ಕೆಲವು ಕ್ರೈಸ್ತಪಾದ್ರಿಗಳು ಹೇಳುವಂತೆ ಬೈಬಲ್‌ನಲ್ಲಿ ವಿಗ್ರಹರಾಧನೆಯನ್ನು ಖಂಡಿಸಲಾಗಿದೆ. ವಿಗ್ರಹ ಪೂಜೆಯೇ ಮಹಾಪರಾಧ. ಇವು ಶನಿವಾರ ಅಥವಾ ಭಾನುವಾರ ಮುಂಜಾವಿನ ಬೈಬಲ್ ಶ್ರವಣದಿಂದ ಹೀಗೆಯೆ ರೂಪು ತಳೆಯುತ್ತವೆ.

ಬೈಬಲ್ ಮೂರ್ತಿಪೂಜೆ ಖಂಡಿಸಿದೆ ಎಂಬುದನ್ನು ನಾವು ಅರಿಯುತ್ತೇವೆ. ಹಾಗೂ ನಾವು ಕಟ್ಟಾ ಧಾರ್ಮಿಕರಲ್ಲದಿದ್ದರೂ, ಮೂರ್ತಿಪೂಜೆ ತಪ್ಪು ಎಂದುಕೊಳ್ಳುತ್ತೇವೆ, ಮತ್ತು ಟಿ.ವಿ. ಪರದೆಯನ್ನೇ ಪೂಜ್ಯಭಾವದಿಂದ ನೋಡುವುದನ್ನು ಮುಂದುವರಿಸುತ್ತೇವೆ. ಇದೇ ವೇಳೆ ನಾವು ಚಾರ್ಲ್ಸ್ ಹಿಲ್ಟನ್‌ನ “ಮೋಸೆಸ್” ಅನ್ನು ಇಷ್ಟಪಡುತ್ತೇವೆ, ಇದೇ ಚಾರ್ಲ್ಸ್ ಹಿಲ್ಟನ್ ಲಕ್ಷಾಂತರ ಮಂದಿಗೆ ಆರಾಧ್ಯ ಮೂರ್ತಿ.
ಮೂರ್ತಿಪೂಜೆ ಎಂದರೆ ನಿರ್ದಿಷ್ಟವಾಗಿ ಏನು? ಬೈಬಲ್ ಅದನ್ನು ಯಾಕೆ ಖಂಡಿಸುತ್ತದೆ? ಮತ್ತು ವಿಗ್ರಹಾರಾಧಕ ಎಂದರೆ ಯಾರು?
ಬೈಬಲ್‌ನಲ್ಲಿ ದೇವರು ಹೇಳುತ್ತಾನೆ, “ನನ್ನ ಬಿಟ್ಟು ಬೇರೆ ದೇವರು ಇರಲು ಸಾಧ್ಯವಿಲ್ಲ.” (ಎಕ್ಸೋಡಸ್ 20:3) ಇದು ಮೂರ್ತಿಪೂಜೆ ಕುರಿತು ತಾನು ಹೇಳಿರುವ ಜನಪ್ರಿಯ ವಿವರಣೆಗೆ ದೇವರೇ ಬರೆದ ಮುನ್ನುಡಿ. ಮತ್ತು ಅತಿ ಮಹತ್ವದ ಮುನ್ನುಡಿಯೂ ಹೌದು. ಇಸ್ರೇಲಿನ ಜನರು ಆಗ ದೇವರ ಹೊರತಾದ, ಅಸ್ತತ್ವಿದ ಜೀವಿಗಳ ವಿಗ್ರಹಗಳನ್ನು ಸಿಂಗರಿಸುತ್ತಿದ್ದರು ಮತ್ತು ಅಂಥ ಮೂರ್ತಿಗಳನ್ನು ಪೂಜಿಸುತ್ತಿದ್ದರು.
ಇದಕ್ಕೆ ಉತ್ತಮ ಉದಾಹರಣೆ “ಗೋಲ್ಡನ್ ಕಾಫ್” (ಚಿನ್ನದ ಕರು). ಆದರೆ ದೇವನ ವಿಗ್ರಹವನ್ನು ಪೂಜಿಸಲು ಯಾವುದೇ ನಿರ್ಬಂಧ ಇರಲಿಲ್ಲ. “ಇತರ ದೇವರು”ಗಳ ವಿಗ್ರಹರಾಧನೆ ಮಾತ್ರ ವರ್ಜ್ಯವಾಗಿತ್ತು. ಭಗವದ್ಗೀತೆಯಲ್ಲೂ (9.23) ಪರಮ ದೇವೋತ್ತಮನು ಇದನ್ನೇ ಹೋಲುವ ಮಾತು ಹೇಳಿದ್ದಾರೆ:
“ಯಾರು ಇತರ ದೇವರುಗಳ ಭಕ್ತರೋ ಯಾರು ಅವರನ್ನು ಶ್ರದ್ಧೆಯಿಂದ ಪೂಜಿಸುತ್ತಾರೋ ಅವರು ನಿಜವಾಗಿಯೂ ನನ್ನನ್ನೇ ಪೂಜಿಸಿದಂತೆ, ಓ ಕುಂತಿಪುತ್ರನೆ, ಆದರೆ ಅವರು ಅದನ್ನು ತಪ್ಪು ರೀತಿಯಲ್ಲಿ ಮಾಡಿರುತ್ತಾರೆ’.
ಈಗ ನಾವು, ವಿಗ್ರಹಾರಾಧನೆ ವಿರುದ್ದ ಬೈಬಲೀಯ ಹೇಳಿಕೆಗಳೊಂದಿಗೆ ಮುಂದುವರಿಯೋಣ. “ಯಾವುದೇ ವಿಗ್ರಹ ಅಥವಾ ಅದರಂತೆ ಇರುವ ಯಾವುದಕ್ಕೂ, ಮೇಲೆ ಆಕಾಶದಲ್ಲಿರಲಿ, ಕೆಳಗೆ ಭೂಮಿಯಲ್ಲಿರಲಿ ಅಥವಾ ಭೂತಳದಲ್ಲಿರುವ ಜಲದಲ್ಲಿರಲಿ, ಅವುಗಳಿಗೆ ನೀವು ತಲೆ ಬಾಗಬಾರದು ಅಥವಾ ಅವುಗಳ ಸೇವೆ ಮಾಡಬಾರದು: ಫಾರ್ ಐ, ದಿ ಲಾರ್ಡ್ ದೈ ಗಾಡ್ ಆ್ಯಮ್ ಎ ಜೆಲಸ್ ಗಾಡ್.” (ಎಕ್ಸೋಡಸ್ 20:4-5).
ಈ ಹೇಳಿಕೆಯಲ್ಲಿ ದೇವರ ಮೊದಲ ಮತ್ತು ಕೊನೆಯ ವಾಕ್ಯ ಪರಿಗಣಿಸಿದರೆ, ದೇವರ ನಿರ್ಬಂಧವು ‘ಕೀಳು ದೇವತೆಗಳ’ ವಿಗ್ರಹಾರಾಧನೆ ವಿರುದ್ಧವೆಂದು ನಿರ್ಧರಿಸಬಹುದು ಯಾಕೆಂದರೆ, “ಅವನು ಸಹಿಸದ ದೇವರು”. ನಾವು ಬೈಬಲ್ಲಿನ ಉಪದೇಶಗಳನ್ನು ಪ್ರಸ್ತುತತೆಯ ಆಚೆ ಪರಿಗಣಿಸಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ.
ಇಸ್ರೇಲಿನ ಜನರಲ್ಲಿ ರೂಢಿಯಿಂದ ಬಂದಿರಬಹುದಾಗಿದ್ದ ಕೀಳು ದೇವತೆಗಳ ವಿಗ್ರಹಗಳನ್ನು ದೇವರು ಇಷ್ಟಪಡಲಿಲ್ಲ ಎನ್ನುವುದು ಇಲ್ಲಿ ಸುಸ್ಪಷ್ಟ (ಉದಾ: ಗೋಲ್ಡನ್ ಕಾಫ್). ಆದರೆ ದೇವರು ಎಂದೂ, “ನನ್ನ ರೂಪದ ವಿಗ್ರಹ ನಿರ್ಮಿಸಬೇಡಿ’ ಎಂದು ಹೇಳಿಲ್ಲ. ಸಹಜವಾಗಿಯೇ ಅವನ ವಿರೋಧ ಕೀಳು ದೇವತೆಗಳ ವಿಗ್ರಹಾರಾಧನೆಯೇ ಹೊರತು ತನ್ನ ಮೂರ್ತಿಯ ಪೂಜೆ ಕುರಿತು ಅಲ್ಲ. ಅಲ್ಲಿ ವಿಗ್ರಹಾರಾಧನೆ ಎಂದರೆ, ಪರಮ ದೇವೋತ್ತಮ ಪುರುಷನ ಹೊರತಾದ ಏನನ್ನೋ ಪೂಜಿಸುವುದು.
ಆದರೆ, ನಾವು ಪರಮ ದೇವೋತ್ತಮ ಪುರುಷನ ಸ್ವರೂಪವನ್ನೇ ಪೂಜಿಸಿದರೆ ಏನಾಗುತ್ತದೆ? ದೇವರು ರೂಪಾತೀತ ಎಂದು ಕೆಲವರು ವಾದಿಸುತ್ತಾರೆ. ಆದರೆ ದೇವರ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ನಿರ್ದಿಷ್ಟಸ್ವರೂಪ ಇರುವಾಗ ದೇವರು ಮಾತ್ರ ಹೇಗೆ ರೂಪವಿಲ್ಲದೆ ಇರಲು ಸಾಧ್ಯ?
ಹಾಗೆ ಅರ್ಥೈಸಿದಾಗ ದೇವರು ತನ್ನ ಸೃಷ್ಟಿಗಿಂತ ಕೆಳಮಟ್ಟದವನಾಗುತ್ತಾನೆ; ಹೇಳಬೇಕೆಂದರೆ, ಪೂರ್ಣವು ಅಪೂರ್ಣ ಎಂದಂತಾಗುತ್ತದೆ – ಇದು ಸುಮ್ಮನೆ ತರ್ಕವಿಲ್ಲದ್ದು. ಸಂಪೂರ್ಣ, ಸಮಗ್ರವು ತನ್ನೊಳಗೆ ನಮ್ಮ ಅನುಭವದಾಚೆಗಿನ ಎಲ್ಲವನ್ನೂ ಒಳಗೊಂಡಿರಬೇಕು; ಇಲ್ಲದಿದ್ದರೆ ನಾವು ಪರಿಪೂರ್ಣರಾಗಲು ಸಾಧ್ಯವಿಲ್ಲ.
ಅದರ ಹೊರತಾಗಿ, ಜಗತ್ತಿನ ಎಲ್ಲ ಶ್ರೇಷ್ಠ ಧರ್ಮಗ್ರಂಥಗಳೂ ನಮಗೆ ದೇವರನ್ನು ಪ್ರೀತಿಸು ಎಂದು ಹೇಳುತ್ತವೆ. ನಾವು ಅದು ಹೇಗೆ ಒಂದು ನಿರಾಕಾರ ಅಥವಾ ಶೂನ್ಯವನ್ನು ಪ್ರೀತಿಸಲು ಸಾಧ್ಯ? ಅದು ಸಾಧ್ಯವೇ ಇಲ್ಲ. ನಾವೆಲ್ಲ ಮನುಷ್ಯರು ಮತ್ತು ಇತರ ಮನುಷ್ಯರನ್ನು ಪ್ರೀತಿಸಬಯಸುತ್ತೇವೆ – ಹೊರತು ಬಾಹ್ಯಾಕಾಶದ ಯಾವುದೋ ಅಸ್ಪಷ್ಟ ವಸ್ತುವನಲ್ಲ.
ನಾವು ವ್ಯಕ್ತಿಗತ ಸಂಬಂಧ ಬಯಸುತ್ತೇವೆ ಮತ್ತು, ಅಂತಿಮ ಸಂಬಂಧ ಎಂದರೆ ಅದು ಪರಮ ದೇವೋತ್ತಮ ಪುರುಷನೊಂದಿಗೆ ಮಾತ್ರ.
ಒಪ್ಪಿಗೆ, ದೇವರ ಸ್ವರೂಪ ನಮ್ಮಂತೆ ಇರುವುದಿಲ್ಲ. ಇದು ಸಂಪೂರ್ಣ ಪ್ರಜ್ಞೆಯ ಪರಿಕಲ್ಪನೆಯ ಮಿತಿಯಾಚೆಗಿನ ಅಲೌಕಿಕ. ಏನೇ ಅಂದರೂ ಇದಕ್ಕೊಂದು ಸ್ವರೂಪವಿದೆ. ಜಗತ್ತಿನ ಅತಿ ಹಳೆಯ ಧಾರ್ಮಿಕ ಗ್ರಂಥಗಳಲ್ಲೊಂದಾದ ‘ಬ್ರಹ್ಮ ಸಂಹಿತೆ’ ಹೇಳುತ್ತದೆ.
ಈಶ್ವರ ಪರಮಃ ಕೃಷ್ಣಃ
ಸಚ್ಚಿದಾನಂದ ವಿಗ್ರಹಃ |
ಅನಾದಿರಾದಿರ್ ಗೋವಿಂದಃ
ಸರ್ವ ಕಾರಣ ಕಾರಣಮ್ ||
“ಕೃಷ್ಣ, ಪರಮೋಚ್ಚನಿಯಂತ್ರಕ. ಅವನು ಶಾಶ್ವತ ಜ್ಞಾನ ಮತ್ತು ಕರುಣೆಯ ಸ್ವರೂಪವನ್ನು ಹೊಂದಿದ್ದಾನೆ. ಅವನೇ ಎಲ್ಲ ಸಂಭವಗಳಿಗೆ ಪ್ರಮುಖ ಕಾರಣ.”
ಆದರೆ ಧಾರ್ಮಿಕ ಪಂಡಿತರು ಅಲ್ಲಿಂದ ಇಲ್ಲಿವರೆಗೂ ವರ್ಷಗಳ ಕಾಲ ದೇವರ ಸ್ವರೂಪದ ಬಗ್ಗೆ ತಮ್ಮ ಮಿತಿ ಪ್ರದರ್ಶಿಸುತ್ತಲೇ ಬಂದಿದ್ದಾರೆ. ಮಧ್ಯಯುಗದ ಬೈಬಲ್ ಪಂಡಿತ, ಸಾಕಷ್ಟು ಗೌರವಾನ್ವಿತರಾಗಿದ್ದ ಮೋಸೆಸ್ ಮೈ ಮೊನಿಡಸ್‌ರ ಕೃತಿಗಳಲ್ಲೂ ಈ ನಡಾವಳಿಯ ಅನುಕರಣೆ ಇದೆ.
ಅವರು ತಮ್ಮ “ಮಿಶ್ನಾ ತೊರಾ”ದಲ್ಲಿ ಹೇಳಿದ್ದು ನೋಡಿ- ದೇವರು ಮೇಲೆ ಸ್ವರ್ಗದಲ್ಲಿ ಇದ್ದಾನೆಂದೂ, ಕೆಳಗೆ ಭೂಮಿಯಲ್ಲೂ ಇದ್ದಾನೆಂದು ಹೇಳಲಾಗುತ್ತಿದೆಯಾದ್ದರಿಂದ ಆತನಿಗೆ ಸ್ವರೂಪವಿರಲು ಸಾಧ್ಯವಿಲ್ಲ- ಇದಕ್ಕೆ ಮೈಮೊನಿಡಸ್ ಕೊಡುವ ಕ್ಷುಲ್ಲಕ ಕಾರಣವೆಂದರೆ ಒಂದೇ ಸ್ವರೂಪ ಎರಡು ಕಡೆ ಒಂದೇ ವೇಳೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.
ಮೈಮೊನಿಡಸ್ ಹೇಳಿದಂತೆ ದೇವರಿಗೆ- ಎರಡು ಸ್ಥಳಗಳಲ್ಲಿ ಏಕಕಾಲಕ್ಕೆ ಇರಲಾರದ ಒಂದು ರೂಪ ಆಕಾರ ಇಲ್ಲದಿರಬಹುದು. ಅದರರ್ಥ ದೇವರಿಗೆ ಸ್ವರೂಪವೇ ಇಲ್ಲ ಎಂದು ಹೇಳಬೇಕೆಂದರೆ, ದೇವರು ಒ೦ದು ಅನಂತ, ಅಲೌಕಿಕ ಸ್ವರೂಪಿ. ಮೈಮೊನಿಡಸ್‌ನಂಥ ಪಂಡಿತರು ದೇವರ ಸ್ವರೂಪ ಕುರಿತು ರೂಪಕಗಳ ಸಾಮ್ರಾಜ್ಯವೇ ಬೈಬಲ್‌ನಲ್ಲಿ ಇರುವುದನ್ನು ಅಲ್ಲಗಳೆದರೂ, ಬೈಬಲ್ ಸಾಹಿತ್ಯವನ್ನು ಹತ್ತಿರದಿಂದ ಅವಲೋಕಿಸಿದಲ್ಲಿ ಅದು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.
ಬೈಬಲ್ ಓದಿದಾಗ: ಅವನ ಪದತಲದಲ್ಲಿ” (ಎಕ್ಸೋಡಸ್ 24:10), “ದೇವರ ಬೆರಳುಗಳಿಂದ ರುಜು ಮಾಡಿದ” (ಎಕ್ಸೋಡಸ್ 31:18), “ದೇವರ ಕರ” (ಎಕ್ಸೋಡಸ್ 9:3), “ದೇವರ ಕಣ್ಣುಗಳು” (ಜಿನೆಸಿಸ್ 38:7), “ದೇವರ ಕಿವಿಗಳು” (ನಂಬರ್ಸ್ 11:1) ಇತ್ಯಾದಿ ವಿವರಗಳು ಬೈಬಲ್ ಸಾಹಿತ್ಯದ ತುಂಬ ಹರಡಿಕೊಂಡಿವೆ. ಬೈಬಲ್ ಯಾಕೆ ಹೀಗೆ ದೇವರನ್ನು ಸತತ ಸಾಕಾರಿಯಾಗಿ ಪ್ರಸ್ತುತಪಡಿಸಿ, ವಾಸ್ತವದಲ್ಲಿ ದೇವರು ನಿರಾಕಾರ ಎಂದು ಹೇಳುತ್ತದೆ? ನಿಜಕ್ಕೂ ಇದು ಅಪಾಯಕಾರಿ.
ಮಿಗಿಲಾಗಿ, ಬೈಬಲ್ ದೇವರ ಸ್ವರೂಪವನ್ನು ಸ್ಪಷ್ಟವಾಗಿ ಹೇಳುತ್ತದೆ ಮತ್ತು ಅತ್ಯಂತ ಅರ್ಹ ವ್ಯಕ್ತಿ ಮಾತ್ರ ಯಾವಾಗಲೂ ಅದನ್ನು ನೋಡಲು ಸಾಧ್ಯ ಎನ್ನುತ್ತದೆ. “ನಾವು ಯಾವುದೇ ಸಂದರ್ಭದಲ್ಲೂ ಅವನ ಧ್ವನಿಯನ್ನು ಕೇಳದಿರಬಹುದು ಅಥವಾ ಅವನನ್ನು ನೋಡದಿರಬಹುದು, ಅಂದ ಮಾತ್ರಕ್ಕೆ ಯಾರೂ ಪರಮಪಿತನನ್ನು ನೋಡಿಲ್ಲ ಎಂದಲ್ಲ. ಸೇವ್ ಹಿ ವಿಚ್ ಈಸ್ ಆಫ್ ಗಾಡ್, ಹಿ ಹ್ಯಾಥ್ ಸೀನ್ ದಿ ಫಾದರ್.” (ಜಾನ್ 5:37, 6:46).

ದೇವರು “ಮಾನವ ಸ್ವರೂಪವನ್ನು ಹೋಲುತ್ತಾನೆ” ಎಂದು ವಿವರಿಸುತ್ತದೆ ಎಝೆಕಿಯೆಲ್ (1:26). ಜಿನೆಸಿಸ್‌ನಲ್ಲಿ 18 ಮತ್ತು 19ನೆ ಅಧ್ಯಾಯದಲ್ಲಿ ಇಸ್ರೇಲ್ ದೇಶದ ರಾಷ್ಟ್ರಪಿತ ಅಬ್ರಹಾಂ ಎದುರು ದೇವರು ಪ್ರತ್ಯಕ್ಷನಾದ ವಿವರ ಇದೆ. ಇಲ್ಲಿ ಆಕಾರವು ವಿವರವಾಗಿ ವರ್ಣಿಸಲ್ಪಡದಿದ್ದರೂ, ದೇವರು ಮನುಷ್ಯನ ಆಕಾರದಲ್ಲೇ ಪ್ರತ್ಯಕ್ಷನಾಗಿದ್ದಾನೆ.
ಹದಿನೆ೦ಟನೆಯ ಅಧ್ಯಾಯದ ಸ್ತೋತ್ರವೊಂದರಲ್ಲಿ ದೇವರು ಅಬ್ರಹಾಂ ಎದುರು ಪ್ರತ್ಯಕ್ಷನಾಗುತ್ತಾನೆ. ಎರಡನೆಯ ಸ್ತೋತ್ರದಲ್ಲಿ ಅಬ್ರಹಾಂ ಅವನೆಡೆಗೆ ನೋಡಿದ ಎಂದು ನಮಗೆ ಹೇಳಲಾಗುತ್ತದೆ. ಹದಿನಾಲ್ಕನೆಯ ಸ್ತೋತ್ರದಲ್ಲಿ ಅಬ್ರಹಾಂ ಉದ್ದೇಶಿಸಿ ಮಾತನಾಡುವಾಗ ದೇವರು ತನ್ನ ಕುರಿತು ಹೀಗೆ ಕೇಳುತ್ತಾನೆ, “ದೇವರಿಗೆ ಯಾವುದಾದರೂ ತುಂಬ ಕಠಿಣವೆ?”.
ದೇವರ ಈ ಸರಳ ಹೇಳಿಕೆ, ದೇವರಿಗೆ ರೂಪ ಇರಲು ಸಾಧ್ಯವೆ ಎಂಬ ವಿತಂಡವಾದವನ್ನು ಸೋಲಿಸುತ್ತದೆ. ದೇವನು ತನಗೇನು ಇಷ್ಟವೋ ಅದನ್ನು ಮಾಡಬಲ್ಲ. ನಾವು “ಆತ ಇದು ಮಾಡಬಲ್ಲ’ ಮತ್ತು “ಇದು ಮಾಡಲಾರೆ” ಎಂದು ಹೇಳಿ ಮಿತಿಗೊಳಿಸುವ ಯತ್ನ ಮಾಡಬಾರದು.
ದೇವರು, ಮನುಷ್ಯ ರೂಪದಲ್ಲಿ ಜಬೋಕ್ ನದಿ ತೀರದಲ್ಲಿ ಒಂದು ಇರುಳು ಜಾಕೊಬ್‌ನನ್ನು ಭೇಟಿ ಮಾಡುತ್ತಾನೆ. ಈ ಘಟನೆಯಲ್ಲಿ ಜಾಕೋಬ್ ದೇವರಿಗೆ ಮುಖಾಮುಖಿಯಾಗುತ್ತಾನೆ (ಜಿನೆಸಿಸ್ 32:24-32), ಬೈಬಲ್ ನ ಈ ವಿಭಾಗ ಆಶ್ಚರ್ಯಕರ ರೀತಿಯಲ್ಲಿ ದೇವೋತ್ತಮ ಶ್ರೀಕೃಷ್ಣ ಬೃಂದಾವನದಲ್ಲಿ ಗೋಪಾಲಕರೊಂದಿಗೆ ಕುಸ್ತಿ ಆಡುತ್ತಿದ್ದ ರೀತಿಯನ್ನು ಹೋಲುತ್ತದೆ.
ಜಾಕೋಬ್, ಒಬ್ಬಮಾನವನಂತೆ ಕಾಣುವ ವ್ಯಕ್ತಿಯೊಂದಿಗೆ ಕುಸ್ತಿಯಾಡುತ್ತಾನೆ. ಆತ ಘಟನೆಯಲ್ಲಿ ಜಾಕೋಬ್‌ನ ತೊಡೆಯನ್ನು ಘಾಸಿಗೊಳಿಸುತ್ತಾನೆ. ಜಾಕೋಬ್‌ನು, ಈ ‘ಮನುಷ್ಯ’ ನಿಜವಾದ ದೇವರು ಎಂದು ಉದ್ಧರಿಸುತ್ತಾನೆ.
ಆತ ಮುಖಾಮುಖಿ ನಡೆದ ಪ್ರದೇಶವನ್ನು ಸ್ಮಾರಕವಾಗಿಸುವ ಉದ್ದೇಶದಿಂದ “ಪೆನಿಯೆಲ್” ಅಂದರೆ “ದೇವರ ಮುಖ” ಎಂದು ಹೆಸರಿಡುತ್ತಾನೆ.
ಜಾಕೋಬ್ ಹೇಳುತ್ತಾನೆ, “ನಾನು ದೇವರನ್ನು ಮುಖಾಮುಖಿಯಾಗಿ ಕಂಡೆ, ಮತ್ತು ನನ್ನ ಜೀವನ ಸಾರ್ಥಕವಾಯಿತು” (ಜಿನೆಸಿಸ್ 32:30)
ಬಹಳಷ್ಟು ಬೈಬಲ್ ಅನುವಾದಕರು ಇದನ್ನು ಜಾಕೋಬನು “ಒಂದು ದೇವದೂತ” ಅಥವಾ “ಯಾವುದೋ ದೈವೀಸ್ವರೂಪ” ನೋಡಿದನೆಂದು ಬರೆದಿದ್ದಾರೆ.
ಅವರು ಹೀಗೇಕೆ ಅನುವಾದಿಸಿದ್ದಾರೆಂದರೆ, ಜುದಾಯಿಸಂ ದೇವರನ್ನು ಅವ್ಯಕ್ತ ಎ೦ದು ಬಗೆಯಲಾರಂಭಿಸಿತ್ತು ಮತ್ತು ಜಾಕೋಬ್ ಪರಮ ದೇವೋತ್ತಮನ ಮುಖವನ್ನು ನೋಡಿದ ಎಂಬುದು ಅವರಿಗೆ ಅರ್ಥವಾಗಲೇ ಇಲ್ಲ! ಜಾಕೋಬ್ ಬಳಸಿದ ಹಿಬ್ರೂ ಪದ “ಎಲೋಹಿಮ್’ ಎಂಬುದು ಅನ್ಯಾರ್ಥ ಬರದಂತೆ, ದೇವರನ್ನೇ ಕುರಿತು ಹೇಳಿದ್ದಾಗ್ಯೂ!!
ಮೋಸೆಸ್ ಕೂಡ ದೇವರ ರೂಪವನ್ನು ಗ್ರಹಿಸಿದ್ದಾನೆ. ಯಾವುದೇ ಮನುಷ್ಯ ದೇವರನ್ನು ನೋಡಿ ಬದುಕಿರಲಾರ ಎಂದು ಹೇಳಿದ್ದರೂ (ಎಕ್ಸೋಡಸ್ 33:20), ದೇವರು ಆತನಿಗೆ ಪ್ರತ್ಯಕ್ಷನಾಗಿದ್ದಾನೆ. ಬೈಬಲ್ ಈ ಘಟನೆಯನ್ನು ಎಚ್ಚರಿಕೆಯಿಂದ ಸಂಬಂಧ ಕಲ್ಪಿಸುವುದು ಹೀಗೆ: “ಮೋಸೆಸ್ ಅನಂತರ ಆರನ್, ನದಾಬ್, ಅಬಿಹು ಮತ್ತು ಇಸ್ರೇಲಿನ ಇತರ ಎಪ್ಪತ್ತು ಹಿರಿಯರೊಡನೆ ಮೇಲೆ ಹೋದನು ಮತ್ತು ಅವರು ಇಸ್ರೇಲಿನ ದೇವರನ್ನು ನೋಡಿದರು.” (ಎಕ್ಸೋಡಸ್ 24:9-10).
ಮೋಸಸ್ ಮತ್ತು ಸಹಚರರು ಆಘಾತಗೊಂಡರು – ಅವರು ದೇವರನ್ನು ನೋಡುವುದೆಂದರೆ ತತ್‌ಕ್ಷಣ ಮರಣವೆಂದು ಭಾವಿಸಿದ್ದರು. ಆದರೆ ಅವರು ಬದುಕಿ ಉಳಿದರು.
ಸಹಜವಾಗಿ ಮೋಸೆಸ್, ತಾನು ದೇವರ ಸಾನ್ನಿಧ್ಯದಲ್ಲೇ ನಿಂತಿದ್ದೇನೆ ಎಂದು ನಂಬಿದ್ದ ಕೆಲವೆಡೆ ಮೋಸೆಸ್ ದೇವರ ಹಿಂಭಾಗ ಕಂಡೆ ಎಂದು ಹೇಳಿದ್ದಾನೆ (ಎಕ್ಸೋಡಸ್ 33:23). ದೇವರಿಗೆ ಹಿಂಭಾಗ ಇರುವುದಾದರೆ, ಮುಂಭಾಗವೂ ಇರಬಲ್ಲದು. ದೇವರು ಕೇವಲ ರೂಪಕದಲ್ಲಷ್ಟೆ ಇರುವವನಾದರೆ ಮತ್ತು ಯಾವುದೇ ಆಕಾರ ಅಥವಾ ಅಸ್ತಿತ್ವ ಇಲ್ಲದಿದ್ದರೆ ಈ ಪದಗಳು ನಿರರ್ಥಕ.
ಆದರೂ ಇಂದಿಗೂ ಬೈಬಲ್ ವಿದ್ಯಾರ್ಥಿಗಳು ದೇವರು ನಿರಾಕಾರ ಎಂದೇ ಓದುತ್ತಾರೆ. ಹೇಳಬೇಕೆಂದರೆ, ಈ ನಿರಾಕಾರ ವಾದವು ಜುಹು ಮತ್ತು ಕ್ರಿಶ್ಚಿಯನ್ನರ ಮೂಲ ಪರಂಪರೆಯ ವಿರುದ್ಧ ಸಾಗುತ್ತದೆ. ಪ್ರತಿ ಕ್ರಿಶ್ಚಿಯನ್ನರಿಗೂ, ಜೀಸಸ್ ಪಿತನ ಬಲಗೈ ಬಳಿ ಕುಳಿತಿದ್ದಾನೆಂದು ಗೊತ್ತಿದೆ (ಮಾರ್ಕ್ 16:19). ಮತ್ತದೇ ತರ್ಕ – ಆತನಿಗೆ ಬಲಗೈ, ಇದ್ದರೆ ಎಡಗೈ ಇರಲೇಬೇಕು.
ನಿಸ್ಸಂಶಯವಾಗಿ, ದೇವರಿಗೆ ರೂಪ ಇರಲೇಬೇಕು. ಮತ್ತು ಸ್ವತಃ ದೇವರು ಅಥವಾ ಆತನ ಆಪ್ತ ಭಕ್ತ ಆತನ ಸ್ವರೂಪವನ್ನು ಬಹಿರಂಗಪಡಿಸಿದರೆ, ಜಗತ್ತಿನ ಯಾವೊಂದು ನಿಬಂಧನೆಯೂ ದೇವರನ್ನು ಪ್ರೀತಿಸುವವರು ಆತನ ಮೂರ್ತಿಯನ್ನು ಆ ಕಲ್ಪನೆಗೆ ಅನುಗುಣವಾಗಿ ಸಿಂಗರಿಸಿ ಪೂಜಿಸಬಾರದೆಂದು ಹೇಳಲಾರದು.
ದೇವರ ಸ್ವರೂಪವು ಈ ಜಗತ್ತಿನ ಯಾವೊಂದು ವಸ್ತುವೂ ಅಲ್ಲ- ಅದು ಆಕಾಶದಲ್ಲಿರುವ, ಭೂಮಿ ಅಥವಾ ನೀರಿನಲ್ಲಿರುವ ಕೀಳು ದೇವತೆಗಳ ವಿಕಾರ ಸ್ವರೂಪವಲ್ಲ, ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬೈಬಲ್ ದೇವರನ್ನು ಆತನ ಮೂಲ ಅಲೌಕಿಕ ಸ್ವರೂಪದಲ್ಲಿ ಪೂಜಿಸುವುದನ್ನು ನಿರ್ಬಂಧಿಸುವುದಿಲ್ಲ ಮತ್ತು ದೇವರು ಸರ್ವಶಕ್ತನಾದ್ದರಿಂದ ಆತ ಮತ್ತು ಆತನ ಸ್ವರೂಪ ಬೇರೆ ಬೇರೆ ಅಲ್ಲ.
ಶುದ್ಧ ಭಕ್ತರು ಮತ್ತು ಧರ್ಮಗ್ರಂಥಗಳು ತಿಳಿಯಪಡಿಸಿದಂತೆ ದೇವರನ್ನು ಆತನ ಮೂಲ ಅಲೌಕಿಕ ಸ್ವರೂಪದಲ್ಲಿ ಪೂಜಿಸುವುದಕ್ಕೆ ಅರ್ಚ ವಿಗ್ರಹಾರಾಧನೆ ಎನ್ನುತ್ತಾರೆ. ಅದು ವಿಗ್ರಹಾರಾಧನೆಗಿಂತ ತುಂಬ ದೂರ.
ಪಾಶ್ಚಿಮಾತ್ಯ ಧಾರ್ಮಿಕ ಪರಂಪರೆಯ ದೇವಸ್ತೋತ್ರ ದೇವರು ಯಾವುದೋ ಆಧ್ಯಾತ್ಮಿಕ ಸ್ವರೂಪ ಹೊಂದಿರಲೇಬೇಕು ಎಂದು ಗಮನಕ್ಕೆ ತಂದರೂ, ಆ ಸ್ವರೂಪ ಏನು ಎಂದು ವಿವರಿಸಲು ಅವು ವಿಫಲಾಗಿವೆ.
ಉದಾಹರಣೆಗೆ ಯಹೂದಿ ಮತದ ದೇವಸ್ತೋತ್ರ ಹೇಳುತ್ತವೆ – ಆತ ಸ್ವರ್ಗದ ರಾಜಧಾನಿಯಲ್ಲಿ ತನ್ನ ದೈವಾಜ್ಞೆಗಳನ್ನು ರೂಪಿಸುತ್ತಿದ್ದಾನೆ ”ತನ್ನ ತೋಳಿನ ಸುತ್ತ ತೋಳ್ಬಂದಿ ಸುತ್ತಿಕೊಂಡಿದ್ದಾನೆ ಮತ್ತು ಒಂದು ಪ್ರಾರ್ಥನಾ ಶಾಲನ್ನು ತೊಟ್ಟುಕೊಂಡಿದ್ದಾನೆ. (ರೋಶ್ ಹಶಾನಾಹ್ 17ಬಿ ಟಾಲ್ಮುಡ್).
ಅವನು ಇತರರಿಗೆ ಮೇಲ್ಪಂಕ್ತಿ ಹಾಕಿಕೊಡಲು ದಿನಕ್ಕೆ ಮೂರು ತಾಸು ‘ತೋರಾ’ ಓದುತ್ತಾನೆ. (ಅಬೋಡಾ ಝರ 3ಬಿ, ಟಾಲ್ಮುಡ್). ಇದು ಬಹುತೇಕ ಜುಹುಗಳಿಗೆಲ್ಲ ತಿಳಿದಿದ್ದರೂ ಅವರು ಅದನ್ನು ಹಗುರವಾಗಿ ಪರಿಗಣಿಸಲು ತೊಡಗಿದ್ದಾರೆ ಮತ್ತು ಪುನಃ, ಅದನ್ನು ರೂಪಕದ ಸಾಮ್ರಾಜ್ಯವೆಂದು ನಿರ್ಣಯಿಸಿದ್ದಾರೆ. ಆದರೆ “ಶಿಯುರ್ ಕೊಮಾಹ್” ಮತ್ತು ಇತರ ಸೆಬ್ಬಾಲಿಸ್ಟಿಕ್ ಸಾಹಿತ್ಯವು ಈ ವಿಚಾರವನ್ನು ಮುಂದೆ ವಿಸ್ತರಿಸಿ, ದೇವರು ದಿವ್ಯ ಶಾರೀರಕ ಸ್ವರೂಪ ಹೊಂದಿದ್ದಾನೆ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಕ್ರಿಶ್ಚಿಯನ್ನರಿಗೆ ದೇವರು ಒಬ್ಬವ್ಯಕ್ತಿ ಎಂದು ನಿಶ್ಚಿತವಾಗಿಯೂ ಗೊತ್ತು. ಜೀಸಸ್, ದೇವರನ್ನು “ಅಬ್ಬ-ಪಿತ ಎಂದು ತನ್ನದೇ ಆದ ರೀತಿಯಲ್ಲಿ ಕರೆದಿದ್ದಾರೆ. ಅವರ ಕಾಲದಲ್ಲಿನ ಯಹೂದಿಗಳು ಇದನ್ನು ಎದುರೆದುರೇ ಅಪಹಾಸ್ಯ ಮಾಡಿದ್ದರು. ಇಸ್ಲಾಮಿನ ಸ್ತೋತ್ರಗಳೂ ಸಹ ದೇವರ ರೂಪ ಅಸ್ತಿತ್ವದಲ್ಲಿದೆ ಎಂದು ಘೋಷಿಸಿದೆ.

ಆದರೆ ಸಾಂಪ್ರದಾಯಿಕ ಮುಸ್ಲಿಮರು, ಇತರ ಪಾಶ್ಚಿಮಾತ್ಯ ಧರ್ಮಾನುಯಾಯಿಗಳು ಒಟ್ಟಾರೆಯಾಗಿ ಇದನ್ನು ನಿರಾಕರಿಸುತ್ತಾರೆ. ಆದರೂ ಸಂಪ್ರದಾಯದ ಅಗ್ರಣಿಯಾಗಿದ್ದ ಅಲ್-ಅಶರಿ (ಒಂಬತ್ತನೆಯ ಶತಮಾನ), ತನ್ನ ಧಾರ್ಮಿಕ ಕೃತಿಯಲ್ಲಿ ಹೀಗೆ ಘೋಷಿಸಿದ್ದಾನೆ – “ನಾವು, ದೇವರಿಗೆ ಒಂದು ಮುಖಭಾವವಿದೆ ಎಂದು ಒಪ್ಪಿಕೊಳ್ಳುತ್ತೇವೆ, ಹೇಗೆಂದು ಕೇಳದಿರಿ, ದೇವರಿಗೆ ಎರಡು ಕೈಗಳಿವೆ ಎಂದು ಒಪ್ಪಿಕೊಳ್ಳುತ್ತೇವೆ, ಯಾಕೆಂದು ಕೇಳದಿರಿ.”
ಹೀಗೆ ಸಕಲ ಧಾರ್ಮಿಕ ಪರಂಪರೆಯ ಸ್ತೋತ್ರಗಳೂ ದೇವರ ಸ್ವರೂಪವನ್ನು ಗುರ್ತಿಸಿವೆ. ಅದರ ಹಚ್ಚಿನ ಮಾಹಿತಿ ನೀಡಿಲ್ಲವಷ್ಟೆ.
ಆದರೆ ಬೈಬಲ್ ಮತ್ತು ಕುರಾನ್ ಗಿಂತ ಸಾಕಷ್ಟು ಪುರಾತನವಾದ ಇನ್ನೂ ಉನ್ನತ ಅಧ್ಯಾತ್ಮಸಂಸ್ಕೃತಿಯಲ್ಲಿ ರಚಿಸಲ್ಪಟ್ಟ ಪ್ರಾಚೀನ ಭಾರತದ ವೇದ ಸಾಹಿತ್ಯ, ವಿಶೇಷವಾಗಿ ದೇವರ ಸ್ವರೂಪ – ಆತನ ಲಕ್ಷಣಗಳು, ಕಾಲಕ್ಷೇಪ, ಆತನ ವ್ಯಕ್ತಿತ್ವ ಇತ್ಯಾದಿ ಪ್ರಕಟಿಸಿವೆ. ದೇವರ ಸ್ವರೂಪ ಅನಂತ ಮತ್ತು ಪದಗಳು ಅದರ ವೈಭವದ ಸೂಚನೆ ಮಾತ್ರ ಕೊಡಬಲ್ಲವು.
ಆದರೆ ವೇದಗಳು ಮನುಷ್ಯನಿಗೆ ತಾನು ಕಲೆಹಾಕಬಲ್ಲ ಮಾಹಿತಿಗಿಂತ ಹೆಚ್ಚು ಮಾಹಿತಿ ನೀಡಿವೆ – ಜ್ಞಾನೋದಯದವರೆಗೂ, ಆ ಹಂತದಲ್ಲಿ ಮನುಷ್ಯನು ಕೃಷ್ಣ ದೇವರನ್ನು ಎಲ್ಲೆಲ್ಲೂ ಕಾಣಬಹುದು, ಆದರೆ ಆ ಅತ್ಯುನ್ನತ ಸಾಕ್ಷಾತ್ಕಾರವನ್ನು ಅನುಕರಿಸಬಾರದು. ಆದ್ದರಿಂದ ವೇದಗಳು ಕೃಷ್ಣನ ವಿಗ್ರಹವನ್ನು ಪೂಜಿಸುವಂತೆ ಹೇಳಿವೆ.
ನಾವು ಆಧ್ಯಾತ್ಮವನ್ನು ಕಣ್ಣಿಗೆ ಕಾಣಲಾರೆವು, ಆದರೆ ಕೃಷ್ಣನ ವಿಗ್ರಹವನ್ನು ದೇಗುಲಗಳಲ್ಲಿ ಕಾಣಬಹುದು. ಈ ನೋಟ ನಮ್ಮ ಮನಸ್ಸನ್ನು ದೇವರ ಮೇಲೆ-ಅವನ ಮೂಲ ಸ್ವರೂಪದ ಮೇಲೆ ಕೇಂದ್ರೀಕರಿಸಲು ನೆರವಾಗುತ್ತದೆ. ಮತ್ತು, ಪುನಃ ಪುನಃ ಹೇಳಬೇಕೆಂದರೆ, ದೇವರು ಸರ್ವಶಕ್ತನಾದ್ದರಿಂದ, ದೇವಸ್ಥಾನದಲ್ಲಿರುವ ಆತನ ಪ್ರತಿರೂಪದಿಂದ ಆತ ಭಿನ್ನವೇನಲ್ಲ. ಒಂದು ಪ್ರತಿರೂಪವಾಗಿ ತನ್ನೆಡೆ ನೋಡುವವರನ್ನೆಲ್ಲ ಆತ ತನ್ನ ದಿವ್ಯಸ್ವರೂಪದಿಂದ ಪರಿಶುದ್ಧರನ್ನಾಗಿ ಮಾಡುತ್ತಾನೆ.
ವೇದ ಸಾಹಿತ್ಯವು ಕೃಷ್ಣನ ಸ್ವರೂಪ ಮತ್ತು ಆತನ ವೈಯಕ್ತಿಕ ಚಟುವಟಿಕೆಗಳ ಬಗ್ಗೆ ವಿಶದವಾಗಿ ವರ್ಣಿಸಿದೆ. ಅದು ಆತನ ಅರ್ಚಾವಿಗ್ರಹವನ್ನು (ಉಹಾಪೋಹದ ರಾಪವನ್ನಲ್ಲ) ಪೂಜಿಸುವುದನ್ನೇ ಸಲಹೆ ಮಾಡುತ್ತದೆ ಮತ್ತು ವಿಗ್ರಹಗಳನ್ನು ಹೇಗೆ ಕೆತ್ತುವುದು ಎಂಬ ಕುರಿತು ಸಾಕಷ್ಟು ವಿವರ ನೀಡುತ್ತದೆ. ನಾವು ಕೀಳು ದೇವತೆಗಳು ಮೂರ್ತಿಗಳನ್ನು ಅಲ೦ಕರಿಸಿದಾಗ ಆತ ಸಹಿಸಿಕೊಳ್ಳದಿರಬಹುದು, ಆದರೆ ಆತನನ್ನು ಅರ್ಚಾ ವಿಗ್ರಹದ ಮೂಲಕ ಪೂಜಿಸಿದಾಗ ಸಂತುಷ್ಟನಾಗುತ್ತಾನೆ.
ಕೃಷ್ಣನ ಸ್ವರೂಪ- ಆತನ ನೀಲಿಮಿಶ್ರಿತ ವರ್ಣ, ತಾವರೆ ಕಣ್ಣುಗಳು, ಚಿಮ್ಮುವ ಯೌವನ ಮತ್ತು ಮುತ್ತಿನಂಥ ಶುಭ್ರ ನಗು- ಕೇವಲ ಅಲಂಕಾರಿಕವಲ್ಲ. ಇದೊಂದು ಬಿಂಬವಲ್ಲ ಯಾಕೆಂದರೆ ಇದು ಒಂದು ಕಪೋಲಕಲ್ಪಿತವಲ್ಲ, ಅಥವಾ ಸೃಷ್ಟಿಸಿದ ರೂಪವಲ್ಲ.
ಇದು ಒಬ್ಬ ಕಲಾವಿದ, ತತ್ತ್ವವೇತ್ತ ಸೃಜಿಸಿದ್ದಲ್ಲ ಅಥವಾ ಭಾವುಕ ಕವಿ ಭೌತಿಕ ಜಗತ್ತಿನ ಸುಂದರ ವೈಭವ ಕಂಡು ರಚಿಸಿದ್ದೂ ಅಲ್ಲ, ಮಾನವ ಪ್ರತಿರೂಪ ಬಿಂಬಿಸುವ ಕಲ್ಪನೆಯು “ಪ್ರಕೃತಿಯ ಸೌಂದರ್ಯ ಬಂದುದು ಎಲ್ಲಿಂದ?” ಎಂಬಂಥ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನಿಜದಲ್ಲಿ, ನಿಸರ್ಗದ ಸುಂದರ ವಸ್ತುಗಳು ಕೃಷ್ಣನ ಮೂಲ ಸೌಂದರ್ಯದ ಪ್ರತಿಬಿಂಬಗಳೇ. ಆತನೇ ಅವುಗಳಿಗೆ ಮೂಲಮಾದರಿ. ಗೀತೆಯಲ್ಲಿ ಆತನೇ ವಿವರಿಸಿದಂತೆ (10.14)
ಯದ್ ಯದ್ ವಿಭೂತಿಮತ್ ಸತ್ವಮ್
ಶ್ರೀಮದ್ ಊರ್ಜಿತಂ ಏವ ವಾ |
ತತ್ ತದ್ ಏವವಾಗಚ್ಛತ್ವಮ್
ಮಮ ತೇಜೋಂಶ ಸಂಭವಮ್ ||
“ಎಲ್ಲ ಸತ್ವಯುತ, ಸು೦ದರ ಮತ್ತು ವೈಭವಪೂರ್ಣ ಸೃಷ್ಟಿಯು ನನ್ನ ತೇಜಸ್ಸಿನ ಒಂದು ಕಿಡಿಯಿಂದ ಚಿಮ್ಮಿದ್ದೆಂದು ತಿಳಿ. ಕೃಷ್ಣನ ಸ್ವರೂಪ ಮಾನವ ಸ್ವರೂಪ; ನಮ್ಮ ಸ್ವರೂಪ ದೈವಪ್ರೇರಣಾ ಸ್ವರೂಪ; ಕೃಷ್ಣ ಸ್ವರೂಪದಿಂದ ಪ್ರೇರಿತ. ನಾವು ದೇವರ ಬಿಂಬದಿಂದ ನಿರ್ಮಿಸಲ್ಪಟ್ಟವರು.
ಈಗ ಕೆಲವರು ಕೇಳಬಹುದು, “ನೀವು ಯಾಕೆ ದೇವರ ಸ್ವರೂಪ ಕುರಿತು ವೇದ ಸಾಹಿತ್ಯದಲ್ಲಿರುವುದನ್ನು ಸ್ವೀಕರಿಸುತ್ತೀರಿ?”
ನಾವಿಲ್ಲಿ ಒಂದು ಕ್ಷಣ ಯೋಚಿಸಿದರೆ, ಪ್ರತಿನಿತ್ಯ ನಾವು ನಮಗೆ ಯಾವ ವಿಷಯದ ಬಗ್ಗೆ ಏನೂ ತಿಳಿದಿಲ್ಲವೋ ಅವುಗಳ ಕುರಿತು ಬಲ್ಲವರು ಹೇಳುವುದನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ, ನಮ್ಮಲ್ಲಿ ಕೆಲವರು ಮಾತ್ರ ಚೀನಾ ದೇಶಕ್ಕೆ ಭೇಟಿ ನೀಡಿರಬಹುದು, ಆದರೂ ನಾವೆಲ್ಲ ಅದರ ಅಸ್ತಿತ್ವ ಮತ್ತು ಕೋಟ್ಯಂತರ ಮಂದಿ ಅಲ್ಲಿ ವಾಸಿಸುತ್ತಿದ್ದಾರೆಂದು ನಂಬುತ್ತೇವೆ.
ನಾವು ಚೀನಾ ಕುರಿತು ಪತ್ರಿಕೆಗಳು, ನಿಯತಕಾಲಿಕಗಳು, ರೇಡಿಯೋ ಮತ್ತು ಟಿವಿ ವರದಿಯನ್ನು ನಂಬುತ್ತೇವೆ. ಅವು ನಮ್ಮ ಜ್ಞಾನದ ಮೂಲಗಳು. ಮತ್ತು ನಮಗೆ ಬಯಕೆಯಿದ್ದರೆ ಚೀನಾಕ್ಕೆ ಭೇಟಿ ಇತ್ತು ಖಚಿತಪಡಿಸಿಕೊಳ್ಳುತ್ತೇವೆ. ಹಾಗೆಯೇ, ವೇದ ಸಾಹಿತ್ಯವೂ ಕೃಷ್ಣನ ಸ್ವರೂಪವನ್ನು ನಮಗೆ ತಿಳಿಸುವ ಮಾಹಿತಿ ಮೂಲ. ಮತ್ತು ವೇದೋಪದೇಶವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿ ಕೃಷ್ಣನನ್ನು ನೋಡುವ ದೃಷ್ಟಿಕೋನ ಬೆಳೆಸಿಕೊಂಡರೆ, ಅದನ್ನು ಖಚಿತಪಡಿಸಿಕೊಳ್ಳಬಹುದು.
ಆದರೆ ವೇದೋಪದೇಶಗಳನ್ನು ಸರಿಯಾಗಿ ಗ್ರಹಿಸಲು ನಾವೊಬ್ಬಪರಿಪೂರ್ಣತೆಯ ಜ್ಞಾನ ಪಡೆದ, ಅನೂಚಾನ ಪರಂಪರೆಯಿಂದ ಬಂದ ಗುರುವನ್ನು ಸಂಪರ್ಕಿಸಬೇಕು. ಆಗ ನಮ್ಮ ಜ್ಞಾನವೂ ನಿಖರವಾಗುತ್ತದೆ.
ಪರಮ ಪೂಜ್ಯ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅಂಥ ಓರ್ವ ಆಧ್ಯಾತ್ಮದ ಗುರು, ಮತ್ತು ಅವರು ಕೃಷ್ಣನ ಸ್ವರೂಪದ ಕುರಿತು ತಮ್ಮ ಅನುವಾದಗಳು ಮತ್ತು ಭಗವದ್ಗೀತೆ, ಶ್ರೀಮದ್ಭಾಗವತ ಮತ್ತು ಇತರ ವೈದಿಕ ಪುಸ್ತಕಗಳ ಮೇಲೆ ಬರೆದ ಭಾಷ್ಯದ ಮೂಲಕ ತಮ್ಮ ಅಧಿಕಾರಯುತ ಜ್ಞಾನ ಹಂಚಿದ್ದಾರೆ.
ಈ ಗ್ರಂಥಗಳು ಐದು ಸಾವಿರ ವರ್ಷಗಳಿಗೂ ಹಿಂದಿನಿಂದ ಅಸ್ತಿತ್ವದಲ್ಲಿವೆ, ಮತ್ತು ಅವುಗಳನ್ನು ಅನುಸರಿಸುವ ಮೂಲಕ ಅನೇಕ ಜ್ಞಾನಿ ಸ್ತ್ರೀ-ಪುರುಷರು ಕೃಷ್ಣ ಸ್ವರೂಪ ಕುರಿತು ನಿಖರ ಜ್ಞಾನ ಹೊಂದಿದ್ದಾರೆ.
ಉದಾಹರಣೆಗೆ ಬ್ರಹ್ಮ ಸಂಹಿತೆಯಲ್ಲಿ ಕೃಷ್ಣನ ಸ್ವರೂಪ ಕುರಿತು ಪ್ರಪಂಚದ ಅತಿ ಘನತೆವೆತ್ತ ವ್ಯಕ್ತಿಗಳಲ್ಲೊಬ್ಬನಾದ ಬ್ರಹ್ಮದೇವ ವಿಶದವಾಗಿ ವಿವರಿಸಿದ್ದಾನೆ. ಸಾವಿರಾರು ವರ್ಷಗಳ ಧ್ಯಾನದನಂತರ ಬ್ರಹ್ಮನು ಕೃಷ್ಣನಿಗೆ ಮುಖಾಮುಖಿಯಾಗುತ್ತಾನೆ. ತನ್ನ ಪ್ರಾರ್ಥನೆಯಲ್ಲಿ ಬ್ರಹ್ಮನು, ಬೈಬಲ್‌ನಲ್ಲಿ ಬರುವ ಪ್ರವಾದಿಗಳಿಗಿಂತ ಭಿನ್ನವಾಗಿ, ತನಗೆ ಸಾಧ್ಯವಾದ ಮಟ್ಟಿಗೆ ಉತ್ಕೃಷ್ಟವಾಗಿ ನಿರೂಪಿಸಿದ್ದಾರೆ.
ವೇಣುಂ ಕ್ವನಂತಂ ಅರವಿಂದ
ಬರ್ಹವತಂಸಂ ಅಸಿತಾಂಬುದಾ ಸುಂದರಾಂಗಮ್ |
ಕಂದರ್ಪ ಕೋಟಿ ಕಮನೀಯ ವಿಶೇಷ ಶೋಭಮ್
ಗೋವಿಂದಮ್ ಆದಿಪುರುಷಂ ತಮಹಂ ಭಜಾಮಿ ||
“ಯಾರು ತನ್ನ ಕೊಳಲು ನುಡಿಸುವುದರಲ್ಲಿ ತಲ್ಲೀನನಾಗಿದ್ದಾನೋ, ಯಾರ ಅರಳಿದ ಕಂಗಳು ತಾವರೆ ದಳಗಳಂತಿವೆಯೋ, ಯಾರ ಶಿರವು ನವಿಲು ಗರಿಯಿಂದ ಸಿಂಗರಿಸಲ್ಪಟ್ಟಿದೆಯೋ, ಯಾರ ಸೌಂದರ್ಯವು ನೀಲಮೇಘಗಳ ವರ್ಣಛಾಯೆ ಹೊ೦ದಿದೆಯೋ, ಮತ್ತು ಯಾರ ವಿಶೇಷ ಪ್ರೇಮಪೂರಿತ ಸೌಂದರ್ಯ ಲಕ್ಷಾಂತರ ಮನ್ಮಥರನ್ನು ಸೆಳೆದಿಹುದೋ ಆ ಆದಿಪುರುಷ ಪರಮದೇವ ಗೋವಿಂದನನ್ನು ನಾನು ಪೂಜಿಸುತ್ತೇನೆ.” (ಬ್ರ.ಸಂ.5.30)
ಅಂಗಾನಿ ಯಸ್ಯ ಸಕಲೇಂದ್ರಿಯಾ ವೃತ್ತಿಮಂತಿ
ಪಶ್ಯಂತಿ ಪಾಂತಿ ಕಲಂತಿ ಚಿರಂ ಜಗಂತಿ |
ಆನಂದ ಚಿನ್ಮಯ ಸದುಜ್ವಲ ವಿಗ್ರಹಸ್ಯ
ಗೋವಿಂದಂ ಆದಿಪುರುಷಂ ತಮಹಂ ಭಜಾಮಿ ||
“ಯಾವ ದಿವ್ಯ ಸ್ವರೂಪವು ಆತ್ಮಾನಂದ, ಸತ್ಯ ಮತ್ತು ಸತ್ತ್ವದಿಂದ ತುಂಬಿದೆಯೋ, ಮತ್ತು ಯಾರು “ಯಾವ ದಿವ್ಯ ಸ್ವರೂಪವು ಆತ್ಮಾನಂದ, ಸತ್ಯ, ಅತ್ಯಂತ ಪ್ರಖರ ಪ್ರಭೆಯಿಂದ ಕಂಗೊಳಿಸುತ್ತಿದ್ದಾರೋ ಅಂಥ ಪರಮ ದೇವ ಗೋವಿಂದನನ್ನು ನಾನು ಪೂಜಿಸುತ್ತೇನೆ.
ಆ ದಿವ್ಯ ಸ್ವರೂಪದ ಪ್ರತಿ ಅಂಗವೂ ತನ್ನೊಳಗೇ ಇತರೆಲ್ಲ ಅಂಗಗಳ ಚಟುವಟಿಕೆಯನ್ನು ಸಂಪೂರ್ಣ ಹೊಂದಿರುವುದು ಮತ್ತು ಆತ ದಿವ್ಯಚಕ್ಷುಗಳಿಂದ ಈ ಭೌತಿಕ ಮತ್ತು ಆಧ್ಯಾತ್ಮಿಕ ಅನಂತ ಜಗತ್ತಿನ ಎಲ್ಲ ಆಗುಹೋಗುಗಳನ್ನು ನೋಡಿ, ನಿಯಂತ್ರಿಸಿ, ನಿರ್ದೇಶಿಸುತ್ತಾನೆ. ( ಬ್ರ.ಸಂ.5.32)
ಕೃಷ್ಣಪ್ರಜ್ಞೆಯ ವಿಜ್ಞಾನದಲ್ಲಿ ಪಾಂಡಿತ್ಯ ಪಡೆದವರು, ಕೃಷ್ಣಸ್ವರೂಪದ ಕುರಿತ ಜ್ಞಾನವನ್ನು ಅಸ್ಖಲಿತ ನಿರಂತರ ಜ್ಞಾನಧಾರೆಯೊಂದಿಗೆ ಕೊಂಡೊಯ್ಯುತ್ತಿದ್ದಾರೆ. ಅವರು, ತಾವು ಹೇಳುವ ವಿಧಾನವನ್ನು ಪರೀಕ್ಷೆಗೊಳಪಡಿಸಲು ಮತ್ತು ನಮಗೆ ನಾವೇ ಕೃಷ್ಣ ಸ್ವರೂಪ ದರ್ಶನವನ್ನು ಮೊದಲು ಪ್ರತಿರೂಪದಲ್ಲಿ ಅನಂತರ ಪ್ರತಿ ಅಣುವಿನಲ್ಲೂ ಮಾಡಿ ಅಮಿತಾನಂದದ ಅನುಭವ ಹೊಂದಲು ಪ್ರೋತ್ಸಾಹಿಸುತ್ತಾರೆ. ಇದೇ, ಮಾದರಿ ಪೂಜೆ – ಮೂರ್ತಿ ಪೂಜೆಯಲ್ಲ.






Leave a Reply