– ಆಕರ: ಲಾಸ್ ಏಂಜಲೀಸ್ನಲ್ಲಿ ನೀಡಿದ ಉಪನ್ಯಾಸ ಮತ್ತು ಮುಂಜಾನೆ ವಿಹಾರದ ಮಾತುಕತೆ
ಪ್ರಭುಪಾದರು ವೈದಿಕ ಶಿಕ್ಷಣ ಪದ್ಧತಿಯ ಬಗ್ಗೆ ಮಾತನಾಡುತ್ತ ಹೇಳಿದ ಕಥೆ ಇದು:
ಮುನ್ನೂರು ವರ್ಷಗಳ ಹಿಂದೆ ಮಾಯಾಪುರ ಬಳಿಯ ಕೃಷ್ಣ ನಗರದಲ್ಲಿ ಬಡವನಾದ ಆದರೆ ನಿಷ್ಠನಾಗಿದ್ದ ಬ್ರಾಹ್ಮಣನೊಬ್ಬನಿದ್ದನು. ಅಲ್ಲಿಯ ರಾಜ ಕೃಷ್ಣಚಂದ್ರ ಆತನ ಖ್ಯಾತಿಯನ್ನು ಕೇಳಿ, ಆ ಬ್ರಾಹ್ಮಣನನ್ನು ಭೇಟಿಯಾಗುವ ಇಚ್ಛೆಯಿಂದ ಹೊರಟನು.
“ಬ್ರಾಹ್ಮಣೋತ್ತಮರೇ, ನಿಮಗೆ ನಾನೇನಾದರೂ ಸಹಾಯ ಮಾಡಬಲ್ಲೆನೇ?” ರಾಜ ಕೇಳಿದ. ಅದಕ್ಕೆ ಬ್ರಾಹ್ಮಣನು “ಇಲ್ಲ, ನನಗೆ ನಿಮ್ಮಿಂದ ಯಾವ ರೀತಿಯ ಸಹಾಯವೂ ಬೇಕಿಲ್ಲ” ಎಂದುತ್ತರಿಸಿದ.

“ಆದರೆ ನೀನು ಬಡತನದಿಂದ ನರಳುತ್ತಿರುವಂತೆ ತೋರುತ್ತೀಯೆ” ರಾಜನ ಪ್ರಶ್ನೆ.
“ಖಂಡಿತ ಇಲ್ಲ, ನಾನು ಬಡತನದಿಂದ ನರಳುತ್ತಿಲ್ಲ, ನನ್ನ ವಿದ್ಯಾರ್ಥಿಗಳು ಭಿಕ್ಷಾಟನೆ ಮಾಡಿ ಧಾನ್ಯಗಳನ್ನು ತರುತ್ತಾರೆ. ಅದನ್ನೇ ನನ್ನ ಪತ್ನಿ ಬೇಯಿಸಿ ಹಾಕುತ್ತಾಳೆ. ಇಲ್ಲೇ ಒಂದು ಹುಣಸೆ ಮರವಿದೆ. ನಾನು ಅದರ ಎಲೆ, ಕಾಯಿಗಳನ್ನು ಕಿತ್ತು ಬೇಯಿಸುತ್ತೇನೆ. ನಾವೆಲ್ಲರೂ ಅದನ್ನೇ ತೃಪ್ತಿಯಾಗಿ ಉಣ್ಣುತ್ತೇವೆ. ಮತ್ತೆಲ್ಲಿಯ ಬಡತನ?” ಬ್ರಾಹ್ಮಣ ನುಡಿದ.
ಅವನ ಉತ್ತರದಿಂದ ಹರ್ಷಗೊಂಡ ರಾಜ ಅಲ್ಲಿಂದ ಮರಳಿದ.
ನೀತಿ: ಇರುವುದರಲ್ಲೇ ಯಾರು ತೃಪ್ತಿಯನ್ನು ಹೊಂದುತ್ತಾರೋ ಅವರೇ ನಿಜವಾದ ಶ್ರೀಮಂತರು.






Leave a Reply