ಪಾಕಶಾಲೆ


  • ಬಗೆ ಬಗೆಯ ಮಾವಿನ ತಿನಿಸು

    ಬಗೆ ಬಗೆಯ ಮಾವಿನ ತಿನಿಸು

    ಮೇ, ಜೂನ್‌ ತಿಂಗಳೆಂದರೆ ಮಾವಿನ ಕಾಯಿ, ಹಣ್ಣುಗಳ ಕಾಲ. ಮಾವು ನಮ್ಮ ಗೃಹಿಣಿಯ ಅಚ್ಚುಮೆಚ್ಚಿನ ಮಿತ್ರ. ಚಟ್ನಿ, ತೊಕ್ಕು, ಬರ್ಫಿ, ಗೊಜ್ಜು, ಚಿತ್ರಾನ್ನ ಸೇರಿದಂತೆ ಮಾವಿನ ಕಾಯಿ-ಹಣ್ಣಿನಿಂದ ರುಚಿರುಚಿಯಾದ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ನಮ್ಮ ಗೃಹಲಕ್ಷ್ಮಿಯರಿಗಾಗಿ ಇಲ್ಲಿ ನೀಡಿದ್ದೇವೆ. ಮಾವಿನ ಹಣ್ಣಿನ ಬರ್ಫಿ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ. ಗೊರಟು ಬಿಸಾಡಿ. ತೆಂಗಿನ ಕಾಯಿ ತುರಿದು ಮಿಕ್ಸಿಯಲ್ಲಿ ರುಬ್ಬಿ. ಕಾಯಿ ತುರಿಯನ್ನು ಹಿಂಡಿ ಹಾಲು ತೆಗೆದಿಟ್ಟುಕೊಳ್ಳಿ.…


  • ಏಕಾದಶಿ ಅಡುಗೆಗಳು

    ಏಕಾದಶಿ ಅಡುಗೆಗಳು

    ಬೇಯಿಸಿದ ಬಾಳೆ ಹಣ್ಣು ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬಾಳೆ ಹಣ್ಣನ್ನು ಮೂರು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ. ಸಕ್ಕರೆ, ಕಾಯಿ ತುರಿ, ಏಲಕ್ಕಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ ಪಾಕವಾಗಿ ಕಾಯಿ ತುರಿಯೊಂದಿಗೆ ಚೆನ್ನಾಗಿ ಬೆರೆತು ಹದವಾದ ಮಿಶ್ರಣವಾಗುವ ತನಕ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಬಾಳೆ ಹಣ್ಣಿನ ಒಂದೊಂದೇ ಹೋಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು, ನಾಜೂಕಾಗಿ ಸಕ್ಕರೆ-ಕಾಯಿ ತುರಿ ಪಾಕದೊಳಕ್ಕೆ ಮುಳುಗಿಸಿ. ಹಾಗೆಯೇ ತೆಳುವಾದ ಕಡ್ಡಿಯ ಸಹಾಯದಿಂದ ಬಾಳೆ ಹಣ್ಣುನ್ನು ಹೊರ ತೆಗೆದು, ಇನ್ನೊಂದು…


  • ವಿವಿಧ ತಿನಿಸು

    ವಿವಿಧ ತಿನಿಸು

    ಪಾನಕ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಎಲ್ಲರಿಗೂ ಹಂಚಿ. ಪಾಲನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ.…


  • ಸವೆನ್‌ ಕಪ್ಸ್‌

    ಸವೆನ್‌ ಕಪ್ಸ್‌

    ಈ ಸಿಹಿ ತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ. ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರವುದನ್ನು ನೋಡುವಿರಿ. ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ…


  • ಬಗೆಬಗೆ ಚಕ್ಕುಲಿ

    ಬಗೆಬಗೆ ಚಕ್ಕುಲಿ

    ಹೆಸರುಬೇಳೆ ಚಕ್ಕುಲಿ ಹೆಸರುಬೇಳೆಗೆ ನೀರು ಹಾಕಿ ಬೇಯಿಸಿ, ನೀರು ಬಸಿದು ಬೇಳೆಯನ್ನು ನುಣ್ಣಗೆ ನಾದಿಕೊಳ್ಳಿ. ಉಪ್ಪು ಜೀರಿಗೆ, ತೊಳೆದ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಮೈದಾಹಿಟ್ಟಿನ ಚಕ್ಕುಲಿ ಮೈದಾಹಿಟ್ಟನ್ನು ಒಂದು ಬಟ್ಟೆಯಲ್ಲಿ  ಕಟ್ಟಿ ತಟ್ಟೆಯ ಮೇಲೆ ಇಟ್ಟು ಆವಿಯಲ್ಲಿ ಮುಕ್ಕಾಲುಗಂಟೆ ಬೇಯಿಸಿ. ಇದನ್ನು ತೆಗೆದು ಉಂಡೆಯಂತಾಗಿರುವ ಮೈದಾಹಿಟ್ಟನ್ನು ಪುಡಿಮಾಡಿ. ಉಪ್ಪು, ಎಳ್ಳು ಸೇರಿಸಿ. ನೀರು ಹಾಕಿ ಕಲಸಿ ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಹದವಾಗಿ…


  • ಪಾಲಕ್‌ ಬಾತ್‌

    ಪಾಲಕ್‌ ಬಾತ್‌

    ಆಲೂಗಡ್ಡೆ ತೊಳೆದು ಸಣ್ಣಗೆ ಹಚ್ಚಿಟ್ಟುಕೊಳ್ಳಿ, ಪಾಲಕ್‌ ಸೊಪ್ಪನ್ನು ಬಿಡಿಸಿ, ತೊಳೆದು, ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಪಾಲಕ್‌ ಜೊತೆ ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ತೆಂಗಿನ ತುರಿ ಸೇರಿಸಿ ರುಬ್ಬಿಟ್ಟುಕೊಳ್ಳಿ. ಚಕ್ಕೆ ಏಲಕ್ಕಿ ಪುಡಿ ಮಾಡಿಟ್ಟುಕೊಳ್ಳಿ. ಕಡಾಯಿಯಲ್ಲಿ ಜೀರಿಗೆ, ಗೋಡಂಬಿ, ಒಗ್ಗರಣೆ ಹಾಕಿ. ರುಬ್ಬಿದ ಪದಾರ್ಥ ಸೇರಿಸಿ. ಚೆನ್ನಾಗಿ ಕುದಿಸಿ. ಚಕ್ಕೆ, ಏಲಕ್ಕಿ ಪುಡಿ ಸೇರಿಸಿ. ಅಕ್ಕಿ ಬೇಯಲು ಬೇಕಾಗುವಷ್ಟು ಬಿಸಿ ನೀರು ಸೇರಿಸಿ. ಅಕ್ಕಿಯನ್ನು ತೊಳೆದು ಈ ಮಿಶ್ರಣಕ್ಕೆ ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಉದುರಿಸಿ. ಕಡಾಯಿಯನ್ನು ಮುಚ್ಚಿ…


  • ಬಾಳೆ ಹಣ್ಣಿನ ಹಲ್ವ

    ಬಾಳೆ ಹಣ್ಣಿನ ಹಲ್ವ

    ಬಾಳೆ ಹಣ್ಣನ್ನು ಸುಲಿದು, ಅದು ಮೃದು ಹಿಟ್ಟಿನ ರೂಪಕ್ಕೆ ಬರುವಂತೆ ಮಾಡಿ. ಬಾಳೆ ಹಣ್ಣಿನ ಹಿಟ್ಟನ್ನು ಬಿಸಿ ಬಾಣಲೆಗೆ ಹಾಕಿ, ಅದಕ್ಕೆ ಸಕ್ಕರೆ ಬೆರೆಸಿ, 45 ನಿಮಿಷ ಕಾಲ ಮಗುಚಿ. ಮಿಶ್ರಣವು ಅಂಟು ಅಂಟಾಗಿ, ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ತುಪ್ಪ ಬೆರೆಸಿ. ನಿಧಾನವಾಗಿ ಮಗುಚುತ್ತಿರಿ. ನಂತರ ಸಿಟ್ರಿಕ್‌ ಆಸಿಡ್‌ ಹರಳುಗಳನ್ನು ಸೇರಿಸಿ. 30 ನಿಮಿಷ ಮಗುಚಿ. ಕೊನೆಗೆ ಆ ಮಿಶ್ರಣ ಬಾಣಲೆಯಿಂದ ಬೇರ್ಪಡುವ ಹಂತ ತಲುಪುತ್ತದೆ. ಏಲಕ್ಕಿ ಪುಡಿ ಮತ್ತು ಗೋಡಂಬಿ ಬೆರೆಸಿ ಚೆನ್ನಾಗಿ…


  • ಹೆಸರು ಬೇಳೆ ಕಿಚಡಿ

    ಹೆಸರು ಬೇಳೆ ಕಿಚಡಿ

    ಶ್ರೀಲ ಪ್ರಭುಪಾದರ ಗುರಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಅತಿ ಪ್ರಿಯವಾದ ಪ್ರಸಾದ ಕಿಚಡಿ. ಹೆಸರು ಬೇಳೆ ಮತ್ತು ಅಕ್ಕಿಯ ಕಿಚಡಿ ಒಂದು ಪೌಷ್ಠಿಕ ಮತ್ತು ರುಚಿಕರ ಖಾದ್ಯ. ಇದರಲ್ಲಿ ಎರಡು ವಿಧ. ಒಂದು ದ್ರವರೂಪದ (ಗಂಜಿಯಂಥ) ಕಿಚಡಿಯಾದರೆ, ಇನ್ನೊಂದು ಗಟ್ಟಿಯಾದ (ಅನ್ನದಂಥ) ಕಿಚಡಿ. ಎರಡೂ ರೀತಿಯ ಕಿಚಡಿಗಳೂ ತಮ್ಮದೇ ಆದ ಸ್ವಾದದಿಂದ ನಿಮ್ಮ ಮನ ಗೆಲುವುದರಲ್ಲಿ ಸಂಶಯವಿಲ್ಲ. ಕಿಚಡಿಯ ಒಂದು ವಿಶೇಷತೆ ಎಂದರೆ ಇದನ್ನು ನೀವು ಮುಂಜಾನೆ ಉಪಹಾರ, ಸಂಜೆಯ ಲಘು ಉಪಹಾರ, ಊಟಕ್ಕಾಗಿ…


  • ಎಲೆಕೋಸಿನ ಪಕೋಡ

    ಎಲೆಕೋಸಿನ ಪಕೋಡ

    ಪಕೋಡ ಬಹು ಜನಪ್ರಿಯ ಕುರುಕಲು ತಿಂಡಿ ಸಾಮಾನ್ಯವಾಗಿ ಈರುಳ್ಳಿ ಇದರ ಅವಿಭಾಜ್ಯ ಭಾಗ. ಇಸ್ಕಾನ್‌ನ ಪಾಕತಜ್ಞರು, ಪಕೋಡದ ರುಚಿ ಉಳಿಸಿಕೊಂಡು, ಈರುಳ್ಳಿ ಇಲ್ಲದೆ, ತಯಾರಿಸುವ ಹೊಸ ವಿಧಾನ ಪತ್ತೆ ಮಾಡಿದ್ದಾರೆ. ಈರುಳ್ಳಿ ಬದಲಿಗೆ, ಎಲೆಕೋಸನ್ನು ಉಪಯೋಗಿಸುತ್ತಾರೆ. ಇಸ್ಕಾನ್‌ ದೇವಾಲಯದ ಪ್ರಸಾದದ ಅಂಗಣದಲ್ಲಿ ಈರುಳ್ಳಿ ರಹಿತ ಪಕೋಡ ತಿಂದವರು, ಇದರ ರುಚಿಗೆ ಮಾರುಹೋಗಿ ಪದೇ ಪದೇ, ಬಂದು ಕೊಂಡೊಯ್ಯುತ್ತಿದ್ದಾರೆ. ಅದರ ತಯಾರಿಕೆಯನ್ನು ಕೇಳಿ, ಅಪಾರ ಪತ್ರಗಳು ನಮ್ಮಲ್ಲಿಗೆ ಬಂದಿದ್ದವು. ಇದೋ ನಿಮಗಾಗಿ… ಎಲೆಕೋಸಿನ ಪಕೋಡ. ಮೈದಾ ಮತ್ತು ಕಡಲೇ…


  • ಬಿಸಿ ಬಿಸಿ ಖಾರ ಪೊಂಗಲ್‌

    ಬಿಸಿ ಬಿಸಿ ಖಾರ ಪೊಂಗಲ್‌

    ಇಸ್ಕಾನ್‌ ಅತಿಥಿ ಸತ್ಕಾರ, ಕೃಷ್ಣಪ್ರಸಾದದ ಬಗೆಯನ್ನು ಬಲ್ಲವರೇ ಬಲ್ಲರು. ಒಮ್ಮೆ ತಿಂದವರು ಮತ್ತೊಮ್ಮೆ ಮಗದೊಮ್ಮೆ ಬಯಸಿ ಬಯಸಿ, ನಾಲಗೆಯ ತಣಿಸಿಕೊಳ್ಳುವ ದಿವ್ಯ ಮಧುರ ರುಚಿ ಅದರಲ್ಲಿದೆ. ಗೌಡೀಯ ವೈಷ್ಣವ ಪರಂಪರೆಯ ಅಡುಗೆಗಳಲ್ಲದೆ, ಆಧುನಿಕ ಭಕ್ಷ ಭೋಜ್ಯಗಳೂ ಇಲ್ಲಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಇಂತಹ ತಿಂಡಿ ತಿನಿಸುಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿಗಳನ್ನು ಉಪಯೋಗಿಸುವುದಿಲ್ಲ. ಇಸ್ಕಾನ್‌ನ ಪಾಕತಜ್ಞರು, ವಿವಿಧ ರೀತಿಯ ಭೋಜ್ಯಗಳ – ವ್ಯಂಜನಗಳ – ತಿಂಡಿ-ತೀರ್ಥಗಳ ತಯಾರಿ ವಿಧಾನವನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಇಲ್ಲಿ ಬಡಿಸುತ್ತಾರೆ. ಈ ತಿಂಡಿಗಳ ರುಚಿ ಬರುವುದು…