ಪರಮ ಸತ್ಯ, ಪರಮಾನಂದ ಎಲ್ಲವೂ ಅವನೇ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಅವರ ಉಪನ್ಯಾಸ, ಸ್ಥಳ: ವೃಂದಾವನ, ದಿನಾಂಕ: ನವೆಂಬರ್‌ 22, 1928

ಈ ಪರಮ ಪವಿತ್ರ ಸ್ಥಳದಲ್ಲಿ ನಿಂತುಕೊಳ್ಳುವ ಅರ್ಹತೆ ಖಂಡಿತಾ ನನಗಿಲ್ಲ. ಆದರೂ ಶ್ರೀ ಗೌರಸುಂದರರ ಆಶಿರ್ವಾದ, ನಿಮ್ಮೆಲ್ಲರ ಶುಭ ಹಾರೈಕೆಗಳ ಫಲವಾಗಿ ನಾನಿಲ್ಲಿ ನಿಂತು ಮಾತನಾಡುತ್ತಿದ್ದೇನೆ. ತನ್ಮೂಲಕ ಶ್ರೀ ಗೌರಾಂಗರಿಗೆ, ಅವರ ಶುದ್ಧ ಭಕ್ತಿರಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಶ್ರೀ ಗೌರಾಂಗರ ಶುದ್ಧಭಕ್ತರ ದೃಷ್ಟಿ ಮಾತ್ರದಿಂದ ನಮ್ಮ ಬದುಕಿನ ಎಲ್ಲಾ ಆಸೆ, ಆಕಾಂಕ್ಷೆ, ಗುರಿ, ಭರವಸೆ, ಧ್ಯೇಯೋದ್ದೇಶಗಳು ಈಡೇರುತ್ತವೆ. ಅಂಥ ಶುದ್ಧ ಭಕ್ತರಿಗೆ ಸೇವೆ ಸಲ್ಲಿಸುವುದೇ ನಮ್ಮ ಜೀವನದ ಅತಿದೊಡ್ಡ ಸಾಧನೆ.

ನಮ್ಮ ಅಹಂಭಾವದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಸದಾ ಪಾಪ-ಪುಣ್ಯಗಳ ಕುರಿತು ಚಿಂತಿಸುವುದು ಅಥವಾ ಶಕ್ತಿ ಸಂಪಾದಿಸಿ ಇತರರ ಮೇಲೆ ಪಾರಮ್ಯ ಸ್ಥಾಪಿಸುವುದು ಹೇಗೆ ಎಂಬ ಕುರಿತು ಜಿಜ್ಞಾಸೆ ನಡೆಸುತ್ತಿರುತ್ತೇವೆ. ಇವೆಲ್ಲಾ ಆತ್ಮ ವೈಭವೀಕರಣಗಳು. ಒಂದು ಚಿಕ್ಕ ಜೀವಿಯಿಂದ ಹಿಡಿದು ಬ್ರಹ್ಮನವರೆಗೆ ಪ್ರತಿಯೊಂದು ಜೀವಿಯಲ್ಲಿ ಉದಯಿಸುವ ಆಸೆ, ಐಹಿಕ ಸುಖಭೋಗಕ್ಕಾಗಿ ತುಡಿತ, ತೃಪ್ತಿಗಾಗಿ ಹುಡುಕಾಟ, ಇವೆಲ್ಲವೂ ವ್ಯರ್ಥ ಪ್ರಯತ್ನಗಳು.

ಇವೆಲ್ಲಾ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತವೆ ಎಂಬುದಾಗಿ ಗೌರಾಂಗರಿಗೇ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿರುವ ಭಕ್ತನು ಹೇಳುತ್ತಾನೆ. ಹೀಗೆ ನಾವು ಗಳಿಸಿದ ಯಾವುದನ್ನಾದರೂ ಕಳೆದುಕೊಂಡರೆ ಇಡೀ ಜೀವನವೇ ಶೂನ್ಯ, ನಿಷ್ಪ್ರಯೋಜಕ ಎನಿಸುತ್ತದೆ. ಆದರೆ ನಾಯಿಯ ಬಾಲವನ್ನು ಬಲಗೊಳಿಸುವ ಪ್ರಯತ್ನ ಯಾವಾಗಲೂ ವ್ಯರ್ಥವೇ ಸರಿ! ಏಕೆಂದರೆ ಅಂಥ ಪ್ರಯತ್ನಗಳಿಂದ ದೊರಕುವ ಸಂತೋಷ ಯಾವಾಗಲೂ ಕ್ಷಣಿಕ.

ಕಣ್ಣು, ಮೂಗು, ಕಿವಿ, ಚರ್ಮ, ನಾಲಿಗೆಗಳಿಂದ ಪ್ರೇರಿತವಾದ ಇಂದ್ರಿಯ ತೃಪ್ತಿಗೆ ಮನಸೋತು ನಾವು ಅಹಂ ಪೂಜೆಯಲ್ಲಿ ತೊಡಗಿಕೊಳ್ಳುತ್ತೇವೆ. ಇಂಥ ಸನ್ನಿವೇಶದಲ್ಲಿ ನಮ್ಮ ಆತ್ಮದ ನಿಜವಾದ ಕರ್ತವ್ಯ ತಟಸ್ಥವಾಗಿಬಿಡುತ್ತದೆ. ಇನ್ನು ನಾವು ಸ್ವರ್ಗ ಸುಖದ ಕನಸು ಕಾಣುತ್ತೇವೆ.

ಇಂಥ ಕಲ್ಪನೆಗಳು ನಮ್ಮಲ್ಲಿ ಬಲಗೊಳ್ಳತೊಡಗಿದಾಗ ನಾವು ನಮ್ಮ ಮನಸ್ಸು ಹೇಳಿದಂತೆ ಕೇಳತೊಡಗುತ್ತೇವೆ. ಅದರೊಂದಿಗೇ ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ಈ ಮನಸ್ಸೇ ನಮಗೆ ಈ ಜಗತ್ತಿನಲ್ಲಿ ನಿಜವಾದ ಆನಂದ ನೀಡುತ್ತದೆ ಎಂಬ ತಪ್ಪು ಕಲ್ಪನೆ ಬೆಳೆಸಿಕೊಳ್ಳುತ್ತೇವೆ. ಐಹಿಕ ತೃಪ್ತಿಯೆಡೆಗಿನ ಇಂಥ ಸ್ವಾರ್ಥಪರ ತುಡಿತ ನಮ್ಮ ಆತ್ಮದ ನಿಜವಾದ ಉದ್ದೇಶವನ್ನು ಸಾಯಿಸಿಬಿಡುತ್ತದೆ.

ಆದರೆ ಶ್ರೀ ಕೃಷ್ಣನೇ ಪರಮ ನಿತ್ಯ ಸತ್ಯ ಎಂಬುದು ಆತ್ಮಕ್ಕೆ ಗೊತ್ತಿರುತ್ತದೆ. ಶ್ರೀ ನಾರಾಯಣನು ಶ್ರೀ ಕೃಷ್ಣನ ಸಾಕ್ಷಾತ್ ಸ್ವರೂಪ. ಶ್ರೀ ಮನ್ನಾರಾಯಣನು ಪರಮ ಸತ್ಯದ ಅತ್ಯುತ್ಕೃಷ್ಟ ರೂಪ ಎಂಬುದೇನೋ ನಿಜ. ಆದರೆ ಕೃಷ್ಣನ ಪಾರಮಾರ್ಥಿಕ ಸ್ಥಾನಮಾನ, ಸ್ವರೂಪ, ಸೌಂದರ್ಯ, ಲಕ್ಷಣ, ಗುಣ, ಲೀಲೆಗಳು ನಾರಾಯಣನನ್ನೂ ಮೀರಿಸುತ್ತವೆ. ಶ್ರೀ ಕೃಷ್ಣ ಘನ ಗಾಂಭೀರ್ಯದ ಪರಿಪೂರ್ಣ ರೂಪ. ಆದರೆ ಆ ಗಾಂಭೀರ್ಯವನ್ನೂ ಮೀರಿಸುವ ಮಾಧುರ್ಯ ಆತನಲ್ಲಿ ತುಂಬಿ ತುಳುಕುತ್ತಿದೆ.

ನಾವು ಇದನ್ನೆಲ್ಲಾ ಅರಿಯದೇ, ನಮ್ಮ ತನವನ್ನೇ ಮರೆತಿದ್ದೇವೆ. ಇದರ ಪರಿಣಾಮವಾಗಿ ವೈಷ್ಣವನ ಕಾರ್ಯ ಚಟುವಟಿಕೆಯನ್ನು ಆ ಚಟುವಟಿಕೆಗಳಿಗೆ ಪೂರಕವಾಗಿರುವ ಪಾರಮಾರ್ಥಿಕ ಸತ್ಯವನ್ನೂ ಅರ್ಥ ಮಾಡಿಕೊಳ್ಳುವುದು ನಮ್ಮಿಂದ ಸಾಧ್ಯವಾಗಿಲ್ಲ. ಹೀಗಾಗಿ ಪ್ರಾಪಂಚಿಕ ದ್ವೇಷ, ಗೆಳೆತನಗಳಲ್ಲಿ ಮೈಮರೆತಿದ್ದೇವೆ. ಈ ತಾತ್ಕಾಲಿಕ ಸಂಬಂಧಗಳನ್ನೇ, ಮಾಯೆಯನ್ನೇ ನಿರಂತರ, ಸತ್ಯ ಎಂದು ನಂಬಿಕೊಂಡಿದ್ದೇವೆ.

ಸದಾ ಆನಂದದ ಹುಡುಕಾಟವೇ ಆತ್ಮದ ಕೆಲಸ. ಒಮ್ಮೆ ನಮ್ಮ ಮನದಲ್ಲಿ ಆನಂದ ಹೊಂದಬೇಕೆಂಬ ಬಯಕೆ ಜಾಗೃತವಾದರೆ ಸಾಕು; ನಾವು ದೊಡ್ಡ ಪ್ರಮಾದ ಎಸಗುತ್ತೇವೆ. ಐಹಿಕ ವಿಷಯಗಳ ಹಿ೦ದೆ ಓಡತೊಡಗುತ್ತೇವೆ. ಕೃಷ್ಣನ ದಿವ್ಯ ದೃಷ್ಟಿ ಪಡೆದ ನಂತರವಷ್ಟೇ ನಮಗೆ ಜ್ಞಾನೋದಯವಾಗುತ್ತದೆ. ಆತನಿಗೆ ಸೇವೆ ಸಲ್ಲಿಸುವುದೇ ಜೀವನದ ಪರಮ ಉದ್ದೇಶ ಎಂಬುದು ಅರ್ಥವಾಗುತ್ತದೆ.

ಶ್ರೀಕೃಷ್ಣ ಸರ್ವಜ್ಞಾನಿ. ದೇವನು ಸರ್ವವ್ಯಾಪಿ. ಆತನಿಗೆ ತಿಳಿದಿರುವುದು ಯಾವುದೂ ಇಲ್ಲ. ಆದರೆ ಐಹಿಕ ವಸ್ತುಗಳಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲ. ನಮ್ಮನ್ನು ನಾವು ಬ್ರಹ್ಮರೆಂದು ತಪ್ಪುತಿಳುವಳಿಕೆ ಬೆಳೆಸಿಕೊಂಡಿದ್ದೇವೆ. ಇವೆಲ್ಲ ನಿರುಪಯುಕ್ತ ವಾದಗಳಲ್ಲದೇ ಬೇರೇನೂ ಅಲ್ಲ.

ನಮ್ಮ ಆತ್ಮಗಳು ನಿಷ್ಕ್ರಿಯವಾಗಿವೆ.

ನಮ್ಮ ಮನಸ್ಸು ಐಹಿಕ ಸುಖಭೋಗಗಳ ಹಿಂದೆ ಓಡುತ್ತಿದೆ. ಐಹಿಕ ಸುಖಗಳಿಗೆ ಮಾರು ಹೋಗಿರುವ ಮನಸ್ಸು ಶ್ರೀ ಕೃಷ್ಣನ ಪದತಲದಲ್ಲಿ ಇಂದ್ರಿಯ ತೃಪ್ತಿ ಪಡೆಯಬಹುದೆಂಬ ಭ್ರಮೆ ಬೆಳೆಸಿಕೊಂಡಿದೆ. ಆದರೆ ಕೃಷ್ಣನ ಪದತಲದಲ್ಲಿ ಎಲ್ಲವೂ ಆಧ್ಯಾತ್ಮಿಕ. ಅದು ನಮ್ಮ ಐಹಿಕ ಆಸೆಗಳನ್ನು ಪೂರೈಸುವ ತಾಣವಲ್ಲ.

ಕೃಷ್ಣನು ಪರಿಪೂರ್ಣ ತೃಪ್ತಿ ಅಥವಾ ಆನಂದದ ಮೂರ್ತ ರೂಪ. ಅವನೇ ಪರಮಾನಂದ. ಇಂದ್ರಿಯ ತೃಪ್ತಿ ಅಥವಾ ಸಂತೋಷ ಪರಿಪೂರ್ಣವಲ್ಲ. ಅಲ್ಲಿ ನಮ್ಮ ಎಲ್ಲಾ ಬಯಕೆಗಳು ಈಡೇರುವುದಿಲ್ಲ. ಇಂದ್ರಿಯಗಳ ಮೋಡಿಗೆ ಮರುಳಾಗಿರುವ ನಾವು ಆತ್ಮ ಪೂಜೆಯಿಂದ, ಸ್ವಯಂ ವೈಭವೀಕರಣದಿಂದ ಅಥವಾ ಪಾತಂಜಲಿ ಮುನಿಗಳು ಹೇಳಿದಂಥ ಕೈವಲ್ಯ ಸ್ಥಿತಿಯಿಂದ ಪರಿಪೂರ್ಣ ಸಂತೋಷ ಪಡೆಯಬಹುದೆಂಬ ಕಲ್ಪನೆ ಹೊಂದಿದ್ದೇವೆ.

ಸದಾ ಆನಂದದ ಹುಡುಕಾಟವೇ ಆತ್ಮದ ಕೆಲಸ. ಒಮ್ಮೆ ನಮ್ಮ ಮನದಲ್ಲಿ ಆನಂದ ಹೊಂದಬೇಕೆಂಬ ಬಯಕೆ ಜಾಗೃತವಾದರೆ ಸಾಕು; ನಾವು ದೊಡ್ಡ ಪ್ರಮಾದ ಎಸಗುತ್ತೇವೆ. ಐಹಿಕ ವಿಷಯಗಳ ಹಿಂದೆ ಓಡತೊಡಗುತ್ತೇವೆ. ಕೃಷ್ಣನ ದಿವ್ಯ ದೃಷ್ಟಿಪಡೆದ  ನಂತರವಷ್ಟೇ ನಮಗೆ ಜ್ಞಾನೋದಯವಾಗುತ್ತದೆ.

ಆತನಿಗೆ ಸೇವೆ ಸಲ್ಲಿಸುವುದೇ ಜೀವನದ ಪರಮ ಉದ್ದೇಶ ಎಂಬುದು ಅರ್ಥವಾಗುತ್ತದೆ. ಹೀಗೆ ನಾವು ಎಲ್ಲಿವರೆಗೆ ಇಂದ್ರಿಯ ತೃಪ್ತಿಯೇ ಮುಖ್ಯ ಗುರಿ ಎ೦ದು ನಂಬಿರುತ್ತೇವೆಯೋ ಅಲ್ಲಿವರೆಗೆ ಪೊಳ್ಳು ವಾದಗಳನ್ನು ನಂಬಿಕೊಂಡು ಐಹಿಕ ಸುಖ ಪಡೆಯಲು ವ್ಯರ್ಥ ಪ್ರಯತ್ನಿಸುತ್ತಿರುತ್ತೇವೆ.

ಆದರೆ ಈ ಜಗತ್ತು ನಮ್ಮ ಸಂತೋಷಕ್ಕಾಗಿ ಇರುವುದಲ್ಲ. ಯಾವಾಗ ನಾವು ಕೃಷ್ಣನ ಚರಣ ಕಮಲಗಳಿಗೆ ಸಂಪೂರ್ಣ ಶರಣಾಗುತ್ತೇವೆಯೋ ಆಗ ನಮ್ಮೊಳಗೆ ಆಧ್ಯಾತ್ಮಿಕ ಆನಂದ, ತೃಪ್ತಿ ಉಕ್ಕಿ ಹರಿಯುತ್ತದೆ.

ಒಂದು, ಎರಡು, ಮೂರು – ಈ ರೀತಿಯ ಸಂಖ್ಯಾ ವ್ಯತ್ಯಾಸಗಳು ಐಹಿಕ ಜಗತ್ತಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಆದರೆ ಈ ಸಂಖ್ಯಾ ವೈವಿಧ್ಯತೆ ಆಧ್ಯಾತ್ಮಿಕ ಜಗತ್ತಿನಲ್ಲಿ ಅವ್ಯಕ್ತವಾದ ಸಮಾನತೆ ಸಾಧಿಸಿರುತ್ತದೆ. ಹೀಗಿರುವಾಗ ಕೃಷ್ಣನೇ ಏಕೈಕ, ಪರಮ ಸತ್ಯ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಯಾವಾಗ ನಮ್ಮಲ್ಲಿರುವ ಸತ್ಯ ಮತ್ತು ಜ್ಞಾನಗಳು ಕೃಷ್ಣನಿಗೆ ಮುಡಿಪಾಗುತ್ತವೆಯೋ ಆಗ ನಾವು ಸಹಜ ಮತ್ತು ನೈಜ ಸ್ಥಿತಿಗೆ ಮರಳುತ್ತೇವೆ. ಇಂದು ಭಕ್ತಿ ಎಂಬ ಪದಕ್ಕೆ ಹಲವಾರು ತಪ್ಪು ಅರ್ಥಗಳನ್ನು ನೀಡಲಾಗುತ್ತಿದೆ. ಭಕ್ತಿ ಎಂದರೆ ಹೆತ್ತವರನ್ನು ಗೌರವಿಸುವುದು, ಒಬ್ಬರಿಗೆ ನಿಷ್ಠರಾಗಿರುವುದು, ಶಿಕ್ಷಕರಿಗೆ ವಿಧೇಯವಾಗಿರುವುದು ಎಂದೆಲ್ಲಾ ವಿವರಿಸಲಾಗುತ್ತದೆ. ಆದರೆ ಭಕ್ತಿ ಎಂಬ ಪದದ ಮೂಲ “ಭಜ್‌” ಅಂದರೆ “ಸೇವೆ ಮಾಡು” ಎಂದರ್ಥ. ಆದರೆ ಈ ಸೇವೆಯ ಮಾಧ್ಯಮ ಯಾವುದಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ನಾವು ಎಡವಿದರೆ, ಭಕ್ತಿ ಎಂಬುದು ಅರ್ಥ ಕಳೆದುಕೊಳ್ಳುತ್ತದೆ. ‍ಶ್ರೀ ಚೈತನ್ಯ ಚಂದ್ರಾಮೃತದಲ್ಲಿ ಹೇಳಿರುವಂತೆ,

ಕಲಹ ಕಲಿರ್‌ ಬಲಿನಾ ಇಂದ್ರಿಯ-ವೈರಿ-ವರ್ಗಃ

ಶ್ರೀ ಭಕ್ತಿ ಮಾರ್ಗ ಇಹ ಕಂಟಕ ಕೋಟಿ ರುದ್ಧಾಃ|

ಹಾ ಹಾ ಕ್ವ ಯಾಮಿ ವಿಕಲಃ ಕಿಂ ಅಹಂ ಕರೋಮಿ

ಚೈತನ್ಯ – ಚಂದ್ರ! ಯದಿ ನದ್ಯ ಕೃಪಂ ಕರೋಸಿ ||

“ಇದು ಕಲಹದ ಕಾಲ. ನಮ್ಮ ಶತ್ರುಗಳಾದ ಇಂದ್ರಿಯಗಳು ಇಂದು ಬಹಳ ಬಲಶಾಲಿಯಾಗಿವೆ. ಶುದ್ಧ ಭಕ್ತಿಯ ಮಾರ್ಗದಲ್ಲಿ ಕೋಟ್ಯಂತರ ಮುಳ್ಳುಗಳಿವೆ. ಚೈತನ್ಯ ಚಂದ್ರನು ದಾರಿ ತೋರದ ಹೊರತು ಏನು ಮಾಡಬೇಕು ಎಲ್ಲಿಗೆ ಹೋಗಬೇಕು ಎಂಬುದು ತೊಚದೇ ನಾನು ಕಂಗೆಟ್ಟಿದ್ದೇನೆ.”

ನಾವು ಕಲಿಯುಗದಲ್ಲಿ ಬದುಕಿದ್ದೇವೆ. ಈಗ ಎಲ್ಲಿ ನೋಡಿದರೂ ಕಲಹ, ಜಗಳ, ಮನಸ್ತಾಪ. ಶುದ್ಧ ಭಕ್ತಿ ಮಾರ್ಗದ ತುಂಬಾ ಬರಿಯ ಪೊಳ್ಳುವಾದಗಳು ಮತ್ತು ಐಹಿಕ ಸಮಸ್ಯೆಗಳ ಮುಳ್ಳುಗಳೇ ತುಂಬಿಕೊಂಡಿವೆ. ಇಂಥ ಸನ್ನಿವೇಶದಲ್ಲಿ ಶ್ರೀ ಚೈತನ್ಯ ಎಂದರೆ ಸ್ವತಃ ‍ಶ್ರೀಕೃಷ್ಣ. ಅವನೇ ದೇವೋತ್ತಮ ಪರಮ ಪುರುಷ. ನಮ್ಮ ಇಂದ್ರಿಯ ಕಾರ್ಯದಿಂದಲೇ ದೇವೋತ್ತಮನನ್ನು ಅರ್ಥ ಮಾಡಿಕೊಳ್ಳುವುದು ಸಾ‍ಧ್ಯವೇ ಇಲ್ಲ. ಕಥಾ ಉಪನಿಷತ್‌ನಲ್ಲಿ ಹೇಳಿರುವಂತೆ,

ನಾಯಮಾತ್ಮ ಪ್ರವಚನೇನ ಲಭ್ಯೋ

ನ ಮೇಧಾಯ ನ ಬಹುನಾ ಶೃತೇನಾ |

ಯಾಂ ಏವೈಸ ವೃಣುತೇ ತೇನ ಲ‍ಭ್ಯಾಸ್‌

ತಸ್ಯೈಶ ಅತ್ಮ ವೃಣುತೇ ತನುಂ ಸ್ವಂ ||

ಸರ್ವವ್ಯಾಪಿ, ಸರ್ವಶಕ್ತ ಆತ್ಮನ ಕುರಿತು ಜ್ಞಾನವನ್ನು ವಾದಗಳ ಮೂಲಕವಾಗಲೀ, ಪ್ರ‍‍‍ಶ್ನೋತ್ತರಗಳ ಮೂಲಕವಾಗಲೀ, ವೇದಗಳನ್ನು ಆಲಿಸುವುದರಿಂದಾಗಲೀ ಪಡೆಯುವುದು ಸಾಧ್ಯವಿಲ್ಲ. ತನಗೆ ಯಾರು ಸಮ್ಮತವೋ ಅವರೆದುರಿಗೆ ಮಾತ್ರ ಆತ ಪ್ರಕಟಗೊಳ್ಳುತ್ತಾನೆ.

ದೇವೋತ್ತಮನು ಚಿರಂಚೀವಿ. ಆತನೇ ಪರಮಾನಂದ ಎಂಬುದನ್ನು ಅರ್ಥ ಮಾಡಿಕೊಳ್ಳುವ ತನಕ ಆತನನ್ನು ಸೇರುವುದು ಸಾಧ್ಯವಿಲ್ಲ. ತನ್ನದೇ ಮನದಿಂಗಿತದಂತೆ ನೂರಾರು ಚಟುವಟಿಕೆಗಳಲ್ಲಿ ನಿರತನಾಗಿರುವವನು ದೇವರು ಎಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಲಾರ.

ನಿಜವಾದ ದೇವರನ್ನು ಬಿಟ್ಟು ಬೇರಾವುದೋ ವಸ್ತುವನ್ನು ಆತ ಪೂಜಿಸುತ್ತಾನೆ. ಆತ ಸಂತೋಷದ ನಿಜವಾದ ಮೂಲ ವಸ್ತು ಅಥವಾ ವಿಷಯ ಯಾವುದೆಂಬುದನ್ನು ಅರ್ಥಮಾಡಿಕೊಳ್ಳದೇ, ಈ ಜಗತ್ತು ಸೃಷ್ಟಿಯಾಗಿರುವುದೇ ನನ್ನ ಆಸೆಗಳನ್ನು ಈಡೇರಿಸುವುದಕ್ಕೆ ಎಂಬ ಭ್ರಮೆ ಬೆಳೆಸಿಕೊಳ್ಳುತ್ತಾನೆ.

ಹೀಗೆ ಐಹಿಕ ವಾದಕ್ಕೆ ಮನಸೋತಿರುವ ಮನಸ್ಸು ಸ್ವಾರ್ಥಪರ ಚಿಂತನೆಯಲ್ಲೇ ಮುಳುಗಿರುತ್ತದೆ. ಮೂಳೆ-ಮಾಂಸಗಳಿಂದ ರಚಿತವಾಗಿರುವ ಈ ಚೇತನದಿಂದ ಕೃಷ್ಣನಿಗೆ ಸೇವೆ ಸಲ್ಲಿಸುವುದು ಸಾಧ್ಯವಿಲ್ಲ. ಅದು ಆತ್ಮದಿಂದ ಮಾತ್ರ ಸಾ‍ಧ್ಯ. ಆದರೆ ಅಣು ಸಿದ್ಧಾಂತಕ್ಕೆ ಜೋತು ಬಿದ್ದಿರುವ ಈ ಪ್ರಪಂಚಕ್ಕೆ ಅದು ಅರ್ಥವಾಗುವುದಿಲ್ಲ.

ಕೃಷ್ಣನಲ್ಲಿ ನಾರಾಯಣನಿದ್ದಾನೆ. ನಾರಾಯಣನು ಕೃಷ್ಣನ ಅತ್ಯಂತ ಉತ್ಕೃಷ್ಟ ಗಾಂಭೀರ್ಯಪೂರ್ಣ ರೂಪ. ಬಲದೇವ ಆತನ ಸ್ವಾಂಶ ವಿಸ್ತರಣೆ. ಆತನೇ ಸರ್ವಶಕ್ತ ಪರಮಾತ್ಮ. ನಮ್ಮ ಆತ್ಮದ ನಿಜವಾದ ಕರ್ತವ್ಯ ಏನೆಂಬುದು ಅರ್ಥಮಾಡಿಕೊಂಡು ನಂತರ ಶ್ರೀಕೃಷ್ಣನೇ ನಿಜವಾದ ಪರಮ ಸತ್ಯ ಎಂಬ ಅರಿವು ನಮಗಾಗುತ್ತದೆ. ಆತನೇ ಪರಮಾನಂದ. ಅವನಿಗೆ ಹೋಲಿಕೆಯೇ ಇಲ್ಲ. ಶುದ್ಧ ಭಕ್ತರ ತುಂಬು ಹೃದಯದ ಸೇವೆಯ ನಿತ್ಯ ನಿರಂತರ ಗುರಿ ಅವನೇ. ಆದರೆ ಕೇವಲ ಗ್ರಹಿಕೆ ಅಥವಾ ಭಾವನೆಗಳ ಮೂಲಕ ಆತನನ್ನು ಪೂಜಿಸುವುದು ಸಾಧ್ಯವಿಲ್ಲ.

ಆತ್ಮನಿವೇದನೆಯಿಂದ ಮಾತ್ರ ನಮ್ಮ ಸೇವೆ ಅವನಿಗೆ ಸಲ್ಲುತ್ತದೆ. ಆತನೊಂದಿಗಿನ ನಮ್ಮ ಸಂಬಂಧ ಕುರಿತು ಇಂದ್ರಿಯಾತೀತ ಜ್ಞಾನ ನಮಗಿರಬೇಕು. ಕೃಷ್ಣನಿಗೇ ಸಂಪೂರ್ಣ ಮುಡಿಪಾಗಿರುವವನನ್ನು ಹೊರತುಪಡಿಸಿ ಬೇರಾರನ್ನೂ ನನ್ನವರೆಂದು ನಾನು ಸ್ವೀಕರಿಸಲಾರೆ. ನನ್ನ ಸೇವೆಯ ಏಕೈಕ ಗುರಿ ಕೃಷ್ಣ. ವೈಷ್ಣವರಿಗೆ ಶೋಭೆ ತರುವುದು ಈ ನಂಬಿಕೆ ಮಾತ್ರ. ಇದೇ ಜೀವನದ ಪರಮೋಚ್ಛ ಅವಶ್ಯಕತೆ. ಸ್ವಾರ್ಥಪರ ಸಂತೃಪ್ತಿ ನೀಡುವ ಐಹಿಕ ಖ್ಯಾತಿಯಿಂದ ಯಾವುದೇ ಪ್ರಯೋಜನವಿಲ್ಲ. ಸರಿ, ಕೃಷ್ಣ ಬಯಸಿದರೆ ಇನ್ನೊಮ್ಮೆ ನಿಮ್ಮ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi