ಶ್ರೀಲ ಬಲದೇವ ವಿದ್ಯಾಭೂಷಣ

ಏಳು ದಿನಗಳಲ್ಲೇ ವೇದಾಂತದ ಬಗ್ಗೆ ಟೀಕೆಗಳನ್ನು ಬರೆದ ಬಲದೇವ ವಿದ್ಯಾಭೂಷಣರು

ಶ್ರೀಲ ಬಲದೇವ ವಿದ್ಯಾಭೂಷಣರು ಅತ್ಯಂತ ಪರಿತ್ಯಕ್ತರಾದ ಶುದ್ಧ ಭಕ್ತರು. ಅವರು ಹೆಸರು ಅಥವಾ ಖ್ಯಾತಿಗಾಗಿ ಎಳ್ಳಷ್ಟು ಆಶಿಸದ ಮಹಾನರು. ಅವರು ಮನುಕುಲದ ಉಪಯೋಗಕ್ಕೆ ಹಲವಾರು ಕೃತಿಗಳನ್ನು ಬರೆದರು. ತಮ್ಮ ಜನ್ಮಸ್ಥಳ ಅಥವಾ ಕುಟುಂಬದ ಹಿನ್ನೆಲೆಯ ಬಗ್ಗೆ ಏನೂ ಹೇಳದ ಕಾರಣ ಖಚಿತವಾಗಿ ನಮಗೆ ಅವರ ಕುರಿತು ವಿವರಗಳಿಲ್ಲ.

ಇತಿಹಾಸಜ್ಞರು ಪ್ರಾಯಃ ಅವರು ಒರಿಸ್ಸಾ (ರೆಮುನಾದಲ್ಲಿರಬಹುದು) ದಲ್ಲಿ ಸುಮಾರು ಹದಿನೆಂಟನೆಯ ಶತಮಾನದಲ್ಲಿ ಜನಿಸಿರಬಹುದೆಂದು ಅಂದಾಜು ಮಾಡಿದ್ದಾರೆ. ಎಳೆಯ ವಯಸ್ಸಿನಲ್ಲಿಯೇ ಅವರು ವ್ಯಾಕರಣ, ಸಾಹಿತ್ಯ, ಕಾವ್ಯ ಮತ್ತು ತರ್ಕ ಅಧ್ಯಯನವನ್ನು ನಡೆಸಿ ಯಾತ್ರೆಗೆಂದು ಪುಣ್ಯಕ್ಷೇತ್ರಗಳ ಭೇಟಿಗೆ ಹೊರಟರು.

ಆ ಕಾಲದಲ್ಲಿ ಅವರು ದಕ್ಷಿಣ ಭಾರತದ ತತ್ತ್ವ ವಾದಿಗಳೊಂದಿಗೆ ಕಾಲ ಕಳೆದರು ಮತ್ತು ತನ್ಮೂಲಕ ಶ್ರೀ ಮಧ್ವಾಚಾರ್ಯರ ಬೋಧನೆಗಳನ್ನು ಅರಿತರು. ಅವರು ಭಾರತದಲ್ಲಿ ಈ ತತ್ತ್ವಶಾಸ್ತ್ರದ ಪ್ರಬಲ ಪ್ರತಿಪಾದಕರಾದರು.

ಅವರ ಪ್ರಯಾಣ ಕಾಲದಲ್ಲಿ ಪುನಃ ಅವರು ಉಕ್ಕಲ ದೇಶಕ್ಕೆ (ಒರಿಸ್ಸಾ) ಬಂದರು. ಮತ್ತು ಶ್ರೀ ರಸಿಕಾನಂದರ ಶಿಷ್ಯರಾದ ಶ್ರೀ ರಾಧಾ ದಾಮೋದರನ್ನು ಭೇಟಿಯಾಗಿ ಅವರೊಂದಿಗೆ ತತ್ತ್ವಶಾಸ್ತ್ರಗಳ ಬಗ್ಗೆ ಗಾಢವಾಗಿ ಚರ್ಚಿಸಿದರು. ಶ್ರೀ ರಾಧಾ-ದಾಮೋದರರು ಗೌಡಿಯ ವೈಷ್ಣವ ತತ್ತ್ವಶಾಸ್ತ್ರದ ತೀರ್ಮಾನಗಳನ್ನು ಅವರಿಗೆ ವಿವರಿಸಿ ಶ್ರೀ ಚೈತನ್ಯ ಮಹಾಪ್ರಭುಗಳ ಅಸೀಮ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರನ್ನು ಕೇಳಿಕೊಂಡರು.

ಈ ಮಾತುಗಳನ್ನು ವಿದ್ಯಾಭೂಷಣರ ಹೃದಯಕಮಲದಲ್ಲಿ ಗಾಢವಾಗಿ ನಾಟಿತು ಮತ್ತು ಅಂತರಂಗದೊಳಗಿನಿಂದ ಪ್ರೇಮಭಕ್ತಿ ಜಾಗೃತವಾಯಿತು. ಹೀಗಾಗಿ ಸ್ವಲ್ಪ ಕಾಲದ ಅನಂತರ ಅವರಿಗೆ ರಾಧಕೃಷ್ಣ ಮಂತ್ರ ದೀಕ್ಷೆಯನ್ನು ನೀಡಲಾಯಿತು ಮತ್ತು ಅವರು ಶ್ರೀ ಜೀವಗೋಸ್ವಾಮಿಯವರ ಸತ್‌-ಸಂದರ್ಭವನ್ನು ಅಧ್ಯಯನ ಮಾಡಲಾರಂಭಿಸಿದರು.

ಸ್ವಲ್ಪ ಕಾಲದಲ್ಲೇ ಅವರು ಗೌಡಿಯ ವೈಷ್ಣವ ತತ್ತ್ವದಲ್ಲಿ ಪರಿಣತರಾದರು. ತಮ್ಮ ಗುರುಗಳ ಅನುಮತಿ ಮತ್ತು ಆಶೀರ್ವಾದದೊಂದಿಗೆ ಅವರು ‍ಶ್ರೀ ವಿ‍ಶ್ವನಾಥ ಚಕ್ರವರ್ತಿ ಠಾಕುರರ ಬಳಿ ಈ ಬೋಧನೆಗಳನ್ನು ಮತ್ತಷ್ಟು ಅಧ್ಯಯನ ಮಾಡಲು ಶ್ರೀ ವೃಂದಾವನ ಧಾಮಕ್ಕೆ ಹೊರಟರು.

ಬಲದೇವರ ಸೌಜನ್ಯ, ವಿನಮ್ರತೆ, ಪರಿತ್ಯಾಗ ಭಾವ ಮತ್ತು ವೇದಗಳ ಮೇಲಿನ ಗಾಢವಾದ ಜ್ಞಾನವನ್ನು ನೋಡಿ ಶ್ರೀ ವಿಶ್ವನಾಥ ಠಾಕುರರು ತುಂಬ ಸಂತುಷ್ಟರಾದರು. ಶ್ರೀ ಚೈತನ್ಯ ಮಹಾಪ್ರಭುಗಳು ವಿವರಿಸಿದ ಅಚಿಂತ್ಯ ಭೇದಾಭೇದ ತತ್ತ್ವವನ್ನು ಶ್ರೀ ವಿಶ್ವನಾಥ ಚಕ್ರವರ್ತಿ ಠಾಕುರರು ಶ್ರೀ ಬಲದೇವರಿಗೆ ವಿವರಿಸಿದರು. ಶ್ರೀ ಬಲದೇವರು ಗೌಡೀಯ ವೈಷ್ಣವ ಸಿದ್ಧಾಂತವನ್ನು ಸಂಪೂರ್ಣವಾಗಿ ಅರಿತು ತೀವ್ರವಾಗಿ ಪ್ರಚಾರ ಮಾಡಿದರು.

ಈ ಸಮಯದಲ್ಲಿ ಶ್ರೀ ಸಂಪ್ರದಾಯದವರು ಜೈಪುರದ ಅರಸರಲ್ಲಿ ಸವಾಲೆಸೆದರು. ಗೌಡೀಯ ವೈಷ್ಣವರಲ್ಲಿ ವೇದಾಂತ ಸೂತ್ರದ ಕುರಿತು ವ್ಯಾಖ್ಯೆಯಿರದ ಕಾರಣ ಅವರು ವಿಗ್ರಹ ಪೂಜೆ ಮಾಡಲು ಅರ್ಹರಾಗದೆ ಶ್ರೀ ಸಂಪ್ರದಾಯದವರಿಗೆ ಪೂಜೆಯ ಕೆಲಸವನ್ನು ನೀಡಬೇಕಾಗಿದೆಯೆಂದು ದೂರಿದರು. ಶಾಸ್ತ್ರದಲ್ಲಿ ಎಲ್ಲೂ ಹೇಳಿರದ ಕಾರಣ ಶ್ರೀ ಶ್ರೀ ಗೋವಿಂದ ಗೋಪಿನಾಥನೊಂದಿಗೆ ‍ಶ್ರೀಮತಿ ರಾಧಾರಾಣಿಯ ಪೂಜೆಯನ್ನು ಅವರು ವಿರೋಧಿಸಿದರು.

ರಾಜ ಸದಾಚಾರಿ ರಾಜನಿಗೆ ಗೌಡೀಯ ಸಂಪ್ರದಾಯದ ದೀಕ್ಷೆ ನೀಡಲಾಗಿತ್ತು. ಆದ್ದರಿಂದ ಅವರು ಭಕ್ತರಿಗೆ ವೃಂದಾವನದಲ್ಲಿ ಏನಾಯಿತೆಂದು ಸಂದೇಶ ನೀಡಿದರು. ಆದರೆ ಅದೇ ಕಾಲಕ್ಕೆ ರಾಧಾರಾಣಿಯ ವಿಗ್ರಹವನ್ನು ಗರ್ಭಗೃಹದಿಂದ ಹಾಗೂ ಬಂಗಾಳಿ ಗೌಡೀಯ ವೈಷ್ಣವ ಪೂಜಾರಿಗಳನ್ನು ಪೂಜಾಕಾರ್ಯದಿಂದ ತೆಗೆಯಬೇಕಾದ ಸಂದರ್ಭ ಬಂದಿತು.

ಆ ಸಮಯದಲ್ಲಿ ಶ್ರೀ ವಿಶ್ವನಾಥ ಚಕ್ರವರ್ತಿಯವರಿಗೆ ತುಂಬ ವಯಸ್ಸಾಗಿದ್ದು ಜಯಪುರಕ್ಕೆ ಹೋಗದಷ್ಟು ದುರ್ಬಲರಾಗಿದ್ದರು. ಅವರ ಸ್ಥಳದಲ್ಲಿ ಅವರು ಶಾಸ್ತ್ರಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು, ಸವಾಲನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದ್ದ ಶಿಷ್ಯ ಬಲದೇವರನ್ನು ಕಳುಹಿಸಿದರು.

ಬಲದೇವರು ರಾಮಾನುಜರ ಅನುಯಾಯಿಗಳಿಗೆ ಎಂತಹ ವಾದಗಳನ್ನು ಮಂಡಿಸಿದರೆಂದರೆ ಅವರೆಲ್ಲ ನಿರುತ್ತರರಾದರು. ಬಲದೇವರು, “ಶ್ರೀಲ ವ್ಯಾಸದೇವರು ಸ್ವತಃ ರಚಿಸಿದ ಶ್ರೀಮದ್‌ ಭಾಗವತವು ವೇದಾಂತ ಸೂತ್ರದ ಸಹಜ ವ್ಯಾಖ್ಯೆಯೆಂದು ಗೌಡೀಯ ವೈಷ್ಣವ ಸಂಪ್ರದಾಯದ ಮೂಲಕರ್ತರಾದ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಇದನ್ನು ಸತ್‌ ಸಂದರ್ಭದಲ್ಲಿ ಸಾಬೀತುಗೊಳಿಸಲಾಗಿದೆ” ಎಂದು ಹೇಳಿದರು.

ಆದರೆ ಅಲ್ಲಿರುವ ಪಂಡಿತರು ಸೂತ್ರದ ನೇರ ವ್ಯಾಖ್ಯೆಯನ್ನು ಬಿಟ್ಟರೆ ಇನ್ಯಾವುದನ್ನೂ ಒಪ್ಪುವುದಿಲ್ಲ ಎಂದರು. ಅನ್ಯಮಾರ್ಗವಿಲ್ಲದೆ ಬಲದೇವರು ತಾವು ವ್ಯಾಖ್ಯೆಯನ್ನು ನೀಡುತ್ತೇವೆಂದರು.

ತುಂಬ ದುಃಖಿತರಾದ ಶ್ರೀ ಬಲದೇವರು ಶ್ರೀ ಗೋವಿಂದಜಿ ಮಂದಿರಕ್ಕೆ ಬಂದು ಪ್ರಭುಗಳ ಪಾದದಡಿ ಸಾಷ್ಟಾಂಗ ನಮಸ್ಕಾರ ಮಾಡಿ ನಡೆದ ಎಲ್ಲ ಸಂಗತಿಯನ್ನು ಹೇಳಿದರು. ಅಂದು ರಾತ್ರಿ ಪ್ರಭು ಅವರ ಕನಸಿನಲ್ಲಿ ಬಂದು ವೇದಾಂತ ಸೂತ್ರದ ಮೇಲೆ ಒಂದು ವ್ಯಾಖ್ಯೆಯನ್ನು ಬರೆಯಲು ಆಜ್ಞಾಪಿಸಿದರು. “ನಾನು ಏನನ್ನು ಬರೆಯಬೇಕೆಂದು ಹೇಳುತ್ತೇನೆ. ಆಗ ಯಾರೂ ಅದನ್ನು ತಿರಸ್ಕಾರ ಮಾಡಲಾಗುವುದಿಲ್ಲ.”

ಇಂತಹ ಅದ್ಭುತ ಸ್ವಪ್ನಗಳನ್ನು ಕಂಡ ಬಲದೇವರು ಸಂಪೂರ್ಣವಾಗಿ ಚೈತನ್ಯಭರಿತರಾಗಿ ಶಕ್ತಿಯ ಹೊರ ಹುರುಪು ತಮ್ಮ ಹೃದಯವನ್ನು ಪ್ರಸರಿಸಿದೆಯೆಂಬ ಅನುಭವ ಪಡೆದರು. ಅವರು ಬರೆಯಲಾರಂಭಿಸಿದರು. ಕೆಲವೇ ದಿನಗಳಲ್ಲಿ ಶ್ರೀ ಗೋವಿಂದ ಭಾಷ್ಯ ಎಂಬ ವ್ಯಾಖ್ಯೆಯು ಪೂರ್ಣಗೊಂಡಿತು.

ವಿದ್ಯಾರೂಪಂ ಭೂಷಣಂ ಮೇ ಪ್ರದಾಯ

ಖ್ಯಾತಿಂ ನಿತ್ಯ ತೇನ ಯೋ ಮಮುದ್ರಃ |

ಶ್ರೀ ಗೋವಿಂದ ಸ್ವಪ್ನ ನಿರ್ದಿಷ್ಟ ಭಾಷೇ

ರಾಧಾ ಬಂಧು ಬಂಧುರಂಗಃ ಸ ಜೀಯಾತ್‌ ||

ನನ್ನೊಂದಿಗೆ ಅಪಾರ ಕರುಣೆ ತೋರಿಸಿದ, ನನ್ನೊಂದಿಗೆ ಬಹಳ ದಯೆಯನ್ನು ತೋರಿಸಿದ, ಅವನ ವ್ಯಾಖ್ಯೆಯನ್ನು ಬರೆಯಲು ಸ್ವಪ್ನದಲ್ಲಿ ಆಜ್ಞಾಪಿಸಿ ನನಗೆ ಸಹಾಯವನ್ನು ಒದಗಿಸಿದ, ಅವನೇ ರಚಿಸಿದ ಈ ಕೃತಿಯಿಂದ ಅತಿ ಜ್ಞಾನಿಗಳಲ್ಲೂ ಹೆಸರನ್ನು ನನಗೆ ತಂದು ವಿದ್ಯಾಭೂಷಣನೆಂದು ಪ್ರಶಂಸೆಗೆ ನನ್ನನ್ನು ಒಳಪಡಿಸಿದ ಆ ಶ್ರೀಮತಿ ರಾಧಾರಾಣಿಯ ಪ್ರಿಯ ಸಖನಾದ ರಾಧಾರಾಣಿಯ ಜೀವಕ್ಕಿಂತ ಹೆಚ್ಚು ಪ್ರಿಯನೆಂದು ಭಾವಿಸುವ ಆ ಶ್ರೀ ಗೋವಿಂದನಿಗೆ ನನ್ನ ನಮನಗಳು, ಅವನ ಮಹಿಮೆ ಅಪಾರ.

ಆ ವ್ಯಾಖ್ಯೆಯನ್ನು ತಮ್ಮೊಂದಿಗೆ ಕೊಂಡೊಯ್ದ ಶ್ರೀ ಬಲದೇವರು ರಮಾನಂದಿ ಪಂಡಿತರ ಸಭೆಗೆ ಬಂದರು. ವ್ಯಾಖ್ಯೆಯನ್ನು ಓದಿದವರೆಲ್ಲಾ ಮಂತ್ರಮುಗ್ಧರಾದರು. ಗೌಡಿಯ ಸಂಪ್ರದಾಯದ ವಿಜಯವು ಎಲ್ಲೆಡೆ ಹರಡಿತು. ರಾಜ ಮತ್ತು ಭಕ್ತರು ಆನಂದ ಸಾಗರದಲ್ಲಿ ಮುಳುಗಿದರು. ಆಗ ಪಂಡಿತರು ಶ್ರೀ ಬಲದೇವರಿಗೆ “ವಿದ್ಯಾಭೂಷಣ” ಎಂಬ ಬಿರುದನ್ನು ನೀಡಿದರು.

ಈ ಸಭೆಯು ಜಯಪುರ ನಗರದ ಗೊಲ್ಹಾದಲ್ಲಿ ಜರುಗಿತು. ಬಲದೇವ ವಿದ್ಯಾಭೂಷಣರು ಗೊಲ್ಹಾ ಮಂದರದಲ್ಲಿ ವಿಜಯ ಗೋಪಾಲ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಆದರೆ ಈ ವಿಗ್ರಹದ ಹಿನ್ನೆಲೆಯ ಬಗ್ಗೆ ಈಗ ತಿಳಿದಿಲ್ಲ. ಈ ದಿನದಿಂದ ಜಯಪುರದ ಮಹಾರಾಜರು ಶ್ರೀ ಗೋವಿಂದರ ಆರತಿಯನ್ನು ಮೊದಲು ಮಾಡಿ ನಂತರ ಬೇರೆ ದೇವಾಲಯಗಳು ತಮ್ಮ ಆರತಿಯನ್ನು ಮಾಡಬಹುದೆಂದರು.

ಸೋಲನ್ನು ಒಪ್ಪಿದನಂತರ, ರಮಾನಂದ ಪಂಡಿತರು ಶ್ರೀ ಬಲದೇವ ವಿದ್ಯಾಭೂಷಣರಿಂದ ದೀಕ್ಷೆಯನ್ನು ಸ್ವೀಕರಿಸುವ ತಮ್ಮ ಆಕಾಂಕ್ಷೆಯನ್ನು ತೋರಿಸಿದರು. ಆದರೆ ನಾಲ್ಕು ವಿಧಾಯಕ ಸಂಪ್ರದಾಯಗಳ ಪೈಕಿ ಶ್ರೀ ಸಂಪ್ರದಾಯವು ಅತ್ಯಂತ ಗೌರವಯುತವಾದದ್ದು ಮತ್ತು ದಾಸ್ಯ ಭಕ್ತಿಗೆ ಹೊಂದಿಕೊಂಡಿರುವ ಅಗ್ರಮಾನ್ಯವಾದುದೆಂದವು. ಸಂಪ್ರದಾಯದ ಕುರಿತು ಗೌರವ ಕಳೆದುಕೊಂಡರೆ ಇದನ್ನು ಅಪರಾಧವೆಂದು ಪರಿಗಣಿಸಬಹುದು.

ಜಯಪುರದಿಂದ ಬೃಂದಾವನಕ್ಕೆ ವಾಪಸ್ಸಾಗಿ ಶ್ರೀ ಬಲದೇವರು ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರಿಗೆ ವಿಜಯದ ಪತ್ರವನ್ನು ನೀಡಿದರು ಮತ್ತು ನಡೆದ ಎಲ್ಲ ಘಟನೆಗಳನ್ನು ವಿವರಿಸಿದರು. ಈ ಸುದ್ದಿಯನ್ನು ಸ್ವೀಕರಿಸಲು ಎಲ್ಲ ಭಕ್ತರು ಅತ್ಯಂತ ಸಂತೋಷದಿಂದ ಕಾಯುತ್ತಿದ್ದರು.

ಚಕ್ರವರ್ತಿ ಪಾದರು ಶ್ರೀ ಬಲದೇವರಿಗೆ ತಮ್ಮ ಹೃದಯಪೂರ್ವಕ ಆಶೀರ್ವಾದವನ್ನು ನೀಡಿದರು. ಆ ಸಮಯದಲ್ಲಿ ‍ಶ್ರೀ ಬಲದೇವ ವಿದ್ಯಾಭೂಷಣರು ಶ್ರೀಲ ಜೀವ ಗೋಸ್ವಾಮಿ ಸತ್‌-ಸಂದರ್ಭರ ಮೇಲೆ ಒಂದು ವ್ಯಾಖ್ಯೆಯನ್ನು ಬರೆಯಲಾರಂಭಿಸಿದರು.

ಬಲದೇವ ವಿದ್ಯಾಭೂಷಣರು ಬೃಂದಾವನದ ಗೋಕುಲಾನಂದ ಮಂದಿರದಲ್ಲಿ ನೆಲೆಸಿರುವ ಶ್ರೀ ಜಯ ಮತ್ತು ಶ್ರೀ ವಿಜಯ ಗೋವಿಂದರನ್ನು ಸ್ವತಃ ತಾವೇ ಪೂಜಿಸಿದರು. ಕೆಲವು ಭಕ್ತರ ಅಭಿಪ್ರಾಯದ ಪ್ರಕಾರ, ಶ್ರೀ ಬಲದೇವ ವಿದ್ಯಾಭೂಷಣರೇ ‍ಶ್ಯಾಮಾನಂದ ಪ್ರಭು, ಶ್ರೀ ಶ್ರೀ ರಾಧಾ-ಶ್ಯಾಮಸುಂದರ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದಿದೆ.

ಶ್ರೀ ವಿಶ್ವನಾಥ ಚಕ್ರವರ್ತಿ ಠಾಕುರರು ಈ ಲೋಕದಲ್ಲಿ ತಮ್ಮ ಲೀಲೆಗಳನ್ನು ಮುಗಿಸಿದ ಅನಂತರ ಶ್ರೀಬಲದೇವ ವಿದ್ಯಾಭೂಷಣರು ಗೌಡೀಯ ವೈಷ್ಣವ ಸಂಪ್ರದಾಯದ ಮುಂದಿನ ಆಚಾರ್ಯರಾದರು.

ವೇದಾಂತ – ಶ್ಯಾಮಂತಕದ ಕೊನೆಯಲ್ಲಿ ಶ್ರೀ ಬಲದೇವ ವಿದ್ಯಾಭೂಷಣರು ತಮ್ಮ ಗುರುಗಳನ್ನು ಈ ರೀತಿ ಗೌರವಿಸಿದರು: ‍‍ಶ್ರೀ ರಾಧಾ-ದಾಮೋದರದೇವರೆಂಬ ಬ್ರಾಹ್ಮಣ ಗುರುಗಳಿಂದ ವೇದಾಂತ ಶ್ಯಾಮಂತಕವೆಂಬ ಶ್ರೀಮತಿ ರಾಧಾರಾಣಿಯವರ ಆನಂದಕ್ಕಾಗಿ ಪ್ರಭುವು ರಚಿಸಿದ ಗ್ರಂಥವನ್ನು ನಿಮಗೆ ಕಾಣಿಕೆಯಾಗಿ ನೀಡಲು ನನ್ನನ್ನು ಬೃಂದಾವನಕ್ಕೆ ಕಳುಹಿಸಲಾಗಿದೆ.

ಶ್ರೀಲ ಬಲದೇವ ವಿದ್ಯಾಭೂಷಣರು ತದನಂತರ ಶ್ರೀ ಗೋವಿಂದ ದಾಸರೆಂದು ಕರೆಯಲ್ಪಟ್ಟರು. ಅವರು ಇಬ್ಬರು ಖ್ಯಾತ ಶಿಷ್ಯರನ್ನು ಹೊಂದಿದ್ದರು. ಶ್ರೀವಿದ್ಯಾದಾಸ ಮತ್ತು ಶ್ರೀ ನಂದನ ಮಿಶ್ರ.

ಶ್ರೀಲ ಬಲದೇವ ವಿದ್ಯಾಭೂಷಣರು ಸಂಕಲನ ಮಾಡಿರುವ ಶ್ರೇಷ್ಠ ಕೃತಿಗಳು.

ಶ್ರೀ ಗೋವಿಂದ ಭಾಷ್ಯ

ಸಿದ್ಧಾಂತ ರತ್ನಂ

ಸಾಹಿತ್ಯ-ಕೌಮುದಿ

ವೇದಾಂತ ಶ್ಯಾಮಂತಕ

ಪ್ರಮೇಯ ರತ್ನಾವಳಿ

ಸಿದ್ಧಾಂತ ದರ್ಪಣ

ಕಾವ್ಯ-ಕೌಸ್ತುಭ

ವ್ಯಾಕರಣ-ಕೌಮುದಿ

ಪಾದ-ಕೌಸ್ತುಭ

ಇಶದಿ-ಉಪನಿಷತ್‌ ಭಾಷ್ಯ

ಗೀತಾಭೂಷಣ-ಭಾಷ್ಯ

ಶ್ರೀ ವಿಷ್ಣುನಾಮ ಸಹಸ್ರ-ಭಾಷ್ಯ

ಸಂಕ್ಷೇಪ–ಭಗವತಾಮೃತ-ಟಿಪ್ಪಣಿ-ಸಾರಂಗ-ರಂಗದ

ತತ್ತ್ವ-ಸಂದರ್ಭ-ಟೀಕಾ

ಸ್ಥವ-ಮಾಲ-ವಿಭೂಷಣ-ಭಾಷ್ಯ

ನಾಟಕ-ಚಂದ್ರಿಕ-ಟೀಕಾ

ಚಂದ್ರಲೋಕ-ಟೀಕಾ

ಸಾಹಿತ್ಯ-ಕೌಮುದಿ-ಟೀಕಾ

ಕೃಷ್ಣ-ನಂದನಿ

ಶ್ರೀಮದ್‌ ಭಾಗವತ-ಟೀಕಾ

ವೈಷ್ಣವ-ನಂದಿನಿ

ಗೋವಿಂದ-ಭಾಷ್ಯ

ಶಿಕ್ಷಾ-ಟೀಕಾ

ಸಿದ್ಧಾಂತ ರತ್ನ-ಟೀಕಾ

ಸ್ಥವ-ಮಾಲ-ಟೀಕಾ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi