೆಂಬ ಅರಿವಿನಿಂದ ಮನಸ್ಸಿನ ಕನ್ನಡಿಯನ್ನು ತೊಳೆಯುವುದು. ಆಗ ನಮಗೆ ಸ್ಪಷ್ಟ ಬಿಂಬ, ನಮ್ಮ ನೈಜ ಅಸ್ತಿತ್ವ ತೋರುತ್ತದೆ.

ಕೆಟ್ಟು ಹೋದ ಕನ್ನಡಿಯಲ್ಲಿ ನಮ್ಮ ಬಿಂಬವೂ ವಿಕಾರಗೊಳ್ಳುತ್ತದೆ. ಆದರೆ ನಾವು ‘ ಅದೇ ನಾವು’ ಎಂದು ತಪ್ಪಾಗಿ ತಿಳಿಯುತ್ತೇವೆ. ಇದು ಮೌಢ್ಯ.

ಕೃಷ್ಣನಿಗೆ ಶರಣಾಗಿ, ಜ್ಞಾನವನ್ನು ಪಡೆಯುವುದು… ಇದು ಮನಸ್ಸಿನ ಕನ್ನಡಿಯನ್ನು ಶುಚಿಗೊಳಿಸುವುದು. ಇದಕ್ಕೆ ಶ್ರೀಲಪ್ರಭುಪಾದ ಅವರಂಥ ಪ್ರಮಾಣೀಕೃತ ವ್ಯಕ್ತಿಗಳ ಮಾತುಗಳನ್ನು ಆಲಿಸಬೇಕು. ಅದರಿಂದ ಜ್ಞಾನವನ್ನೇ ಹೊಂದಬೇಕು. “ನಾನು ಕೃಷ್ಣಸೇವಕ” ನೆಂಬ ಜ್ಞಾನ, ಉಳಿದೆಲ್ಲ ಪೊಳ್ಳು ವಿಚಾರಗಳನ್ನು ಅಳಿಸಿ, ಶುದ್ಧ ಪ್ರಜ್ಞೆಯ ಜ್ಞಾನ ಹೊಂದುವುದು. ದೇಹವನ್ನು ಬದಲಿಸುವುದಲ್ಲ… ವಿಚಾರವನ್ನು ಬದಲಿಸಿಕೊಳ್ಳುವುದು.

“ನಾನು ಅವನು, ನಾನು ಇವನು…” ಎಂಬಂಥ ಅಜ್ಞಾನ ಅಳಿದು, ನಾನು ‘ಕೃಷ್ಣನ ಸೇವಕ’ ಎಂಬ ಅರಿವಾದಾಗ ಅದುವೇ ‘ಜ್ಞಾನೋದಯ’ ಎನಿಸುತ್ತದೆ. ಆಗ ನಿತ್ಯ ಸತ್ಯನಾದ ಸಚ್ಚಿದಾನಂದ ಸ್ವರೂಪಿ ಭಗವಂತನ ದರ್ಶನ ಸಾಧ್ಯವಾಗುತ್ತದೆ.

ಅವನ ಭಕ್ತರು ನಾವಾಗಿರುವಾಗ ಸಾವಿನ ಭಯವೆಲ್ಲಿ? ಸಚ್ಚಿದಾನಂದ ಸೂರ್ಯನೆದುರು ಮೃತ್ಯುವಿನ ಅಂಧಕಾರವಿನ್ನೆಲ್ಲಿ!? ಮೃತ್ಯು “ಹಾರಿಹೋಗುತ್ತದೆ!” ತಾನೇ ಭಯಪಟ್ಟು ಮಾಯವಾಗುತ್ತದೆ. ಭಗವಂತನನ್ನು ಅರಿತಾಗ ಮಾತ್ರ ಇದು ಸಾಧ್ಯವಾಗುತ್ತದೆ.

“ಗ್ರಂಥರಾಜ ಶ್ರೀಮದ್ಭಾಗವತಮ್ ಕೀ ಜೈ”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi