ಆಚಾರ್ಯ ಸಾಹಿತ್ಯ ಸಂಭಾವನೆ

ಮಕರಂದ

ತಿರುವರಂಗತ್ತಮುದನಾರ್ ಶ್ರೀಮದ್ ಶ್ರೀ ರಾಮಾನುಜಾಚಾರ್ಯರ ಅಭಿಮಾನಿ. ಇವರಿಗೆ ಅಮುದನ್ ಎಂದು ಮತ್ತೊಂದು ಹೆಸರು. ಈತ ಅದ್ವೈತಿ. ತಾಯಿಯ ಇಚ್ಛೆಯಂತೆ ಶ್ರೀ ವೈಷ್ಣವನಾದ ಆತ ಹಾಡಿದ ಪಾಶುರಗಳು (ಪದ್ಯಗಳು) ನೂರಾ ಎಂಟು. ಅದರ ಹೆಸರೇ ರಾಮಾನುಜನೂತ್ತಂದಾದಿ. ಇದಕ್ಕೆ ಪ್ರಪನ್ನಗಾಯತ್ರಿ ಎಂದೂ ಗೌರವಿಸುವರು. ಇದರಲ್ಲಿ ಭಗವದ್ ರಾಮಾನುಜರ ಶೀಲಗುಣ ಸಂಪನ್ನತೆಯನ್ನು ಕೊಂಡಾಡಿದೆ. ಅದರ ಒಂದು ಪಾಶುರ ಇಂತಿದೆ.

ಇನ್ಬುತ್ತ ಶೀಲತ್ತಿರಮಾನುಶಾ! ಎನ್ನೊಎವ್ವಿಡತ್ತುಮ್

ಎನ್ಬುತ್ತ ನೋಯುಡಲ್‌ದೋರಮ್ ಪಿರನ್ಹಿರನ್ಹು; ಎಣ್ಣರಿಯ

ತುನ್ಬುತ್ತು ವೀನುಮ್ ಶೊಲ್ಲುವ ದೊನ್‌ರುಣ್ಣು; ಉನ್ ತೊಣ್ಹರ್ಹ

ಅನ್ಬುತ್ತಿರುಕ್ಕುಮ್ಬುಡಿ ಎನ್ನೈ ಆಕ್ಕಿ ಅಂಗಾಳ್‌ ಪಡುತ್ತೇ ||

ಆಂಧ್ರಪೂರ್ಣ ಅಥವಾ ವಡಗನಂಬಿ ಆಚಾರ್ಯರ ಮತ್ತೊಬ್ಬ ಅಭಿಮಾನಿ. ಈತ “ಯತಿರಾಜವೈಭವ’ ಎಂಬ ಗ್ರಂಥ ಬರೆದಿದ್ದಾನೆ. ಇದರಲ್ಲಿ ನೂರಹದಿನಾಲ್ಕು ಶ್ಲೋಕಗಳುಂಟು. ಇದಲ್ಲದೆ ರಾಮಾನುಜ ಅಷ್ಟೋತ್ತರ ರಚಿಸಿದ್ದಾರೆ.

ರಾಮಾನುಜಃ ಪುಷ್ಕರಾಕ್ಷೋಃ ಯತೀಂದ್ರಃ ಕರುಣಾಕರಃ

ಕಾಂತಿಮತ್ಯಾತ್ಮಜಃ ಶ್ರೀಮಾನ್, ಲೀಲಾಮಾನುಷ ವಿಗ್ರಹಃ

ಸರ್ವಶಾಸ್ತ್ರಾರ್ಥ ತತ್ತ್ವಜ್ಞ ಸರ್ವಜ್ಞ ಸಜ್ಜನ ಪ್ರಿಯಃ

ನಾರಾಯಣಕೃಪಾ ಪಾತ್ರಂ ಶ್ರೀಭೂತ ಪುರನಾಯಕಃ ||   (ಅಷ್ಟೋತ್ತರ ಪ್ರಥಮ ಶ್ಲೋಕ)

ಸರಳ ಮಧುರಗಾಂಭೀರ್ಯ ಪಾಂಡಿತ್ಯದಿಂದ ಹೆಸರಾದವರು ”ವರವರಮುನಿ” ಇವರಿಗೆ ಹಲವು ಹೆಸರುಗಳುಂಟು ಶ್ರೀಶೈಲೇಶದಯಾ ಪಾತ್ರ, ರಾಮಾನುಜ‌ರ್‌ ಪೊನ್ನುಡಿ, ರಮ್ಯಜಾಮಾತೃ, ಆಳಗಿಯ ಮಣವಾಳನ್, ವಿಶದವಾಕ್ ಶಿಖಾಮಣಿ, ಯತೀಂದ್ರ ಪ್ರವಣ, ಮುಪ್ಪತ್ತಾರಾಯಿರಪ್ಪಡಿ ಪೆರುಕ್ಕ‌ರ್‌. ರಾಮಾನುಜರೇ ಮತ್ತೇ ಈ ರೂಪದಲ್ಲಿ ಹುಟ್ಟಿದರೆಂದು ನಂಬಿಕೆ. ಸುಂದರವಾದ ರೂಪ ತೀಕ್ಷ್ಣವಾದ ಬುದ್ಧಿ. ದೈವಭಕ್ತಿಯಿಂದ ಮುಪ್ಪುರಿಗೊಂಡ ವ್ಯಕ್ತಿತ್ವ! ಅವರು ಬರೆದ “ಯತಿರಾಜ – ವಿಂಶತಿಯಿಂದ’ –

ವಿಜ್ಞಾಪನಂ ಯದಿದಮದ್ಯತು ಯಾಮಕೀನಂ

ಅಂಗೀಕುರುಷ್ಟ ಯತಿರಾಜ ದಯಾಂಬುರಾಶೇ

ಆಜ್ಞೋಯ ಮಾತ್ಮ ಗುಣಲೇಶ ವಿವರ್ಜಿತಶ್ಚ

ತಸ್ಮಾದನನ್ಯ ಶರಣೌ ಭವತೀತ ಮತ್ವಾ ||

ಶ್ರೀ ವತ್ಸಚಿಹ್ನೆ ಕೂರಾಧಿಪ, ಕುರುತ್ತಾಳ್ವಾನ್, ಕೂರೇಶ ಹೀಗೆ ಹೆಸರು ಹಲವು ಆದರೂ ವ್ಯಕ್ತಿ ಒಬ್ಬರೇ! ಇವರಿಗೆ ಶ್ರೀ ರಾಮಾನುಜರ ಪ್ರಥಮ ಶಿಷ್ಯನೆಂಬ ಹೆಗ್ಗಳಿಕೆ! ಅದ್ಭುತ ಜ್ಞಾಪಕಶಕ್ತಿ, ಏಕಸಂಧಿಗ್ರಾಹಿ ಎಂಬ ಬಿರುದು. ತಂದೆ ಅನಂತಭಟ್ಟ, ತಾಯಿ ಮಹಾದೇವಿ, ಕಂಚಿ ಹತ್ತಿರ ಇರುವ ಕೂರಂ” ಗ್ರಾಮದಲ್ಲಿ ಜನನ. ಸಕಲಶಾಸ್ತ್ರ ನಿಪುಣ, ಶ್ರೇಷ್ಠಕವಿ. ಆಚಾರ್ಯ, ಪ್ರತಿಪತ್ತಿ, ಈತನ ವಿಶೇಷಗುಣ. ಇವರು ಹಾಡಿರುವ ಧಾಟಿಪಂಚಕಂನಲ್ಲಿನ ಎರಡು ಶ್ಲೋಕಗಳು.

ಚಾರಿತ್ರೋದ್ಧಾರದಂಡಂ ಚತುರನಯ ಪಥಾಲಂಕ್ರಿಯಾ ಕೇತುದಂಡಂ |

ಸದ್ವಿದ್ಯಾದೀಪದಂಡಂ ಸಕಲಕಲಿಕಥಾ ಸಂಹತೇಃ ಕಾಲದಂಡಂ |

 ತ್ರಯ್ಯಂತಾಲಂಬದಂಡಂ ತ್ರಿಭುವನ ವಿಜಯ ಚ್ಛತ್ರ ಸೌವರ್ಣದಂಡಂ |

ಧತ್ತೇ ರಾಮಾನುಜಾರ್ಯಃ ಪ್ರತಿಕಥರಶಿರೋ ವಜ್ರದಂಡಂ ತ್ರಿದಂಡಂ ||

ತೊಪ್ಪಿಲ್, ಕ೦ಚಿಯ ಒಂದು ಭಾಗ. ಅಲ್ಲಿ ಜನಿಸಿದ ಖ್ಯಾತಕವಿ ವೇದಾಂತದೇಶಿಕರು. ಕವಿತಾರ್ಕಿಕ ಸಿಂಹ ಎಂಬ ಬಿರುದು. ಸುಮಾರು ನೂರಿಪ್ಪತ್ತು ಕೃತಿಗಳ ಕರ್ತೃ. ತಮಿಳು ಸಂಸ್ಕೃತ ಉಭಯ ಭಾಷಾ ಪ್ರವೀಣ. ಎರಡು ಭಾಷೆಗಳಲ್ಲಿ ಅಮೋಘ ಕೃತಿಗಳ ರಚನೆ. ದೇವರಲ್ಲಿ ಭಕ್ತಿ. ಜ್ಞಾನದಲ್ಲಿ ಆಸಕ್ತಿ, ಅಧಿಕಾರದಲ್ಲಿ ವಿರಕ್ತಿ.

ವೇದ ವೇದಾಂಗ ಪರಿಣತ. ಹಯಗ್ರೀವ, ಗರುಡ ಮಂತ್ರಗಳಿಂದ ಶ್ರೀ ಲಕ್ಷ್ಮಿ ಹಯಗ್ರೀವ ಕೃಪಾಪಾತ್ರ. ಇವರ ವಿನಯದ ಬಗ್ಗೆ ಅಪಾರ ಮನ್ನಣೆ. ”ಯತಿರಾಜ ಸಪ್ತತಿ” ಗುರುಗಳ ಬಗ್ಗೆ ಹಾಡಿದ ಪದ್ಯಮಾಲೆ. ಪ್ರಕೃತ ಆಚಾರ್ಯರ ಹಿರಿಮೆ ಸಾರುವ ಈ ತುಣುಕು ನೋಡಿ…

ಒರು ಮಲೈಯಿಲ್ ನಿನ್ರು ವೆರು

ಮಲೈಯಿಲ್ ತಾವುಂ ಸಿಂಹಶರೀರತ್ತಿಲ್

ಜಂತುಕಳೈ ಪೋಲೆ ಭಾಷ್ಯಕಾರ‌ರ್‌

ಸಂಸಾರ ಲಂಘನಂ ಪಣ್ಣ ಆವರೋ

ದುಂಡಾನ ಕುಡಲ್ ತುನಕ್ಕಾಲೇ

ನಾಮುತ್ತೀರ್ಣ ರಾವುದೋ

ಇನ್ನು ವಾದಿಭೀಕರ – ಗುರು ವಿರಚಿತ (1) ಶ್ರೀರಾಮಾನುಜ ಸುಪ್ರಭಾತ, (2) ಶ್ರೀ ಭಾಷ್ಯಕಾರ ಮಂಗಳ.

ವಿಲ್ಲೂರ್‌‌ ನಡಾದೂರ್ ವೆಂಕಟಾಚಾರ್ಯ ಮಹಾದೇಶಿಕನ್ ಅವರ ಯತಿಪತಿ, ಷಣ್ಣವತಿ, ಹೀಗೆ ರಾಮಾನುಜರ ಅಭಿವ್ಯ೦ಜನ ತೋರಿದವರು ಅನಂತಾನಂತ…!

– ಸವ್ಯಸಾಚಿ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi