ಗರ್ಭಪಾತ ಮತ್ತು `ಮೊಲ ತತ್ತ್ವಜ್ಞಾನ’

ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಶಿಷ್ಯರೊಂದಿಗೆ 1973ರ ಡಿಸೆಂಬರ್‌ನಲ್ಲಿ, ಕ್ಯಾಲಿಫೋರ್ನಿಯಾದ ವೆನಿಸ್‌ ತೀರದಲ್ಲಿ ಬೆಳಗಿನ ವಾಯುಸಂಚಾರದ ವೇಳೆ ನಡೆದ ಸಂವಾದ.

ಭಕ್ತ: ಶ್ರೀಲ ಪ್ರಭುಪಾದ, ಪ್ರಕೃತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ  ಶ್ರೀಕೃಷ್ಣನಿಗೆ ನಾವು ಶರಣಾದರೆ ರೋಗ ಮತ್ತು ಸಾವಿನಂತೆ ಪ್ರಕೃತಿ ನಿಯಮಗಳನ್ನೂ , ಅದೆಷ್ಟೇ ಪ್ರಬಲವಾಗಿದ್ದರೂ, ಎದುರಿಸಬಹುದೆಂದು ನಾವು ಕೆಲವು ವೇಳೆ ವಾದಿಸುತ್ತೇವೆ. ಆದರೆ, ದೇವರ ನೆರವಿಲ್ಲದೆ ನಾವೇ ಕ್ರಮೇಣ ಪ್ರಕೃತಿಯನ್ನು ಹತೋಟಿಗೆ ತಂದುಕೊಳ್ಳಬಹುದು ಎಂದು ಸಿನಿಕರು ಹೇಳುತ್ತಾರೆ.

ಶ್ರೀಲ ಪ್ರಭುಪಾದ: ಇಲ್ಲ, ನಾವು ಪ್ರಕೃತಿಯ ನಿಯಮಗಳನ್ನು ಒಪ್ಪಿಕೊಳ್ಳಲೇಬೇಕು. ಪ್ರಕೃತಿ ನಿಯಮವನ್ನು ಜಯಿಸಿದ್ದೇವೆಂದು ಯಾರಾದರೂ ಹೇಗೆ ಹೇಳುವುದು ಸಾಧ್ಯ?

ಭಕ್ತ: ಹೂಂ… ವೈದ್ಯರು ಮತ್ತು ಜೀವ ವಿಜ್ಞಾನಿಗಳು ಅನೇಕ ರೋಗಗಳನ್ನು ಜಯಿಸಿದ್ದಾರೆ.

ಶ್ರೀಲ ಪ್ರಭುಪಾದ: ಆದರೆ ಜನರು ಈಗಲೂ ರೋಗಿಗಳಾಗುತ್ತಿದ್ದಾರಲ್ಲ? ವೈದ್ಯರು ರೋಗವನ್ನು ಸ್ಥಗಿತಗೊಳಿಸಿದ್ದಾರೆಯೇ?

ಭಕ್ತ: ಉದಾಹರಣೆಗೆ, ಭಾರತ ಮತ್ತು ಆಫ್ರಿಕಾಗಳಲ್ಲಿ ಸಿಡುಬು ನಿರೋಧಕ ಚುಚ್ಚುಮದ್ದು ಹಾಕುತ್ತಿದ್ದಾರೆ. ಅವರು ಸಾವಿರಾರು ಮಕ್ಕಳನ್ನು ಸಾವಿನಿಂದ ಪಾರುಪಾಡಿದ್ದಾರೆ.

ಶ್ರೀಲ ಪ್ರಭುಪಾದ: ಆದರೇನು, ಮಕ್ಕಳು ಬೆಳೆಯುತ್ತಾರೆ, ವೃದ್ಧರಾಗುತ್ತಾರೆ ನಂತರ ಸಾಯುತ್ತಾರಲ್ಲ. ಅಂದರೆ, ಸಾವನ್ನು ಸ್ಥಗಿತಗೊಳಿಸಲಾಗಿಲ್ಲ. ಅಲ್ಲದೆ, ಅವರಿಗ್ಯಾಕೆ ಈ ಮಕ್ಕಳ ಬಗ್ಗೆ ಕಾಳಜಿ? ಅವರಿಗೆ ಅತಿಯಾದ ಜನಸಂಖ್ಯೆ ಬೇಡ, ಹೀಗಾಗಿ ತರ್ಕಬದ್ಧವಾಗಿ ವೈದ್ಯರು ಅವರನ್ನು ಸಾಯಲು ಬಿಡಬೇಕು. ಆದರೆ ವೈದ್ಯರು ತರ್ಕರಹಿತರು. ಒಂದು ಕಡೆ ಮಕ್ಕಳ ಸಾವನ್ನು ತಡೆಯಲು ಮುಂದಾಗುತ್ತಾರೆ, ಮತ್ತೊಂದು ಕಡೆ ಸಂತಾನ ನಿಯಂತ್ರಣ ಸಾಧನ ಬಳಸಲು ಶಿಫಾರಸು ಮಾಡುತ್ತಾರಲ್ಲದೆ ಗರ್ಭಪಾತದ ಮೂಲಕ ಮಕ್ಕಳನ್ನು ಗರ್ಭದಲ್ಲಿಯೇ ಕೊಲ್ಲುತ್ತಾರೆ. ಯಾಕೆ? ಯಾಕೆ ಕೊಲ್ಲುತ್ತಿದ್ದಾರೆ? ಏರುತ್ತಿರುವ ಜನಸಂಖ್ಯೆ ತಡೆಯಲು. ಹಾಗಾದರೆ, ಮತ್ತೊಂದು ಭಾಗದಲ್ಲಿ ಮಕ್ಕಳು ಸಾಯುತ್ತಿರುವಾಗ ಅವರನ್ನು ರಕ್ಷಿಸಲು ಯಾಕೆ ಹಾತೊರೆಯುತ್ತಾರೆ?

ಭಕ್ತ: ಒಮ್ಮೆ ಮಗು ಹುಟ್ಟಿತೆಂದರೆ, ಅವನನ್ನು ಕಾಪಾಡಬೇಕೆಂಬುದು ಅವರ ಉದ್ದೇಶ. ಆದರೆ ಮಗು ಇನ್ನೂ ಗರ್ಭದಲ್ಲಿದ್ದಾಗ ಅವನನ್ನು ಕೊಲ್ಲಬಹುದೆಂದು ಅವರು ಭಾವಿಸುತ್ತಾರೆ. ಅವರೆನ್ನುತ್ತಾರೆ, ಅವನು ಇನ್ನೂ ಮಾನವ ಜೀವಿಯಲ್ಲ ಎಂದು.

ಶ್ರೀಲ ಪ್ರಭುಪಾದ: ಆದರೆ ಮಹಿಳೆ ಗರ್ಭಿಣಿಯಾದ ಕೂಡಲೇ ಮಗು ಆಗಲೇ ಹುಟ್ಟಿತ್ತೆಂದೇ ಹೇಳಬಹುದು. ಗರ್ಭ ಧರಿಸಿದರೆಂದರೆ ಮಗು ಆಗಲೇ ಹುಟ್ಟಿತೆಂದು. ಅಲ್ಲಿ ಮಗು ಇಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ಇದೆಂತಹ ಅವಿವೇಕ? ಗರ್ಭಿಣಿಯರಿಗೇಕೆ ನಾವು ಅವಳು `ಮಗುವಿನೊಂದಿಗೆ’ ಎಂದು ಹೇಳುತ್ತೇವೆ? ಅದರ ಅರ್ಥ ಮಗು ಆಗಲೇ ಹುಟ್ಟಿದೆ ಎಂದು. ಆದುದರಿಂದ, ನನ್ನ ಪ್ರಕಾರ ಈ ಗರ್ಭಪಾತ ವ್ಯವಹಾರ ಮೂರ್ಖತನದ್ದು.

ಭಕ್ತ: ಸರಿಯೇ, ಅದನ್ನು ಅವರು ವೈಚಾರಿಕತೆಯಿಂದ ವಿವರಿಸಿದ್ದಾರೆ.

ಶ್ರೀಲ ಪ್ರಭುಪಾದ: ಹೇಗೆ?

ಭಕ್ತ: ಅತ್ಯುತ್ತಮ ಎಂದೆನಿಸಿದನ್ನು ಮಾಡುತ್ತಿರುವುದಾಗಿ ಅವರು ಕೆಲವು ಬಾರಿ ಹೇಳುತ್ತಾರೆ. ಮತ್ತು ಮುಂದೆ ಅವರನ್ನು ದಂಡಿಸಲು ಕರ್ಮವಿದೆ ಎಂಬುದನ್ನು ಅವರು ತಿರಸ್ಕರಿಸುತ್ತಾರೆ. ಬಹುಶಃ ಅವರದು `ಮೊಲ ತತ್ತ್ವ ಜ್ಞಾನ’ ದಂತಿರಬೇಕು. ಮೊಲವು ಕಣ್ಣು ಮುಚ್ಚಿದ್ದಾಗ, ಅದಕ್ಕೆ ನರಿಯು ತನ್ನ ಮೇಲೆ ಎರಗುವುದು ಕಾಣುವುದಿಲ್ಲ. ತಾನು ಸುರಕ್ಷಿತ ಎಂದು ಅದು ಭಾವಿಸುತ್ತದೆ.

ಶ್ರೀಲ ಪ್ರಭುಪಾದ: ಓ, ಅಂದರೆ, ಗರ್ಭಪಾತಗಾರರು ಮೊಲ ತತ್ತ್ವಜ್ಞಾನದಲ್ಲಿ ನಂಬಿಕೆ ಉಳ್ಳವರು. ಇದು ಮಾನವ ತತ್ತ್ವಜ್ಞಾನವಲ್ಲ. ಇದು ಮೊಲ, ಕಪ್ಪೆ, ಕತ್ತೆ ತತ್ತ್ವಜ್ಞಾನ.  ಶ್ರೀಮದ್‌ ಭಾಗವತದಲ್ಲಿ ವಿವರಿಸಲಾಗಿದೆ (2.3.19): ಶ್ವ ವಿಡ್‌ ವರಾಹೋಷ್ಟ್ರ ಖರೈಃ ಸಂಸ್ತುತಃ ಪುರುಷಃ ಪಶುಃ ಗರ್ಭಪಾತವನ್ನು ಬೆಂಬಲಿಸುವ ನಾಯಕರು ಮೂರ್ಖರು, ಅವರನ್ನು ಇನ್ನೊಂದು ಮೂರ್ಖರ ಗುಂಪು ಕೊಂಡಾಡುತ್ತದೆ – ಸಾಮಾನ್ಯ ಜನರು. ಇಡೀ ಜನಸಮುದಾಯವು ಮೂರ್ಖರಿಂದ ಮಾಡಲ್ಪಟ್ಟಿರುವುದರಿಂದ, ಅವರು ಮೂರ್ಖನನ್ನೇ ತಮ್ಮ ನಾಯಕನನ್ನಾಗಿ ಆಯ್ಕೆ ಮಾಡುತ್ತಾರೆ. ನಂತರ, ಅತೃಪ್ತಗೊಂಡು ಅವರು ಮೊದಲ ಮೂರ್ಖನನ್ನು ಅಧಿಕಾರದಿಂದ ಹೊರಹಾಕುತ್ತಾರೆ ಮತ್ತು ಮತ್ತೊಬ್ಬ ಮೂರ್ಖನನ್ನು ಆಯ್ಕೆಮಾಡುತ್ತಾರೆ. ಇದನ್ನು ಪುನಃ ಪುನಸ್‌ ಚರ್ವಿತ ಚರ್ವಣಾನಾಂ – ಮೆಲ್ಲುವುದನ್ನೇ ಮೆಲ್ಲುವುದು ಎನ್ನುತ್ತಾರೆ. ಯಾರನ್ನು ಆರಿಸಬೇಕೆಂದು ಜನರಿಗೆ ಗೊತ್ತಿಲ್ಲ. ಆದುದರಿಂದ ದೈವ ಪ್ರಜ್ಞೆ ಇರುವ, ಯಾರು ನಿಜವಾಗಿಯೂ ನಾಯಕನಾಗಲು ಅರ್ಹರೋ ಅಂತಹವರನ್ನೇ ಆಯ್ಕೆ ಮಾಡಲು ಅವರಿಗೆ ಅರಿವು ಉಂಟುಮಾಡಬೇಕು. ಆಗ ಅವರು ಸಂತೋಷದಿಂದಿರುತ್ತಾರೆ. ಇಲ್ಲವಾದರೆ, ಅವರು ಒಬ್ಬ ಮೂರ್ಖನನ್ನು ಆಯ್ಕೆ ಮಾಡಿ ತಿರಸ್ಕರಿಸುವುದು, ಮತೊಬ್ಬ ಮೂರ್ಖನನ್ನು ಆರಿಸಿ ತಿರಸ್ಕರಿಸುವುದು… ಇದು ಅವ್ಯಾಹತವಾಗಿ ನಡೆಯುತ್ತದೆ.

ಅಮೆರಿಕದಲ್ಲಿ ಒಂದು ಘೋಷಣೆ ಇದೆ : `ದೇವರಲ್ಲಿ ನಮ್ಮ ನಂಬಿಕೆ’. ಆದುದರಿಂದ ನಾವು ಹೇಳುವುದಿಲ್ಲ, `ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡು’ ಎಂದು. ನಾವು ಸರಳವಾಗಿ ಹೇಳುತ್ತೇವೆ, ಒಬ್ಬ ನಾಯಕನಿಗೆ ಇರಬೇಕಾದ ಗುಣಮಟ್ಟವೆಂದರೆ ದೇವರಾರೆಂದು ಅವನಿಗೆ ತಿಳಿದಿರಬೇಕು ಮತ್ತು ಅವನಲ್ಲಿ ನಂಬಿಕೆ ಇರಬೇಕು. ದೇವರಾರೆಂದು ನಿಜವಾಗಿಯೂ ಅರಿಯಬೇಕೆಂದಿದ್ದರೆ ಜನರು ಭಗವದ್ಗೀತೆಯನ್ನು ಓದಬಹುದು. ಅವರು ಅದನ್ನು ಬುದ್ಧಿ ಶಕ್ತಿಯಿಂದ ಓದಬೇಕು ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಂತರ ಮುಂದಿನ ಪ್ರಗತಿಗಾಗಿ ಅವರು ಶ್ರೀಮದ್‌ ಭಾಗವತವನ್ನು ಓದಬಹುದು. ನಾವು ಸಿದ್ಧಾಂತ ರಚಿಸುತ್ತಿಲ್ಲ. ದೇವರನ್ನು ಕುರಿತ ನಮ್ಮ ಮಾಹಿತಿಯನ್ನು ನಾವು ಅಧಿಕೃತ ಗ್ರಂಥಗಳಿಂದ ತೆಗೆದುಕೊಳ್ಳುತ್ತಿದ್ದೇವೆ.

ಭಕ್ತ: ರಾಜಕೀಯ ಕುರಿತ ನಮ್ಮ ಕರಪತ್ರದಲ್ಲಿ ನಾವು ನಾಯಕನಿಗಿರಬೇಕಾದ ಅರ್ಹತೆಗಳನ್ನು ಪಟ್ಟಿ  ಮಾಡುತ್ತೇವೆ. ಮೊದಲು ನಾಲ್ಕು ನಿಯಂತ್ರಕ ಸಿದ್ಧಾಂತಗಳನ್ನು ಅವನು ಅನುಸರಿಸಬೇಕೆಂದು ಹೇಳುತ್ತೇವೆ: ಮಾಂಸ ಸೇವನೆ ಇಲ್ಲ, ಅನೈತಿಕ ಲೈಂಗಿಕ ಕ್ರಿಯೆ ಇಲ್ಲ, ಜೂಜಾಟವಿಲ್ಲ ಮತ್ತು ಮಾದಕ ಪಾನೀಯ ಸೇವನೆ ಇಲ್ಲ. ನಾವು ಕೊಡುವ ಸಕಾರಾತ್ಮಕ ಆದೇಶವೆಂದರೆ ನಾಯಕನು ಪರಮಾತ್ಮನ ಪವಿತ್ರ ನಾಮ ಪಠಿಸಬೇಕು ಎಂದು. ಆದರೆ ಈ ಅಗತ್ಯಗಳು ಚರ್ಚ್‌ ಮತ್ತು ಸರ್ಕಾರವನ್ನು ಬೇರ್ಪಡಿಸುವ ಸಂವಿಧಾನಾತ್ಮಕ ತತ್ತ್ವವನ್ನು ಉಲ್ಲಂಘಿಸುತ್ತದೆ ಎಂದು ಕೆಲವರು ವಾದಿಸಬಹುದು.

ಶ್ರೀಲ ಪ್ರಭುಪಾದ: ನೀವು ಪರಮಾತ್ಮನನ್ನು ನಂಬಿದರೆ, ಅವನ ಪವಿತ್ರ ನಾಮ ಪಠಣಕ್ಕೆ ಯಾಕೆ ಆಕ್ಷೇಪವಿರಬೇಕು? ನೀವು `ದೇವರಲ್ಲಿ ನಮ್ಮ ನಂಬಿಕೆ’ ಎಂದು ಹೇಳಿದರೆ, ನಿಮಗೆ ಪರಮಾತ್ಮನ ಹೆಸರು ಮತ್ತು ವಿಳಾಸ ಗೊತ್ತಿರಬೇಕು. ಆಗ ನೀವು ನಿಜವಾಗಿಯೂ ಅವನನ್ನು ನಂಬಬಹುದು. ಈ ಎಲ್ಲ ವಿಷಯಗಳು ನಿಮಗೆ ಗೊತ್ತಿಲ್ಲದಿದ್ದರೆ, ನಮ್ಮಿಂದ ಕಲಿಯಿರಿ. ಪರಮಾತ್ಮನ ಹೆಸರು, ವಿಳಾಸ, ಗುಣಗಳು – ಎಲ್ಲವನ್ನೂ ನಾವು ನಿಮಗೆ ನೀಡುತ್ತೇವೆ. ಮತ್ತು, ದೇವರಿಲ್ಲ ಎಂದು ನೀವು ಹೇಳಿದರೆ,  `ದೇವರಲ್ಲಿ ನಮ್ಮ ನಂಬಿಕೆ’ ಎಂಬುದರ ಅರ್ಥವೇನು?

ಭಕ್ತ: ಚರ್ಚ್‌ ಮತ್ತು ಸರ್ಕಾರವನ್ನು ಪ್ರತ್ಯೇಕ ಮಾಡಲು ಅವರು ಪ್ರಚಾರ ಮಾಡಿದ್ದಾರೆ. ಆದರೆ ಅವರು ಪರಮಾತ್ಮ ಮತ್ತು ದೇಶವನ್ನೂ ಬೇರ್ಪಡಿಸುತ್ತಿದ್ದಾರೆ.

ಶ್ರೀಲ ಪ್ರಭುಪಾದ: ಈ ಪ್ರಚಾರ ಮಾಡುತ್ತಿರುವವರಿಗೆ ಪರಮಾತ್ಮ ಏನೆಂದು ಗೊತ್ತಿಲ್ಲ. ಭಗವಂತನನ್ನು ಯಾವುದರಿಂದಲೂ ಪ್ರತ್ಯೇಕಗೊಳಿಸಲಾಗುವುದಿಲ್ಲ. ಏಕೆಂದರೆ ಎಲ್ಲವೂ ಪರಮಾತ್ಮನೇ. (ಮಯಾ ತತಂ ಇದಂ ಸರ್ವಂ). ಭಗವದ್ಗೀತೆಯನ್ನು ಓದಿದರೆ ದೇವರು ಸರ್ವಂತರ್ಯಾಮಿ ಎಂಬುವುದು ಅವರಿಗೆ ಅರ್ಥವಾಗುತ್ತದೆ. ಅವನಿಂದ ಏನನ್ನೂ ಪ್ರತ್ಯೇಕಗೊಳಿಸುವುದು ಸಾಧ್ಯವಿಲ್ಲ. ನಿಮ್ಮ ದೇಹದ ಪ್ರತಿಯೊಂದು ಅಂಗದಲ್ಲಿಯೂ ನಿಮ್ಮ ಪ್ರಜ್ಞೆ ಇರುವಂತೆ, ಪರಮ ಪ್ರಜ್ಞೆಯಾದ ಪರಮಾತ್ಮ ವಿಶ್ವದ ಎಲ್ಲೆಡೆ ಪ್ರತ್ಯಕ್ಷನಾಗಿರುತ್ತಾನೆ. ಕೃಷ್ಣ ಹೇಳುತ್ತಾನೆ, ವೇದಾಹಂ ಸಮತೀತಾನಿ : `ನಡೆದದ್ದೆಲ್ಲವೂ ನನಗೆ ಗೊತ್ತು.’ ಎಲ್ಲ ಕಡೆ ಇಲ್ಲದಿದ್ದರೆ ಅವನಿಗೆ ಎಲ್ಲವೂ ಹೇಗೆ ಗೊತ್ತಾಗುತ್ತದೆ? ಏನು ಹೇಳುವೆ?

ಭಕ್ತ: ಶ್ರೀಲ ಪ್ರಭುಪಾದರೇ, ಇದು ತರ್ಕ ಬದ್ಧ.

ಶ್ರೀಲ ಪ್ರಭುಪಾದ: ನೀವು ಪರಮಾತ್ಮನನ್ನು ಸರ್ಕಾರದೊಂದಿಗೆ ಹೇಗೆ ಪ್ರತ್ಯೇಕ ಮಾಡುತ್ತೀರಿ? `ಹೌದು, ಪರಮಾತ್ಮ ಮತ್ತು ಸರ್ಕಾರವನ್ನು ಬೇರ್ಪಡಿಸಬೇಕು’ ಎಂದು ಒಪ್ಪುವ ಚರ್ಚ್‌ ಎನಿಸಿಕೊಳ್ಳುವುದನ್ನು, ಧರ್ಮ ಎನಿಸಿಕೊಳ್ಳುವುದನ್ನು ನೀವು ತಿರಸ್ಕರಿಸಬಹುದು. ಮತ್ತು ಅದು ಪರಮಾತ್ಮನ ಸೂಚನೆಯೂ ಹೌದು, ಹಾಗೆ ಧರ್ಮ ಎಂದು ಕರೆಸಿಕೊಳ್ಳುವುದನ್ನು ತಿರಸ್ಕರಿಸಿ. ಸರ್ವ ಧರ್ಮಾನ್‌ ಪರಿತ್ಯಾಜ್ಯ ಮಾಂ ಏಕಂ ಶರಣಂ ವ್ರಜ `ಹಾಗೆ ಧರ್ಮ ಎನಿಸಿಕೊಳ್ಳವುದನ್ನೆಲ್ಲ ತಿರಸ್ಕರಿಸಿ. ಸುಮ್ಮನೆ ನನಗೆ ಶರಣಾಗಿ’ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಜನರು ದೇವರಲ್ಲಿ ನಂಬಿಕೆ ಇದೆ ಎಂದು ಹೇಳಬಹುದು, ಆದರೆ ಅವರು ಪರಮಾತ್ಮನನ್ನು ಸರ್ಕಾರದಿಂದ ಪ್ರತ್ಯೇಕಿಸುವಾಗ ಅವರು ದೇವರನ್ನು ಕುರಿತಂತೆ ಅಜ್ಞಾನಿಗಳೆಂಬುದನ್ನು ನೀವು ಅರಿಯಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi