ಹಲವು ಬಗೆಯ ದೋಸೆಗಳು

ಶ್ರೀ ಕೃಷ್ಣ ಪಾಕಶಾಲೆ

– ಶ್ರೀಮತಿ ಸುಭದ್ರ ಪ್ರಕಾಶ್‌

ಅವಲಕ್ಕಿ ದೋಸೆ

ಬೇಕಾಗುವ ಪದಾರ್ಥಗಳು:

ಅಕ್ಕಿ – 2 ಬಟ್ಟಲು

ಅವಲಕ್ಕಿ – ½ ಬಟ್ಟಲು

ಮಜ್ಜಿಗೆ – 1 ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಅಡಿಗೆ ಸೋಡಾ – 1 ಚಿಟಿಕೆ

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು 6 ಗಂಟೆಗಳ ಕಾಲ ನೆನೆಸಿ. ಅವಲಕ್ಕಿಯನ್ನು ತೊಳೆದು ಮಜ್ಜಿಗೆಯಲ್ಲಿ ನೆನೆಸಿ. ಎರಡನ್ನೂ ಸೇರಿಸಿ ರುಬ್ಬಿಕೊಳ್ಳಿ. ಹಿಟ್ಟು ದೋಸೆ ಹಿಟ್ಟಿಗಿಂತ ತುಸು ಗಟ್ಟಿಯಾಗಿರಲಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸೋಡಾ ಬೆರೆಸಿ ಕಲಸಿ. ಬೆಳಗ್ಗೆ ಕಾವಲಿಗೆ ಎಣ್ಣೆ ಸವರಿ ದೋಸೆ ಮಾಡಿ. ಶ್ರೀ ಕೃಷ್ಣಪರಮಾತ್ಮನಿಗೆ ಅರ್ಪಿಸಿ ಸೇವಿಸಿ.

ಹೆಸರು ಬೇಳೆ ದೋಸೆ

ಬೇಕಾಗುವ ಪದಾರ್ಥಗಳು:

ಅಕ್ಕಿ – 2 ಬಟ್ಟಲು

ಹೆಸರಬೇಳೆ – ½ ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಅಡಿಗೆ ಸೋಡಾ – ಚಿಟಿಕೆ

ಮಾಡುವ ವಿಧಾನ: ಅಕ್ಕಿ ಮತ್ತು ಹೆಸರು ಬೇಳೆಯನ್ನು 6 ಗಂಟೆಗಳ ಕಾಲ ನೆನೆಸಿ. ಎರಡನ್ನೂ ಸೇರಿಸಿ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡಾ ಬೆರೆಸಿ ದೋಸೆ ಮಾಡಿ. ಹಿಟ್ಟನ್ನು ರುಬ್ಬಿದ ಕೂಡಲೇ ದೋಸೆ ಮಾಡಬಹುದು.

ಹೆಸರು ಕಾಳಿನ ದೋಸೆ

ಬೇಕಾಗುವ ಪದಾರ್ಥಗಳು

ಅಕ್ಕಿ – 2 ಬಟ್ಟಲು

ಹೆಸರುಕಾಳು – ½ ಬಟ್ಟಲು

ಉಪ್ಪು – ರುಚಿಗೆ

ಅಡಿಗೆ ಸೋಡಾ – ಚಿಟಿಕೆ

ಮಾಡುವ ವಿಧಾನ: ಅಕ್ಕಿ ಮತ್ತು ಹೆಸರುಕಾಳನ್ನು 6 ಗಂಟೆಗಳ ಕಾಲ ನೆನೆಸಿ. ಎರಡನ್ನೂ ಸೇರಿಸಿ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡಾ ಬೆರೆಸಿ ಕಲಸಿ. ಕಾವಲಿಗೆ ಎಣ್ಣೆ ಸವರಿ ದೋಸೆ ಮಾಡಿ. ಹಿಟ್ಟನ್ನು ರುಬ್ಬಿದ ಕೂಡಲೆ ದೋಸೆ ಮಾಡಬಹುದು.

ಕಾಯಿ ದೋಸೆ

ಬೇಕಾಗುವ ಪದಾರ್ಥಗಳು

ಅಕ್ಕಿ – 2 ಬಟ್ಟಲು

ತೆಂಗಿನ ತುರಿ – 1 ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಅಡಿಗೆ ಸೋಡಾ – ಚಿಟಿಕೆ

ಮಾಡುವ ವಿಧಾನ: ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಸಿ. ತೆಂಗಿನ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಉಪ್ಪು ಸೋಡಾ ಸೇರಿಸಿ ಕಲಸಿ. ಕಾವಲಿಗೆ ಎಣ್ಣೆ ಹಾಕಿ ದೋಸೆ ಮಾಡಿ.

ಬೇಳೆಗಳ ದೋಸೆ

ಬೇಕಾಗುವ ಪದಾರ್ಥಗಳು

ಕಡಲೆಬೇಳೆ – 1 ಬಟ್ಟಲು

ಹೆಸರುಬೇಳೆ – 1 ಬಟ್ಟಲು

ತೊಗರಿಬೇಳೆ – ½ ಬಟ್ಟಲು

ಅಕ್ಕಿ – ½ ಬಟ್ಟಲು

ತೆಂಗಿನ ತುರಿ – 1 ಬಟ್ಟಲು

ಕೆಂಪು ಮೆಣಸಿನ ಕಾಯಿ – 12-15

ಮೆಂತ್ಯ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಅಡಿಗೆ ಸೋಡಾ – ಚಿಟಿಕೆ

ಮಾಡುವ ವಿಧಾನ: ಎಲ್ಲ ಬೇಳೆಗಳು ಮತ್ತು ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಸಿ. ತೆಂಗಿನ ತುರಿ ಮತ್ತು ಕೆಂಪು ಮೆಣಸಿನಕಾಯಿ ಸೇರಿಸಿ ರುಬ್ಬಿಕೊಳ್ಳಿ. ಉಪ್ಪು ಮತ್ತು ಸೋಡಾ ಸೇರಿಸಿ ಕಲಸಿ. ಹಿಟ್ಟು ತುಸು ಗಟ್ಟಿಯಾಗಿರಲಿ, ಕಾವಲಿಗೆ ಎಣ್ಣೆ ಸವರಿ ದೋಸೆ ಮಾಡಿ. ಎಲ್ಲ ತರಹದ ದೋಸೆಗಳನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ನೈವೇದ್ಯ ಮಾಡಿ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi