ಪ್ರಕೃತಿಯ ಉನ್ನತ ನಿಯಮ

ಸಂವಾದ

ಸ್ಥಳ: ಭುವನೇಶ್ವರ, ಭಾರತ, ದಿನಾಂಕ: 3ನೇ ಫೆಬ್ರವರಿ, 1977 ಶ್ರೀಲ ಪ್ರಭುಪಾದರು ಮತ್ತು ಬಯೋಕೆಮಿಸ್ಟ್ ಥೌಡಮ್ ಸಿಂಗ್, ಪಿಎಚ್.ಡಿ., ಅವರ ನಡುವೆ ನಡೆದ ಸಂವಾದ

ಅನುವಾದ: ಡಾ.ಕೆ.ವೈ.ಬಾಲರಾಜ್‌

ಡಾ|| ಸಿಂಗ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ’ (ದೃಷ್ಟಿಕೋನ)ವಿದೆ.

ಶ್ರೀಲ ಪ್ರಭುಪಾದ : ಹೌದು, ಪ್ರತಿಯೊಬ್ಬ ಮೂಢನು ತನ್ನ “ಅಭಿಪ್ರಾಯ”ವನ್ನು ಕೊಡುತ್ತಾನೆ. ಆದರೆ ನಾವು ಇದನ್ನು ಸ್ವೀಕರಿಸಬಾರದು.

”ಆಧುನಿಕ ಜಗತ್ತು’ ಎಂದರೆ ”ನಾನು ಯೋಚಿಸುತ್ತೇನೆ”, ”ನನ್ನ ಅಭಿಪ್ರಾಯ”ದಲ್ಲಿ, ”ನನ್ನ ದೃಷ್ಟಿಯಲ್ಲಿ” ಇವೆಲ್ಲ ನಡೆಯುತ್ತಲೇ ಇದೆ. ಆದರೆ ನಾನು ಇದನ್ನು ಸ್ವೀಕರಿಸುವುದಿಲ್ಲ.

ಡಾ|| ಸಿಂಗ್ : ವೈಜ್ಞಾನಿಕ ಪ್ರಮಾಣೀಕೃತರೆಂದು ಅನಿಸಿಕೊಂಡವರಿಂದ ಯಾವಾಗಲೂ ನಾವು “ನನ್ನ ಅಭಿಪ್ರಾಯದಲ್ಲಿ”, “ನನ್ನ ದೃಷ್ಟಿಯಲ್ಲಿ”, ಎಂಬ ಪದಗಳನ್ನು ಕೇಳುತ್ತಲೇ ಇರುತ್ತೇವೆ.

ಶ್ರೀಲ ಪ್ರಭುಪಾದ : ನಿಮ್ಮ ಅಭಿಪ್ರಾಯದಲ್ಲಿ, ನಿಮ್ಮ ದೃಷ್ಟಿಯಲ್ಲಿ ಮೊದಲಿಗೆ ನೀವು ಯಾರು? ಭೌತಿಕ ಶರೀರದ ಬಂಧನ ಮತ್ತು ಸಂಪೂರ್ಣವಾಗಿ ಭೌತಿಕ ನಿಯಮಗಳ ನಿಯಂತ್ರಣದಲ್ಲಿರುವ ಆತ್ಮ. ಆದ್ದರಿಂದ ನಿಮ್ಮ ದೃಷ್ಟಿಯ ಅಥವಾ ಅಭಿಪ್ರಾಯದ ಬೆಲೆ ಏನು?

ಇದು ಅಹಂಕಾರ, ಮಿಥ್ಯಾ, ಅಹಂಕಾರ, ಅಹಂಕಾರ – ವಿಮೂಢಾತ್ಮಾ ಕರ್ತಾಹಮ್ ಇತಿ ಮನ್ಯತೆ; ಒಬ್ಬ ವ್ಯಕ್ತಿಯು ಮೂಢನಾಗಿ “ನಾನು ಈ ಹೆಮ್ಮೆಪಡುವಂತಹ ದೇಹ, ನಾನು ಏನೋ ಆಗಿದ್ದೇನೆ.” ಕರ್ತಾಹಮ್ ಇತಿ ಮನ್ಯತೀ; ”ನಾನು ಇಂತಹ ಅದ್ಭುತವಾದುದನ್ನು ಮಾಡಬಹುದು” ಎಂದು ಯೋಚಿಸುತ್ತಾನೋ ಅವನು ತನ್ನ ಅಭಿಪ್ರಾಯವನ್ನು ಕೊಡಲು ಬಯಸುತ್ತಾನೆ.

ಆದರೆ ನಿಜವಾಗಿಯೂ ಅವನು ವಿಮೂಢ, ದೊಡ್ಡ ಕತ್ತೆ, ಅವನು, ನಿಜವಾಗಿಯೂ ತಾನು ಈ ಭೌತಿಕ ಶರೀರವಲ್ಲ. ತಾನು ಮಾಡುತ್ತಿರುವ ಶ್ರೇಷ್ಠ ಚಟುವಟಿಕೆಗಳು ತನ್ನದಲ್ಲ. ಅದನ್ನು ಐಹಿಕ ಪ್ರಕೃತಿಯು ನಡೆಸುತ್ತಿದೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ.

ವಾಸ್ತವಿಕವಾಗಿ ಈ ಐಹಿಕ ಪ್ರಕೃತಿಯು ಅವನ ಕಿವಿಯನ್ನು ಹಿಂಡಿ, “ಬಾ ಇಲ್ಲಿ, ಮಲಗು ಮತ್ತು ನಿದ್ರಿಸು” ಎಂದು ಹೇಳುತ್ತದೆ. ಆಗ ಅವನು ನಿದ್ರಿಸಲೇಬೇಕು. ಅವನು ಈ ರೀತಿಯಲ್ಲಿ ಸ್ವತಂತ್ರನು. ಆದ್ದರಿಂದ ಅವನ ಅಭಿಪ್ರಾಯಕ್ಕೆ ಬೆಲೆ ಎಲ್ಲಿದೆ?

ಪ್ರಕೃತೇಹ ಕ್ರಿಯಾಮಾಣಾನಿ ಗುಣೈ: ಕರ್ಮಾಣಿ ಸರ್ವಶಃ ಪ್ರಭು ಕೃಷ್ಣನು ವಿವರಿಸುತ್ತಾನೆ. “ಅಹಂಕಾರದಿಂದ ದಿಗ್ಭ್ರಮೆಗೊಂಡ ಚೇತನಾತ್ಮವು ತಾನೇ ಕಾರ್ಯಗಳನ್ನು ಮಾಡುತ್ತಿರುವುದು ಎಂದು ಭಾವಿಸುತ್ತದೆ. ವಾಸ್ತವಿಕವಾಗಿ ಅವುಗಳನ್ನು ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ.” ಆದರೆ ಅವನು ತಾನು ಸಂಪೂರ್ಣವಾಗಿ ಪ್ರಕೃತಿಯ ನಿಯಂತ್ರಣದಲ್ಲಿರುವೆನು ಎಂದು ತಿಳಿದು ಕೊಳ್ಳುವುದಿಲ್ಲ.

ಮೂಢ ವಿಜ್ಞಾನಿಗಳೇ, ಈಗ, ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆಧ್ಯಾತ್ಮಿಕ ಜಗತ್ತಿನಿಂದ ನೀವು ಕಾರಾಗೃಹವಾಗಿರುವ, ಈ ಐಹಿಕ ಜಗತ್ತಿನಲ್ಲಿ ಬಿದ್ದಿರುವಿರಿ. ನಿಮಗೆ ಈ ಕಾರಾಗೃಹದ ಉಡುಗೆಯಾದ ಈ ಐಹಿಕ ಶರೀರವಿದೆ. ನಾನು ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಬೇಕೆ? ನೀವು ಹೀನ ಅಪರಾಧಿಗಳಾಗಿರುವಿರಿ ಮತ್ತು ನಾನು ನಿಮ್ಮ ದೃಷ್ಟಿಕೋನವನ್ನು ಸ್ವೀಕರಿಸಬೇಕೆ? ನಿಮ್ಮ ದೃಷ್ಟಿಕೋನ ಅಥವಾ ಅಭಿಪ್ರಾಯದ ಬೆಲೆ ಏನು?

ಡಾ|| ಸಿಂಗ್ : ಈ ಮೂಢ ವಿಜ್ಞಾನಿಗಳು ಅಹಂಕಾರಿಗಳು. ಅವರು ಕೇಳುವುದಿಲ್ಲ.

ಶ್ರೀಲ ಪ್ರಭುಪಾದ : ಅವರನ್ನು ಕೇಳುವ ಹಾಗೆ ಮಾಡಿ. ”ನಿಮ್ಮ ದುರಭಿಮಾನ ದೃಷ್ಟಿಯ ಬೆಲೆ ಏನು? ನೀವು ಅಪರಾಧಿ ಗಳಾಗಿರುವಿರಿ ಮತ್ತು ಶಿಕ್ಷಿಸಲ್ಪಟ್ಟಿರುವಿರಿ. ನಾವು ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಬೇಕಾ?”

ಐಹಿಕವಾಗಿ ಬಂಧಿತವಾದ ಜೀವಿಯ ಅಭಿಪ್ರಾಯದ ಬೆಲೆ ಏನು? ಏನೂ ಬೆಲೆ ಇಲ್ಲ. ಕನಿಷ್ಠ ಪಕ್ಷ ಕೃಷ್ಣ ಪ್ರಜ್ಞೆ, ದೈವಪ್ರಜ್ಞೆಯವರಾದ ನಮ್ಮಂತಹ ಜನರು ಇದನ್ನು ಸ್ವೀಕರಿಸುವುದಿಲ್ಲ. ಈ ಸ್ಥಿತಿಯನ್ನು ನಾವು ನಡೆಸಿಕೊಂಡು ಬರಬೇಕು. “ಇಲ್ಲ, ನಿಮ್ಮ ಅಭಿಪ್ರಾಯ ಬೇಡ, ನಾವು ಕೇವಲ ಕೃಷ್ಣನ ದೃಷ್ಟಿಕೋನ, ದೈವ ದೃಷ್ಟಿಕೋನವನ್ನು ಮಾತ್ರ ಒಪ್ಪುತ್ತೇವೆ’ ಅಷ್ಟೇ.

‘ಮೂಢ ವಿಜ್ಞಾನಿಗಳೇ ನಿಮ್ಮ ಅಭಿಪ್ರಾಯವನ್ನು ಸೂಚಿಸಲು ನೀವು ಯಾರು? ನಿಮ್ಮ ಅಭಿಪ್ರಾಯಕ್ಕೆ ನಾವೇನೂ ಬೆಲೆ ಕೊಡುವುದಿಲ್ಲ.” ಈ ವಿಚಾರಕ್ಕೆ ಅಂಟಿಕೊಳ್ಳಿ ಮತ್ತು ಅದನ್ನು ವೈಜ್ಞಾನಿಕವಾಗಿ ನಡೆಸಿಕೊಂಡು ಹೋಗಿರಿ. ಆಗ ಅದು ನಿಲ್ಲುತ್ತದೆ. ರಾಜಿಯಾಗಬೇಡಿ.

ಮತ್ಸದ್ ಪರತರಮ್ ನಾನ್ಯತ್‌ ಕಿಂಚಿದ್ ಅಸ್ತಿ ಧನಂಜಯ ಭಗವಂತ ಹೇಳುತ್ತಾನೆ. ”ನಾನು ಪರಮಸತ್ಯ, ನನಗಿಂತಲೂ ಶ್ರೇಷ್ಠರು ಯಾರೂ ಇಲ್ಲ.” ಇದು ಪರಮ ಪ್ರಭುವಿನ ಅಭಿಪ್ರಾಯ. ನಾವು ಪರಮಪ್ರಭುವಿನ ಅಭಿಪ್ರಾಯವನ್ನು ಸ್ವೀಕರಿಸುತ್ತೇವೆ.

ನಾವು ಏಕೆ ಕೆಲವು ಅಲ್ಪ ವಿಜ್ಞಾನಿಗಳ ಅಭಿಪ್ರಾಯವನ್ನು ಸ್ವೀಕರಿಸಬೇಕು? ಪರಮ ಪುರುಷೋತ್ತಮನಿಂದಲೇ ನಮಗೆ ತನಗಿಂತಲೂ ಶ್ರೇಷ್ಠರಾದವರು ಯಾರೂ ಇಲ್ಲ ಮತ್ತು ತನಗಿಂತಲೂ ಸಮನಾದವರು ಯಾರೂ ಇಲ್ಲ ಎಂಬ ಜ್ಞಾನ ದೊರೆಯುತ್ತದೆ. ಆದ್ದರಿಂದ ನಾವು ಏಕೆ ಅಲ್ಪ ಅವಿವೇಕಿ ಮೂಢರ ಅಭಿಪ್ರಾಯವನ್ನು ಸ್ವೀಕರಿಸಬೇಕು?

ಜಗತ್ತಿನಾದ್ಯಾಂತ ಜನರು ಕೇವಲ ಮಾನವ ಜೀವಿಯಂತಹ ಉಡುಗೆಯಲ್ಲಿ ದೇವರ ಬಗ್ಗೆಯೇ ತಿಳಿಯದ ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳಾಗುತ್ತಿದ್ದಾರೆ. ಆದ್ದರಿಂದ ಪರಸ್ಪರ ಉಪಕಾರ; ನಾವು ಅವರನ್ನು ಈ ಅವಿವೇಕತನದಿಂದ ರಕ್ಷಿಸಿ, ಅವರನ್ನು ನಿಜವಾಗಿಯೂ ಸಂತೋಷವಾಗಿರುವ ಹಾಗೆ ಮಾಡಿ ಅವರ ದೈವ ಪ್ರಜ್ಞೆಯನ್ನು ಪುನಃ ಸ್ಥಾಪಿಸಬೇಕು.

ನಮ್ಮ ಮೊದಲನೆಯ ಹೆಜ್ಜೆಯು ಅವರ ಅವಿವೇಕ, ಹುಸಿ ವೈಜ್ಞಾನಿಕ ದೃಷ್ಟಿಯಾದ ಜೀವವು ಆತ್ಮ ಅಥವಾ ಪರಮಾತ್ಮನ ಅವಶ್ಯಕತೆ ಇಲ್ಲದೆಯೇ ಜಡದಿಂದ ಬರುತ್ತದೆ ಎಂಬುದನ್ನು ಖ೦ಡಿಸಬೇಕು, ಇದು ಸರಿಯಾದುದಲ್ಲ.

ಡಾ|| ಸಿಂಗ್: ಎಷ್ಟು ಸತ್ಯ. ಈ ಭೌತಿಕವಾದ ದೃಷ್ಟಿಯು ಸರಿಯಾದುದಲ್ಲ. ನಾವು ಈ ಅವಿವೇಕ ವಿಚಾರಗಳನ್ನು ಈ ಹುಸಿ ವಿಜ್ಞಾನವನ್ನು ಪ್ರಾಮಾಣಿಕ ವೈಜ್ಞಾನಿಕ ಸೂಕ್ಷ್ಮ ಪರಿಶೀಲನೆಯಲ್ಲಿ ಕಂಡು ಹಿಡಿಯುತ್ತಿದ್ದೇನೆ ಮತ್ತು ಇವೆಲ್ಲ ತಪ್ಪು ಎಂದು ತೋರಿಸುತ್ತಿದ್ದೇವೆ.

ಶ್ರೀಲ ಪ್ರಭುಪಾದ : ಇದರ ಅವಶ್ಯಕತೆ ಇದೆ. ಕೆಲವು ಸಲ ವಿಜ್ಞಾನಿಗಳು ದೈವ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವಿಕೆಯನ್ನು ವೃದ್ಧಿಸಲು ವಿಚಾರಗಳನ್ನು ತರುತ್ತಾರೆಂದು ನೀವು ಹೇಳುತ್ತೀರಿ. ಅದು ಒಳ್ಳೆಯದೆ, ನಾವು ಆ ವಿಚಾರಗಳನ್ನು ಜನರಲ್ಲಿ ಭಗವತ್‌ ಜ್ಞಾನವನ್ನು ಪುನರ್ ಸ್ಥಾಪಿಸಲು ಬಳಸಬಹುದು.

ಡಾ|| ಸಿಂಗ್: ಹೌದು, ದುರಾದೃಷ್ಟವಶಾತ್ ಈ ಹುಸಿ ವಿಜ್ಞಾನಿಗಳು ಶಾಸನಕಾರನಿಲ್ಲದ ವಿಶ್ವವನ್ನು ಸೂಚಿಸಲು ”ಪ್ರಕೃತಿಯ ನಿಯಮಗಳು” ಎಂಬ ನುಡಿಯನ್ನು ಆಗಾಗ್ಗೆ ಬಳಸುತ್ತಾರೆ. ಆದ್ದರಿಂದ ಶಾಸನಕಾರನನ್ನು ಸೂಚಿಸಲು ನಾವು ”ಪ್ರಕೃತಿಯ ಉನ್ನತ ನಿಯಮಗಳು” ಎಂದು ಹೇಳಬಹುದು.

ಶ್ರೀಲ ಪ್ರಭುಪಾದ : ಹೌದು, ವಿಜ್ಞಾನಿಗಳು ಎಂದು ಕರೆಯಿಸಿಕೊಳ್ಳುವ ಇವರಿಗೆ ಎಲ್ಲ ಪ್ರಕೃತಿಯ ನಿಯಮಗಳೂ ಕೂಡ ಗೊತ್ತಿಲ್ಲ.

ಡಾ|| ಸಿಂಗ್: ಅವರಿಗೆ ಪ್ರಕೃತಿಯ ಎಲ್ಲ ನಿಯಮಗಳು ಗೊತ್ತಿಲ್ಲ. ಕೇವಲ ಕೆಲವೇ ಗೊತ್ತು.

ಶ್ರೀಲ ಪ್ರಭುಪಾದ : ಹೌದು, ಅವರಿಗೆ ಶಾಸನಕಾರ ಯಾರು ಎಂದು ಗೊತ್ತಿಲ್ಲ. ಪ್ರಕೃತಿಯ ನಿಯಮಗಳು ಶಾಸನಕಾರನಿಂದ ಬದಲಾಗಬಹುದು ಎಂದೂ ಕೂಡ ಅವರಿಗೆ ಗೊತ್ತಿಲ್ಲ. ಇದನ್ನು ನಾವು ಸಾಮಾನ್ಯ ಲೌಕಿಕ ಸರ್ಕಾರಿ ವ್ಯವಹಾರಗಳಲ್ಲಿ ನೋಡಿದ ಹಾಗೆ ಇದೆ.

ಇವತ್ತಿನ ಯಾವುದೋ ಒಂದು ನಿಯಮ, ಆದರೆ ನಾಳೆ ಸರ್ಕಾರ ಅದನ್ನು ಬದಲಾಯಿಸಬಹುದು. ಇದುವೇ ಭಗವಂತನ ನಿಜವಾದ ಅರ್ಥ. ಪರಮಾಧಿಕಾರಿ, ನೈಸರ್ಗಿಕ ನಿಯಮಗಳನ್ನು ರಚಿಸುವವನು ಮತ್ತು ಅದನ್ನು ಅವನು ಮಾತ್ರ ಬದಲಾಯಿಸಬಲ್ಲ.

ಕೃಷ್ಣನು ಹೇಳುತ್ತಾನೆ, ದೈವೀ ದ್ಯೇಷಾ ಗುಣ – ಮಯೀ ಮಮ ಮಾಯಾ ದುರತ್ಯಯಾ; ನನ್ನ ನೈಸರ್ಗಿಕ ನಿಯಮಗಳನ್ನು ಯಾರೂ ಗೆಲ್ಲಲಾಗುವುದಿಲ್ಲ.” ಮತ್ತು ಅವನು ಪುನಃ ಹೇಳುತ್ತಾರೆ ”ಆದರೆ ಯಾರು ನನ್ನಲ್ಲಿ ಶರಣಾಗುತ್ತೀರಿ, ಅವರು ನನ್ನ ನೈಸರ್ಗಿಕ ನಿಯಮಗಳನ್ನು ದಾಟಬಹುದು.” ಅದುವೇ ಸಾಮಾನ್ಯ ಜೀವಿ ಮತ್ತು ಪರಮಜೀವಿಯ ಮಧ್ಯೆ ಇರುವ ವ್ಯತ್ಯಾಸ. ಭಗವಂತ ಮಾತ್ರವೇ ಈ ನಿಯಮಗಳನ್ನು ಬದಲಾಯಿಸಬಹುದು.

ಉದಾಹರಣೆಗೆ, ಕೃಷ್ಣನ ನೈಸರ್ಗಿಕ ನಿಯಮಗಳು ಹೇಳುತ್ತವೆ. ನೀವು ಪಾಪಗಳನ್ನು ಮಾಡಿದರೆ ದುಃಖ ಪಡಬೇಕಾಗುತ್ತದೆ. ಈಗ ನೀನು ಮತ್ತು ನಾನು ಭಗವಂತನಲ್ಲ. ಆದ್ದರಿಂದ ಒಂದು ವೇಳೆ ನಾವು ಪಾಪ ಮಾಡಿದರೆ ದುಃಖಪಡಬೇಕಾಗುತ್ತದೆ ಅಷ್ಟೆ. ಆದರೆ ಕೃಷ್ಣನು ಈ ನಿಯಮಗಳನ್ನು ಬದಲಾಯಿಸಬಹುದು ಮತ್ತು ಅವನು ಹೇಳುತ್ತಾನೆ.

ಅಹಂ ತ್ವಮ್ ಸರ್ವ ಪಾಪೆಭ್ಯೋ ಮೋಕ್ಷಯಿಷ್ಯಾಮಿ; “ನೀವು ಪಾಪಗಳನ್ನು ಮಾಡಿದರೂ ಕೂಡ ಅದರ ಪರಿಣಾಮದ ದುಃಖಗಳಿಂದ ನಾನು ನಿಮ್ಮನ್ನು ಉದ್ಧರಿಸುತ್ತೇನೆ. ಭಯ ಪಡಬೇಡಿ. ಕೇವಲ ನನ್ನಲ್ಲಿ ಶರಣಾಗತರಾಗಿ.”

ಕೃಷ್ಣನು ಹೇಗೆ ಇದನ್ನು ಹೇಳಬಹುದು? ಅವನು ಇದನ್ನು ಹೇಳಬಹುದು. ಏಕೆಂದರೆ ಅವನು ಪರಮೋನ್ನತನಾಗಿದ್ದಾನೆ. ಇಲ್ಲಿದೆ ಭಗವಂತನ ಸಾಕ್ಷಾತ್ಕಾರ, ಸಾಕ್ಷಾತ್ಕಾರಿಸಿಕೊಳ್ಳಬೇಕಾದ ಪರಮ ವಿಜ್ಞಾನ ಇಲ್ಲಿದೆ. “ಹೌದು ನನ್ನ ಸುತ್ತಲೂ ಬದಲಾಯಿಸಲು ಆಗದಂತಹ ಅನೇಕ ನೈಸರ್ಗಿಕ ನಿಯಮಗಳನ್ನು ನಾನು ಕಾಣುತ್ತಿರುವೆ.

ನಿಶ್ಚಿತವಾಗಿಯೂ ನಾನು ಅದನ್ನು ಬದಲಾಯಿಸಲಾಗುವುದಿಲ್ಲ. ನಾನು ಪ್ರಕೃತಿಯ ನಿಯಮಗಳ ಅಧೀನದಲ್ಲಿದ್ದೇನೆ. ಆದ್ದರಿಂದ ಪ್ರಕೃತಿಯ ನಿಯಮಗಳ ಆಚೆ ಇರುವ, ಪ್ರಕೃತಿಯನ್ನು ರಚಿಸಿರುವ ಮತ್ತು ಅದನ್ನು ಬದಲಾಯಿಸಬಲ್ಲವನಾದ ಆ ವ್ಯಕ್ತಿಯನ್ನು ನಾನು ಹುಡುಕುವೆ. ನಾನು ಅವನನ್ನು ನನ್ನ ಜೀವನದ ಗುರಿಯಾಗಿ ಮಾಡಿಕೊಳ್ಳಬೇಕು.

ಡಾ|| ಸಿಂಗ್: ಆದುದರಿಂದಲೇ ”ಪ್ರಕೃತಿಯ ಸರ್ವೋತ್ತಮ ನಿಯಮಗಳು” ಎಂದು ಹೇಳುವುದೇ ಸೂಕ್ತವಾದದ್ದು.

ಶ್ರೀಲ ಪ್ರಭುಪಾದ: ಹೌದು, ಪ್ರಕೃತಿ ಉನ್ನತ ನಿಯಮಗಳನ್ನು ಉಲ್ಲೇಖಿಸಲು ಮರೆಯದಿರಿ, ಶಾಸನಕಾರನಾದ ಭಗವಂತನು ಏನು ಬೇಕಾದರೂ ಮಾಡಬಲ್ಲನು, ನಿಯಮಗಳನ್ನು ಬದಲಾಯಿಸಬಲ್ಲನು. ನಮಗೆ “ಸುಮ್ಮನೆ ನನ್ನ ಭಕ್ತರಾಗಿ ನನ್ನಲ್ಲಿ ಶರಣಾಗತರಾಗಿ, ನಾನು ನಿಮ್ಮನ್ನು ರಕ್ಷಿಸುವೆ” ಎಂದು ಕೇಳಿಕೊಳ್ಳುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi