(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಭಾರತದಲ್ಲಿ ನಾವು ನೋಡಿದ್ದೇವೆ. ಅನೇಕ ಗ್ರಾಮಸ್ಥರು ಬಂದು ಯಾವುದಾದರೂ
ಅಂಗಡಿಯವರನ್ನು ಅಥವಾ ಇನ್ಯಾರನ್ನಾದರೂ “ನನಗೆ ಕೆಲಸ ಕೊಡಿ. ನನಗೆ ಸಂಬಳ ಬೇಕಾಗಿಲ್ಲ. ನಿಮಗೆ ಇಷ್ಟವಾದರೆ ಊಟ ನೀಡಿ. ಇಲ್ಲವಾದರೆ ಅದೂ ಬೇಡ” ಎಂದು ಕೇಳುತ್ತಾರೆ. ನೀವು ನನ್ನ ಬಳಿ ಕೆಲಸ ಮಾಡಿದರೆ ನಾನು ಊಟ ನೀಡುವುದಿಲ್ಲ ಎನ್ನುವ ಜನರು ಯಾರಿದ್ದಾರೆ, ಹೇಳಿ? ಆಗ ಅವನಿಗೆ ತತ್‌ಕ್ಷಣ ಏನಾದರೂ ಕೆಲಸ ಸಿಗುತ್ತದೆ. ಅದು ಕೇವಲ ಊಟದ ಆಧಾರದ ಮೇಲೆ. ಅನಂತರ ಅವನಿಗೆ ಇರಲು ಒಂದು ಸೂರು ಲಭಿಸುತ್ತದೆ. ಅನಂತರ ಅವನು ಕೆಲಸ ಮಾಡತೊಡಗಿದಾಗ ಮತ್ತು ಅವನ ದಕ್ಷತೆಯಿಂದ ಮಾಲೀಕನು ಸಂತೃಪ್ತನಾದರೆ “ತೆಗೆದುಕೋ, ಒಂದಷ್ಟು ಸಂಬಳವನ್ನು” ಎಂದೂ ಹೇಳುತ್ತಾನೆ. ಆದುದರಿಂದ ನಿರುದ್ಯೋಗಕ್ಕಿಂತ ಯಾವುದೇ ಸಂಬಳವಿಲ್ಲದೆ ಅಥವಾ ಯಾವುದೇ ಸಂಭಾವನೆ ಇಲ್ಲದೆ ಕೆಲಸ ಮಾಡುವುದು ಉತ್ತಮ ಎಂದು ಹೇಳುತ್ತಾರೆ. ಇದು ಒಳ್ಳೆಯ ನೀತಿ. ಯಾರನ್ನೂ ಕೂಡ ಕೆಲಸವಿಲ್ಲದೆ ಸೋಮಾರಿಗಳಾಗಿ ಉಳಿಯಲು ಬಿಡಬಾರದು. ಅದು ತುಂಬ ಅಪಾಯಕಾರಿ ಸ್ಥಿತಿ. ಯಾಂತ್ರೀಕರಣದಿಂದಾಗಿ ಆಧುನಿಕ ನಾಗರಿಕತೆಯಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಅದರೊಂದಿಗೆ ಸೋಮಾರಿತನವೂ ಹೆಚ್ಚಾಗಿದೆ. ಇದು ಸರಿಯಲ್ಲ. ಇದು ಸ್ವಾತಂತ್ರ್ಯವಲ್ಲ. ಬದಲಿಗೆ ಇದು ನರಕಕ್ಕೆ ಹೋಗುವ ಮುಕ್ತ ಹಾದಿ. ಅಷ್ಟೆ. ಇದು ಮುಕ್ತಿಯಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸದಲ್ಲಿ ತೊಡಗಿಕೊಂಡಿರಬೇಕು.






Leave a Reply