ಶ್ರೀಕೃಷ್ಣ ಪಾಕಶಾಲೆ
– ಸುಜಾತಾ ರಾಮಚಂದ್ರ
ಕಾಯಿ ಹಾಲಿನ ಚಿತ್ರಾನ್ನ

ಬೇಕಾಗುವ ಪದಾರ್ಥಗಳು :
ಅಕ್ಕಿ – ½ ಕೆ.ಜಿ
ತೆ೦ಗಿನಕಾಯಿ – 1
ಅರಿಶಿನ ಪುಡಿ – 1/2 ಟಿ ಚಮಚ
ಮೆಣಸಿನ ಪುಡಿ – 2 ಟಿ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ದ್ರಾಕ್ಷಿ, ಗೋಡಂಬಿ – 100 ಗ್ರಾಂ
ಒಗ್ಗರಣೆಗೆ ಕಡಲೆಕಾಯಿ ಎಣ್ಣೆ, ಸಾಸಿವೆ, ಕರಿಬೇವು
ಮಾಡುವ ವಿಧಾನ : ಉದುರು ಉದುರಾಗಿ ಅನ್ನವನ್ನು ತಯಾರಿಸಿಕೊಳ್ಳಿ, ತೆಂಗಿನ ತುರಿಯನ್ನು ರುಬ್ಬಿ ಹಾಲನ್ನು ಹಿಂಡಿಟ್ಟುಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಕಡಲೆಕಾಯಿ ಎಣ್ಣೆಯನ್ನು ಹಾಕಿ ಕಾದ ಎಣ್ಣೆಗೆ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿಕೊಳ್ಳಿ. ಆನಂತರ ಅದಕ್ಕೆ ಗೋಡಂಬಿ, ದ್ರಾಕ್ಷಿ ಮೆಣಸಿನಪುಡಿ, ಕಾಯಿಹಾಲು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಾಯಿಹಾಲು 2 ನಿಮಿಷ ಕುದಿದ ಅನಂತರ ಆರಿದ ಅನ್ನವನ್ನು ಬಾಣಲೆಗೆ ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ ಚಿಕ್ಕ ಉರಿಯಲ್ಲಿ 5 ನಿಮಿಷ ಬಿಡಿ, ನಂತರ ಉಪಯೋಗಿಸಿ.
ಹಪ್ಪಳದ ಅನ್ನ

ಬೇಕಾಗುವ ಪದಾರ್ಥಗಳು :
ಅಕ್ಕಿ – 1/2 ಕ.ಜಿ.
ತೆಂಗಿನಕಾಯಿ – 1/2 ಭಾಗ
ಉದ್ದಿನಬೇಳೆ – 4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಒಣಮೆಣಸಿನ ಕಾಯಿ
ಸಾಸಿವೆ – 1 ಚಮಚ
ಕಡಲೆಬೇಳೆ – 1 ಚಮಚ
ಇಂಗು – 1 ಚಿಟಿಕೆ
ಎಣ್ಣೆ – ಒಗ್ಗರಣೆಗೆ
ಉದ್ದಿನ ಹಪ್ಪಳ – 3
ಮಾಡುವ ವಿಧಾನ : ಉದುರು ಉದುರಾಗಿ ಅನ್ನವನ್ನು ಮಾಡಿ ಒಂದು ಬೇಸನ್ನಲ್ಲಿ ಹಾಕಿ ಆರಿಸಿ, ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಪುಡಿಮಾಡಿಕೊಳ್ಳಿ, ಒಗ್ಗರಣೆಗೆ ಸಾಸಿವೆ, ಕಡಲೆಬೇಳೆ ಒಣಮೆಣಸಿನಕಾಯಿ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕಾಯಿತುರಿ ಹಾಕಿ ಅನಂತರ ಅನ್ನದ ಜೊತೆ ತುಸು ಬಡಿಸುವುದಕ್ಕೆ ಮುಂಚೆ ಹಪ್ಪಳವನ್ನು ಕರಿದು ಪುಡಿಪುಡಿ ಮಾಡಿ ಅನ್ನಕ್ಕೆ ಸೇರಿಸಿ.
ಎಳ್ಳು ಪುಡಿ ಚಿತ್ರಾನ್ನ

ಬೇಕಾಗುವ ಪದಾರ್ಥಗಳು :
ಅಕ್ಕಿ – ½ ಕೆ.ಜಿ
ಉದ್ದಿನ ಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ಎಳ್ಳು – 1 ಚಮಚ
ಮೆಣಸಿನಪುಡಿ – 1/2 ಚಮಚ
ಜೀರಿಗೆ ಪುಡಿ – 1/2 ಚಮಚ
ತೆಂಗಿನಕಾಯಿ – 1/2 ಭಾಗ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಒಗ್ಗರಣೆಗೆ
ಮಾಡುವ ವಿಧಾನ : ಉದುರಾಗಿ ಅನ್ನಮಾಡಿ, ಎಳ್ಳನ್ನು ಹುರಿದು ಪುಡಿಮಾಡಿ ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಅನ್ನಕ್ಕೆ ಹಾಕಿ. 2 ನಿಮಿಷಗಳ ಅನಂತರ ಮೆಣಸಿನ ಪುಡಿ, ಜೀರಿಗೆ ಪುಡಿ, ಕಾಯಿತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಅನಂತರ ಎಳ್ಳಿನ ಪುಡಿಯನ್ನು ಹಾಕಿ ಅನ್ನವನ್ನು ಕೆದಕಿ ಕೆಳಗಿಳಿಸಿ.






Leave a Reply