ರಾಮಾಯಣದ ಸಪ್ತಕಾಂಡಗಳು

ವಾಲ್ಮೀಕಿ ಮಹರ್ಷಿಯಿಂದ ರಚಿಸಲ್ಪಟ್ಟ, ಶ್ರೀರಾಮನ ಜೀವನಗಾಥೆ “ರಾಮಾಯಣ” ಕೃತಿಯು ಏಳುಕಾಂಡಗಳಲ್ಲಿ ನಿರೂಪಿತವಾಗಿದೆ. ವಾಲ್ಮೀಕಿಗಳು ಇದನ್ನು ಮೌಖಿಕವಾಗಿ ಲವ, ಕುಶರಿಗೆ ಬೋಧಿಸುತ್ತಾರೆ. ಇದರಲ್ಲಿ ಶ್ರೀರಾಮನ ಜನನದಿಂದ ಆರಂಭಿಸಿ, ರಾಮಾವತಾರ ಸಮಾಪ್ತಿಯವರೆಗಿನ ವಿವರಗಳು ಅಡಕವಾಗಿವೆ.

ಬಾಲಕಾಂಡ

ಪುತ್ರಕಾಮೇಷ್ಠಿ ಯಜ್ಞದ ಮೂಲಕ ದಶರಥನು ಮಕ್ಕಳನ್ನು ಪಡೆಯುವುದು; ಶ್ರೀರಾಮನ ಜನನ, ಬಾಲ್ಯ, ವಿಶ್ವಾಮಿತ್ರನೊಂದಿಗೆ ಲಕ್ಷ್ಮಣನೊಡಗೂಡಿ ಅಸುರ ಸಂಹಾರಕ್ಕೆ ತೆರಳುವುದು; ಸೀತಾ ಸ್ವಯಂವರ ಘಟನೆಗಳ ಚಿತ್ರಣವಿದೆ.

ಸುಂದರಕಾಂಡ

ಹನುಮಂತನ ಸಮುದ್ರೋಲ್ಲಂಘನ; ಲಂಕೆಯಲ್ಲಿ ಸೀತೆಯ ಅನ್ವೇಷಣೆ; ಅಶೋಕವನದಲ್ಲಿ ಭೇಟಿ; ರಾವಣನ ಮುಖಾಮುಖಿ; ಲಂಕಾದಹನ; ಶ್ರೀರಾಮನಿಗೆ ಸೀತೆಯ ಕುರುಹನ್ನು ತಲಪಿಸುವವರೆಗಿನ ವಿವರಗಳು.

ಅಯೋಧ್ಯಾಕಾಂಡ

ಶ್ರೀರಾಮ ಪಟ್ಟಾಭಿಷೇಕದ ಏರ್ಪಾಡು; ಮಂಥರೆಯ ಪಿತೂರಿ; ಕೈಕೇಯಿಯಿಂದ ಮೂರು ವರಗಳ ಯಾಚನೆ; ಶ್ರೀರಾಮ ಸೀತಾ ಲಕ್ಷ್ಮಣ ಸಮೇತರಾಗಿ ವನವಾಸಕ್ಕೆ ಹೊರಡುವುದು; ಪುತ್ರಶೋಕದಿಂದ ದಶರಥ ಮಹಾರಾಜನ ಮರಣ – ಇವುಗಳ ವರ್ಣನೆಯಿದೆ.

ಅರಣ್ಯಾಕಾಂಡ

ವನವಾಸದ ಚಿತ್ರಣ; ಸೀತಾಪಹರಣದ ಘಟನೆಗಳ ವಿವರ.

ಕಿಷ್ಕಿಂಧಾಕಾಂಡ

ಸೀತಾನ್ವೇಷಣೆಯಲ್ಲಿ ರಾಮ ಲಕ್ಷ್ಮಣರು; ಕಿಷ್ಕಿಂಧೆಯಲ್ಲಿ ವಾನರರ ಭೇಟಿ; ವಾಲಿಯವಧೆ, ಸುಗ್ರೀವನ ಪಟ್ಟಾಭಿಷೇಕ; ವಾನರರಿಂದ ಸೀತಾನ್ವೇಷಣೆಗೆ ಸಹಾಯಹಸ್ತ.

ಯುದ್ಧಕಾಂಡ

ರಾಮ- ರಾವಣರ ಯುದ್ಧ; ರಾವಣನ ಸಂಹಾರ; ಪರಿವಾರದೊಡನೆ ಅಯೋಧ್ಯೆಯತ್ತ ಪ್ರಯಾಣ; ಶ್ರೀರಾಮ ಪಟ್ಟಾಭಿಷೇಕ ವರ್ಣನೆಗಳು.

ಉತ್ತರ ಕಾಂಡ

ವನವಾಸಾನಂತರ ರಾಮ-ಸೀತೆಯರ ಅಯೋಧ್ಯಾ ಜೀವನ; ಸೀತೆಯ ಮೇಲೆ ಅಪವಾದ; ಪ್ರಜಾರಂಜಕ ಶ್ರೀರಾಮನಿಂದ ಸೀತಾ ಪರಿತ್ಯಾಗ; ಕಾಲಾಂತರದಲ್ಲಿ ರಾಮಾವತಾರ ಪರಿಸಮಾಪ್ತಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi