ಪುಸ್ತಕ ಪರಿಚಯ

ಭಗವತ್‌ ಸಂದೇಶ

ದೇವ ದೇವೋತ್ತಮನ ಚಿತ್ಪ್ರಭಾ ಸ್ವರೂಪರಾದ ಶ್ರೀ ಶ್ರೀ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅನಾದೃಶವಾದ ಈ ಕಿರು ವ್ಯಾಖ್ಯೆ ಸತ್ಯಾನ್ವೇಷಕರಿಗೆ ದಾರಿದೀಪವಾಗಿದೆ. ಪೂಜ್ಯರು ಪಾರಲೌಕಿಕ ಪ್ರವೇಶದ್ವಾರದ ಮೂಲಕ ಕರ್ಮಯೋಗದ ಸಿದ್ಧ ಪ್ರಸಿದ್ಧ ಸ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತಾರೆ.

ಪರಮ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣ ಪರಮಾತ್ಮನ ಕರ್ಮಯೋಗವು ಇಹಪರಗಳೆರಡನ್ನೂ ಸಮೀಕರಿಸಿಕೊಂಡು ಆತ್ಮವನ್ನು ಮುಂದೆ ಸಾಗಿಸುವ ಸತ್ತ್ವಶಾಲಿ ಸಿದ್ಧಾಂತ. ಇಹವನ್ನು ಮರೆತು ಪರ ಎಂಬುದಿಲ್ಲ. ಬದುಕಿನ ಪೂರ್ಣತೆಗೆ ಇಹವೂಬೇಕು. ಪರವೂ ಬೇಕು.

ಈ ಸಹಜಾದೇಶದ ಮನೋಜ್ಞ ಅಭಿವ್ಯಕ್ತಿ ಇದಾಗಿದೆ. ದೇಹಾತ್ಮ ಸಂಬಂಧದಲ್ಲಿ ದೇಹವೇ ಬೇರೆ, ಆತ್ಮವೇ ಬೇರೆ. ದೇಹದಹನ ಯೋಗ್ಯವಾದದ್ದು. ಆತ್ಮ ಅವಿನಾಶಿ, ಸನಾತನ, ಅದು ಅಣುರೇಣು ತೃಣಕಾಷ್ಠದಲ್ಲೂ ಸದಾ ಸ್ಪಂದಿಸುವ ನೂತನ ಚೇತನ.

ಅದನ್ನು ಯಾವ ಖಡ್ಗವೂ ಕತ್ತರಿಸದು, ಯಾವ ಅಗ್ನಿಯೂ ಸುಡದು, ಯಾವ ನೀರೂ ತೊಯ್ಸದು, ಯಾವ ಗಾಳಿಯೂ ಕೊಂಡೊಯ್ಯದು! ಅದು ಸರ್ವಾಂತರ್ಗತ ಶ್ರೀ ಶಕ್ತಿ!

ಪೂಜ್ಯ ಶ್ರೀಲ ಪ್ರಭುಪಾದರು ಈ ಕಿರುಕೃತಿಯ ಮೂಲಕ ಅಮೃತೋಪಮ ಆಧ್ಯಾತ್ಮ ಅಧ್ಯಯನಕ್ಕೆ ನಾಂದಿ ಹಾಡಿದ್ದಾರೆ. ಭಗವದ್ಗೀತೆಯ ಪೂರ್ವ ಪೀಠಿಕೆಯಂತಿರುವ ಈ ಕೃತಿ ಶ್ರೀಸಾಮಾನ್ಯನಿಗೂ ಅರ್ಥವಾಗುವ ಸರಳ, ಸುಂದರ, ಸುಲಭ ಶೈಲಿಯಲ್ಲಿದೆ.

ಇದನ್ನು ಅರ್ಥಪೂರ್ಣವಾಗಿ ದುಡಿಸಿಕೊಳ್ಳೋಣ. ತನ್ಮೂಲಕ ನಮ್ಮ ಹಾರ್ದಿಕ ನಮನಗಳನ್ನು ಸಲ್ಲಿಸೋಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi