ಪಾಲಕ್‌ ಬಾತ್‌

  • 2 ದೊಡ್ಡ ಆಲೂಗಡ್ಡೆ
  • 2 ಕಟ್ಟು ಪಾಲಕ್‌ ಸೊಪ್ಪು
  • ಒಂದು ಹಿಡಿ ಕೊತ್ತಂಬರಿ ಸೊಪ್ಪು
  • 5-6 ಹಸಿ ಮೆಣಸಿನಕಾಯಿ
  • ಹಸಿ ಶುಂಠಿ ಸಣ್ಣ ತುಂಡು
  • ಒಂದು ಸಣ್ಣ ತುಂಡು ದಾಲ್ಚಿನಿ ಚಕ್ಕೆ
  • 2 ಏಲಕ್ಕಿ
  • 3-4 ಚಮಚ ತೆಂಗಿನತುರಿ
  • ನಿಂಬೆ ಹಣ್ಣು
  • ರುಚಿಗೆ ತಕ್ಕಷ್ಟು ಉಪ್ಪು
  • ಒಗ್ಗರಣೆಗಾಗಿ ಎಣ್ಣೆ/ತುಪ್ಪ
  • ಒಂದು ಲೋಟ ಅಕ್ಕಿ
  • ಒಗ್ಗರಣೆಗಾಗಿ ಜೀರಿಗೆ
  • ಗೋಡಂಬಿ

ಆಲೂಗಡ್ಡೆ ತೊಳೆದು ಸಣ್ಣಗೆ ಹಚ್ಚಿಟ್ಟುಕೊಳ್ಳಿ, ಪಾಲಕ್‌ ಸೊಪ್ಪನ್ನು ಬಿಡಿಸಿ, ತೊಳೆದು, ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಪಾಲಕ್‌ ಜೊತೆ ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ತೆಂಗಿನ ತುರಿ ಸೇರಿಸಿ ರುಬ್ಬಿಟ್ಟುಕೊಳ್ಳಿ. ಚಕ್ಕೆ ಏಲಕ್ಕಿ ಪುಡಿ ಮಾಡಿಟ್ಟುಕೊಳ್ಳಿ. ಕಡಾಯಿಯಲ್ಲಿ ಜೀರಿಗೆ, ಗೋಡಂಬಿ, ಒಗ್ಗರಣೆ ಹಾಕಿ. ರುಬ್ಬಿದ ಪದಾರ್ಥ ಸೇರಿಸಿ. ಚೆನ್ನಾಗಿ ಕುದಿಸಿ. ಚಕ್ಕೆ, ಏಲಕ್ಕಿ ಪುಡಿ ಸೇರಿಸಿ. ಅಕ್ಕಿ ಬೇಯಲು ಬೇಕಾಗುವಷ್ಟು ಬಿಸಿ ನೀರು ಸೇರಿಸಿ. ಅಕ್ಕಿಯನ್ನು ತೊಳೆದು ಈ ಮಿಶ್ರಣಕ್ಕೆ ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಉದುರಿಸಿ. ಕಡಾಯಿಯನ್ನು ಮುಚ್ಚಿ ಬೇಯಿಸಿರಿ. ಬೆಂದ ಮೇಲೆ ನಿಂಬೆ ಹಣ್ಣು ಹಿಂಡಿ, ನಂತರ ಬಡಿಸಿರಿ.


  • 6 ಪಚ್ಚಬಾಳೆಹಣ್ಣು
  • ಒಂದು ದೊಡ್ಡ ಗಾತ್ರದ ತೆಂಗಿನ ಹೋಳಿನ ತುರಿ
  • ಒಂದೂವರೆ ಅಳತೆ ಗೋಧಿ ಹಿಟ್ಟು
  • 1 ಅಚ್ಚು ಬೆಲ್ಲ
  • ರುಚಿಗೆ ತಕ್ಕಷ್ಟು ಉಪ್ಪು
  • ಕರಿಯಲು ಎಣ್ಣೆ/ತುಪ್ಪ

ಬಾಳೆ ಹಣ್ಣನ್ನು ಸಿಪ್ಪೆ ತೆಗೆದು, ಸಣ್ಣಗೆ ಕಿವಿಚಿರಿ. ತೆಂಗಿನ ತುರಿ, ಬೆಲ್ಲ, ಉಪ್ಪು, ಗೋಧಿ ಹಿಟ್ಟು ಸೇರಿಸಿ ಕಲಸಿರಿ. ಬಾಣಲೆಯಲ್ಲಿ ಎಣ್ಣೆ/ತುಪ್ಪ ಹಾಕಿ, ಕಾದ ನಂತರ, ಸಣ್ಣ ಅಪ್ಪದ ಉಂಡೆಗಳನ್ನು ತೇಲಿ ಬಿಡಿರಿ. ಕೆಂಪಾಗುವವರೆಗೆ ಎಣ್ಣೆಯಲ್ಲಿ ಬೇಯಿಸಿ. ನಂತರ ತಿನ್ನಲು ಕೊಡಿ.


  • ಸಣ್ಣಗೆ ಹಚ್ಚಿದ ಹಸಿ ಶುಂಠಿ – 25 ಗ್ರಾಂ
  • 1-2 ಹಸಿ ಮೆಣಸಿನಕಾಯಿ
  • ಒಂದು ತೆಂಗಿನಕಾಯಿ ತುರಿ
  • ಅರ್ಧ ಲೀಟರ್‌ ಮೊಸರು
  • ರುಚಿಗೆ ತಕ್ಕಷ್ಟು ಉಪ್ಪು
  • ಒಗ್ಗರಣೆಗೆ ತುಪ್ಪ, ಸಾಸಿವೆ,
  • ಒಣ ಮೆಣಸಿನ ಕಾಯಿ
  • ಮೆಣಸು ಜೀರಿಗೆ

ಶುಂಠಿ ಚೂರು, ಹಸಿ ಮೆಣಸಿನಕಾಯಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಇದಕ್ಕೆ ತಂಗಿನ ತುರಿ ಸೇರಿಸಿ, ನುಣ್ಣಗೆ ರುಬ್ಬರಿ. ಈ ಮಿಶ್ರಣವನ್ನು ಮೊಸರಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಜೀರಿಗೆ ಒಗ್ಗರಣೆ ಕೊಡಿ. ನಂತರ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi