ಯಶೋವಂತ ಸಿಂಹ
ಆಕರ: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಆಗಸ್ಟ್ 10, 1976ರಲ್ಲಿ ಟೆಹರಾನ್ನಲ್ಲಿ ಮಾಡಿದ ಭಾಷಣ
ಶ್ರೀಲ ಪ್ರಭುಪಾದರು ಭಾಷಣದಲ್ಲೊಮ್ಮೆ ಕ್ಷತ್ರಿಯರ ಕೆಚ್ಚನ್ನು ವಿವರಿಸುತ್ತ ಹೇಳಿದ ಕಥೆಯೇ “ಯಶೋವಂತ ಮನೆಗೆ ಮರಳಿದ ಕಥೆ:”
ಔರಂಗಜೇಬನ ಸೇನಾಧಿಪತಿ ಯಶೋವಂತ ಸಿಂಹ ಒಬ್ಬ ವೀರನಾಗಿದ್ದ. ಆದರೂ ಯುದ್ಧವೊಂದರಲ್ಲಿ ಆತನಿಗೆ ಸೋಲುಂಟಾಯಿತು. ಸೋತ ಯಶೋವಂತ, ತನ್ನ ಅರಮನೆಗೆ ಮರಳಿದ. ಆದರೆ ಆತ ಬರುವ ವೇಳೆಗೆ ಅರಮನೆಯ ಮುಖ್ಯದ್ವಾರ ಮುಚ್ಚಿಕೊಂಡಿತ್ತು.
ಯಶೋವಂತ ಸಿಂಹ, ತನ್ನ ರಾಣಿಗೆ ತಾನು ಮರಳ ಬ೦ದಿರುವುದಾಗಿಯೂ, ಬಾಗಿಲು ತೆಗೆಸಬೇಕೆಂದೂ ಸಂದೇಶ ಕಳಿಸಿದ.

ಆದರೆ, “ಯಾರು ಮರಳಿ ಬಂದಿರುವುದು? ಯಶೋವಂತ ಸಿಂಹರೇ? ಅದು ಖಂಡಿತಾ ಸಾಧ್ಯವಿಲ್ಲ. ಯುದ್ಧದಲ್ಲಿ ಅವರು ಸೋತು ಮನೆಗೆ ಮರಳುವುದು ಎಂದೂ ನಡೆಯದ ಮಾತು. ಒಂದೋ ಅವರು ಮತ್ತೆ ಗೆಲುವಿಗೆ ಪ್ರಯತ್ನಿಸುತ್ತಿರುತ್ತಾರೆ, ಇಲ್ಲವೇ ಸಾವಿಗೆ ಶರಣಾಗಿರುತ್ತಾರೆ.
ಯಶೋವಂತರು ಹೀಗೆ ಸೋತು ಮರಳುವವರಲ್ಲ. ಆತ ಯಾರೋ ಸೋಗಿನವನಿರಬೇಕು” ಎನ್ನುವ ಉತ್ತರ ರಾಣಿಯ ಕಡೆಯಿಂದ ಬಂತು! ಆಕೆ ಕದ ತೆರೆಸಲು ನಿರಾಕರಿಸಿದಳು.
ನೀತಿ : ಮಾಡು ಇಲ್ಲವೇ ಮಡಿ ತತ್ತ್ವವನ್ನು ಅನುಸರಿಸುವವರೇ ನಿಜವಾದ ಕ್ಷತ್ರಿಯರು.






Leave a Reply