– ಡಾ.ಬಿ.ಆರ್.ಸುಹಾಸ್
ರಾಮಾದ್ವಿಯುಕ್ತಾ ಜನಕಾತ್ಮಜಾ ಸಾ ವಿಚಿಂತಯಂತೋ ಹೃದಿ ರಾಮರೂಪಮ್ |
ರುರೋದ ಸೀತಾ ರಘುನಾಥ ಪಾಹಿ ಗೋವಿಂದ ದಾಮೋದರ ಮಾಧವೇತಿ ||

ಶ್ರೀರಾಮನ ವಿಯೋಗದಿಂದ ಜನಕಪುತ್ರಿ ಸೀತೆಯು ತನ್ನ ಹೃದಯದಲ್ಲಿ ಶ್ರೀರಾಮನ ರೂಪವನ್ನೇ ಧ್ಯಾನಿಸುತ್ತಾ ‘ರಾಮ, ರಘುನಾಥ, ಕಾಪಾಡು! ಎಂದು ಅಳುತ್ತಾ ” ಗೋವಿಂದ, ದಾಮೋದರ, ಮಾಧವ’ ಎ೦ದಳು.
ಪ್ರಸೀದ ವಿಷ್ಣೋ ರಘುವಂಶನಾಥ ಸುರಾಽಸುರಾಣಾಂ ಸುಖದುಃಖಹೇತೋ |
ರುರೋದ ಸೀತಾ ತು ಸಮುದ್ರಮಧ್ಯೇ ಗೋವಿಂದ ದಾಮೋದರ ಮಾಧವೇತಿ ||
ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ, ಸಮುದ್ರ ಮಧ್ಯದಲ್ಲಿ ಸೀತೆಯು, ‘ಶ್ರೀರಾಮ! ರಘುವಂಶನಾಥ! ವಿಷ್ಣೋ! ಸುರಾಸುರರ ಸುಖದುಃಖಗಳಿಗೆ ಕಾರಣಪುರುಷನೇ ಪ್ರಸನ್ನನಾಗು, ರಕ್ಷಿಸು ಎಂದು ಅಳುತ್ತಾ ‘ಗೋವಿಂದ, ದಾಮೋದರ, ಮಾಧವ’ ಎಂದಳು.
ಶ್ರೀ ಜಾನಕೀ ಜೀವನ ರಾಮಚಂದ್ರ ನಿಶಾಚರಾರೇ ಭರತಾಗ್ರಜೇಶ
ಜಿಹ್ವೇ ಪಿಬಸ್ವಾಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ||
”ಹೇ ಜಿಹ್ವೆ! ‘ಶ್ರೀ ಜಾನಕೀಜೀವನ ಶ್ರೀರಾಮಚಂದ್ರ’ ‘ನಿಶಾಚರನಾದ ರಾಕ್ಷಸರ ಶತ್ರು, ‘ಭರತಾಗ್ರಜೇಶ (ಭರತನ ಅಣ್ಣ ಮತ್ತು ಒಡೆಯ) ‘ಗೋವಿಂದ, ದಾಮೋದರ, ಮಾಧವ’ ಎಂಬ ನಾಮಾಮೃತವನ್ನು ಪಾನಮಾಡು.”

ಲೀಲಾಮನುಷ್ಯಾಽಕೃತಿ ರಾಮರೂಪ ಪ್ರತಾಪದಾಸೀಕೃತ ಸರ್ವಭೂಪ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ||
”ಹೇ ಜಿಹ್ವೆ! ‘ಲೀಲಾಮನುಷ್ಯಾಕೃತಿಯ ರಾಮರೂಪ’ ಸಕಲ ರಾಜರನ್ನೂ ನಿನ್ನ ಪ್ರತಾಪದಿಂದ ದಾಸರನ್ನಾಗಿಸಿಕೊಂಡಿರುವ ಸಾರ್ವಭೌಮ! ‘ಗೋವಿಂದ, ದಾಮೋದರ, ಮಾಧವ’ ಎಂಬ ನಾಮಾಮೃತವನ್ನು ಪಾನಮಾಡು.”
ಜಿಹ್ವೇ ಸದೈವಂ ಭಜ ಸುಂದರಾಣಿ ನಾಮಾನಿ ಕೃಷ್ಣಸ್ಯ ಮನೋಹರಾಣಿ |
ಸಮಸ್ತ ಭಕ್ತಾರ್ತಿವಿನಾಶನಾನಿ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ಭಕ್ತರ ಎಲ್ಲ ಸಂಕಟಗಳನ್ನೂ ನಾಶಮಾಡುವ, ‘ಗೋವಿಂದ, ದಾಮೋದರ, ಮಾಧವ’ ಎಂಬ ಶ್ರೀಕೃಷ್ಣನ ಸುಂದರವೂ ಮನೋಹರವೂ ಆದ ನಾಮಗಳನ್ನು ನೀನು ಸದಾ ಹೀಗೆಯೇ ಭಜಿಸುತ್ತಿರು.”
ಗೋವಿಂದ ಗೋವಿಂದ ಹರೇ ಮುರಾರೇ ಗೋವಿಂದ ಗೋವಿಂದ ಮುಕುಂದ ಕೃಷ್ಣ |
ಗೋವಿಂದ ಗೋವಿಂದ ರಥಾಂಗಪಾಣೇ ಗೋವಿಂದ ದಾಮೋದರ ಮಾಧವೇತಿ||

“ಹೇ ಜಿಹ್ವೇ, ಗೋವಿಂದ, ಗೋವಿಂದ, ಹರೇ ಮುರಾರೇ ಗೋವಿ೦ದ, ಗೋವಿಂದ, ಮುಕುಂದ, ಕೃಷ್ಣ ಗೋವಿಂದ, ಗೋವಿ೦ದ, ರಥಾಂಗಪಾಣಿ (ಚಕ್ರಪಾಣಿ), ಗೋವಿ೦ದ ದಾಮೋದರ, ಮಾಧವ’ ಎಂದು ಶ್ರೀಕೃಷ್ಣನ ನಾಮಗಳನ್ನು ಭಜಿಸು.”
ಗೋಪಾಲ ವಂಶೀಧರ ರೂಪಸಿಂಧೋ ಲೋಕೇಶ ನಾರಾಯಣ ದೀನಬಂಧೋ |
ಉಚ್ಚೈಃ ಸ್ವರೈಸ್ತ್ವಂ ವದ ಸರ್ವದೈವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ನೀನು ಸದಾ ಕಾಲವೂ ಉಚ್ಚ ಸ್ವರದಿಂದ, ‘ಗೋಪಾಲ, ವಂಶೀಧರ (ಕೊಳಲು ಹಿಡಿದಿರುವವನು), ರೂಪಸಿಂಧು (ಸುಂದರ ರೂಪವುಳ್ಳವನು), ಲೋಕೇಶ ( ಲೋಕಕ್ಕೆಲ್ಲ ಈಶ), ನಾರಾಯಣ, ದೀನಬಂಧು, ಗೋವಿಂದ, ದಾಮೋದರ, ಮಾಧವ ಎಂದು ಉಚ್ಚರಿಸುತ್ತಿರು.”
ಶ್ರೀಕೃಷ್ಣರಾಧಾವರ ಗೋಕುಲೇಶ ಗೋಪಾಲ ಗೋವರ್ಧನ ನಾಥ ವಿಷ್ಣೋ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ಶ್ರೀಕೃಷ್ಣರಾಧಾವರ, ಗೋಕುಲೇಶ, ಗೋಪಾಲ, ಗೋವರ್ಧನ, ನಾಥ, ವಿಷ್ಣು, ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನ ಮಾಡು.

ಶ್ರೀನಾಥ ವಿಶ್ವೇಶ್ವರ ವಿಶ್ವಮೂರ್ತೇ ಶ್ರೀದೇವಕೀನಂದನ ದೈತ್ಯಶತ್ರೋ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
”ಹೇ ಜಿಹ್ವೇ, ಶ್ರೀನಾಥ (ಲಕ್ಷ್ಮೀಪತಿ), ವಿಶ್ವೇಶ್ವರ (ವಿಶ್ವಕ್ಕೆ ಒಡೆಯ), ವಿಶ್ವಮೂರ್ತೇ (ವಿಶ್ವವನ್ನೇ ತನ್ನ ರೂಪವಾಗಿ ಉಳ್ಳವನು), ದೇವಕೀಪುತ್ರ ಕೃಷ್ಣ, ದೈತ್ಯಶತ್ರುವೇ, ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನಮಾಡು.”
ಗೋಪೀಪತೇ ಕಂಸರಿಪೋ ಮುಕುಂದ ಲಕ್ಷ್ಮೀಪತೇ ಕೇಶವ ವಾಸುದೇವ |
ಜಿಹ್ವೇ ಪಿಬಸ್ವಾಽಮೃತಮೇತದೇವ ಗೋವಿಂದ ದಾಮೋದರ ಮಾಧವೇತಿ ||
ಹೇ ಜಿಹ್ವೇ, ಗೋಪೀಪತಿ, ಕಂಸರಿಪು (ಕಂಸನ ಶತ್ರು), ಮುಕುಂದ, ಲಕ್ಷ್ಮೀಪತಿ, ಕೇಶವ, ವಾಸುದೇವ, ಗೋವಿಂದ, ದಾಮೋದರ, ಮಾಧವ ಎಂಬ ಈ ನಾಮಾಮೃತವನ್ನು ಪಾನ ಮಾಡು.”
(ಮುಂದುವರಿಯುವುದು)






Leave a Reply