– ಅನುವಾದ: ಉಷಾ ಪೋತಿ
ಸ್ತ್ರೀ ಸ್ವಾತಂತ್ರ್ಯ ಹಾಗೂ ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ಸ್ತ್ರೀಯರ ಪಾತ್ರದ ಪರಿಣಾಮದ ಬಗ್ಗೆ ಅನ್ವೇಷಿಸಲು ನಾವು ಕೃಷ್ಣ ಪ್ರಜ್ಞೆಯಲ್ಲಿ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸಿದ ಒಬ್ಬ ಭಕ್ತಳನ್ನು ಸಂದರ್ಶಿಸಿದೆವು. ಆಕೆ, ಅವಳ ಹೆಸರನ್ನು ಈ ಲೇಖನದಲ್ಲಿ ಉದಾಹರಿಸಬಾರದೆಂದು ನಮ್ಮಲ್ಲಿ ಕೇಳಿಕೊಂಡಳು. ಆಕೆಯ ಕೋರಿಕೆಯನ್ನು ಆದರಿಸುತ್ತಾ, ಅವಳ ಹೆಸರನ್ನು ತಿಳಿಸದೇ ಸಂದರ್ಶನವನ್ನು ಆಕೆಯ ಉತ್ತರಗಳೊಂದಿಗೆ ಪದಾನುಪದವಾಗಿ, ಈ ಕೆಳಗೆ ನಮೂದಿಸಿದೆ.

ಭಕ್ತಿವೇದಾಂತ ದರ್ಶನ : ಸಮಾಜದಲ್ಲಿ ಒಂದು ಸಲ ಸ್ತ್ರೀ ಜಾತಿ ಮತ್ತು ಸ್ತ್ರೀ ಸ್ವಾತಂತ್ರ್ಯ ಯಾವಾಗ ಮಹತ್ವದ ಶಕ್ತಿಯನ್ನು ಬಲಪಡಿಸುತ್ತದೋ, ಆಗ ಪರಂಪರೆಯಾಗಿ ಬಂದ ಪುರುಷರ ಸರ್ವಾಧಿಕಾರ ಸಂಸ್ಕೃತಿಯೊಂದಿಗೆ ಸಂಬಂಧಿಸಿದ ಧರ್ಮದಲ್ಲಿ ಒಳಗಾದ ಸ್ತ್ರೀಯರ ಪಾತ್ರದ ಬಗ್ಗೆ ಪದೇ ಪದೇ ಪ್ರಶ್ನೆಗಳು ಮೂಡಿ ಬರುತ್ತವೆ. ಶ್ರೀಕೃಷ್ಣ ಪ್ರಜ್ಞೆ ಮತ್ತು ಸಂಸ್ಕೃತಿಯ ಅಭಿಪ್ರಾಯದೊಂದಿಗೆ ಒಳಪಡಿಸುವ ವೇದ ಅಥವಾ ವೈಷ್ಣವ ಸಂಪ್ರದಾಯ – ಈ ಕುರಿತು ನೀವು ಹೇಗೆ ಉತ್ತರ ಕೊಡುತ್ತೀರಿ?
ನಮ್ಮ ಸಮಾಜವು, ಪುರುಷರಿಗೆ, ಸ್ತ್ರೀಯರನ್ನು ಗ್ರಹಿಸಿ, ಲೈಂಗಿಕವಾಗಿ ತೃಪ್ತಿಗೊಳಿಸುವ ಒಂದು ಮೂಲವೆಂದು ವ್ಯಾಪಿಸಲಾಗಿದೆ. ಜನರಲ್ಲಿ ಆಸಕ್ತಿಯನ್ನುಂಟುಮಾಡಿ, ಹಲವಾರು ವಿಧದ ಭಾವನೆಗಳನ್ನು ರೂಪಿಸುವಂತೆ ಮಹಿಳೆಯರ ಮನೋಹರವಾದ ಚಿತ್ರಗಳನ್ನು ಪ್ರಯೋಗಿಸಲ್ಪಡುತ್ತೆ.
ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯರು, ಪುರುಷರ ಇ೦ದ್ರಿಯಗಳನ್ನು ತೃಪ್ತಿಗೊಳಿಸಲು ಮಾತ್ರವೆಂದು ಇಲ್ಲಿ ಸೂಚಿಸಿದೆ. ಒಳ್ಳೆ ಶೀಲವುಳ್ಳ ಯಾವುದೇ ಒಬ್ಬ ಮಹಿಳೆಗೆ ಇದು ಅನರ್ಥವೂ ಹಾಗೂ ಅವಮಾನಕರವಾಗಿದೆ. ಅನರ್ಥ ವೇನೆ೦ದರೆ – ಮಹಿಳೆಯು ಒಬ್ಬ ಮನೋವೈಜ್ಞಾನಿಕ ಜೀವಿ ಅಥವಾ ಧಾರ್ಮಿಕ ಜೀವಿ ಎಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ವಾಸ್ತವವಾಗಿ ಆಕೆ ಒಬ್ಬ ಅಜೀವಿಯಾಗಿರುತ್ತಳೆ. ಎಲ್ಲದಕ್ಕಿಂತ ಮುಖ್ಯವಾದುದು ಅವಳ ವಿಶಿಷ್ಟವಾದ ಸ್ವಾರ್ಥ ಶರೀರ. ಇದರಿಂದ ಉಂಟಾದ ಪರಿಸ್ಥಿತಿಯಿಂದ, ಸ್ತ್ರೀಯರು ಅದನ್ನು ಸ್ವೀಕರಿಸುತ್ತಾರೆ ಮತ್ತು ಅದರಿಂದ ಪ್ರಶಂಸಿತರಾಗುತ್ತಾರೆ.
ಭಕ್ತರು ಹೇಳಿದಂತೆ ಇಡೀ ಸಮಸ್ಯೆಯ ಮೂಲವು ಶಾರೀರಕ” ಅಥವಾ ಜೀವನದ ದೇಹಾತ್ಮಕ ಭಾವನೆ ಈ ತಾತ್ಕಾಲಿಕವಾಗಿ ಬಾಹ್ಯದ ದೇಹಾತ್ಮಿಕವಾದ ತಮ್ಮ ಶರೀರವು ಸ್ವಯಂ ತಾವೇ ಎಂದು ಆಲೋಚಿಸಿದ್ದಾರೆ. ಅದು ಒಂದು ಭ್ರಮೆ. ಈ ಬೃಹತ್ತಾದ ಮಾಯೆ ಮತ್ತು ಎಲ್ಲವನ್ನೂ ಇದು ಒತ್ತಿ ಹೇಳುತ್ತದೆ.
ಯಾವಾಗ ನೀನು ಶರೀರದೊಂದಿಗೆ ಏಕೀಭವಿಸುತ್ತೀಯೋ ಆಗ ನೀನು ಎಲ್ಲ ಐಹಿಕ ವಸ್ತುಗಳನ್ನು ಮಾತ್ರವಲ್ಲದೇ ಇತರರ ಶರೀರದ ಇಂಪನ್ನೂ ಸವಿಯಲು, ನಿರಂತರವಾಗಿ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿ. ಆ ಶಾರೀರಕ ಮಾಯೆಯಲ್ಲಿ ಪುರುಷನು ಒಬ್ಬ ಸ್ತ್ರೀಯನ್ನು ಲೈಂಗಿಕವಾಗಿ ಆಸ್ವಾದಿಸಲು ಅರಸುತ್ತಾನೆ. ಮತ್ತು ಇದನ್ನು ಅವನು “ಪ್ರೇಮ” ಎಂದು ನಾಮಕರಣ ಮಾಡುತ್ತಾನೆ.
ಭಕ್ತಿವೇದಾಂತ ದರ್ಶನ : ಸ್ತ್ರೀಯೂ ಕೂಡ ಈ ಶಾರೀರಕ ಸಂಪರ್ಕವನ್ನು ಕಲ್ಲಿಸಲಿಲ್ಲವೆ?
ಭಕ್ತಳು : ಸಹಜ. ಯಾಕೆಂದರೆ ಆಕೆ ಒಂದು ಅನಿಶ್ಚಿತ ಪರಿಸ್ಥಿತಿಯಲ್ಲಿರುತ್ತಾಳೆ. ಕಾಮದ ಒಂದು ವಸ್ತುವೆಂಬ ದೃಷ್ಟಿಯಿಂದ ನೋಡುವ ವಿಚಾರವನ್ನು ಆಕೆ ಇಷ್ಟಪುಡುವುದಿಲ್ಲ. ಆದರೆ ಆಕೆ ಪುರುಷರನ್ನು ಆಕರ್ಷಿಸಲು ಬಯಸುತ್ತಾಳೆ. ಯಾಕೆಂದರೆ ಅದು ಅವಳ ಸ್ತ್ರೀತ್ವದ ಗುಣದ ಸ್ವಭಾವ.
ಉಡುಪು ಮತ್ತು ಅಂಗಲೇಪನ ಔಷಧೀಕರಿಸುವ ಕೈಗಾರಿಕೆಗಳು ಇದಕ್ಕೆ ಒಂದು ಸ್ಪಷ್ಟವಾದ ಕಾರಣ. ಈ ಪುರುಷರ ಕಾಮದ ಬಲೆಗೆ ಸ್ತ್ರೀಯರು ಕೇವಲ ನಿಷ್ಕ್ರಿಯವಾಗಿ ಬಲಿಯಾಗಿರುತ್ತಾರೆಂದು ಮಾತ್ರ ಸಾಧಿ ಸಲಾಗುವುದಿಲ್ಲ. ಅವರೂ ಕೂಡ ಈ ಕಾಮದ ಬಯಕೆಗೆ ಬೆಂಬಲ ನೀಡುತ್ತಾರೆ. ಆದುದರಿಂದ ಅವರು ಸಹ ಈ ಪರಿಣಾಮವನ್ನು ಅಂಗೀಕರಿಸಬೇಕು.
ಪುರುಷರ ಸರ್ವಾಧಿಕಾರ ಮತ್ತು ಸ್ವಾರ್ಥದ ಸಮಸ್ಯೆಯು, ಸ್ತ್ರೀಯರು ಪ್ರಭಾವಶಾಲಿಯಾಗಿ ಹಾಗೂ ಸಾಹಸಕೃತ್ಯರಾಗಿ – ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಶ್ರೇಷ್ಠತೆಗೆ ಸಮರ್ಥರೆಂದು ಇದ್ದಲ್ಲಿ ಅದು ಪರಿಹಾರವಾಗುವುದಿಲ್ಲ. ಪುರುಷರಿಗೆ ಸಿಗುವ ಅತಿ ಶ್ರೇಷ್ಠವೆನ್ನುವ ತೃಪ್ತಿ ಸ್ತ್ರೀಯರಿಗೆ ಹೆಚ್ಚಾಗಿ ಸಿಗಲಾರದು.
ಕೇವಲ ಉಚ್ಚಮಟ್ಟದ ಪುರುಷಾಧಿಕಾರಿಗಳಿಗೆ ಮೊದಲು ಇಂತಹ ಅನಿಷ್ಟ ಭ್ರಷ್ಟಾಚಾರದ ರೂಢಿಯಿತ್ತು. ಈಗ ಉಚ್ಚ ಮಟ್ಟದ ಕಾರ್ಯ ನಿರ್ವಾಹಕ ಮಹಿಳೆಯರಿಗೂ ಸಹ ಅನಿಷ್ಟ ಭ್ರಷ್ಟಾಚಾರ್ಯಗಳಿರಲು ಸಾಧ್ಯವಿದೆ. ಅದು ಸ್ತ್ರೀಯರಿಗೆ ಅತೀ ಉಚ್ಚಮಟ್ಟದ ಗುರಿಯೆ? ಯಾರಿಗಾದರೂ?
ಭಕ್ತಿವೇದಾಂತ ದರ್ಶನ : ಮತ್ತೆ ಪರಿಹಾರಬೇಕು?
ಭಕ್ತಳು : ಸ್ತ್ರೀಯರೇ ಈ ಶಾರೀರಕ ಜೀವನದ ವಿಚಾರಗಳಿಂದ ಪಾರಾಗಿ, ಕಾಮದ ಐಹಿಕ ಸಮಾಜದಿಂದ ಮುಕ್ತಿಯಾಗಬೇಕು. ಮತ್ತು ಹುರಿದುಂಬಿಸಿ ಚೇತರಿಸಲೇಬೇಕು. ತನ್ನ ಶರೀರವು ಐಹಿಕವಲ್ಲವೆಂದೂ, ಆದರೆ ಒಂದು ಸನಾತನ ಧರ್ಮದ ಜೀವಾತ್ಮವೆಂದು ತಿಳಿದು, ಧಾರ್ಮಿಕ ಜೀವನವನ್ನು ಪ್ರಾರಂಭಿಸಬೇಕು. “ಪುರುಷ”, ಮತ್ತು “ಸ್ತ್ರೀ” ಎಂಬ ನಿರೂಪಣೆ ಕೇವಲ ಭೌತಿಕ ಶರೀರಕ್ಕೆ ಪರಾಮರ್ತಿಸುತ್ತದೆ.
ಅಂತ್ಯದಲ್ಲಿ ಆತ್ಮದ ಜೊತೆ ಯಾವುದೇ ಸಂಬಂಧವೂ ಇಲ್ಲ. ‘ಪುರುಷ’ ಅಥವಾ ‘ಸ್ತ್ರೀ’ ಎನ್ನುವ ಭಾವನೆ ಒಂದು ಮಾಯೆ. ಭ್ರಮೆ ಮತ್ತು ಲೈಂಗಿಕ ಆಕರ್ಷಣೆಯು ಒಂದು ಭ್ರಮೆಯ ವಸ್ತು ಈ ಭ್ರಮೆಯು ಸ್ಪಷ್ಟವಾಗಿ ಪುರುಷರಿಗೂ ಹಾಗೂ ಸ್ತ್ರೀಯರಿಗೂ ಪರಿಣಾಮ ಬೀರುತ್ತದೆ.
ಭಕ್ತಿವೇದಾಂತ ದರ್ಶನ : ಲೈಂಗಿಕ ಆಕರ್ಷಣೆಯು ಯಾಕೆ ಒಂದು ಮಾಯೆಯಾಗಿದೆ?
ಭಕ್ತಳು : ಈ ಅಂಶವನ್ನು ಸ್ಪಷ್ಟಪಡಿಸಲು ಒಂದು ಕಥೆ ಇದೆ. ಒಂದು ಸಲ ಪುರುಷನಿಗೆ ಮನೋಹರವಾದ ಇನ್ನೊಬ್ಬ ಸ್ತ್ರೀಯೊಂದಿಗೆ ಪ್ರೇಮ ಮೂಡಿ ಬಂತು, ಮತ್ತು ಆಕೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಾನೆ. ಆಕೆ ಸಂತಳಾದುದರಿಂದ, ಆತನ ಮುನ್ನಡೆಯನ್ನು ತಿರಸ್ಕರಿಸುತ್ತಾಳೆ.
ಯಾವಾಗ ಆತ ಛಲ ಹಿಡಿದನೋ, ಆಗ ಆಕೆ, ಮುಂದಿನ ಒಂದು ವಾರದ ಸಮಯದೊಳಗೆ, ಅವಳ ಮನೆಗೆ ಬಂದಲ್ಲಿ ಎಲ್ಲ ಅಪೇಕ್ಷೆಗಳನ್ನೂ ಪೂರೈಸುವಳೆಂದು ಹೇಳಿದಳು. ಆತ ಉತ್ಸುಕದಿಂದ ಒಪ್ಪಿದನು.
ಆ ವಾರದಲ್ಲಿ ಆ ಸಂತ ಸ್ತ್ರೀಯು, ಆಕೆ ತಿಂದ ಆಹಾರವನ್ನೆಲ್ಲಾ ಗಾಢ ಪ್ರಭಾವವುಳ್ಳ ವಾಂತಿಕಾರಕ ಮತ್ತು ವಿರೇಚಕ ಔಷಧಿಯನ್ನು ಸೇವಿಸಿ, ನಿರಂತರವಾಗಿ ಕಾರುತ್ತಾ, ಮಲವನ್ನು ಹೊರತಂದಳು. ಆಕೆ ಆ ಮಲವನ್ನು ಮತ್ತು ವಾಂತಿಯಾದ ಪದಾರ್ಥವನ್ನು ಗಡಿಗೆಗಳಲ್ಲಿ ಸಂಗ್ರಹಿಸಿದ್ದಳು.

ಒಂದು ವಾರದ ಒಳಗೆ ಆಕೆ ದುರ್ಬಲಿಸಿ ಒಣಕಳಾಗಿ ಬಹಳ ಕುರೂಪಿಯಾದಳು. ಆ ವಾರದ ಅಂತ್ಯದಲ್ಲಿ ಯಾವಾಗ ಆ ಕಾಮನ ಪುರುಷನು ಅವಳ ಮನೆ ಬಾಗಿಲಲ್ಲಿ ಆಗಮಿಸಿದನೋ ಅವನು ಆಗ ಅವಳನ್ನು ಗುರುತಿಸಲಿಲ್ಲ. ಅವನು ಆಕಾಂಕ್ಷೆಪಟ್ಟ ಮನೋಹರವಾದ ಹೆಣ್ಣು ಎಲ್ಲೆಂದು ಅಲ್ಲಿ ನಿಂತಿರುವ ಕುರೂಪಿಯನ್ನು ಕೇಳುತ್ತಾನೆ.
ಅವಳೇ ಆ ಸ್ತ್ರೀಯೆಂದು ಹೇಳುತ್ತಾಳೆ. ಆದರೆ ಆತ ಅವಳನ್ನು ವಿಶ್ವಸಿಸಲು ತಿರಸ್ಕರಿಸುತ್ತಾನೆ. ಅಂತ್ಯದಲ್ಲಿ ಅವನು ನೋಡಲು ಬಂದ ಹೆಣ್ಣು ಆಕೆಯೇ ಎಂದು ಮನಗಾಣಿಸುತ್ತಾಳೆ, ಆದರೆ ಅದು ಅವನ ಆನಂದಕ್ಕೋಸ್ಕರ ಆಕೆ “ಅವಳ ಸೌಂದರ್ಯದ ಸಾಮಗ್ರಿಗಳನ್ನು ಬೇರ್ಪಡಿಸಿ ವಿಶಿಷ್ಟಗಡಿಗೆಗಳಲ್ಲಿ ಸಂಗ್ರಹಿಸಿ ಇಟ್ಟದ್ದು. ಅವನು ಇಚ್ಚಿಸಿದರೆ ಆ ಸೌಂದರ್ಯದ ರಸಗಳನ್ನು” ಆಸ್ವಾದಿಸಬಹುದು ಎಂದಳು.
ಆತನು ಆತುರದಿಂದ, ಬೆರಗುಗೊಳಿಸುವ ಸೌಂದರ್ಯದ ರಸಗಳನ್ನು ನೋಡಲು ಹಾಗೂ ಆಸ್ವಾದಿಸಲು ಬೇಡಿದನು. ಆ ಮಹಿಳೆಯು, ಮಲ ಮತ್ತು ಕಾರಿದ ಪದಾರ್ಥವನ್ನು ಗಡಿಗೆಗಳಲ್ಲಿ ಸಂಗ್ರಹಿಸಿಟ್ಟ ಕೊಠಡಿಗೆ ಆತನನ್ನು ಕರೆದೊಯ್ದಳು. ಅವಳು ಆ ಗಡಿಗೆಗಳನ್ನು ತೆರೆದಾಗ, ಸಹಜವಾಗಿ ಆತನಿಗೆ ಅದು ಅಸಹ್ಯ ಹಾಗೂ ದಿಗ್ಭ್ರಮೆಗೊಳಿಸಿತು.
ಆಕೆಯ ಸೌಂದರ್ಯದಲ್ಲಿ ಬರೇ ಈ ಮಲ ಮತ್ತು ಕಾರಿದ ಪದಾರ್ಥಗಳು ಮಾತ್ರ ಮಾಯೆಯಾಗಿದೆಯೆಂದು ಆ ಸಂತ ಮಹಿಳೆಯು ವಿವರಿಸಿದಳು. ಮತ್ತು ಸ್ವಾಭಾವಿಕವಾದ ಈ ಭೌತಿಕ ಹಾಗೂ ಶಾರೀರಕ ಸೌಂದರ್ಯದ ಮಾಯೆಯ ಕುರಿತು ಅವನಿಗೆ ಬೋಧಿಸಿದಳು. ಇದರ ಪರಿಣಾಮಾಗಿ ಆತ ಅವನ ಪ್ರಜ್ಞೆಗೆ ಬಂದನು.
ಆದುದರಿಂದ ಒಬ್ಬ ಪುರುಷನು ಪ್ರಜ್ಞೆಯಲ್ಲಿದ್ದಾಗ ಒಬ್ಬ ಸ್ತ್ರೀಯರು ಲೈಂಗಿಕವಾಗಿ ಅವಲೋಕಿಸುವುದಿಲ್ಲ. ಒಬ್ಬ ವಿವೇಕವುಳ್ಳ ಪುರುಷನು ತನ್ನ ಮಡದಿಯನ್ನು ಬಿಟ್ಟರೆ, ಬೇರೆ ಎಲ್ಲ ಸ್ತ್ರೀಯರನ್ನು “ಮಾತೆ” ಎಂದು ದೃಷ್ಟಿಸುತ್ತಾನೆಂದು ಚಾಲಕ್ಕೆ ಪಟಕದ ಪ್ರಖ್ಯಾತ ನಿರೂಪಣೆಯಲ್ಲಿ ಒಬ್ಬ ಜ್ಞಾನಿಯ ವಿಚಾರದ ಬಗ್ಗೆ ಹೇಳಿದ್ದಾರೆ.
ಇಲ್ಲಿನ ಭಾವನೆ ಏನೆಂದರೆ, ಒಬ್ಬ ಪುರುಷನು ಹೇಗೆ ತನ್ನ ತಾಯಿಯನ್ನು ಲೈಂಗಿಕವಾಗಿ ಆಸ್ವಾದಿಸುವ ವಸ್ತುವಲ್ಲವೆಂದು ತಿಳಿಯುತ್ತಾನೋ, ಹಾಗೆಯೇ ಬೇರೆ ಎಲ್ಲ ಸ್ತ್ರೀಯರನ್ನು ಸ್ವಾರ್ಥವಾಗಿ ಆಸ್ವಾದಿಸುವ ಸಾಮಗ್ರಿಗಳಲ್ಲವೆಂದೂ ತನ್ನ ತಾಯಿಯೆ ಎಂಬ ದೃಷ್ಟಿಯಿಂದ ನೋಡತಕ್ಕದ್ದು, ಈ ನಿಸ್ವಾರ್ಥದ ವಿಚಾರವನ್ನು ಸಂಸ್ಕರಿಸಲು ನಮ್ಮ ಚಲನೆಯಲ್ಲಿ ಸಾಮಾನ್ಯವಾಗಿ ಪುರುಷರು ಸ್ತ್ರೀಯರನ್ನು ‘ಮಾತಾಜಿ’ ಅಥವಾ ಮಾತೆಯೆಂದು ಹೇಳುವ ರೂಢಿಯಿದೆ.
ವೈಯಕ್ತಿಕ ಅನುಭಾವದ ಪ್ರಕಾರ ಕೃಷ್ಣಪ್ರಜ್ಞೆಯಲ್ಲಿ, ಒಬ್ಬ ಮಹಿಳೆಯನ್ನು ಆಧ್ಯಾತ್ಮಿಕ ಜೀವಿಯೆಂದು ಗೌರವಿಸುವುದರಿಂದ, ಆಕೆಗೆ ವಾಸ್ತವವಾಗಿ ಉನ್ನತ ಪದವಿ ಇದೆ.
ಇಲ್ಲಿ ಸೂಚಿಸುವುದೇನೆಂದರೆ ಪುರುಷರು ಮತ್ತು ಸ್ತ್ರೀಯರು ಒಬ್ಬ ಇನ್ನೊಬ್ಬನನ್ನು ಒಂದು ಲೈಂಗಿಕ ವಸ್ತುವೆಂದು ಭಾವಿಸುವುದನ್ನು ಬಿಡುವ ತನಕ, ನಿಸ್ವಾರ್ಥವಾಗಿ ವ್ಯವಹರಿಸಲಾರರು. ಅವರ ಸ್ಮೃತಿಯನ್ನು ಆಧ್ಯಾತ್ಮಿಕ ಮಟ್ಟಕ್ಕೇರಿಸಿದಾಗ ಮಾತ್ರ ಅವರಿಗೆ ಅದು ಸಾಧ್ಯ.
ಭಕ್ತಿವೇದಾಂತ ದರ್ಶನ : ನಾವು ಪುರುಷರು ಅಥವಾ ಸ್ತ್ರೀಯರು ಅಲ್ಲವೆಂಬ ತೀರ್ಮಾನವನ್ನು ನಿಜವಾಗಿ ಭಾವಿಸಿದರೂ ಸಹ, ನಾವು ಅದರಲ್ಲಿ ಜೀವಿತವಾಗಿರುವಾಗ, ಈ ನಮ್ಮ ಶರೀರದ ಅಧಿಕಾರ ಹಾಗೂ ಸೀಮಾ ಬಂಧನೆಗೆ ನಾವು ಅಧೀನರಲ್ಲವೆ? ಈ ವಿಚಾರದಲ್ಲಿ ಪುರುಷರ ಮತ್ತು ಸ್ತ್ರೀಯರ ಶಾರೀರಕ ಮಟ್ಟದಲ್ಲಿ ಭೇದವನ್ನುಂಟು ಮಾಡುವುದಿಲ್ಲವೆ?
ಭಕ್ತಳು : ಪುರುಷರು ಮತ್ತು ಸ್ತ್ರೀಯರು ಭಿನ್ನವಾದುದೆಂಬುದು ಸ್ಪಷ್ಟ. ಅವರು ಬೇರೆಯೆ ಸ್ವರೂಪ – ಸ್ತ್ರೀಯರು ಶಿಶುವನ್ನು ಹಡೆಯಬಹುದು, ಪುರುಷರಿಗೆ ಅದು ಸಾಧ್ಯವಿಲ್ಲ, ಮತ್ತು ಆಧ್ಯಾತ್ಮಿಕವಾಗಿ ಸ್ತ್ರೀಯರು ಬೇರೆ ಸ್ವರೂಪ.
ಭಕ್ತಿವೇದಾಂತ ದರ್ಶನ : ಆದರೆ ಸ್ತ್ರೀಯರು ಅವರ ಈ ಆಧ್ಯಾತ್ಮಿಕ ಭಿನ್ನವು ಸ್ವಾಭಾವಿಕವಾಗಿ ಸಾಮಾಜಿಕ ಅಥವಾ ಸಾಂಸ್ಕೃತಿಕ ಪರಿಸ್ಥಿತಿಯಸಾರವೆಂದು ತರ್ಕಿಸುತ್ತಿದ್ದಾರೆ.
ಭಕ್ತಳು : ಸಹಜವಾಗಿರಬಹುದು. ಆದರೆ ಸ್ತ್ರೀಯರಲ್ಲಿ ಅವರವರ ಸ್ವಭಾವಗುಣ ಇದ್ದೆಯಿದೆ. ಅದರೊಂದಿಗೆ ಅವರ ಭೌತಿಕ ಮನಃಶಾಸ್ತ್ರ ಮತ್ತು ಸೀಮೆಯೂ ಸೇರಿಕೊಂಡಿದೆ. ಈ ಸ್ಥಿತಿ ಗತಿಗಳನ್ನು ಒಬ್ಬ ಸ್ತ್ರೀ ನಿರಾಕರಿಸಲೂಬಹುದು. ಅಥವಾ ಅವುಗಳನ್ನು ಧಾರ್ಮಿಕ ಪ್ರಗತಿಯಿಂದ ಪರಾಭವಪಡಿಸಲೂಬಹುದು.
ಒಬ್ಬ ಮಹಿಳೆ ನಿಜವಾಗಿಯೂ ಮುಕ್ತಿ ಹೊಂದಬೇಕೆಂದಿದ್ದಲ್ಲಿ ಅವಳ ಸ್ವಭಾವವನ್ನು ಸಾಂಸ್ಕೃತಿಕವಾಗಿ ಆಧ್ಯಾತ್ಮಿಕ ಜ್ಞಾನದೊಂದಿಗೆ ಮೇಲ್ಪಡಲು ಪ್ರಯತ್ನಿಸುತ್ತಾಳೆ. ಕೆಲವು ಸ್ತ್ರೀಯರು ತಿಳಿದಂತೆ, ಪುರುಷತ್ವವನ್ನು ಗಳಿಸುವುದು ಸ್ತ್ರೀಯರ ಸೀಮಾಬಂಧನಕ್ಕೆ ಉತ್ತರವಲ್ಲ. ಆದರೆ ಆಧ್ಯಾತ್ಮಿಕವಾದ ಪ್ರಗತಿಯಿಂದ ಪಡೆಯಬೇಕು.
ಭಕ್ತಿವೇದಾಂತ ದರ್ಶನ : ‘ಸ್ತ್ರೀಯರ ರಕ್ಷಣೆ’ಯೆಂಬ ವೈದಿಕ ವಿಚಾರವೇನು? ಬಾಲ್ಯದಲ್ಲಿ ಆಕೆಯ ತಂದೆಯಿಂದ ಮಧ್ಯಮ ಪ್ರಾಯದಲ್ಲಿ ಆಕೆಯ ಪತಿಯಿಂದ ಹಾಗೂ ವೃದ್ಧಾ ಸಮಯದಲ್ಲಿ ಆಕೆಯ ಹಿರಿಯ ಪುತ್ರರಿಂದ ರಕ್ಷಿಸಲ್ಪಡಬೇಕೆಂಬ ವಿಚಾರವೇ? ಸ್ತ್ರೀಯರನ್ನು ಪುರುಷರಿಂದ ‘ರಕ್ಷಿಸಲ್ಪಡುವುದು’ ಅಗತ್ಯವೆಂಬ ವಿಚಾರವನ್ನು ಕೆಲ ಮಹಿಳೆಯರು ವಿರುದ್ಧವಾಗಿ ಪ್ರತೀಕರಿಸುತ್ತಾರೆ.
ಭಕ್ತಳು : ಪುರುಷರಿಂದ ಆಶ್ರಯ ಪಡೆಯುವುದು ಸ್ತ್ರೀಯರಿಗೆ ಒಂದು ಅಹಂಕಾರದ ಪ್ರಭಾವದ ಸಾಹಸ ಕೃತ್ಯದ ವಿಷಯವಲ್ಲ. ಇದು ಅಕ್ಕರೆಯ ಬಂಧುಗಳ ವಾಸ್ತವವಾದ ಹಂಬಲ. ಸ್ತ್ರೀಯರು ಪುರುಷರಿಂದ ಶಾರೀರಕವಾಗಿ ಬಲಹೀನರು ಮತ್ತು ಹೆಚ್ಚಾಗಿ ಅವರ ಭಾವಾವೇಶಕ್ಕೆ ಅಧೀನರಾಗಿರುವುದರಿಂದಲೂ, ಪುರುಷರ ಹಾಗೂ ಗಂಡಂದಿರ ಪ್ರೀತಿಯ ಆಶ್ರಯದಲ್ಲಿ ಅವರು ಹಿತವಾಗಿರುತ್ತಾರೆ.
ಕೆಲವು ಸ್ತ್ರೀವಾದಿಗಳು ಪ್ರತಿಪಾದಿಸಿದರೂ ಸಹ, ಮಹಿಳೆಗೆ ಸ್ವಾಭಾವಿಕವಾಗಿ ಒಬ್ಬ ಪುರುಷನಿಂದ ರಕ್ಷಣೆ ಬೇಕಾಗಿರುವುದು ಸಹಜ. ಯಾವ ಮಹಿಳೆಯೂ ಆತ್ಮವಿಶ್ವಾಸಕ್ಕೆ ಅರ್ಹಳಲ್ಲವೆಂದು ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಹೇಳುವುದೇನೆಂದರೆ ಒಬ್ಬ ಮಹಿಳೆ, ಒಬ್ಬ ಪುರುಷನಲ್ಲಿ ಸಹವಾಸ ಮತ್ತು ಆಶ್ರಯವನ್ನು ಅರಸುತ್ತಾಳೆ.
ನಮಗೆಲ್ಲರಿಗೂ ತಿಳಿದಂತೆ ಸ್ತ್ರೀಯರು ಪುರುಷರಿಗಿಂತ ಹೆಚ್ಚಾಗಿ ಭಾವಾವೇಶಕ್ಕೆ ಅಧೀನರಾಗಿರುತ್ತಾರೆ. ಯಾಕೆಂದರೆ ಸ್ತ್ರೀಯರಿಗೆ ರಕ್ಷಣೆ ಮತ್ತು ಪ್ರೀತಿಬೇಕು. ಪುರುಷರು “ಪ್ರೇಮಿಗಳೆಂದು” ಪ್ರತಿರೂಪದಿಂದ ಸ್ತ್ರೀಯರ ಹಿತವನ್ನು ಬಯಸಿ, ಮತ್ತೆ ಕ್ರಮೇಣ ಅವರನ್ನು ಬಿಟ್ಟು ಬಿಡುತ್ತಾರೆ.
ಈ ತರಹದ ಅನುಭವಗಳಿಂದ ಸ್ತ್ರೀಯರು ಭಾವನಾರ್ಥಕವಾಗಿ ಹೆದರಿಕೊಂಡು ಬಿಡುತ್ತಾರೆ. ಒಬ್ಬ ಯುವ ಮಹಿಳೆಯು ಯಾವಾಗ ಅವಳ ವಿಶ್ವಾಸವನ್ನು ಒಬ್ಬ ಪುರುಷನಲ್ಲಿ ಇಟ್ಟು ತನ್ನ ಜೀವಾಳವನ್ನು ಕೊಟ್ಟು ಅವನಿಂದ ವಂಚಿಸಲ್ಪಡುತ್ತಾಳೋ, ಅವಳಿಗೆ ಮತ್ತೆ ಇನ್ನೊಬ್ಬ ಪುರುಷನಲ್ಲಿ ವಿಶ್ವಾಸವನ್ನು ಇಡುವುದು ಕಷ್ಟ. ಜೀವನದಲ್ಲಿ ದಾಂಪತ್ಯದ ಮುನ್ನ ಲೈಂಗಿಕ ಸಹವಾಸವನ್ನು ಬಳಸಿದರೆ, ಅದು ಖಂಡಿತವಾಗಿ ದಾಂಪತ್ಯದ ನಿಷ್ಠೆಗೆ ಹಾನಿಕರ.

ಒಂದು ಸುಖಕರವಾದ ವಿವಾಹ ಹಾಗೂ ದಾಂಪತ್ಯದಲ್ಲಿ ಒಬ್ಬ ಮಹಿಳೆ ನಮ್ರತೆ ಮತ್ತು ಮಿತಭಾಷಿಯಾಗಿರಬೇಕು.
ಸ್ತ್ರೀಯರಿಗೆ ರಕ್ಷಣೆ ಅವಶ್ಯಕರವೆಂಬ ವಿಚಾರ ಮಹಿಳೆಯರನ್ನು ಗೌರವಿಸದೇಯಿರುವುದೆಂಬ ಸೂಚನೆ ಅಲ್ಲ. ಇದು ಕೇವಲ ಪ್ರತಿಕೂಲ. ಇದು ಗೌರವ ಹಾಗೂ ಹಂಬಲವನ್ನು ಸೂಚಿಸುತ್ತದೆ. ತಾಯಿಯಂದಿರಾಗಿ ಮತ್ತು ಮಡದಿಯಾಗಿ ಪಾಲ್ಗೊಂಡಿರುವುದರಿಂದ ಸ್ತ್ರೀಯರನ್ನು ಭಕ್ತರು ಸಮಾಜದಲ್ಲಿ ಅವರ ವಿಶೇಷವಾದ ಮನುಷ್ಯತ್ವದ ಯೋಗ್ಯತೆ ಹಾಗೂ ಅಮೂಲ್ಯವಾದ ಸದಸ್ಯರೆಂದು ಗೌರವಿಸುತ್ತಾರೆ.
ಈ ಕರ್ತವ್ಯಗಳೆಲ್ಲ ಪ್ರಮುಖವಾದುದಲ್ಲವೆಂದು ನಾವು ಪರಿಗಣಿಸುವುದಿಲ್ಲ. ಮನುಷ್ಯನ ಸಾಮಾಜಿಕ ಗುಣಲಕ್ಷಣವು ಹೆಚ್ಚಿನಂಶವಾಗಿ ಮನುಷ್ಯನ ಸಮಾಜದ ಗುಣಲಕ್ಷಣದ ಮೇಲೆ ಪ್ರತಿಬಿಂಬಿಸುತ್ತದೆ. ಹೆಂಡತಿಯಾಗಿರುವುದು ಮತ್ತು ಮಾತೃತ್ವವು ಸಮಾಜದ ಅತ್ಯಂತ ಮುಖ್ಯವಾದ ಚಟುವಟಿಕೆಗಳು.
ಆದುದರಿಂದ ಒಬ್ಬ ಒಳ್ಳೆಯ ಸಮರ್ಪಕವಾದ ಮಡದಿ ಹಾಗೂ ತಾಯಿಯಾಗಿರುವುದು, ಯಾವುದೇ ಕಾರಣಕ್ಕೂ ಅರ್ಥವಿಲ್ಲವೆಂಬುದು ನಾವು ತಿಳಿಯಬಾರದು. ನೂತನ ಸ್ತ್ರೀ ಆಂದೋಲನವೆಂಬುದರ ಅರ್ಥವೇನೆಂದರೆ ಒಬ್ಬ ಅಸುರಕ್ಷಿತ ಮಹಿಳೆಯನ್ನು ಒಬ್ಬ ಪುರುಷನು ಲೈಂಗಿಕವಾಗಿ ಉಪಯೋಗಿಸಿ, ಮತ್ತೆ ಆಕೆ ಗರ್ಭವತಿಯಾಗಿ ಅವಳ ಅನುಚಿತವಾದ ಕೂಸನ್ನು ಸಂರಕ್ಷಿಸಲು ಅಥವಾ ಅವಳ ಗರ್ಭದಲ್ಲಿನ ಶಿಶುವನ್ನು ಕೊಲೆ ಮಾಡಲು ಸರ್ಕಾರದಿಂದ ಧನಸಹಾಯವನ್ನು ಬೇಡುವುದು, ಅದು ಸ್ವಾತಂತ್ರ್ಯವೇ?
ಭಕ್ತಿವೇದಾಂತ ದರ್ಶನ : ಕೆಲವು ಸ್ತ್ರೀಯರು ಪುರುಷರ ಆಶ್ರಯದಲ್ಲಿರುವ ವಿಚಾರವನ್ನು ಇಷ್ಟಪಡುವುದಿಲ್ಲ. ಯಾಕೆಂದರೆ ಅವರು ಪುರುಷರ ಮೇಲೆ ವಿಶ್ವಾಸವನ್ನು ತೋರಿದಕ್ಕೆ ಅಹಿತಕರವಾದ ಅನುಭವಗಳನ್ನು ಮನಗಾಣಿಸಿದ್ದಾರೆ.
ಭಕ್ತಳು : ಹೌದು, ಪುರುಷರು ಭೌತಿಕವಾಗಿಯೂ ಮತ್ತು ಧಾರ್ಮಿಕವಾಗಿಯೂ ಸಂಪೂರ್ಣವಾಗಿ ಪರಿಪಕ್ವವಾಗದಿದ್ದಲ್ಲಿ ಮತ್ತು ನಿಜವಾಗಿಯು ರಕ್ಷಣೆ ಕೊಡಲು ಅರ್ಹತೆ ಇಲ್ಲದಿದ್ದಲ್ಲಿ, ಈ ವಿಚಾರವು ಹಾಸ್ಯಕರವಾಗುತ್ತದೆ. ಹೆಚ್ಚಿನ ಮಹಿಳೆಯರಿಗೆ, ಅವರ ಸ್ವಂತ ಜೀವನದಲ್ಲಿ ಪುರುಷರಿಂದ ನಿಜವಾಗಿಯೂ ರಕ್ಷಿಸಲ್ಪಡುವ ಅನುಭವಗಳು ಬಹಳ ಕಡಮೆ.
ಆದುದರಿಂದ ಈ ವಿಚಾರವನ್ನು ತಿಳಿದುಕೊಳ್ಳಲು ಕಠಿಣವಾಗುತ್ತದೆ, ಮತ್ತು ಆ ಅನುಭವಗಳನ್ನು ಮನಗಾಣಲು ಹೇಗೆ ಸಾಧ್ಯ? ಒಬ್ಬ ಪುರುಷನು ಒಬ್ಬ ಮಹಿಳೆಗೆ ತನ್ನ ಸರಳವಾದ ಆಶ್ರಯವನ್ನು ನೀಡಲು, ಮಾನಸಿಕವಾಗಿ ಪುರುಷನಿಗೆ ಸ್ವಾರ್ಥದ ಭೌತಿಕ ವಸ್ತುಗಳಿಂದ ದೂರ ಸರಿಯಬೇಕು.
ಈಗಿನ ನೂತನ ಸಮಾಜದಲ್ಲಿ ಅವರಂತೆ ಎಷ್ಟು ಪುರುಷರಿದ್ದಾರೆ? ವ್ಯಾವಹಾರಿಕವಾಗಿ (ನಿಜವಾಗಿ) ಒಬ್ಬನೂ ಇಲ್ಲ. ಆಳವಾಗಿ ನೋಡಿದರೆ ಇಂತಹ ಚೊಕ್ಕ ಸ್ವಭಾವವುಳ್ಳವರು ಕೃಷ್ಣಪ್ರಜ್ಞೆಯ ಆಂದೋಲನದಲ್ಲಿ ಮಾತ್ರ ಸಾಧ್ಯವಿದೆ.
ಪುರುಷರು ರಕ್ಷಣೆಯನ್ನು ನೀಡುವ ಈ ಪದ್ಧತಿಯನ್ನು ಅಸ್ವಾಭಾವಿಕವಾಗಿ ವಿಧಿಸಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಪುರುಷರ ಆಶ್ರಯದಲ್ಲಿ ಅಧೀನಳಾಗಿರಲು – ಪುರುಷನು ಆ ಕಾರ್ಯವನ್ನು ಮಾಡಲು ಉಚ್ಚಮಟ್ಟದ ಗುಣಲಕ್ಷಣವುಳ್ಳವನಾಗಿರಬೇಕು. ವೇದದ ಸಾಮಾಜಿಕ ಪದ್ಧತಿಯಲ್ಲಿ ಹೆಂಗಸರು ಮತ್ತು ಪುರುಷರ ಭಾಗದಲ್ಲಿ, ಒಂದು ಉಚ್ಚಮಟ್ಟದ ನೀತಿಶಾಸ್ತ್ರದ ಕಡೆ ಗಮನಕೊಡಬೇಕು.
ಪುರುಷನು ನೀಚ ಸ್ವಭಾವದವನಾಗಿದ್ದಲ್ಲಿ, ಪತಿವ್ರತೆಯಾಗಿದ್ದ ಮಡದಿ ಅವನ ಜೊತೆ ಸಹವಾಸವನ್ನು ಮತ್ತು ಸೇವೆಯನ್ನು ಕರ್ತವ್ಯವಾಗಿ ಸಲ್ಲಿಸಬೇಕಾಗಿಲ್ಲವೆ೦ದು, ವೇದ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಪರುಷರು ಮಹಿಳೆಯರನ್ನು ಸಂರಕ್ಷಿಸುವ ಮೂಲ ತತ್ತ್ವವು, ಗುಲಾಮನಾಗಿ ಶರಣಾಗತನಾಗುವುದಲ್ಲವೆಂದೂ, ಆದರೆ ಇದು ಉನ್ನತವಾದ ಸಾಮಾಜಿಕ ಸೂತ್ರವೆಂದೂ ಮತ್ತು ಧಾರ್ಮಿಕ ಸೇವೆಯ ಅಭಿವೃದ್ಧಿಯ ಸಾಧನೆಯೆಂದು ಪುರುಷರೂ ಮತ್ತು ಸೀಯರು ಕೃಷ್ಣಪ್ರಜ್ಞೆಯಲ್ಲಿ ಅರ್ಥಮಾಡಿಕೊಳ್ಳತಕ್ಕದ್ದು. ಸಂರಕ್ಷಣೆಯು ತಿಳುವಳಿಕೆ ಮತ್ತು ಅನುರೂಪವಾದ ಹೊಂದಿಕೆಯ ಮೇಲೆ ಆಧಾರವಾಗಿರಬೇಕು; ಇಲ್ಲದಿದ್ದಲ್ಲಿ ಈ ಕಾರ್ಯವು ಸಫಲವಾಗದು.
ಭಕ್ತಿವೇದಾಂತ ದರ್ಶನ : ಕೃಷ್ಣಪ್ರಜ್ಞೆಯಲ್ಲಿ ಭಕ್ತರಾಗಿರುವ ಮಹಿಳೆಯರು ಭಕ್ತ ಪುರುಷರಿಂದ ಗೌರವಿಸಲ್ಪಡುತ್ತಾರೆಯೇ?
ಭಕ್ತಳು : ಅದು ಸಹಜವಾಗಿ ಹೌದು. ಒಬ್ಬ ವೈಷ್ಣವ ಭಕ್ತಳು ಬಾಹ್ಯದ ಶಾರೀರಕ ರೂಪಕ್ಕೆ ಲಕ್ಷ್ಯ ಕೊಡದೇ, ಪ್ರತಿಯೊಂದು ಜೀವಿತ ಪ್ರಾಣಿಯನ್ನು ಶ್ರೀಕೃಷ್ಣನ ಸೇವಕ ಅಥವಾ ಅಂಶವೆಂದು ಗೌರವಿಸುತ್ತಾಳೆ. ಒಬ್ಬ ಭಕ್ತಳು ಒಂದು ಇರುವೆಯನ್ನು ಕೂಡ ಗೌರವಿಸುತ್ತಾಳೆ.
ಕೃಷ್ಣಪ್ರಜ್ಞೆಯ ಉನ್ನತ ವಿಚಾರಗಳನ್ನು ಭಗವತ್ಕಾರ್ಯಗಳಿಗೆ ಅರ್ಪಿಸಿದ ಅವಳ ಜೀವನವನ್ನು ಏನನ್ನಬೇಕು? ಈ ಒಂದು ಜೀವಿಯ ಮೇಲೆ (ವಿಷಯ) ಏನನ್ನಬೇಕು ಆದುದರಿಂದ ಗೌರವ ಅನ್ನುವುದು ಸ್ವಾಭಾವಿಕವಾಗಿದೆ. ಕೆಲವು ಭಕ್ತ ಪುರುಷರು ಸ್ವಲ್ಪ ಅಹಂಭಾವದವರೆಂದು ಹೇಳಲು ಸಾಧ್ಯ. ಆದರೆ ತಿಳುವಳಿಕೆ ಮತ್ತು ಧಾರ್ಮಿಕ ಪ್ರಗತಿಯೊಂದಿಗೆ ಭಕ್ತರು ಮೃದುವಾಗುತ್ತಾರೆ.
ಭಕ್ತಿವೇದಾಂತ ದರ್ಶನ : ವಿವಾಹ ಸಂಬಂಧದಲ್ಲಿ ಸ್ತ್ರೀಯರ ಪಾತ್ರವೇನು? ‘ಇಸ್ಕಾನ್’ನಲ್ಲಿನ ಮಹಿಳೆಯರನ್ನು ಕಡ್ಡಾಯವಾಗಿ ಮದುವೆಯಾಗಲು ನಿರ್ಬಂಧವೇನೂ ಇಲ್ಲ. ಆದರೆ ಅವರು ಕೊನೆಯಲ್ಲಿ ಮದುವೆಯಾಗುತ್ತಾರೆ. ಅವರು ದಾಂಪತ್ಯ ಜೀವನದ ಕೂಡೆ ಅವರ ಧಾರ್ಮಿಕ ಜೀವನವನ್ನು ಹೇಗೆ ಸಂಯೋಜಿಸುತ್ತಾರೆ?
ಭಕ್ತಳು : ಕೃಷ್ಣ ಪ್ರಜ್ಞೆಯ ದಾಂಪತ್ಯದಲ್ಲಿ ಪುರುಷರು ಮತ್ತು ಮಡದಿಯರು ಪರಸ್ಪರವಾಗಿ ಧಾರ್ಮಿಕ ಜೀವನದಲ್ಲಿ ಮುನ್ನಡೆಯಲು ನೆರವಾಗುತ್ತಾರೆ. ತನ್ನ ಪತಿಯ ಧಾರ್ಮಿಕ ಚಟುವಟಿಕೆಗಳಲ್ಲಿ ಪತ್ನಿಯು ಭಾಗವಹಿಸುತ್ತಾಳೆಂದು ಧರ್ಮಗ್ರಂಥಗಳಲ್ಲಿ ನೀವೇದಿಸಿದ್ದಾರೆ.
ಪತಿಯು ಧಾರ್ಮಿಕವಾಗಿ ಮುನ್ನಡೆದರೆ ಮತ್ತು ಆತನ ಪತ್ನಿಯು ಪತಿವ್ರತೆಯಾಗಿ ಅವಳ ಪತಿಯ ಸ್ವಾಮಿಭಕಳಾಗಿದ್ದಲ್ಲಿ, ತನ್ನ ಪತಿಯ ಅದೇ ಧಾರ್ಮಿಕ ಪರಿಪೂರ್ಣತೆ ಅವಳಿಗೂ ಪ್ರಾಪ್ತಿಯಾಗುತ್ತದೆ. ಸಂಸ್ಕೃತದಲ್ಲಿ ಪತಿಯನ್ನು ‘ಪತಿಗುರು’ ಅಥವಾ ‘ಪುರುಷ ಗುರು’ ಎಂದು ಹೇಳುತ್ತಾರೆ, ಯಾಕೆಂದರೆ ಅವನು ಪತ್ನಿಗೆ ಧಾರ್ಮಿಕ ಮಾರ್ಗದರ್ಶಿಯಾಗಿ ಅಭಿನಯಿಸುತ್ತಾನೆ.
ಪತ್ನಿಯನ್ನು, ಪತಿಯ ಧಾರ್ಮಿಕ ಜೀವನದಲ್ಲಿ ಸಹಯೋಗಿ ಎಂದೂ ಹಾಗೂ ಧರ್ಮಪತ್ನಿಯೆಂದೂ ಸೂಚಿಸಲಾಗಿದೆ. ಸಾಮಾನ್ಯವಾಗಿ ಪುರುಷನನ್ನು ಪತ್ನಿಯ ಧಾರ್ಮಿಕ ಮಾರ್ಗದರ್ಶಿಯೆಂದು ಎಣಿಸಿದರೂ ಸಹ ನಮ್ಮ ಸಂಪ್ರದಾಯ ಹಾಗೂ ಚಳವಳಿಯಲ್ಲಿ ಅನೇಕ ದೃಷ್ಟಾಂತಗಳಿವೆ, ಕೆಲವೆಡೆಯಲ್ಲಿ ಪತ್ನಿಯು ಈ ದಾಂಒತ್ಯ ಜೋಡಿಯಲ್ಲಿ ದೃಢವಾಗಿರುತ್ತಾಳೆಂಬ ವಿಚಾರವನ್ನು ಗಮನಿಸತಕ್ಕದ್ದು.

ನನಗೆ ತಿಳಿದಂತೆ ಇಸ್ಕಾನ್‌ನಲ್ಲಿ ಅನೇಕ ವಿದ್ಯಮಾನಗಳಿವೆ, ಕೆಲವೆಡೆಯಲ್ಲಿ ಈ ಆಂದೋಲನದೊಳಗೆ, ಬಂದ ಪತ್ನಿಯರು ಅವರ ಪತಿಯನ್ನು ಈ ಆಂದೋಲನಕ್ಕೆ ಕರೆದೊಯ್ದಿದ್ದಾರೆ ಅಥವಾ ಅವರಿಗೆ ಧಾರ್ಮಿಕ ದೌರ್ಬಲ್ಯವನ್ನು ಬಲಪಡಿಸಲು ಬೆಂಬಲ ನೀಡಿದ್ದಾರೆ. ಅಥವಾ ಕೆಲವೆಡೆ ಗಂಡಂದಿರು ಈ ಕೃಷ್ಣ ಪ್ರಜ್ಞೆಯಿಂದ ದೂರಸರಿದು ಹೊರಗಡೆ ಬಂದು ಮತ್ತು ಮಡದಿಯರು ಆ ಆಂದೋಲನದಲ್ಲೇ ಇದ್ದುಕೊಂಡು ಅಭಿವೃದ್ಧಿ ಹೊಂದಿದ್ದಾರೆ.
ವಾಸ್ತವವಾಗಿ ಪತ್ನಿಯು ಪತಿಗೆ ಒಂದು ಮೂಲ ಶಕ್ತಿಯಾಗಿರಲು ಸಾಧ್ಯವಿದೆ. ಶ್ರೀಮದ್ ಭಾಗವತದಲ್ಲಿ ನಮೂದಿಸಿದಂತೆ, ಸೇನಾಪತಿಯು ಹೇಗೆ ಕೋಟೆಯನ್ನು ಅಪಹರಿಸಲು ಬಂದ ದಾಳಿಗಾರರೊಂದಿಗೆ ತನ್ನ ಕೋಟೆಯನ್ನು ರಕ್ಷಿಸುವನೋ, ಹಾಗೆಯೇ ಪತ್ನಿಯು ಪತಿಯ ಶರೀರವನ್ನು ಅಪಹರಿಸಿ ಗೆಲ್ಲುವ ಭೌತಿಕ ಅಪೇಕ್ಷೆಗಳಿಂದ ರಕ್ಷಿಸುತ್ತಾಳೆ. ಧಾರ್ಮಿಕವಾಗಿ ದೃಢವುಳ್ಳ ಪತ್ನಿಗೆ, ತನ್ನ ಪತಿಯ ಕಾಮದ (ಲೈಂಗಿಕವಾದ) ಇಚ್ಛೆಯನ್ನು ಮನಗೊಳಿಸಲು ಸಾಧ್ಯವಿದೆ.
ಕೃಷ್ಣ ಪ್ರಜ್ಞೆಯ ದಾ೦ಪತ್ಯದಲ್ಲಿ ಗಂಡಹೆಂಡತಿಯರಿಬ್ಬರೂ ಸಹ ಜೊತೆಗೆ ಧಾರ್ಮಿಕ ಸುಧಾರಣೆಗಾಗಿ ಕಾರ್ಯಬದ್ಧರಾಗಿರುತ್ತಾರೆ. ದಾಂಪತ್ಯವು ಒಂದು ಧಾರ್ಮಿಕ ಪುಣ್ಯ ಸಂಸ್ಕಾರ, ಯಾಕೆಂದರೆ ಇದು ಪರಮ ಪುರುಷನ ಸೇವೆಗೆ ಮುಡಿಪಾಗಿರುತ್ತದೆ. ಶ್ರೀಕೃಷ್ಣ ಈ ಬಂಧುತ್ವದ ಮಧ್ಯ ಬಿಂದು.
ಇಲ್ಲಿ ಮೂಲಭೂತವಾದ ಪರಿಣಾಮವೇನೆಂದರೆ, ಈ ಎರಡು ಪಂಗಡಗಳ ಕೃಷ್ಣನ ಮೇಲಿನ ಹೊಂದಿಕೆ, ಅವರ ಪರಸ್ಪರ ಹೊಂದಿಕೆಗಿಂತಲೂ ಪ್ರಭಾವವುಳ್ಳದಾಗಿದೆ. ಈ ಪ್ರಕಾರದ ಧಾರ್ಮಿಕ ಏಕಾಗ್ರತೆಯು ಬಂಧುತ್ವವನ್ನು ಪವಿತ್ರವಾಗಿಡಲು ಸಹಕರಿಸುತ್ತದೆ.
ಭಕ್ತಿವೇದಾಂತ ದರ್ಶನ: ಕೃಷ್ಣ ಪ್ರಜ್ಞೆಯಲ್ಲಿ ಸ್ತ್ರೀಯರು ಧಾರ್ಮಿಕವಾಗಿ ಉನ್ನತ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವೇ? ಸ್ವಾಭಾವಿಕವಾಗಿ ಸ್ತ್ರೀಯರ ಉನ್ನತ ಪರಿಪೂರ್ಣತೆಗೆ ಯಾವುದಾದರೂ ನ್ಯಾಯವಾದ ನಿರ್ಬಂಧವಿದೆಯೆ?
ಭಕ್ತಳು : ನಿರಂಕುಶವಾಗಿಯೂ ಇಲ್ಲ. ಯಾವನು ಪ್ರಾಮಾಣಿಕತೆಯಿಂದ ಧರ್ಮಗುರುವಿನ ಹಾಗೂ ಧರ್ಮಗ್ರಂಥದ ಉಪದೇಶಗಳನ್ನು ಅನುಸರಿಸುತ್ತಾನೋ, ಅವನು ಕೃಷ್ಣ ಪ್ರಜ್ಞೆಯಲ್ಲಿ ಪರಿಪೂರ್ಣತೆಯನ್ನು ಗಳಿಸಲು ಅರ್ಹನು. ಅದರಲ್ಲಿ ಯಾವತರಹದ ನಿರ್ಬಂಧವೂ ಇಲ್ಲ.
ಭಕ್ತಿವೇದಾಂತ ದರ್ಶನ : ಕೃಷ್ಣ ಪ್ರಜ್ಞೆಯ ಗುರುಸಂಪ್ರದಾಯದಲ್ಲಿ ಮಹತ್ವಳೆನಿಸಿದ ನಾರಿಯು, ಭಕ್ತಳೂ, ಸ೦ತಳೂ ಅಥವಾ ಧಾರ್ಮಿಕ ಮಾರ್ಗದರ್ಶಿನಿಯೂ ಆಗಿರುವ ದೃಷ್ಟಾಂತಗಳಿವೆಯೆ?
ಭಕ್ತಳು : ಹಲವಾರು ಇವೆ. ಪೌರಾಣಿಕದಲ್ಲಿ ಪರಿಗಣಿಸಿದಂತೆ, ಪಾಂಡವರ ಪತ್ನಿ ಬ್ರೌಪದಿ; ಧೃತರಾಷ್ಟ್ರನ ಪತಿವ್ರತೆ ಗಾಂಧಾರಿ, ಕೃಷ್ಣನ ಸೋದರತ್ತೆಯಾದ ಕುಂತಿ, ಕಪಿಲದೇವಿಯ ಅವತಾರಿಯಾದ ದೇವಾಹುತಿ, ಇಂತಹ ಸಂತಸ್ತ್ರೀ ಮಹಾತ್ಮೆಯರನ್ನು ಮಹಾಭಾರತ ಮತ್ತು ಶ್ರೀಮದ್‌ಭಾಗವತಂ ಇಂತಹ ಧರ್ಮಗ್ರಂಥಗಳಲ್ಲಿ ನಾವು ಕಾಣಬಹುದು.
ಕುಂತಿದೇವಿಯು ಶ್ರೀಕೃಷ್ಣನ ಮೇಲೆ ಪೂಜಿಸಿದ ನಾಮಗಳ (ಪ್ರಾರ್ಥನೆಗಳ) ವ್ಯಾಖ್ಯಾನವನ್ನು ಹೊರತಂದ ‘ಕುಂತಿಯ ಬೋಧನೆಗಳು ಎಂಬ ಪುಸ್ತಕವನ್ನು ನಾವು ಮುದ್ರಿಸಿ ಪ್ರಕಟಿಸಿದ್ದೇವೆ. ಇವೆಲ್ಲ ಕೇವಲ ಕೆಲವು ಉದಾಹರಣೆಗಳು.
ಭಕ್ತಿವೇದಾಂತ ದರ್ಶನ: ಸಂನ್ಯಾಸಿಗಳ ಮತ್ತು ಸ್ತ್ರೀ ಪರಿತ್ಯಾಗಿಗಳ ಬಗ್ಗೆ ಏನು ವಿಚಾರವಿದೆ? ಅನೇಕ ಸಮಯ ಸ್ತ್ರೀಯರನ್ನು ಪ್ರಶಂಶಿತ ಪತ್ನಿಯೆಂಬ ಹಾಗೂ ಸರ್ವೋತ್ತಮ ತಾಯಿಯೆಂಬ, ಮತ್ತು ಕೆಲವು ಸಲ ಪುರುಷರಲ್ಲಿ ಲೈಂಗಿಕ ಸಹವಾಸಕ್ಕೆ ಸಿಕ್ಕಿಬಿದ್ದಳೆಂಬ ಪಾತ್ರ ನೇಮಕ ಮಾಡಿದಂತೆ ತೋರುತ್ತದೆ.
ಭಕ್ತಳು : ಸಾಮಾನ್ಯವಾಗಿ ಸ್ತ್ರೀಯರು ಪುರುಷರಿಗಿಂತ ತಪಸ್ಸಿಗೆ ಕಡಮೆ ಒಗ್ಗುತ್ತಾರೆ. ಆದರೆ ಒಬ್ಬ ಮಹಿಳೆ ಆದರ್ಶ ತಪಸ್ವಿಯಾಗಲು ಶ್ರಮಪಡಬೇಕಾಗಿಲ್ಲವೆಂದು ಹೇಳುವುದಿಲ್ಲ. ಪುರುಷರ ಲೈಂಗಿಕ ಸಹವಾಸಕ್ಕೆ ಸ್ತ್ರೀಯರು ಕಾರಣವೆಂದು ಧರ್ಮಗ್ರಂಥಗಳಲ್ಲಿ ವರ್ಣನೆಮಾಡಿದೆ, ಅದು ಸಹಜ.
ಪುರುಷರೂ ಕೂಡ ಸ್ತ್ರೀಯರಿಗೆ ಕಾಮದ ಸಹವಾಸಿಗಳೆಂದು ಧರ್ಮಗ್ರಂಥದಲ್ಲಿ ಸಂತುಲಿತವಾಗಿ ವರ್ಣಿಸಿದೆ. ಸ್ತ್ರೀಯರು ಪುರುಷರಿಗೆ ಮಾಯೆಯಾಗಿ ಹಾಗೂ ಪುರುಷರು ಸ್ತ್ರೀಯರಿಗೆ ಮಾಯೆಯಾಗಿದ್ದಾರೆ. ಯಾಕೆಂದರೆ ಅವರು ತಾತ್ಕಾಲಿಕವಾಗಿ ಆಶ್ರಯ ಒದಗಿಸಲು ಸಾಧ್ಯ.
ಒಬ್ಬ ತಿಳುವಳಿಕೆಯುಳ್ಳ ಸ್ತ್ರೀಯು ಅಂತ್ಯದಲ್ಲಿ ದೇವೋತ್ತಮ ಪುರುಷನಾದ ಶ್ರೀಕೃಷ್ಣನ ಮೇಲೆ ಮಾತ್ರ ಅವಲಂಬಿಸಬಹುದೆಂದು ಗ್ರಹಿಸುತ್ತಾಳೆ. ಇಲ್ಲಿನ ವಿಚಾರವೇನೆಂದರೆ, ಒಬ್ಬ ಪುರುಷ ಮತ್ತು ಮಹಿಳೆ ಲೈಂಗಿಕವಾಗಿ ಜೀವನದಲ್ಲಿ ಕೃತಜ್ಞರಾಗಿ ಜತೆಗೆ ಇರುವಷ್ಟು ಸಮಯ, ಮಹಿಳೆಯು ಪುರುಷನಿಗೆ ಹಾಗೂ ಪುರುಷನು ಮಹಿಳೆಗೆ ಅಪಾಯಕರ.
ಆದರೆ ಗೌರವವಾದ ಧಾರ್ಮಿಕ ದಾಂಪತ್ಯದಲ್ಲಿ ಅವರ ಪ್ರೇಮದ ಬಂಧನವನ್ನು ಶ್ರೀ ಕೃಷ್ಣನಲ್ಲಿ ಸ್ವಾಧೀನ ಪಡಿಸಿದಲ್ಲಿ ಪುರುಷನೂ ಹಾಗೂ ಮಹಿಳೆಯೂ ಕೂಡ ಕೃಷ್ಣ ಪ್ರಜ್ಞರಾಗುತ್ತಾರೆ ಮತ್ತು ಪರಿಪೂರ್ಣವಾಗಿ ಮುಕ್ತಿ ಕಾಣುತ್ತಾರೆ.
ವೈದಿಕ ಸಂಸ್ಕೃತಿಯಲ್ಲಿ ಪತಿಯು ವೃದ್ಧಕಾಲದಲ್ಲಿ ತನ್ನ ಮನೆಯನ್ನು ಬಿಟ್ಟು ಸಂನ್ಯಾಸಿಯಾಗಿ ಹೊರಟು ಹೋಗುವಾಗ, ಪತ್ನಿಯೂ ಸಹ ತಪಸ್ವಿನಿಯಾಗುತ್ತಾಳೆ. ಪತಿಯು ಮಾಡಿದಂತೆ ಆಕೆ ತನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ. ತನ್ನ ಹಿರಿಯ ಪುತ್ರನ ಆರೈಕೆಯಲ್ಲಿ ಆಕೆ ಜೀವಿಸುತ್ತಾಳೆ, ಮತ್ತು ತಪಶ್ಚರ್ಯೆ ಹಾಗೂ ಸಂತ ಮಹಾತ್ಮಳ ಒಂದು ರೀತಿಯ ಉದಾಹರಣೆಯನ್ನು ಇಡೀ ವಂಶಕ್ಕೆ ತೋರಿಸುತ್ತಾಳೆ.
ಭಕ್ತಿವೇದಾಂತ ದರ್ಶನ : ಸ್ತ್ರೀಯರು ಮತ್ತು ಪುರುಷರು ಎಂದು ಬೇರ್ಪಡಿಸಿದರೆ ರೂಢಿಬದ್ಧವಾದ ಪಾತ್ರಕ್ಕೆ ಕರೆದೊಯ್ಯುವುದಿಲ್ಲವೆ?
ಭಕ್ತಳು : ಧಾರ್ಮಿಕ ಸೇವೆಯ ವಿಚಾರದಲ್ಲಿ, ತೊಡಗಿಕೊಳ್ಳಬಹುದು. ಈ ಆಂದೋಲನದಲ್ಲಿ ಸ್ತ್ರೀಯರು ಎಲ್ಲ ವಿಧದ ಚಟುವಟಿಕೆಗಳಲ್ಲಿ ಸ್ತ್ರೀಯರಿಗೆ ಪ್ರತ್ಯೇಕವಾದ ವೃತ್ತಿಯೂ ಇಲ್ಲ. ಪುರುಷರು ಹಾಗೂ ಸ್ತ್ರೀಯರು ಅಡಿಗೆಯನ್ನೂ ಮಾಡುತ್ತಾರೆ, ಸ್ವಚ್ಛಗೊಳಿಸುತ್ತಾರೆ ಮತ್ತು ಮಕ್ಕಳನ್ನೂ ಬೆಳೆಸುತ್ತಾರೆ.
ಮತ್ತು ಹಚ್ಚಾಗಿ ಕುಟುಂಬಸ್ಥೆಯಾಗಿರುವುದಕ್ಕಿಂತ ನಮ್ಮ ಸ್ತ್ರೀಯರು ದೃಢವಾಗಿ ಧರ್ಮಪ್ರಚಾರಕರೂ ಮತ್ತು ಧರ್ಮೋಪದೇಶ ಮಾಡುವವರಾಗಿರಲು ಗಾಢವಾಗಿ ಪ್ರೋತ್ಸಾಹಿಸುತ್ತೇವೆ. ಅನೇಕ ಸ್ತ್ರೀಯರು ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯಶಾಸ್ತ್ರದಲ್ಲಿ ಕ್ರಿಯಾಸಕ್ತರಾಗಿರುತ್ತಾರೆ.
ಭಕ್ತ ಮಹಿಳೆಯರು ಪ್ರಚಾರಕ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಪ್ರೌಢ ಪಾಠಶಾಲೆಗಳಲ್ಲಿ ಹಾಗೂ ಪ್ರೌಢ ವಿದ್ಯಾಲಯಗಳಲ್ಲಿ, ಪ್ರವಚನ ಮಾಡುತ್ತಾರೆ. ಸ್ತ್ರೀಯರು ಈ ಕ್ಷೇತ್ರದಲ್ಲಿ ಕ್ರಿಯಾಸಕ್ತರು ಹಾಗೂ ಉತ್ಪಾದನೆ ಮಾಡುವವರಾಗಿರುತ್ತಾರೆ.
ಭಕ್ತಿವೇದಾಂತ ದರ್ಶನ : ಅಂತ್ಯದಲ್ಲಿ ಏನಾದರೂ ಅಭಿಪ್ರಾಯಗಳಿವೆಯೆ?
ಭಕ್ತಳು : ಯಾರಾದರೂ ಧಾರ್ಮಿಕ ವಿಚಾರಗಳುಳ್ಳ ಸ್ತ್ರೀಯು ಸಂಪೂರ್ಣವಾಗಿ ಸಾಮರ್ಥ್ಯವನ್ನು ಅರಿಯಲು ಆಸಕ್ತಿಯಿದ್ದಲ್ಲಿ ಅಂತಹ ಸ್ತ್ರೀಯರನ್ನು ನಾವು ಕೃಷ್ಣ ಪಜ್ಜೆಯಲ್ಲಿ ಸೇರಿಕೊಳ್ಳಲು ಆಹ್ವಾನಿಸುತ್ತೇವೆ. ಇದು ನಿಜವಾದ ಸ್ತ್ರೀ ವಿಮೋಚನೆ.






Leave a Reply