(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಭಾಗವತವನ್ನು ಕೇಳುವ ಮೂಲಕ ವಿವೇಕಿಯಾದ ಬುದ್ಧಿವಂತನು ದೇವೋತ್ತಮ ಪರಮ ಪುರುಷನನ್ನು ನೇರವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು ಎನ್ನುವ ಆಶ್ವಾಸನೆಯನ್ನು ಮಹರ್ಷಿ ಶ್ರೀ ವ್ಯಾಸದೇವರು ನೀಡುತ್ತಾರೆ. ಈ ಸಂದೇಶವನ್ನು ಸ್ವೀಕರಿಸುವುದರಿಂದಲೇ ಅವನು ವೇದಗಳಲ್ಲಿ ನಿರೂಪಿಸಿರುವ ಸಾಕ್ಷಾತ್ಕಾರದ ವಿವಿಧ ಹಂತಗಳನ್ನು ಅನುಭವಿಸದೆಯೇ ಪರಮಹಂಸ ಸ್ಥಾನಕ್ಕೆ ಏರಬಹುದು.
* * *
ಲೌಕಿಕ ಕಲ್ಪನೆಯಲ್ಲಿ, ವ್ಯಕ್ತಿಯು ನೋಡಿದ್ದೆಲ್ಲದರ ಮಾಲೀಕ ತಾನೇ ಎಂದು ತಪ್ಪಾಗಿ ಭಾವಿಸುತ್ತಾನೆ. ಆದುದರಿಂದ ಅವನು ಬದುಕಿನ ತಾಪತ್ರಯಗಳ ಕಷ್ಟಕ್ಕೆ ಒಳಗಾಗುತ್ತಾನೆ. ಆದರೆ ಅಲೌಕಿಕ ಸೇವಕನೆಂಬ ತನ್ನ ನಿಜವಾದ ಸ್ಥಾನವನ್ನು ಅರಿತ ಕೂಡಲೇ ವ್ಯಕ್ತಿಯು ಎಲ್ಲ ಸಂಕಟಗಳಿಂದ ಮುಕ್ತನಾಗುತ್ತಾನೆ. ಜೀವಿಯು ಲೌಕಿಕ ಪ್ರಕೃತಿಯ ಮಾಲೀಕನಾಗಲು ಪ್ರಯತ್ನಿಸುತ್ತಿರುವವರೆಗೂ ಅವನು ದೇವೋತ್ತಮನ ಸೇವಕನಾಗುವ ಸಾಧ್ಯತೆಗಳಿಲ್ಲ.
* * *
ದೇವೋತ್ತಮ ಪರಮ ಪುರುಷನನ್ನು ಶ್ರುತಿ ಮಂತ್ರ, ವೇದ ಸ್ತೋತ್ರಗಳಲ್ಲಿ “ಎಲ್ಲ ರಸಗಳ ಆದಿ ಮೂಲ” ಎಂದು ವರ್ಣಿಸಲಾಗಿದೆ. ಜೀವಿಯು ದೇವೋತ್ತಮನ ಸಹವಾಸ ಹೊಂದಿ ತನ್ನ ಸ್ವರೂಪ ರಸದ ವಿನಿಮಯ ಮಾಡಿಕೊಂಡರೆ, ಅವನು ನಿಜವಾಗಿಯೂ ಸುಖಿಯಾಗುತ್ತಾನೆ.
* * *
ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವುದೇ ನಾಗರಿಕತೆಯ ಅರ್ಥ ಎಂದು ಈಗ ಜನರು ಭಾವಿಸುತ್ತಿದ್ದಾರೆ. ಆದರೆ ಅದು ಪ್ರಗತಿಯಲ್ಲ ಎಂದು ವೈದಿಕ ನಾಗರಿಕತೆಯು ಹೇಳುತ್ತದೆ. ಮಾನವ ಜೀವಿಯ ನಿಜವಾದ ಪ್ರಗತಿ ಎಂದರೆ ಆತ್ಮ ಸಾಕ್ಷಾತ್ಕಾರ. ಅಂದರೆ ನೀವು ನಿಮ್ಮ ಆತ್ಮವನ್ನು ಎಷ್ಟರಮಟ್ಟಿಗೆ ಸಾಕ್ಷಾತ್ಕರಿಸಿಕೊಂಡಿರುವಿರಿ ಎಂದು ಅರ್ಥ.
ನೀವು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವುದು ಅಲ್ಲ.
* * *
ವೈದಿಕ ನಾಗರಿಕತೆಯಲ್ಲಿ ಜನರು ಸ್ವಲ್ಪವೂ ಸೋಮಾರಿಗಳಲ್ಲ. ಅವರು ಉನ್ನತ ವಿಷಯಗಳಿಗಾಗಿ ಕಾರ್ಯ ನಿರತರು. ಈ ವ್ಯವಹಾರವು ಎಷ್ಟು ಮುಖ್ಯವೆಂದರೆ ಇದು ಬಾಲ್ಯದಲ್ಲಿಯೇ ಆರಂಭಗೊಳ್ಳಬೇಕು ಎಂದು ಪ್ರಹ್ಲಾದ ಮಹಾರಾಜನು ಹೇಳಿದ್ದಾನೆ. ಒಂದು ಕ್ಷಣವನ್ನೂ ವ್ಯರ್ಥಗೊಳಿಸಬಾರದು. ಅದು ವೈದಿಕ ನಾಗರಿಕತೆ. “ಜನರು ನನ್ನ ಹಾಗೆೆ ಕೆಲಸ ಮಾಡುತ್ತಿಲ್ಲ” ಎಂದು ಕತ್ತೆಗಳು ಯೋಚಿಸುತ್ತವೆ. ನಾವು ತಪ್ಪಿಸಿಕೊಳ್ಳುತ್ತಿದ್ದೇವೆ ಎಂದು ಕತ್ತೆ ಮತ್ತು ನಾಯಿಗಳು ಭಾವಿಸುತ್ತವೆ. ಹೌದು, ನಿಮ್ಮ ನಿಷ್ಪ್ರಯೋಜಕ ಶ್ರಮದಿಂದ ತಪ್ಪಿಸಿಕೊಳ್ಳುವುದು. ವೈದಿಕ ನಾಗರಿಕತೆಯ ಉದ್ದೇಶ ಆತ್ಮ ಸಾಕ್ಷಾತ್ಕಾರ.
* * *






Leave a Reply