ಪ್ರಾತಃಕಾಲದ ಶುಭಕೋರಿಕೆಗಳು
– ಸಂಗ್ರಾನುವಾದ: ಶ್ರೀಮತಿ ಉಷಾ ಪೋತಿ
ಭಕ್ತರು ಅವರ ಜೀವನವನ್ನು ಕೃಷ್ಣನ ಸುತ್ತ ಮುತ್ತ ರೂಪಿಸಲು ಪ್ರಯತ್ನಿಸುತ್ತಾರೆ. ಶ್ರೀಕೃಷ್ಣನನ್ನು ಪ್ರೀತಿಸಲು ತೊಡಗಿದಾಗ, ಅವರ ಹೃದಯವು ಸುರ್ಯೋದಯದ ಹೂವಿನಂತೆ ವಿಕಸಿಸುತ್ತದೆಂದು ತಿಳಿಯುತ್ತಾರೆ. ಅಂತೇ, ಪ್ರಾತಃಕಾಲದ ಶಾಂತತೆಯಲ್ಲಿ ಟಪಾಲು ಹಂಚುವವನು ಬರುವುದಕ್ಕೆ ಮುನ್ನವೇ ಎದ್ದು, ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನರಾಗಿರುತ್ತಾರೆ.

ದೃಶ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿರಿ: ನಿಮ್ಮ ಐದು ವರ್ಷದ ಮಗಳು, ಆರತಿಯನ್ನು ಪ್ರಾರಂಭಿಸಲು ಶಂಖವನ್ನು ಊದುತ್ತಾ ಸಂಕೇತ ಮಾಡುತ್ತಾಳೆ. ಕುಟುಂಬದ ಸದಸ್ಯರು ಬೇಗ ಬೇಗ ಉಡುಪನ್ನು ಧರಿಸಿಕೊಂಡು ಅಥವಾ ತಿಲಕವನ್ನು ಇಟ್ಟು, ದೇವರ ಕೋಣೆಗೆ ಅತೀ ವೇಗವಾಗಿ ಚಲಿಸುತ್ತಾರೆ.
ನಿಮ್ಮ ಏಳು ವರ್ಷದ ಮಗನು, ಮೃದಂಗವನ್ನು ಎತ್ತುತ್ತಾನೆ: ಅದು ಸಂಕೀರ್ತನೆಯನ್ನು ಮುಂದುವರಿಸಲು ಅವನ ಬಾರಿಯಾಗಿತ್ತು. ನಿಮ್ಮ ಪತ್ನಿ ಎಡಗೈಯಲ್ಲಿ ಗಂಟೆಯನ್ನು ಬಾರಿಸುತ್ತಾ ಶಾಂತಿಯುತವಾದ ಏಕಾಗ್ರತೆಯಿಂದ ಕೃಷ್ಣನಿಗೆ ಸಾಮಗ್ರಿಗಳನ್ನು ಅರ್ಪಿಸಲು ಆರಂಭಿಸುತ್ತಾಳೆ. ನೀವು ನಿಮ್ಮ ಮಗುವನ್ನು ನಿಮ್ಮ ಕೈಗಳಲ್ಲಿ ಹೊರುತ್ತಿದ್ದಾಗ, ಮಗುವು ಕರಗಳನ್ನು ಅತೀ ಹರ್ಷದಿಂದ ಚಲಿಸುತ್ತಾನೆ.
ಇನ್ನೊಬ್ಬ ಕರತಾಳಗಳನ್ನು ನುಡಿಸುತ್ತಾನೆ, ಮತ್ತು ಕೀರ್ತನೆಯ ತಾಳಗತಿಯೊಂದಿಗೆ ಜೋಲಾಡುತ್ತಾನೆ. ಪ್ರಾಯಶಃ ಇನ್ನೊಂದು ಕುಟುಂಬವು ನಿಮ್ಮನ್ನು ಸಂದರ್ಶಿಸುವರು. ಅವರೂ ಜೊತೆಗೆ ಸೇರಿ ಚಪ್ಪಾಳೆ ತಟ್ಟುತ್ತಾ ಕುಣಿಯುತ್ತಾ ವಾದ್ಯೋಪಕರಣಗಳನ್ನು ಬಾರಿಸುತ್ತಾರೆ.
ತಾಳ ಗತಿಯು ಹೆಚ್ಚಳವಾಗುತ್ತದೆ. ನಿಮ್ಮ ಚಿಕ್ಕ ದೇವರಕೋಣೆಯು ಕಂಪಿಸಲು ತೊಡಗುತ್ತದೆ. ಬೆರಗುಗೊಂಡ ಟಪಾಲು ಹಂಚುವವನು ಕಿರುನೋಟದಿಂದ ಕಿಡಿಕಿಯಲ್ಲಿ ನೋಡುತ್ತಾನೆ. ನಾವು ಮಾಡಲು ಸಾಧ್ಯವೇ? (ನಾವೂ ನೆರವೇರಿಸಲು ಸಾಧ್ಯವೇ?)

ನೀವು ನಿಮ್ಮ ಸ್ವಂತ ಸಂಸಾರವನ್ನು ಭಾವಿಸುತ್ತಾ “ಒಂದು ಪ್ರಾತಃಕಾಲದ ಈ ವಿಧದ ಕಾರ್ಯಕ್ರಮವು ನಮಗೆ ಸಾಧ್ಯವೇ?” ಎಂದು ಕುತೂಹಲಕ್ಕೀಡಾಗಬಹುದು.
ಅನೇಕ ಸಲ ಮುಖ್ಯವಾಗಿ ಈ ರೀತಿಯ ಬದಲಾವಣೆಗಳನ್ನು ಮಾಡುವುದು ಕಷ್ಟಕರವೆಂದು ನೀವು ಭಾವಿಸಬಹುದು. ಪ್ರಾಯಶಃ ಮಕ್ಕಳ ಅನಿಚ್ಛೆ ಅಥವಾ ನಿಮ್ಮ ಆತ್ಮ ವಿಶ್ವಾಸ ಕೊರತೆಯಿಂದ ನೀವು ನಿಶ್ಚಲತೆಯಿಂದ ಕಣಕಿಳಿಸಿದಂತೆ ಭಾವಿಸಬಹುದು. ಆದ್ದರಿಂದ ಕೃಷ್ಣನನ್ನು ಇಷ್ಟಪಡಿಸಲು, ನೀವು ಏಕಾಂಗಿಯಾಗಿ ಏನಾದರೂ ಮಾಡಲು ಪ್ರಯತ್ನಿಸಿದೂ ಸಹ, ಪುಟ್ಟದಾಗಿ ಪ್ರಾರಂಭಿಸಿರಿ.
ನಿಮ್ಮ ಈ ನಿರ್ಣಯವು ಅರ್ಥ ಸಾಮರ್ಥ್ಯವನ್ನು ಹೊಂದಿದಂತೆಯೇ. ನೀವು ಛಾಯಾಚಿತ್ರದ ಮುಂದೆ ಕುಳಿತು ಹರೇ ಕೃಷ್ಣ ಎಂದು ಸ್ಮರಣೆ ಮಾಡುತ್ತಿರುವಾಗ ಮೊತ್ತ ಮೊದಲಿಗೆ, ನೀವು ಕೇವಲ ಒಂದು ಧೂಪದ ಕಡ್ಡಿಯನ್ನು ಇಲ್ಲವೇ ಒಂದು ಪುಷ್ಪವನ್ನು ಅರ್ಪಿಸಿರಿ. ಅನಂತರ ನೀವು ಭಗವದ್ಗೀತೆ ಅಥವಾ ಭಾಗವತದಿಂದ ಕೆಲ ಅಧ್ಯಾಯಗಳನ್ನು ವಾಚನ ಮಾಡಬಹುದು. ಈ ಎಲ್ಲ ಕಾರ್ಯಕ್ರಮವು ಹತ್ತು ಇಲ್ಲವೇ ಹದಿನೈದು ನಿಮಿಷಗಳು ಮಾತ್ರ ತೆಗೆದುಕೊಳ್ಳುತ್ತದೆ. ಆದರೆ ಇದೊಂದು ಆರಂಭ.
ನಿಮ್ಮ ಕುಟುಂಬದ ಸದಸ್ಯರು ಪ್ರಾರಂಭದಲ್ಲಿ ಹೇರಳವಾದ ಆಸಕ್ತಿಯನ್ನು ತೋರಿಸದೇ ಇರಬಹುದು, ಆದರೆ ಅವರು ನಿಮ್ಮ ಉತ್ಸುಕತೆ ಹಾಗೂ ಬದ್ಧಸ್ಥಿತಿಯನ್ನು ಅರಿತುಕೊಳ್ಳುತ್ತಾರೆ. ಕೃಷ್ಣ ಪ್ರಜ್ಞೆಯು ಎಷ್ಟು ಪ್ರಮುಖವೆಂಬುದನ್ನು ಮತ್ತು ಪ್ರತಿ ದಿನವೂ ಅವರೊಂದಿಗೆ ಕೃಷ್ಣ ಪ್ರಜ್ಞೆಯ ಅಲ್ಪ ಸಮಯವನ್ನು ಬಳಸುವುದರಿಂದ ತಾತ್ಪರ್ಯವೇನು ಎಂಬುದನ್ನು ನೀವು ಅವರಿಗೆ ತಿಳಿಸಬಹುದು.

ಅವರು ಒಮ್ಮೆ ಇದನ್ನು ಪ್ರಯತ್ನಿಸಲು ತೊಡಗಿದಲ್ಲಿ ಕಷ್ಟಕರ ಮತ್ತು ಅಪರಿಚಿತ ಭಾವನೆಯು ಮರೆತು ಬಿಡುತ್ತದೆ. ಕೃಷ್ಣಪ್ರಜ್ಞೆಯು ಸ್ವಾಭಾವಿಕ ಹಾಗೂ ಸುಲಭವಾದದ್ದು.
ನಿಮ್ಮ ಪ್ರಾತಃಕಾಲದ ಕಾರ್ಯಕ್ರಮದ ವಿವಿಧ ಆವಲೋಕನೆಗಳನ್ನು ನಿಮ್ಮ ಮಕ್ಕಳ ಉತ್ಸಾಹದೊಂದಿಗೆ ವಿಸ್ತಾರವಾಗಿ ಪ್ರಮಾಣಮಾಡಿದಲ್ಲಿ ಒಂದು ದಿನ ಅವರು ಕೀರ್ತನೆಯನ್ನು ಆನಂದಿಸದೇ ಇದ್ದಲ್ಲಿ, ಅದನ್ನು ವೇಗವಾಗಿ ಮುಕ್ತಾಯಗೊಳಿಸಿರಿ. ಬಲವಂತಪಡಿಸುವುದಕ್ಕಿಂತ ಬದಲಾಗಿ ಅವರು ಉಪಶಮನವನ್ನು ಅನುಭವಿಸುತ್ತಾರೆ. ಚಟುವಟಿಕೆಗಳನ್ನು ಬಲವಂತಪಡಿಸಿ, ಉದ್ದಕ್ಕೆ ಎಳೆಯುವುದಕ್ಕಿಂತ ಚಿಕ್ಕದಾಗಿ ಹಿತವಾಗಿರುವುದೇ ಲೇಸು.
ನೀವು ದೀರ್ಘವಾದ ಶ್ರೀಮದ್ ಭಾಗವತದ ತಾತ್ಪರ್ಯವನ್ನು ಚಿಕ್ಕದಾದ ಭಾಗಗಳನ್ನಾಗಿ ಚೆದರಿಸಬಹುದು, ಅಥವಾ ಅರ್ಥವಾಗದಂತಹ ವಚನಗಳನ್ನು ಭಾವಾರ್ಥವಾಗಿ ನುಡಿಸಬಹುದು. ಪ್ರಾಯಶಃ ಶ್ರೀಮದ್ ಭಾಗವತದ ಜೊತೆಗೆ ಪರ್ಯಾಯವಾಗಿ ಮತ್ತೊಂದು ದಿನ ಪ್ರಭುಪಾದರವರ ಸಂಭಾಷಣೆಯನ್ನು ಓದಬಹುದು.
ಯಾವುದಾದರೂ ಸಹ ಅಭಿರುಚಿಯನ್ನು ಹಿಡಿಯುವಂತೆ ಶ್ರೀಲ ರೂಪ ಗೋಸ್ವಾಮಿಯವರು ನಿಯಮಿಸಿದಂತೆ – “ವಿನಾ ತೇನಾ ಪ್ರಕಾರೇನ ಮನಃ ಕೃಷ್ಣ ನೀವೇದಯೇತ್” ; “ಬೇರೆ ಯಾವುದಾದರೂ ರೀತಿಯಲ್ಲಿ ಕೃಷ್ಣನ ಮೇಲೆ ನಿನ್ನ ಲಕ್ಷ್ಯವನ್ನು ಭದ್ರಪಡಿಸು.”

ತಂದೆ ತಾಯಿಯಂದಿರಿಗೆ ಒಂದು ದೊಡ್ಡ ಜವಾಬ್ದಾರಿ ಇದೆ. ಮಕ್ಕಳು ಹೆಚ್ಚಾಗಿ, ನೋಡದೇ ಮತ್ತು ಕೇಳದೇ ಇದ್ದ ಈ ವಿಚಾರಗಳಿಂದ ಬಂಧ ವಿಮೋಚನೆಗಳಿಗೀಡಾಗಿದ್ದಾರೆ. ಈಗಿನ ಕಾಲದಲ್ಲಿ ಅವರು ಹಿರಿಯರೊಂದಿಗೆ ಸರಿಸಮಾನತೆಯ ವಿಚಾರವನ್ನು ಭಾವಿಸುತ್ತಾರೆ, ಮತ್ತು ಅವರು ಕಡಮೆ ಭಯಭೀತರೂ ಹಾಗೂ ನಿರೋಧಿಸುವವರೂ ಆಗಿರುತ್ತಾರೆ. “ಕೇಂದ್ರಿಯ ಕುಟುಂಬವು” (ನ್ಯೂಕ್ಲಿಯರ್ ಫ್ಯಾಮಿಲಿ) ಸಂಸಾರದಲ್ಲಿ ಪರಸ್ಪರವಾಗಿ ಕಲೆತು ಮಾಡುವ ಸಂಪ್ರದಾಯಗಳನ್ನು ವರ್ಜಿಸಿದೆ.
ಈಗ ಪ್ರತಿಯೊಂದೂ ಕುಟುಂಬವು ಅವರ ಸ್ವಂತ ಚಿಕ್ಕಪುಟ್ಟ ಸಮಾಜವನ್ನು ನೇಮಿಸಲೇಬೇಕು, ಮತ್ತು ಮುಖ್ಯವಾಗಿ ಧಾರ್ಮಿಕ ಜೀವನದಲ್ಲಿ ಅವರ ಚಟುವಟಿಕೆಗಳೇನು ಮತ್ತು ಯಾಕೆ ಎಂಬುದನ್ನು ತಂದೆ ತಾಯಿಯಂದಿರು ಸ್ಪಷ್ಟವಾಗಿ ಅರಿತಿರಲೇಬೇಕು. ಮಗುವನ್ನು ನಿರ್ಬಂಧಿಸಿದಲ್ಲಿ, ನೀವು ಅವನನ್ನು ಕೊನೆಗೆ ಕಳೆದುಕೊಳ್ಳವ ಅಪಾಯಕ್ಕೀಡಾಗುತ್ತೀರಿ.
ಶ್ರೀಲ ಪ್ರಭುಪಾದರು ತನ್ನ ಶಿಷ್ಯಂದಿರಿಗೆ ಸೂಚಿಸಿರುವುದೇನೆಂದರೆ “ಧಾರ್ಮಿಕವಾದ ಮಾರ್ಗದರ್ಶನದ ಯುಕ್ತಿಯು, ಒಬ್ಬ ವ್ಯಕ್ತಿಯು ಶ್ರೀಕೃಷ್ಣನನ್ನು ಮನರಂಜಿಸುವ ಮತ್ತು ಸೇವೆ ಮಾಡುವ, ಅನುವಂಶಿಕವಾಗಿ ಪಡೆದ ಗುಣಗಳ ಗತಿಯನ್ನು ಆವಾಹನೆ ಮಾಡುವುದು – ಅಲ್ಲದೇ ಅವನನ್ನು ಅಣಗಿಸುವುದು ಅಥವಾ ನಾಶಗೊಳಿಸುವುದಲ್ಲ.
ಆದುರಿಂದ ಬಾಹ್ಯದ ಚಟುವಟಿಕೆಗಳಿಗೋಸ್ಕರ ತತ್ತ್ವಗುಣಗಳನ್ನು ಬಲಿ ಕೊಡಬೇಡಿ.” ಒಂದು ಮಗುವಿಗೆ ಆಸಕ್ತಿಯಿಂದ ರುಚಿ ಹುಟ್ಟಿಸುವಂತಾದರೆ, ಮತ್ತು ಅದರಿಂದ ಅವನಿಗೆ ಆನಂದ ದೊರಕಿದರೆ, ಅಧೀನತೆ ಮತ್ತು ನಿಯಮದ ನಡತೆಗಳಂತಹ ಬಾಹ್ಯದ ಗುಣಲಕ್ಷಣಗಳು ಶ್ರಮವಿಲ್ಲದೇ ಅನುಸರಿಸುತ್ತದೆ.






Leave a Reply