ಸ್ಥಳ: ಮೆಲ್ಬರ್ನ್, ಆಸ್ಟ್ರೇಲಿಯಾ, ದಿನಾಂಕ: 22ನೇ ಜೂನ್ 1974
ಅನುವಾದ : ಡಾ.ಕೆ.ವೈ.ಬಾಲರಾಜ್
ವರದಿಗಾರ 3 : ಪರಮಪೂಜ್ಯರೇ, ನೀವು ಹೇಳುತ್ತೀರಿ ಶಾಸ್ತ್ರಗಳ ಮತ್ತು ಸದ್ಗುರುವಿನ ಪರಂಪರೆಯಿಂದ ನಾವು ಭಗವಂತನನ್ನು ಕಾಣುತ್ತೇವೆ ಎಂದು. ಆದರೆ ತಿಳುವಳಿಕೆಯಿಂದ ಪ್ರಭು ಶ್ರೀ ಕೃಷ್ಣನು ಶಾಶ್ವತ ನಾದವನು ಮತ್ತು ನಾಶವಾಗದಂಥವನಾಗಿದ್ದಾನೆ. ಆದ್ದರಿಂದ ಅವನು ಇವತ್ತಿಗೂ ಕೂಡ ಅಸ್ತಿತ್ವದಲ್ಲಿರಬೇಕು. ಇದರ ಅರ್ಥ ನಾವು ಅವನನ್ನು ಈಗಲೂ ನೋಡಬಹುದು.

ಶ್ರೀಲ ಪ್ರಭುಪಾದ : ಹೌದು. ಉದಾಹರಣೆಗೆ ಸೂರ್ಯನು ಅಸ್ತಿತ್ವದಲ್ಲಿದ್ದಾನೆ. ಆದರೆ ರಾತ್ರಿ ಹೊತ್ತು ಅವನನ್ನು ಕಾಣಲು ನಮ್ಮ ಕಣ್ಣಿಗೆ ಸಾಧ್ಯವಿಲ್ಲ. ಇದರ ಅರ್ಥ ಸೂರ್ಯನು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಹೇಳುವಂತಿಲ್ಲ. ಇದು ನಿಮ್ಮ ನ್ಯೂನತೆ ರಾತ್ರಿ ಹೊತ್ತು ನಾವು ಸೂರ್ಯನನ್ನು ಕಾಣಲು ಸಾಧ್ಯವಿಲ್ಲ.
ಅದು ಏನೇ ಇರಲಿ, ಸೂರ್ಯನು ಯಾವಾಗಲೂ ಅಸ್ತಿತ್ವದಲ್ಲಿದ್ದರೂ ರಾತ್ರಿ ಹೊತ್ತು ಅವನನ್ನು ನೋಡಲು ನಮಗೆ ಅರ್ಹತ ಬೇಕು. ಅದೇ ರೀತಿ ಕೃಷ್ಣನು ಸದಾ ಅಸ್ತಿತ್ವದಲ್ಲಿದ್ದಾನೆ. ಅವನನ್ನು ಈ ಐಹಿಕ ಜಗತ್ತಿನ ಕತ್ತಲಲ್ಲಿ ನೀವು ನೋಡಬೇಕಾದರೆ ನೀವು ಅರ್ಹರಾಗಿರಬೇಕು.
ಆ ಅರ್ಹತೆಯನ್ನು ಬ್ರಹ್ಮಸಂಹಿತೆಯಲ್ಲಿ ವಿವರಿಸಲಾಗಿದೆ : ಪ್ರೇಮಾಂಜನ-ಚ್ಛುರಿತ-ಭಕ್ತಿ ವಿಲೋಚನೇನ ಸಂತಃ ಸದೈವ ಹೃದಯೇಷು ವಿಲೋಕಯಂತಿ. ಯಾರು ಮಹಾತ್ಮರಾಗಿರುವರೋ ಮತ್ತು ಕೃಷ್ಣನೊಂದಿಗೆ ಪ್ರೇಮೋನ್ಮಾದದಲ್ಲಿ ಇರುವರೋ ಅವರು ದಿನದ ಇಪ್ಪತ್ನಾಲ್ಕು ಘಂಟೆಯೂ ಕೃಷ್ಣನನ್ನು ನೋಡುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವೇನೂ ಅಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವಳನ್ನು ಅಥವಾ ಅವನನ್ನು ನೋಡುತ್ತಿರುತ್ತೀರಿ ಹೌದಲ್ಲವೇ?
ವರದಿಗಾರ-3 : ಹೌದು.
ಶ್ರೀಲ ಪ್ರಭುಪಾದ : ಅದಕ್ಕೆ ಕೃಷ್ಣನನ್ನು ನೋಡಲು ಪ್ರೀತಿಯ ಅರ್ಹತೆಯಿರಬೇಕು. ಆಗ ಅವನು ದಿನದ 24 ಘಂಟೆಗಳಲ್ಲಿಯೂ ನಿಮಗೆ ಕಾಣುತ್ತಾನೆ. ಅವನು ನಿಮ್ಮೊಂದಿಗೆ ಮಾತನಾಡುತ್ತಾನೆ ಇವೆಲ್ಲವೂ ವಿವರಿಸಲಾಗಿದೆ. ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿ-ಪೂರ್ವಕಂ ದದಾಮಿ ಬುದ್ಧಿಯೋಗಂ ತಮ್ :
“ಯಾರು ನಿರಂತರವಾಗಿ ನನಗೆ ಪ್ರೇಮಪೂರ್ವಕವಾದ ಸೇವೆಯನ್ನು ಮಾಡುತ್ತಾರೋ ಅವರಿಗೆ ನಾನು ಬುದ್ಧಿಯೋಗವನ್ನು ಕೊಡುತ್ತೇನೆ” ಇದರ ಅರ್ಥ ಅವನು ಹೇಳುತ್ತಾನೆ – ”ನೀವು ಇದನ್ನು ಮಾಡಿ” ಎಂದು. ಮಾತನಾಡದೆ ಅವನು ಬುದ್ಧಿಯೋಗವನ್ನು ಹೇಗೆ ಕೊಡುತ್ತಾನೆ? ಆದ್ದರಿಂದ ನೀವು ಕೃಷ್ಣನನ್ನು ನೋಡಲು ಮತ್ತು ಶ್ರವಣ ಮಾಡಲು ಅರ್ಹರಾಗಿರಬೇಕು. ಆದರೆ ಕೃಷ್ಣ ಯಾವಾಗಲೂ ಇದ್ದಾನೆ.
ವರದಿಗಾರ – 5 : ಪರಮಪೂಜ್ಯರೇ, ಜಗತ್ತಿನಾದ್ಯಾಂತ ಅನೇಕ ಸ್ವಾಮಿಗಳು, ಗುರುಗಳು, ಧಾರ್ಮಿಕ ಜನರಿದ್ದಾರೆ – ಇಲ್ಲಿ ನಿಜವಾದ ಗುರು ಯಾರು ಎಂದು ಯಾರಿಗೆ ಹೇಗೆ ತಿಳಿಯಬೇಕು- ಯಾರು ಕೃಷ್ಣನನ್ನು ನೋಡಲು, ಅವನ ಬಗ್ಗೆ ಕೇಳಲು ನಮ್ಮನ್ನು ಅರ್ಹರನ್ನಾಗಿ ಮಾಡುವವನು?

ಶ್ರೀಲ ಪ್ರಭುಪಾದ : ಯಾರು ಕೃಷ್ಣನನ್ನು ಅರಿಯುತ್ತಾರೋ ಅವರೇ ನಿಜವಾದ ಗುರು. ಇಲ್ಲದಿದ್ದರೆ ಅವನು ಮೂಢ ಅಷ್ಟೆ.
ವರದಿಗಾರ 5 : ಆದರೆ ನಿಜವಾದ ಗುರುವಿನ ಪರೀಕ್ಷೆ ಏನು?
ಶ್ರೀಲ ಪ್ರಭುಪಾದ : ಅವನು ಕೃಷ್ಣನ ಬಗ್ಗೆ ವಿವರಿಸುತ್ತಾನೆ. ಅವನು ನಿಮ್ಮನ್ನು ಕೃಷ್ಣನ ಭಕ್ತನಾಗಲು ಹೇಳುತ್ತಾನೆ. ಕೃಷ್ಣ ಪ್ರಜ್ಞೆ ಹರಡುವುದೇ ಅವನ ಉದ್ಯೋಗ. ಇದು ಗುರುವಿನ ಲಕ್ಷಣ.
ವರದಿಗಾರ – 7 : ಶ್ರೀಲ ಪ್ರಭುಪಾದರೇ, ನಮಗೆ ಕೃಷ್ಣ ಏನೆಂದು ಗೊತ್ತಿಲ್ಲ. ಆದರೆ ನಮಗೆ ಸದ್ಗುರು ಸಿಕ್ಕಿದ್ದಾನೆ. ಅದಕ್ಕೆ ನೀವು ಏನೆಂದು ಕರೆಯುತ್ತೀರಿ? ಅದೊಂದು ಒಳ್ಳೆಯ ಅದೃಷ್ಟವೇ?
ಶ್ರೀಲ ಪ್ರಭುಪಾದ : ಹೌದು. ಚೈತನ್ಯ ಚರಿತಾಮೃತದಲ್ಲಿ ಅದನ್ನು ಹೇಳಲಾಗಿದೆ. ಬ್ರಹ್ಮಾಂಡ ಭ್ರಮಿತೇ ಕೋನ ಭಾಗ್ಯವಾನ್ ಜೀವ ಗುರು – ಕೃಷ್ಣ ಪ್ರಸಾದೇ ಪಾಯ ಭಕ್ತಿಲತಾ ಬೀಜಃ ”ಜೀವಿಯು ಈ ಬ್ರಹ್ಮಾಂಡದಲ್ಲಿ ಒಂದು ಜೀವನದನಂತರ ಮತ್ತೊಂದು ಜೀವನಕ್ಕೆ ಅಲೆದಾಡುತ್ತಲೇ ಇದೆ. ಗುರು ಮತ್ತು ಕೃಷ್ಣನ ದಯೆಯಿಂದ ಅವನಿಗೆ ಭಕ್ತಿ ಸೇವೆಯ ಬೀಜ ಸಿಗುತ್ತದೆ.” (ಶಿಷ್ಯನಿಗೆ) ಚೈತನ್ಯರ ಬೋಧನೆಗಳನ್ನು ಓದಿ.
ಶಿಷ್ಯ : ಈ ಬ್ರಹ್ಮಾಂಡದಲ್ಲಿ ಅಸಂಖ್ಯಾತ ಜೀವಿಗಳಿವೆ…..”
ಶ್ರೀಲ ಪ್ರಭುಪಾದ : ಹೌದು.

ಶಿಷ್ಯ : “… ಅವರು ತಮ್ಮ ಕಾಮ್ಯ ಕರ್ಮ ಫಲಗಳ ಅನುಸಾರವಾಗಿ ಒಂದು ಜೀವ ಸಂಕುಲದಿಂದ ಮತ್ತೊಂದು ಹಾಗೂ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಜನ್ಮಾಂತರ ತಾಳುತ್ತಿದ್ದಾರೆ. ಈ ರೀತಿಯಾಗಿ ಅನಾದಿಕಾಲದಿಂದಲೂ ಅವರು ಈ ಐಹಿಕ ಜಗತ್ತಿನ ತಮ್ಮ ಅಸ್ತಿತ್ವದಲ್ಲಿ ಜನ್ಮ ತಳೆಯತೊಡಗಿದ್ದಾರೆ.
ಜೀವಿಗಳು ಪರಮಚೇತನದ ಅಣು ವಿಭಿನ್ನಾಂಶಗಳು. ಆದರೆ ಇಲ್ಲಿ ಆಧ್ಯಾತ್ಮಿಕ ಕಿಡಿಯ ಅಣುವಿಗೆ ಉದ್ದ ಮತ್ತು ಅಗಲದ ಅಳತೆಯಿದೆ. ಶ್ರೀಮದ್ ಭಾಗವತಮ್‌ನಲ್ಲಿ ಇದರ ಬಗ್ಗೆ ಈ ರೀತಿ ಹೇಳಲಾಗಿದೆ.
ನೀವು ಕೂದಲಿನ ತುದಿಯಲ್ಲಿ 100 ಸೀಳು ಭಾಗ ಮಾಡಿ ಆ 100 ರ ಒಂದು ಭಾಗದಲ್ಲಿ ಮತ್ತೆ ಅದನ್ನು 100 ಸೀಳು ಭಾಗ ಮಾಡಿ ಆ ಒಂದು ಭಾಗವು ಆತ್ಮದ ಉದ್ದ, ಅಗಲ ಮತ್ತು ಗಾತ್ರವಾಗಿದೆ. ಇದನ್ನು ವೇದಗಳಲ್ಲಿ ಮತ್ತು ಶ್ವೇತಾಶ್ವತರ ಉಪನಿಷತ್‌ನಲ್ಲಿ ದೃಢಪಡಿಸಲಾಗಿದೆ.
ಜೀವಿಯ ಅಣುವಿನ ವಿಸ್ತಾರವನ್ನು ಈ ರೀತಿ ವಿವರಿಸಲಾಗಿದೆ. ”ಓ ಪರಮಸತ್ಯನೇ, ಒಂದು ವೇಳೆ ಈ ಜೀವಿಗಳು ಪರಮ ಚೇತನದ ಅತ್ಯಂತ ಸೂಕ್ಷ್ಮ ಜೀವಂತ ಕಿಡಿಯಾಗಿರದಿದ್ದರೆ, ಆಗ ಈ ಅತಿ ಸೂಕ್ಷ್ಮವಾದ ಪ್ರತಿಯೊಂದು ಕಿಡಿಯು ಸರ್ವವ್ಯಾಪಿಯಾಗಿರುತ್ತಿತ್ತು ಮತ್ತು ಅವು ಪರಮ ಶಕ್ತಿಯ ನಿಯಂತ್ರಣದಲ್ಲಿರುವ ಆವಶ್ಯಕತೆಯಿರಲಿಲ್ಲ.”
ಶ್ರೀಲ ಪ್ರಭುಪಾದ : ಅದು ತುಂಬ ಪ್ರಾಮುಖ್ಯವುಳ್ಳದ್ದು. ಒಂದು ವೇಳೆ ಜೀವಿ ಪರಮ ಜೀವಿಯೊಂದಿಗೆ ಸಮಾನವಾಗಿದ್ದರೆ ಉದಾಹರಣೆಗೆ, ನೀನು ಇನ್ನೊಬ್ಬರ ದೇಹದಲ್ಲಿ, ಮನಸ್ಸಿನಲ್ಲಿ ಏನಾಗುತ್ತಿದೆಯೆಂಬುದರ ಬಗ್ಗೆ ಎಲ್ಲವನ್ನೂ ಮಾತನಾಡುತ್ತಿದ್ದೆ. ಆದರೆ ನೀನು ನಾನೇನು ಯೋಚನೆ ಮಾಡುತ್ತಿದ್ದೇನೆ’ ಎಂದು ಹೇಳಲಾಗುವುದಿಲ್ಲ.
ಹಾಗೆಯೇ ನಾನು ಕೂಡ ನೀನೇನು ಯೋಚನೆ ಮಾಡುತ್ತಿದ್ದೀಯಾ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನೀನು ಮತ್ತು ನಾನು ಸರ್ವವ್ಯಾಪಿಯಲ್ಲ. ನಾವು ಪರಿಮಿತರಾದವರು. ಅದುವೇ ಜೀವಿಯ ಸ್ಥಿತಿ. ಇದು ಒಳ್ಳೆಯ ಉದಾಹರಣೆ. (ಶಿಷ್ಯನಿಗೆ) ಮುಂದುವರಿ.
ಶಿಷ್ಯ : ಒಂದು ವೇಳೆ ಜೀವಿಯ ಸಹಜಸ್ಥಿತಿ ಪರಮ ಪ್ರಭುವಿನ ಅತಿ ಚಿಕ್ಕದಾದ ವಿಭಿನ್ನಾಂಶ ಎಂದು ಸ್ವೀಕರಿಸಿದರೆ ಆಗ ಜೀವಿಯು ಪರಮ ಶಕ್ತಿಯ ನಿಯಂತ್ರಣದಲ್ಲಿ ಬರುತ್ತದೆ. ಇದು ಅವನ ಸಜಹಸ್ಥಿತಿ. ಆದ್ದರಿಂದ ಅವನು ತನ್ನ ಯಾವ ಸ್ವಾಭಾವಿಕ ಸ್ಥಿತಿಯಲ್ಲಿ ಸೃಷ್ಟಿಗೊಂಡಿರುವನೋ ಅದೇ ರೀತಿ ಉಳಿದುಕೊಂಡರೆ ಅವನಿಗೆ ಪೂರ್ಣ ಸ್ವಾತಂತ್ರ್ಯ ಸಿಗುತ್ತದೆ.

ಶ್ರೀಲ ಪ್ರಭುಪಾದ : ಹೌದು. ನಾವು ಪರಮ ಪ್ರಭುವಿನ ನಿಯಂತ್ರಣದಲ್ಲಿಯೇ ಸೃಷ್ಟಿಯಾಗಿದ್ದೇವೆ. ಆದ್ದರಿಂದ ನಿಯಂತ್ರಕನಾಗುವ ಆಸೆಗಿಂತಲೂ ನಾವು ನಮ್ಮ ನಿಯಂತ್ರಣದಲ್ಲಿರುವಂತೆ ಉಳಿದುಕೊಂಡರೆ ಅದುವೇ ನಮ್ಮ ಸಹಜ ಸ್ಥಿತಿಯಾಗುತ್ತದೆ. ಆದರೆ ಕೆಲವು ಮೂಢರು ನಿಯಂತ್ರಕರಾಗಲು ಬಯಸುತ್ತಿದ್ದಾರೆ.
”ನಾನು ಪರಮನಾಗಿದ್ದೇನೆ. ಧ್ಯಾನದಿಂದ ನಾನು ಭಗವಂತನಾಗಿದ್ದೇನೆ”?
ನೀನು ಭಗವಂತನಾಗಿದ್ದರೆ ನೀನು ಹೇಗೆ ನಾಯಿಯಾಗಿದ್ದೀಯಾ?
ಇದು ಹೋಗುತ್ತಲೇ ಇದೆ. ಈ ಮೋಸಗಾರ ಗುರುಗಳು “ನಾನು ಭಗವಂತ” ಎಂದು ಹೇಳುವುದಿಲ್ಲವೇ? ಅವರು ”ನಾನು ಭಗವಂತ, ನೀನು ಭಗವಂತ, ಪ್ರತಿಯೊಬ್ಬರೂ ಭಗವಂತ” ಎಂದು ಹೇಳುವುದಿಲ್ಲವೇ?
ವರದಿಗಾರ -3: ಕೆಲವರು ಆ ರೀತಿ ಹೇಳುತ್ತಾರೆ, ಆದರೆ…
ಶ್ರೀಲ ಪ್ರಭುಪಾದ : ಆದುದರಿಂದ ಕೆಲವು ಗುರುಗಳು ಈ ರೀತಿ ಹೇಳುತ್ತಾರೆ. ನಾನು “ಕೆಲವು” ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಎಲ್ಲರೂ ಮೂಢರಲ್ಲ. ಆದ್ದರಿಂದ ಈ ಮೂಢಜನರು ಹೇಳುತ್ತಾರೆ – “ನಾನು ಭಗವಂತ ನೀನು ಭಗವಂತ, ಪ್ರತಿಯೊಬ್ಬರೂ ಭಗವಂತರೇ. ಅದು ಮೂಢತನ ನಾವು ಭಗವಂತರಲ್ಲ, ನಾವು ಭಗವಂತನ ವಿಭಿನ್ನಾಂಶ. ನಾವು ಅವನೊಂದಿಗೆ ಗುಣಾತ್ಮಕವಾಗಿ ಒಂದಾಗಿದ್ದೇವೆ. ಆದರೆ ನಾವು ಪರಮ ಜೀವಿಯಲ್ಲ.






Leave a Reply