ಹರೇ ಕೃಷ್ಣ ಧರ್ಮ

ಧರ್ಮವನ್ನು ಒಂದು ರೀತಿಯ ಶ್ರದ್ಧೆ ಎಂದು ನೀವು ಭಾವಿಸಿದರೆ ಹರೇ ಕೃಷ್ಣ ಅಥವಾ ಕೃಷ್ಣಪ್ರಜ್ಞೆಯು ಒಂದು ಧರ್ಮವಲ್ಲ. ಅದು ಹೇಗೆಂದರೆ, ಒಬ್ಬ ಹಿಂದುವು ಮತಾಂತರಗೊಂಡು ಕ್ರಿಶ್ಚಿಯನ್‌ ಆಗಬಹುದು ಅಥವಾ ಒಬ್ಬ ಮುಸ್ಲಿಂ ಹಿಂದುವಾಗಿ ಮತಾಂತರಗೊಳ್ಳಬಹುದು, ಇತ್ಯಾದಿ.  ಜನರ ಶ್ರದ್ಧೆ ಬದಲಾಗಬಹುದು. ಆದ್ದರಿಂದ, ಕೃಷ್ಣಪ್ರಜ್ಞೆ ಅಥವಾ ಸನಾತನ ಧರ್ಮವು ಅಂತಹ `ಧರ್ಮ’ ಅಲ್ಲ.

ವಾಸ್ತವವಾದ ಧರ್ಮ ಅಥವಾ ನಿಜವಾದ ಧರ್ಮವು ಸ್ಥಿರ. ಅದನ್ನು ಬದಲಿಸಲಾಗದು. ಏಕೆಂದರೆ ಅದು ಮಾನವ ನಿರ್ಮಿತವಲ್ಲ. ಧರ್ಮಂ ತು ಸಾಕ್ಷಾದ್‌ ಭಗವತ್‌ ಪ್ರಣೀತಂ : ನಿಜವಾದ ಧರ್ಮವೆಂದರೆ, ಭಗವಂತನೇ ವಿಧಿಸಿದ ನಿಯಮಗಳು. ಯಾವುದೋ ಒಂದರ ನೈಜ ಗುಣವೆಂದೂ ಧರ್ಮವನ್ನು ವಿವರಿಸಬಹುದು. ಆ ನೈಜ ಗುಣವಿಲ್ಲದಿದ್ದರೆ ಅದು ತನಗೆ ತಾನೇ ಅಂತ್ಯಗೊಳ್ಳುತ್ತದೆ. ಉದಾಹರಣೆಗೆ ಸಕ್ಕರೆಯ ಧರ್ಮವು ಸಿಹಿಯಾಗಿರುವುದು, ಮತ್ತು ದ್ರವವಾಗಿರುವುದು ನೀರಿನ ಧರ್ಮ. ಅದೇ ರೀತಿ ಭಗವಂತನಿಗೆ ಸೇವೆ ಸಲ್ಲಿಸುವುದೇ ಜೀವಿಯ ಧರ್ಮ : ಜೀವೇರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ. ಆದುದರಿಂದ ಪರಮಾತ್ಮ ಕೃಷ್ಣನಿಗೆ ಪ್ರೀತಿಯ ಸೇವೆಯನ್ನು ಸಲ್ಲಿಸುವುದು ನಮ್ಮ ಧರ್ಮ.

ಬ್ರಹ್ಮಾಂಡದಲ್ಲಿ ಮೂರು ಶಕ್ತಿಗಳಿವೆ : ಆಧ್ಯಾತ್ಮಿಕ, ಲೌಕಿಕ ಮತ್ತು ತಟಸ್ಥ. ದೀರ್ಘ ಕಾಲ ಐಹಿಕ ಶಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣ ತಟಸ್ಥ ಶಕ್ತಿ, ಜೀವಾತ್ಮವು ಲೌಕಿಕ ಶಕ್ತಿಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅದರೆ ಅದರಲ್ಲಿ ಹೊಂದಿಕೊಳ್ಳುವುದು ಅದಕ್ಕೆ ಸಾಧ್ಯವಿಲ್ಲ, ಹೀಗಾಗಿ ಅದಕ್ಕೆ ಅಲ್ಲಿ ಸುಖವಿಲ್ಲ. ಆದರೂ, ತಟಸ್ಥ ಶಕ್ತಿಯಾಗಿರುವ ಕಾರಣ ಅದು ತನ್ನ ಮುಖವನ್ನು ಆಧ್ಯಾತ್ಮಿಕ ಶಕ್ತಿಯತ್ತ ತಿರುಗಿಸಬಹುದು ಮತ್ತು ಸುಖವನ್ನು ಕಂಡುಕೊಳ್ಳಬಹುದು.

ಹಾಗಿದ್ದರೆ, ವಾಸ್ತವವಾಗಿ ಆಧ್ಯಾತ್ಮಿಕ ಯಾತ್ರೆ ಹೇಗೆ ಆರಂಭಗೊಳ್ಳುತ್ತದೆ? ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ. ಚೇತೋ ದರ್ಪಣ ಮಾರ್ಜನಂ, ಭವ ಮಹಾ ದಾವಾಗ್ನಿ ನಿರ್ವಾಪಣಂ : ಯಾರಾದರೂ ಈ ಮಂತ್ರವನ್ನು ಜಪಿಸಿದರೆ, ಅವನು ಇಡೀ ಸ್ಥಿತಿಯನ್ನು ಸ್ಪಷ್ಟವಾಗಿ ನೋಡಲು ಸಾಧ್ಯ : ತಾನು ಏನು, ದೇವರೆಂದರೆ ಏನು, ಮತ್ತು ತನ್ನ ಕರ್ತವ್ಯ ಏನು? ಅದೇ ಇದರ ಪ್ರಯೋಜನದ ಮೊದಲ ಕಂತು. ಅವನು ಜಪವನ್ನು ಮುಂದುವರಿಸಿದಂತೆ, ಈ ಲೌಕಿಕ ಲೋಕದ ಮೂರು – ಮುಖ ಕಷ್ಟಗಳು ಅವನಿಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತವೆ. ಅಂತಿಮವಾಗಿ, ಜಪವು ಅವನ ಹೃದಯದಲ್ಲಿ ಆನಂದ ಸಾಗರವನ್ನು ವಿಸ್ತರಿಸುತ್ತದೆ. ಆಗ ಅವನು ನಿಜವಾಗಿಯೂ ಸುಖವಾಗಿರುತ್ತಾನೆ.

ವ್ಯಕ್ತಿಯು ಭಗವಂತನ ಸೇವೆಯಲ್ಲಿ ತೊಡಗಿ ಆನಂದದಿಂದ ಇರಲು ಪರಮಾತ್ಮ ಮತ್ತು ಅವನ ಆಂತರಿಕ ಶಕ್ತಿಗೆ ಪ್ರಾರ್ಥನೆ ಸಲ್ಲಿಸುವುದು. ಇದೇ ಹರೇ ಕೃಷ್ಣ ಮಂತ್ರದ ಅರ್ಥ. ಈ ಮಂತ್ರವನ್ನು ಜಪಿಸುವುದರಿಂದ ಯಾವುದೇ ನಷ್ಟವೂ ಇಲ್ಲ ಅಥವಾ ಯಾವುದೇ ಬೆಲೆಯನ್ನೂ ತೆರಬೇಕಾಗಿಲ್ಲ : ಇದು ಉಚಿತ. ಬದುಕನ್ನೇ ಮಾರ್ಪಡಿಸುವ ಉಚಿತ ವಿಧಾನ ಸಿಕ್ಕರೆ, ಪ್ರಯೋಗವನ್ನೇಕೆ ಮಾಡಬಾರದು? ಆದುದರಿಂದ ಎಲ್ಲರೂ ಜಪಿಸಿ : 

ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi