ಮಕ್ಕಳ ಕಥೆ


  • ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು…


  • ಶ್ಯಮಂತಕ ಮಣಿಯ ಕಥೆ

    ಶ್ಯಮಂತಕ ಮಣಿಯ ಕಥೆ

    ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು…


  • ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ. ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ‍ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ. ಆಮೇಲೆ ಆ ಮುರನ ಏಳು…


  • ಮುಚುಕುಂದ ಮುಕ್ತಿ

    ಮುಚುಕುಂದ ಮುಕ್ತಿ

    ತನ್ನ ಕುಟುಂಬದವರೆಲ್ಲರನ್ನೂ ದ್ವಾರಕೆಯಲ್ಲಿ ಕ್ಷೇಮವಾಗಿ ಇರಿಸಿ, ಶ್ರೀಕೃಷ್ಣ ಮಥುರಾ ಪಟ್ಟಣಕ್ಕೆ ಹೊರಟ. ಅವನು ಒಬ್ಬ ಉದಿಸುವ ಚಂದ್ರನ ಹಾಗೆ ಕಾಣಿಸುತ್ತಿದ್ದ. ಆಗ ಕಾಲಯವನ ಎನ್ನುವ ರಾಕ್ಷಸ, ಶ್ರೀಕೃಷ್ಣನನ್ನು ನೋಡಿದ. ನಾರದಮುನಿಗಳು ವರ್ಣಿಸಿರುವ ದೇವೋತ್ತಮ ಪರಮ ಪುರುಷನ ಎಲ್ಲ ಲಕ್ಷಣಗಳನ್ನೂ ಪ್ರಜ್ವಲಿಸುವ ಶರೀರವ ಈ ಕೃಷ್ಣನಲ್ಲಿ ಕಂಡ. ಆ ರಾಕ್ಷಸನಿಗೆ ಇವನೇ ದೇವೋತ್ತಮ ಪರಮ ಪುರುಷ ಎನ್ನುವುದು ಅರ್ಥವಾಯಿತು. ಕೃಷ್ಣನ ಹತ್ತಿರ ಈಗ ಯಾವ ಆಯುಧಗಳೂ ಇಲ್ಲದಿರುವುದನ್ನು ನೋಡಿ, ಕಾಲಯವನ ತನ್ನ ಆಯುಧಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅವನೊಂದಿಗೆ ಯುದ್ಧ…


  • ಧೃತರಾಷ್ಟ್ರನ ಗೃಹತ್ಯಾಗ

    ಧೃತರಾಷ್ಟ್ರನ ಗೃಹತ್ಯಾಗ

    ಪಾಂಡವರ ಸೋದರ ಮಾವನಾದ ಮಹಾತ್ಮ ವಿದುರನು ಕುರುಕ್ಷೇತ್ರದಲ್ಲಿ ನಡೆದ ಘೋರ ಯುದ್ಧದಲ್ಲಿ ಪಾಲುಗೊಂಡಿರಲಿಲ್ಲ. ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ವಿದುರನು ತೀರ್ಥಯಾತ್ರೆ ಕೈಗೊಂಡಿದ್ದ. ಆತ್ಮದ ಗಮ್ಯಸ್ಥಾನ ಯಾವುದೆಂಬುದನ್ನು ಮೈತ್ರೇಯ ಋಷಿಗಳಿಂದ ವಿದುರನು ಜ್ಞಾನ ಸಂಪಾದಿಸಿದ್ದು ಈ ಯಾತ್ರೆಯ ಕಾಲದಲ್ಲೇ. ಯಾತ್ರೆ ಮುಗಿಸಿಕೊಂಡು ವಿದುರನು ಹಸ್ತಿನಾಪುರಕ್ಕೆ ಹಿಂತಿರುಗಿದ. ವಿದುರನು ಅರಮನೆಗೆ ಹಿಂತಿರುಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಹರ್ಷದಿಂದ ಅವನನ್ನು ಸುತ್ತುವರಿದರು. ವಿದುರನು ತಮ್ಮೊಡನೆ ಇರಲಿಲ್ಲವಾದ್ದರಿಂದಲೂ, ಬಹುಕಾಲ ಅವನನ್ನು ಬಿಟ್ಟಿದ್ದುದರಿಂದಲೂ ಅರಮನೆಯ ನಿವಾಸಿಗಳು ಪ್ರೀತಿ ಉಕ್ಕಿ ಬಂದು ರೋದಿಸಿದರು. ತರುವಾಯ ರಾಜಾ…


  • ಪರೀಕ್ಷಿತ ರಾಜನ ಜನನ

    ಪರೀಕ್ಷಿತ ರಾಜನ ಜನನ

    ಕೋಟಿಗಟ್ಟಲೆ ಯೋಧರು ಹತರಾದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಹದಿನೆಂಟು ದಿನಗಳಲ್ಲಿ ವಿಜಯ ಸಾಧಿಸಿದರು. ಪ್ರಭುಗಳ ಪ್ರಭುವಾದ ಶ್ರೀಕೃಷ್ಣನು ಪಾಂಡವರ ಕಡೆ ಇದ್ದುದರಿಂದ ಇದು ಸಾಧ್ಯವಾಯಿತು. ಧರ್ಮ ಪ್ರಭುತ್ವವನ್ನು ಪುನರ್ ಸ್ಥಾಪಿಸುವ ಪ್ರಭುವಿನ ಧ್ಯೇಯವು ಕಾರ್ಯಗತವಾಯಿತು. ಹಾಗಾಗಿ ಪ್ರಭುವು ತನ್ನ ಮುಂದಿನ ಪ್ರಯಾಣಕ್ಕೆ ಸಿದ್ಧನಾಗತೊಡಗಿದ. ಪ್ರಭುವು ದ್ವಾರಕೆಗೆ ಹೊರಡಲು ರಥದಲ್ಲಿ ಕುಳಿತೊಡನೆಯೇ ಉತ್ತರೆಯು ಭಯದಿಂದ ತನ್ನೆಡೆಗೆ ಧಾವಿಸಿ ಬರುತ್ತಿದ್ದುದನ್ನು ಕಂಡನು. ಉತ್ತರೆಯು ನುಡಿದಳು: “ಹೇ ಪ್ರಭುಗಳ ಪ್ರಭುವೆ, ನನ್ನನ್ನು ಕಾಪಾಡು, ಬೆಂಕಿಯನ್ನು ಉಗುಳುತ್ತಿರುವ ಬಾಣವೊಂದು ನನ್ನೆಡೆಗೆ ವೇಗದಿಂದ ಧಾವಿಸಿ…


  • ಮಾಂತ್ರಿಕ ಸ್ಪರ್ಶಮಣಿ

    ಮಾಂತ್ರಿಕ ಸ್ಪರ್ಶಮಣಿ

    ಒಂದಾನೊಂದು ಕಾಲದಲ್ಲಿ ಗೋಪಿ ಎಂಬ ಭಕ್ತ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದುದರಿಂದ ಅವರ ಮನೆಯಲ್ಲಿ ಉಣ್ಣಲು ಸಾಕಷ್ಟು ತಿನಿಸು ಇರುತ್ತಿರಲಿಲ್ಲ. ಇದರಿಂದ ಅವನ ಹೆಂಡತಿಗೆ ಕೋಪ ಬರುತ್ತಿತ್ತು. ಅದು ಸಹಜವಲ್ಲವೇ? ಅವಳ ಅಕ್ಕಪಕ್ಕದ ಮನೆಯವರು ಚೆನ್ನಾಗಿ ತಿಂದುಂಡು ಖುಷಿಯಾಗಿರುತ್ತಿದ್ದರು. ಆದುದರಿಂದ ಅವಳಿಗೆ ಗೋಪಿಯ ಮೇಲೆ ಸಿಟ್ಟಾಗುತ್ತಿತ್ತು. ಒಂದು ದಿನ ಅವಳ ಸಿಟ್ಟು ನತ್ತಿಗೆ ಏರಿತ್ತು. ಅವಳು ತನ್ನ ಗಂಡನಿಗೆ ಮನೆ ಬಿಟ್ಟು ಹೋಗಲು ತಿಳಿಸಿದಳು. ಹಣ ಸಿಕ್ಕರೆ ಮಾತ್ರ ಮನಗೆ ಬಾ ಎಂದು…


  • ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ

    ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ

    ಶ್ರೀ ಕೃಷ್ಣನನ್ನು, ಅವನಮ್ಮ ಯಶೋದಾ, ತುಂಬಾ ತುಂಟತನ ಮಾಡುತ್ತಾನೆಂದು ಮರದ ಒರಳಿಗೆ ಕಟ್ಟಿಹಾಕಿದ್ದಳು. ಆ ಸಮಯದಲ್ಲಿ ಅವನಿಗೆ, ಅರ್ಜುನ ಎಂದು ಕರೆಸಿಕೊಳ್ಳುವ ಎರಡು ದೊಡ್ಡ ಮರಗಳು ಎದುರಿನಲ್ಲಿ ಕಾಣಿಸಿದವು. ತಮ್ಮ ಹಿಂದಿನ ಜನ್ಮದಲ್ಲಿ ಈ ಎರಡು ಮರಗಳೂ ಮನುಷ್ಯರಾಗಿ, ಕುಬೇರನ ಮಕ್ಕಳಾಗಿ ಹುಟ್ಟಿದ್ದವು. ಅವುಗಳಿಗೆ ನಳಕೂವರ ಮತ್ತು ಮಣಿಗ್ರೀವ ಎಂದು ಹೆಸರಿತ್ತು. ಮುಂದೆ ಶ್ರೀಕೃಷ್ಣನ ದರ್ಶನಭಾಗ್ಯ ಪಡೆಯುವಂತಹ ಅತಿದೊಡ್ಡ ಅನುಗ್ರಹವನ್ನು ಪಡೆಯುವುದಕ್ಕಾಗಿ, ಆ ಜನ್ಮದಲ್ಲಿ ಇವರಿಬ್ಬರಿಗೆ ನಾರದ ಮುನಿ ಒಂದು ಶಾಪವನ್ನು ಕೊಟ್ಟಿದ್ದರು. ಇವರಿಬ್ಬರೂ ತಮ್ಮ ತಂದೆ…


  • ಅಜಾಮಿಳನ ಜೀವನ ವೃತ್ತಾಂತ

    ಅಜಾಮಿಳನ ಜೀವನ ವೃತ್ತಾಂತ

    ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು. ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ…


  • ಆಂತರಿಕ ಬೆಳವಣಿಗೆ ಅಗತ್ಯ

    ಆಂತರಿಕ ಬೆಳವಣಿಗೆ ಅಗತ್ಯ

    ಸಂಸ್ಕೃತ ಮೂಲ – ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ. ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು. “ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ.…