ಕಥಾಮೃತ ಬಿಂದು
ಆಂಗ್ಲಮೂಲ: ಪ್ರಭುಪಾದ ನೆಕ್ಟರ್, ಸತ್ಸ್ವರೂಪದಾಸ ಗೋಸ್ವಾಮಿ
ಆಕರ: ಗಿರಿರಾಜ ಸ್ವಾಮಿಗೆ ಬರೆದ ಪತ್ರ (ಜೂನ್ 6, 1976)
ಶ್ರೀಲ ಪ್ರಭುಪಾದರಿಗೆ ಭಗವದ್ಗೀತೆಯನ್ನು ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯೆ ಬರೆದು, ಅದರ ಅರ್ಥ ಕೆಡಿಸುವವರ ಮೇಲೆ ಕೋಪವಿತ್ತು.
“ಯಾರಾದರೂ ತಮ್ಮದೇ ಆದ ತತ್ತ್ವವನ್ನು ಹೊಂದಿದ್ದಾರೆಂದರೆ ಅಗತ್ಯವಾಗಿ ಅದನ್ನು ಬೋಧಿಸಲಿ. ಆದರೆ ಗೀತೆಯ ಮೂಲಕವಲ್ಲ. ತಮ್ಮ ಮನಸ್ಸಿಗೆ ತೋಚಿದ್ದೆಲ್ಲಾ ಹೇಳುತ್ತಾ, “ಇದು ಗೀತೆಯಲ್ಲಿದೆ” ಎನ್ನವುದು ಸರಿಯಲ್ಲ. ಇದು ಎಲ್ಲ ಭಗವದ್ಗೀತಾ ಭಾಷ್ಯಕಾರರ ವಿರುದ್ಧ ನನ್ನ ಹೋರಾಟ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು ನಂಬದವರು ಬೇಕಿದ್ದರೆ ನಾಸ್ತಿಕವಾದವನ್ನೇ ಬೋಧಿಸಲಿ.
ಆದರೆ ಗೀತೆಯ ಮೂಲಕವೇ ಯಾಕೆ?” ಎಂದು ಶ್ರೀಲ ಪ್ರಭುಪಾದರು ಸಿಡಿದು ಬೀಳುತ್ತಿದ್ದರು. ಈ ಕುರಿತು ಗಿರಿರಾಜ ಸ್ವಾಮಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ ಕಿರುಕಥೆ ಇದು.

ಅದೊಬ್ಬ ವ್ಯಕ್ತಿಗೆ ಗಾಂಜಾ ಸೇದುವ ಚಟ. ಆದರೆ ನೇರವಾಗಿ ತಾನು ಆ ಕೆಲಸ ಮಾಡಲು ಭಯ. ಆದರೆ ತಾನು ಸೇದಲೇಬೇಕು. ಇದಕ್ಕೆ ಆತ ಸುಲಭ ದಾರಿ ಕಂಡುಕೊಂಡ. ಗಾಂಜಾವನ್ನು ಗೆಳೆಯನ ಕೈಲಿರಿಸಿ, ಅದನ್ನು ಎಳೆದುಕೊಂಡು ತಾನು ಸೇದತೊಡಗಿದ. ಯಾರಾದರೂ ಹಿರಿಯರು ಬಂದು ನೋಡಿದರೆ, ಗಾಂಜಾ ತನ್ನ ಕೈಲಂತೂ ಇರುವುದಿಲ್ಲವಲ್ಲ! ಎನ್ನುವ ಯೋಚನೆ ಅವನದು.
ಆಗ ಗಾಂಜಾ ತಾನು ಸೇದಿದರು ಯಾರ ಕೈಲಿ ಅದು ಇರುವುದೋ ಅವರೇ ಅದಕ್ಕೆ ಬಾಧ್ಯಸ್ಥರಾಗುತ್ತಾರಲ್ಲವೆ?
ನೀತಿ: ತಾವು ಮಾಡುತ್ತಿರುವ ಕೆಲಸ ತಪ್ಪು ಎಂಬ ಅರಿವಿರುವವರು ಯಾವಾಗಲೂ ಅದನ್ನು ಬೇರೆಯವರ ಮೂಲಕವೇ ಮಾಡಿಸುತ್ತಾರೆ.






Leave a Reply