– ಆಂಗ್ಲಮೂಲ: ರೋಹಿಣಿ ನಂದನ ದಾಸ, ಅನುವಾದ: ಎಂ.ಕೆ.ಗೋಪಿನಾಥ್
ಭಕ್ತನು ಸಹಜವಾಗಿಯೇ ಕೃಷ್ಣನನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಾನೆ. ಆದರೆ ಸಕಲೈಶ್ವರ್ಯ ಉಳ್ಳವನಿಗೆ ನೀವು ಏನು ತಾನೇ ನೀಡಬಲ್ಲಿರಿ?
ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದಲ್ಲಿ ಪ್ರಭು ಕೃಷ್ಣನು ಹೇಳುತ್ತಾನೆ:

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಾಕ್ತ್ಯಾ ಪ್ರಯಚ್ಛತಿ |
ತದ್ ಅಹಂ ಭಕ್ತ್ಯುಪಾ ಹೃತಮ್ ಅಶ್ನಾಮಿ ಪ್ರಯತಾತ್ಮನಃ ||
ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ. ಏಕೆಂದರೆ ಭಗವಂತನು ಈಗಾಗಲೇ ಸರ್ವಸ್ವಕ್ಕೂ ಒಡೆಯನಾಗಿದ್ದಾನೆ ದೇವರು ಭುಂಜಿಸಲು ಇಚ್ಛಿಸುತ್ತಾನೆ ಎಂದೇನಿಲ್ಲ.
ಯೋಗಿಗಳು ಆಹಾರ ಸ್ವೀಕಾರವನ್ನು ಸಂಪೂರ್ಣವಾಗಿ ತ್ಯಜಿಸುವುದನ್ನು ಕೂಡ ನಾವು ಕೆಲವೊಮ್ಮೆ ನೋಡುತ್ತೇವೆ. ಭಗವಾನ್ ಚೈತನ್ಯರ ಕಾಲದಲ್ಲಿ ರಘುನಾಥ ದಾಸ ಎನ್ನುವ ಬಹು ದೊಡ್ಡಭಕ್ತರಿದ್ದರು. ಅವರು ದಿನ ಬಿಟ್ಟು ದಿನ ಸ್ವಲ್ಪ ಮಜ್ಜಿಗೆಯನ್ನು ಸ್ವೀಕರಿಸುತ್ತಾ ಜೀವಿಸುತ್ತಿದ್ದರು. ಅವರು ಸುಮಾರು ನೂರಿಪತ್ತು ವರುಷಗಳ ಕಾಲ ಬದುಕಿದ್ದರು.
ನಮಗೆ ಆಹಾರ ಬೇಕೆಂಬುದು ನಿಜಕ್ಕೂ ಒಂದು ಕಟ್ಟು ಕಥೆ. ಏಕೆಂದರೆ ಅಂತಿಮವಾಗಿ ನಾವು ಆಧ್ಯಾತ್ಮಿಕರು. “ನನಗೆ ಕುಡಿಯಲು ಮದ್ಯ ಸಿಕ್ಕ ಹೊರತು ನಾನು ಸಾಯುತ್ತೇನೆ” ಎಂದೋ, ಅಥವಾ “ನಾನು ಇನ್ನೊಂದು ಹೊಗೆ ಬತ್ತಿ ಸೇದಬೇಕು. ಅದು ಸಿಗದಿದ್ದರೆ ನಾನು ನಾಳೆ ಬೆಳಗಿನ ತನಕ ಬದುಕಿರುವುದಿಲ್ಲ” ಎಂದು ಯಾರೋ ಒಬ್ಬಾತ ಹೇಳಬಹುದು.
ಒಂದು ಬಟ್ಟಲು ಚಹಾವನ್ನು ಕುರಿತದ್ದಾಗಬಹುದು. “ಓ ಏನು ಹೇಳಲಿ ನಾನು ಒಂದು ಕಪ್ ಚಹಾಕ್ಕಾಗಿ ಪರಿತಪಿಸುತ್ತಾ ಸಾಯುತ್ತಿದ್ದೇನೆ” ಎಂದೋ, ಅಥವಾ “ನಾನು ಹಸಿದುಕೊಂಡಿದ್ದೇನೆ” ಎಂದೋ ನಾವು ಕೆಲವು ಸಲ ಹೇಳಬಹುದು. ಆದರೆ ನಿಜವಾಗಿ ನಾವು ಹಸಿದಿರುವುದಿಲ್ಲ. ಈ ಎಲ್ಲವೂ ಸಿಗದಿದ್ದಲ್ಲಿ ನಾವು ಸಾಯುವುದಿಲ್ಲ.
ಅದೇ ರೀತಿ ನಮಗೆ ಬೇಕಾದ ವಸ್ತುಗಳಲ್ಲಿ ಆಹಾರವು ಒಂದೆಂದು ನಾವು ಭಾವಿಸುತ್ತೇವೆ. ಏಕೆಂದರೆ ನಾವು ಎಂದರೆ ನಮ್ಮ ದೇಹ ಎಂಬುದು ನಮ್ಮ ಆಲೋಚನೆ ಆಗಿರುತ್ತದೆ. ನಿಜ, ನಾವು ಆಹಾರ ಸೇವಿಸದೆ ಇರಬಹುದು ಎಂದೇನಿಲ್ಲ ದೇಹಕ್ಕೆ ಅಷ್ಟಿಷ್ಟು ಆಹಾರದ ಅಗತ್ಯವಿದೆ. ದೇಹಕ್ಕೆ ಆಹಾರ ಬೇಡವೆಂದು ನಾವು ಹೇಳುತ್ತಿಲ್ಲ.
ಆದರೆ ದೇಹದಿಂದ ಬಿಡುಗಡೆ ಪಡೆವ ವಿಷಯಕ್ಕೆ ಬಂದಾಗ ವಾಸ್ತವವಾಗಿ ತನಗೆ ಆಹಾರದ ಅಗತ್ಯ ಇಲ್ಲವೆಂಬುದನ್ನು ವ್ಯಕ್ತಿಯು ಅಳೆಯಬಹುದು. ತಾನು ಬೆಳೆಯಲು ಆಹಾರದ ಅಗತ್ಯ ಇರುವುದು ದೇಹಕ್ಕೆ ಮಾತ್ರ. ಆದರೆ ಒಮ್ಮೆ ದೇಹವು ಸಾಕಷ್ಟು ಬೆಳೆದು ನಿಂತಾಗ ಆಶ್ಚರ್ಯಕರ ಎನ್ನುವಷ್ಟು ಅಲ್ಪ ಆಹಾರದಿಂದ ಬದುಕಬಹುದೆಂಬುದೂ ನಿಜ. ಅನೇಕ ಜನ ಇದನ್ನು ಮಾಡಿದ್ದಾರೆ.
ನಾನು ಹೀಗೆ ಹೇಳುತ್ತಿರುವುದು ಸ್ವಲ್ಪ ಆಶ್ಚರ್ಯದ ಮಾತೇ ಆಯಿತು ಎಂದು ತೋರುವುದು ಸರಿಯೇ ಹೌದು. ಏಕೆ೦ದರೆ ನಮ್ಮ ಕೃಷ್ಣಪ್ರಜ್ಞಾ ಚಳುವಳಿಯಲ್ಲಿ ಕೆಲವು ಸಲ- ವಿಶೇಷವಾಗಿ ಹಬ್ಬದ ದಿನಗಳಲ್ಲಿ – ಸ್ವಲ್ಪ ಹೆಚ್ಚಾಗಿಯೇ ಆಹಾರ ಸೇವಿಸುತ್ತೇವೆ. ಆದರೆ ಇಲ್ಲಿನ ತತ್ತ್ವವೆಂದರೆ ಈ ಜಗತ್ತಿನಲ್ಲಿ ಒಬ್ಬವ್ಯಕ್ತಿಯು ಆಹಾರ ಸೇವಿಸದೆ ಇರುವ ಹಂತಕ್ಕೆ ನಿಜವಾಗಿಯೂ ಏರಬಹುದು, ಎಂದಮೇಲೆ ದೇವರ ವಿಚಾರ ಹೇಳುವುದೇನಿದೆ?
ಅವನು ಆಹಾರ ಸೇವಿಸುವುದೇ ಬೇಡ. ನಿಜದಲ್ಲಿ ಪ್ರಭುವು ಪರಮ ಸ್ವತಂತ್ರ. ಹೀಗಿದ್ದೂ ಆತ ನಾವು ಸಮರ್ಪಿಸಿದ್ದನ್ನು ಸ್ವೀಕರಿಸುತ್ತಾನೆ ಹಾಗೂ ಅದನ್ನು ಭುಂಜಿಸುತ್ತಾನೆ.
ಪ್ರೀತಿ ಇದ್ದಲ್ಲಿ ನಾವು ಸಮರ್ಪಿಸಿದ ಆಹಾರ ರುಚಿಕರವಾದದ್ದಾಗಿರುತ್ತದೆ. ಪ್ರೇಮವಿದ್ದಲ್ಲಿ ಅರ್ಪಿಸಿದ ಯಾವ ವಸ್ತುವೂ ರುಚಿಕರವಾಗಿರುತ್ತದೆ. ಉದಾಹರಣೆಗೆ ಒಬ್ಬ ಚೆಲುವ ಹುಡುಗಿಯ ಕಥೆಯೊಂದಿದೆ. ಒಬ್ಬ ಚೆಲುವೆ ಹುಡುಗಿಯು ಗಂಡನಿಗೆ ಒಂದು ಹಾರವನ್ನು ಸಮರ್ಪಿಸಿದಳು. ಆ ಹಾರಕ್ಕೆ ಒಂದಿಷ್ಟು ಮಣ್ಣು ಮೆತ್ತಿಕೊಂಡಿತ್ತು. ಆ ಗಂಡ ಹಾರವನ್ನು – ಅದಕ್ಕೆ ಮಣ್ಣು ಮೆತ್ತಿಕೊಂಡಿದ್ದರೂ – ಸ್ವೀಕರಿಸಿ ಕೊರಳಿಗೆ ಧರಿಸಿದ. ಅವನು ಹಾರವನ್ನು ಸ್ವೀಕರಿಸಿದ್ದು ಅವನ ಹೆಂಡತಿ ಅವನಲ್ಲಿಟ್ಟಿದ್ದ ಪ್ರೀತಿಯಿಂದಾಗಿ.
ಕೃಷ್ಣನು ಒಮ್ಮೆ ಪರಮ ಭಕ್ತನಾಗಿದ್ದ ವಿದುರನ ಮನೆಗೆ ಅನಿರೀಕ್ಷಿತ ಭೇಟಿ ನೀಡಿದ, ವಿದುರ ತನ್ನ ಸ್ಥಾನ ಬಿಟ್ಟು ಲಗುಬಗನೆ ಎದ್ದು ಕೃಷ್ಣನನ್ನು ಕುಳ್ಳಿರಿಸಿ ಅವನ ಪಾದಗಳನ್ನು ತೊಳೆದ. ಬಳಿಕ ಕೃಷ್ಣನಿಗೆ ಬಾಳೆ ಹಣ್ಣುಗಳನ್ನು ನೀಡಲು ವಿದುರ ಪ್ರಯತ್ನಿಸಿದ. ಆದರೆ ವಿದುರನು ಕೃಷ್ಣ ಪ್ರೇಮದಿಂದ ಎಷ್ಟು ದಿಗ್ಭ್ರಮೆಗೆ ಒಳಗಾಗಿದ್ದನೆಂದರೆ, ಸುಲಿದ ಬಾಳೆಯ ಹಣ್ಣಿನ ತಿರುಳನ್ನು ಬಿಸುಟು ಕೃಷ್ಣನಿಗೆ ಸಿಪ್ಪೆಯನ್ನು ನೀಡಿದ.
ಇತ್ತ ಕೃಷ್ಣನು ತನ್ನ ಭಕ್ತನ ಪ್ರೀತಿಯಿಂದ ಎಷ್ಟು ತೊಯ್ದು ಹೋದನೆಂದರೆ, ಭಕ್ತನ ಕಾಣಿಕೆಯನ್ನು ಒಪ್ಪಿಕೊಂಡ.
ನಿಜ ನಾವು ಕೃಷ್ಣನಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ನೀಡಬಾರದು. ಅದು ತಪ್ಪು. ಆದರೆ ಪ್ರೀತಿ ವಿನಿಮಯದ ಒಂದು ಸಾಮ್ರಾಜ್ಯವಿದೆ. ಈ ಲೋಕವನ್ನು ಮುಟ್ಟಲು ಅಥವಾ ಅರ್ಥ ಮಾಡಿಕೊಳ್ಳಲು ನಾವು ವಿಫಲರಾಗುತ್ತೇವೆ. ಇದು ಎಂಥ ಶುದ್ಧ ಪ್ರೇಮ ವಿನಿಮಯವೆಂದರೆ, ಇಲ್ಲಿ ಸ್ವಲ್ಪವೂ ಸ್ವಾರ್ಥ ಇರುವುದಿಲ್ಲ.
ವ್ಯಕ್ತಿ ತನ್ನನ್ನು ಕುರಿತು ಯೋಚಿಸುವುದೇ ಇಲ್ಲ ತಾನು ಪ್ರಭುವನ್ನು ಸಂತೋಷಪಡಿಸಲು ಇಚ್ಛಿಸುವುದಾಗಿ ಭಗವದ್ಭಕ್ತನು ಆಲೋಚಿಸುತ್ತಾನೆ. ಅದೇ ರೀತಿ ಪ್ರಭುವು, ‘ನಾನು ಭಕ್ತನನ್ನು ಸಂತೋಷ ಪಡಿಸಲು ಇಚ್ಛಿಸುತ್ತೇನೆ’ ಎಂದು ಯೋಚಿಸುತ್ತಾನೆ.
ಇಷ್ಟೆಲ್ಲ ಒಂದು ಸರಳ ವಿಚಾರದಿಂದ ಆರ೦ಭವಾಗುತ್ತದೆ. ಆ ಸರಳ ವಿಚಾರವೆಂದರೆ, ಭಗವಂತನಿಗೆ ಏನನ್ನಾದರೂ ಅರ್ಪಿಸುವುದು. ನಾವು ಹಾಡುವುದರ ಮೂಲಕ ಕೃಷ್ಣನಿಗೆ ನಮ್ಮ ಧ್ವನಿಯನ್ನು ಅರ್ಪಿಸಬಹುದು. ಇತರ ವಸ್ತುಗಳನ್ನೂ ನಾವು ಅರ್ಪಿಸಬಹುದು. ಪತ್ರಂ ಪುಷ್ಪಂ ಫಲಂ ತೋಯಂ ಎನ್ನುತ್ತಾನೆ ಕೃಷ್ಣ.
”ನೀವು ನನಗೊಂದು ಎಲೆಯನ್ನು ಇಲ್ಲವೆ ಒಂದು ಹೂವನ್ನು ಅಥವಾ ಹಣ್ಣನ್ನು ಅಥವಾ ಒಂದಿಷ್ಟು ನೀರನ್ನು ಅಥವಾ ಹಣ್ಣಿನ ರಸವನ್ನು – ಅಲ್ಪ ಪ್ರಮಾಣದ್ದು – ಅರ್ಪಿಸಬಹುದು, ನಾನದನ್ನು ಸ್ವೀಕರಿಸುತ್ತೇನೆ.” ಪ್ರತಿಯೊಬ್ಬರೂ ಒಂದು ಮರದಿಂದ ಒಂದು ಎಲೆಯನ್ನು ಕಿತ್ತುಕೊಳ್ಳಬಹುದು ಅಥವಾ ಸೊಪ್ಪಿನಂಥ ತರಕಾರಿಯನ್ನು ಬೆಳೆಯಬಹುದು.
ಪ್ರತಿಯೊಬ್ಬರೂ ಒ೦ದು ಹಣ್ಣನ್ನು ಒದಗಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಒಂದು ಹೂವನ್ನು ಸಂಪಾದಿಸಬಹುದು. ಹೂವುಗಳು ಎಲ್ಲೆಡೆ ಬೆಳೆಯುತ್ತವೆ. ನೀವು ಭಗವಂತನಿಗೆ ಚೆಂದದ ಗುಲಾಬಿ ಹೂವನ್ನು ನೀಡಬಹುದು ಇಲ್ಲವೆ ಯಾವುದಾದರೂ ಕಾಡು ಹೂವನ್ನು ಅರ್ಪಿಸಬಹುದು; ಸೇವಂತಿಗೆ ಹೂವನ್ನು ನೀಡಿ, ಇಲ್ಲವೆ ಬಟ್ಟಲಿನ ಆಕಾರದ ಹಳದಿ ಹೂವನ್ನು ಅರ್ಪಿಸಿ.
ಪ್ರತಿಯೊಬ್ಬರೂ ಸ್ವಲ್ಪ ನೀರನ್ನು ಅಥವಾ ಹಣ್ಣಿನ ರಸವನ್ನು ಹೊಂದಿಸಿಕೊಳ್ಳಬಹುದು. ಹೀಗೆ ನೀವು ನೀಡುವ ವಸ್ತು ಇಲ್ಲಿ ಮುಖ್ಯವಾಗುವುದಿಲ್ಲ; ಲೆಕ್ಕಕ್ಕೆ ಬರುವುದು ನಿಮ್ಮ ಪ್ರೀತಿ.
ನೀವು ಒಬ್ಬತಂದೆ ಎಂದುಕೊಳ್ಳೋಣ. ನೀವು ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ನಿಮ್ಮ ಮಗುವಿಗೆ ನೀಡಲು ಒಂದು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ತರುತ್ತೀರಿ ಎಂದಿಟ್ಟುಕೊಳ್ಳಿ. ನೀವು ನಿಮ್ಮ ಮನೆಯ ಬಳಿ ಬರುತ್ತಿದ್ದಂತೆಯೇ ನಿಮ್ಮ ಮಗು ನೀವು ನಿನ್ನೆ ನೀಡಿದ್ದ ಸಿಹಿ ತಿಂಡಿಯನ್ನು ಚಪ್ಪರಿಸುತ್ತಾ ಬರುತ್ತಾಳೆ. ಆ ಮಗು ಸಿಹಿ ತಿಂಡಿಯನ್ನು ತನ್ನ ಬಾಯಿಂದ ಹೊರತೆಗೆಯುತ್ತಾಳೆ ಎನ್ನೋಣ. ಆಗೇನು ಮಾಡುತ್ತಾಳೆ ಆ ಮಗು? “ಅಪ್ಪ ಈ ಸಿಹಿತಿಂಡಿ ತುಂಬ ರುಚಿಯಾಗಿದೆ. ನೀನೂ ಸ್ವಲ್ಪ ತಿನ್ನಬಹುದೆ? ಎನ್ನುತ್ತಾಳೆ.
ನಿಮ್ಮ ಪ್ರೇಮವನ್ನು ಹಿಂತಿರುಗಿಸುತ್ತಿರುವ ಹುಡುಗಿಯ ಬಗೆಗೆ ನಿಮ್ಮ ಮಮತೆ ಎಷ್ಟೊಂದು ತುಂಬಿ ಬರುತ್ತದಲ್ಲವೆ? ನೀವು ಒಂದು ಚೀಲದ ತುಂಬ ಸಿಹಿ, ತಿಂಡಿ ತಂದಿರಿ. ಸ್ವತಃ ನೀವೇ ಸಿಹಿ ತಿಂಡಿ ತಿನ್ನುವುದಿಲ್ಲ. ನಿಮ್ಮ ಮಗು ನಿಮಗೆ ನೀಡುತ್ತಿರುವ ಅಂಟಂಟಾದ ತಿಂಡಿ ನಿಶ್ಚಯವಾಗಿಯೂ ನಿಮಗೆ ಬೇಡ. ಆದರೆ ಅದನ್ನು ಸ್ವೀಕರಿಸದೆ ಹೇಗೆ ಇದ್ದೀರಿ? ಬಹುತರ ಮಕ್ಕಳಂತೆ ಸ್ವಾರ್ಥಿಯಾದ ನಿಮ್ಮ ಮಗು ಸ್ವಾರ್ಥ ತ್ಯಜಿಸಿ ನಿಮ್ಮ ಬಗೆಗೆ ಆಲೋಚಿಸುವ ರೀತಿ ತಂದೆ-ತಾಯಿಗಳಾದವರಿಗೆ ಅತ್ಯಾಶ್ಚರ್ಯ ತರುವ ವಿಚಾರ.

ಇದೇ ರೀತಿ ಭಗವಂತನು ಈ ಬ್ರಹ್ಮಾಂಡದ ಪ್ರತಿಯೊಬ್ಬರ ತಂದೆ ಮತ್ತು ಅವನಿಗೆ ಯಾರಾದರೂ ಏನನ್ನಾದರೂ ಅರ್ಪಿಸಿದಾಗ ಆತ ತತ್ಕ್ಷಣವೇ ಮಮತೆಯಿಂದ ತುಂಬಿಹೋಗುತ್ತಾನೆ. ದೇವರನ್ನು ಸಂತೋಷಗೊಳಿಸಲು ನಾವು ಬಯಸುತ್ತೇವೆ. ವೈದಿಕ ಸಾಹಿತ್ಯದಲ್ಲಿ ಹೇಳಿದಂತೆ ಯಸ್ಮಿನ್ ತುಷ್ಟೇ ಜಗತ್ ತುಷ್ಟಮ್ – “ನೀವು ಭಗವಂತನನ್ನು ತೃಪ್ತಿ ಪಡಿಸಿದಿರಾದರೆ, ಬೇರೆ ಯಾರನ್ನಾಗಲಿ ತೃಪ್ತಿಪಡಿಸುವ ಬಗೆಗೆ ನೀವು ಯೋಚಿಸಬೇಕಾದ್ದಿಲ್ಲ.”
ನೀವು ಮರವೊಂದರ ಬೇರುಗಳಿಗೆ ನೀರು ಸುರಿದಿರಾದರೆ, ಚಿಗುರೆಲೆಗಳ ಬಗೆಗೆ, ರೆಂಬೆ ಕೊಂಬೆಗಳ ಬಗೆಗೆ ಯೋಚಿಸಬೇಕಾದ್ದಿಲ್ಲ. ಪ್ರಪಂಚದಲ್ಲಿ ಯಾರೋ ಒಬ್ಬರಿಗೆ ನೀವು ಏನೋ ಸೇವೆ ಮಾಡಬೇಕೆಂದಿದ್ದರೆ ಅದನ್ನು ದೇವರಿಗೆ ಮಾಡಿ. ಆಗ ಎಲ್ಲವೂ ಪರಿಪೂರ್ಣವಾಗಿ ಸಾಧಿತವಾಗುತ್ತದೆ.
ಆದ್ದರಿಂದ ನಾವು ನಮ್ಮ ಭಕ್ತಿಯನ್ನು ದೇವರೊಬ್ಬನಿಗೆ ಮಾತ್ರ ಅರ್ಪಿಸಲು ಪ್ರಯತ್ನಿಸುತ್ತೇವೆ. ನೀವು ದೇವರ ಸೇವೆ ಮಾಡಿದರೆ ಅವನ ಬಗೆಗೆ ಒಂದಿಷ್ಟು ಪ್ರೇಮವನ್ನು ಜಾಗೃತಗೊಳಿಸುವಿರಿ ಮತ್ತು ಸಹಜವಾಗಿಯೇ ಇತರರನ್ನು ಪ್ರೀತಿಸಿ ಅವರ ಸೇವೆ ಮಾಡಲು ಬಯಸುತ್ತೀರಿ.
ದೇವರು ಇಷ್ಟಪಡುವ ವಸ್ತುಗಳನ್ನು ಸ್ವೀಕರಿಸುವ ಮೂಲಕ ಹಾಗೂ ಅವನು ಇಷ್ಟಪಡದ ವಸ್ತುಗಳನ್ನು ತಿರಸ್ಕರಿಸುವ ಮೂಲಕ ನಾವು ನಮ್ಮ ದೈವ ಪ್ರೇಮವನ್ನು ವೃದ್ಧಿಸಿಕೊಳ್ಳುತ್ತೇವೆ. “ನನ್ನನ್ನು ಪ್ರೀತಿಸಿ, ನನ್ನ ನಾಯಿಯನ್ನು ಪ್ರೀತಿಸಿ’ ಎನ್ನುವ ಗಾದೆ ಮಾತೊಂದಿದೆ.
ನನಗೆ ನಾಯಿಗಳನ್ನು ಕಂಡರ ಆಗದೆಯೇ ಇರಬಹುದು. ಆದರೆ ನಾನು ನಿಮ್ಮನ್ನು ಪ್ರೀತಿಸುತ್ತೇನಾದರೆ, “ನಿಮ್ಮ ಬಳಿ ಎಂತಹ ಸುಂದರವಾದ ನಾಯಿಯಿದೆ” ಎನ್ನುತ್ತೇನೆ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ, ತನ್ನಂತೆ ತಾನೆ ನೀವು ಆ ವ್ಯಕ್ತಿಗೆ ಸಂಬಂಧಪಟ್ಟ ಎಲ್ಲದರ ಬಗ್ಗೆ ಪ್ರೀತಿಸಲು ಪ್ರಾರಂಭಿಸುತ್ತೀರಿ.
ಈ ಮೊದಲು ನಿಮಗಿಲ್ಲದಿದ್ದ ಹವ್ಯಾಸವೊಂದನ್ನು ಬೆಳೆಸಿಕೊಳ್ಳಲು ನೀವು ಪ್ರಯತ್ನಿಸಬಹುದು. ನೀವು ಪ್ರೀತಿಸುತ್ತಿರುವ ವ್ಯಕ್ತಿ ಬೆಳಗಿನ ಹೊತ್ತು ಓಡಲು ಹೋಗಬಹುದು. ನಿಮಗರಿವಿಲ್ಲದೆಯೇ ನೀವು ಓಡಲು ಹೋಗಿರುತ್ತೀರಿ. ಏಕೆಂದರೆ ಬಹು ಸಹಜವಾಗಿಯೇ ನಿಮ್ಮ ಪ್ರೀತಿಯ ವ್ಯಕ್ತಿ ಮಾಡುತ್ತಿರುವ ಕೆಲಸವನ್ನು ನೀವೂ ಮಾಡಲು ಬಯಸುತ್ತೀರಿ.
ಇದೇ ರೀತಿ ನಾವು ಆಧ್ಯಾತ್ಮಿಕ ಜೀವನವನ್ನು ಕೈಗೆತ್ತಿಕೊಂಡು ನಮ್ಮ ಬದುಕನ್ನು ದೇವರಿಗೆ ಮಿಸಲಿಡಲು ಪ್ರಯತ್ನಿಸಿದಾಗ ನಮ್ಮ ಆಸಕ್ತಿಗಳು ಸ್ವಲ್ಪ ಬದಲಾವಣೆ ಪಡೆಯುತ್ತವೆ. “ಏನು ಮಾಡಿದರೆ ದೇವರು ಸಂಪ್ರೀತನಾಗುತ್ತಾನೆ” ಎಂದು ಆಲೋಚಿಸಲು ನಾವು ಪ್ರಯತ್ನಿಸುತ್ತೇವೆ. ನಾವು ನಮ್ಮ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ.
ಆದರೆ ಅದನ್ನು ದೇವರಿಗೆ ಒಪ್ಪಿಸುತ್ತೇವೆ. ಇಲ್ಲೊಂದು ವ್ಯತ್ಯಾಸವಿದೆ. ನೀವು ಹಾಕಿ ಆಟ ಆಡಲು ಇಷ್ಟಪಡಬಹುದು, ಆದರೆ ನಿಮ್ಮ ಪ್ರೀತಿ ಪಾತ್ರರು ಹಾಕಿ ಆಟ ಆಡಲು ಸುತರಾಂ ಆಸಕ್ತಿ ತೋರದಿರಬಹುದು. ಆಗಲೂ ನೀವು ಹಾಕಿ ಆಟದಲ್ಲಿ ಸಮರ್ಥರೇ ಇರುತ್ತೀರಾದರೂ, ಪ್ರೀತಿಯ ದೆಸೆಯಿಂದ ನೀವು ನಿಮ್ಮ ಬದುಕಿನ ವಿಧಾನವನ್ನು ಬದಲಾಯಿಸಿಕೊಳ್ಳುತ್ತೀರಿ. ಇದು ಇಲ್ಲಿನ ಮುಖ್ಯ ವಿಚಾರ.
ಆದ್ದರಿಂದ ಕೃಷ್ಣ ಪ್ರಜ್ಞೆಗೆ ಸೇರಲು ಒಂದಿಷ್ಟು ಅಭ್ಯಾಸಬೇಕು; ನಮ್ಮ (ದೈವ) ಪ್ರೇಮವು ಕ್ರಮೇಣ ಉದ್ದೀಪನೆಗೊಳ್ಳಲು ಅಭ್ಯಾಸ ಮುಂದುವರಿಯಬೇಕು.
ಉದಾಹರಣೆಗೆ ಒಂದು ಮಗುವಿಗೆ ನಡೆಯುವ ಶಕ್ತಿಯು ಪ್ರಕೃತಿದತ್ತವಾಗಿರುತ್ತದೆ – ಆದರೂ ಅದು ನಡೆಯುವುದನ್ನು ಅಭ್ಯಾಸ ಮಾಡಬೇಕು. ಮಗು ಮೊದ ಮೊದಲು ಏನನ್ನಾದರೂ ಆಧಾರ ಮಾಡಿಕೊಂಡು ಎದ್ದು ನಿಲ್ಲುತ್ತದೆ. ಬಳಿಕ ಅದು ಮೊದಲ ಹೆಜ್ಜೆ ಇಡುತ್ತದೆ. ಪ್ರತಿ ಮಗುವೂ ಇದೇ ರೀತಿ ಮಾಡುತ್ತದೆ.
ಮತ್ತು ಮಗು ನಡೆಯುವುದು ಸಾಧ್ಯವಾದೊಡನೆ, ಅದರ ನಡೆ ಸ್ವಯಂಪ್ರೇರಿತವಾಗಿರುತ್ತದೆ. ತಾನು ಓಡುತ್ತಿರುವುದನ್ನು ಮನಸ್ಸಿಗೂ ತಂದುಕೊಳ್ಳದೆ ಅದು ಎಲ್ಲೆಲ್ಲೂ ಓಡುತ್ತದೆ. ಮೋಟಾರು ಕಾರನ್ನು ನಡೆಸುವುದನ್ನು ಕಲಿಯುವಾಗಲೂ ಹೀಗೇ ಆಗುತ್ತದೆ.
ಮೊದಲು ನೀವು ಅಭ್ಯಾಸ ಮಾಡಬೇಕು, ಕಾರು ನಡೆಸುವುದು ನಿಮಗೆ ಬಂದೊಡನೆ ಆ ಕೆಲಸ ನಿಮ್ಮ ಸ್ವಭಾವದ ಒಂದು ಅಂಗವಾಗಿ ಬಿಡುತ್ತದೆ – ಅದೇ ರೀತಿ ನಮ್ಮೊಳಗೆ ದೈವಪ್ರೇಮ ಇದೆ – ನಿತ್ಯಸಿದ್ಧ ಕೃಷ್ಣಪ್ರೇಮ ಇದೆ. ಕೃಷ್ಣನನ್ನು ಕುರಿತು ಶ್ರವಣ ಮಾಡಿ ನಮ್ಮ ಪ್ರಜ್ಞೆಯು ಪರಿಶುದ್ಧವಾದಾಗ ನಾವು ಅವನ ಸೇವೆ ಮಾಡುವ ಅಪೇಕ್ಷೆ ಬೆಳೆಸಿಕೊಳ್ಳುತ್ತೇವೆ. ಇದು ಕೆಲ ಕಾಲಾನಂತರ ಸ್ವಯಂ ಪ್ರೇರಿತವಾಗಿ ನಡೆಯುತ್ತದೆ.
ಕೃಷ್ಣಪ್ರಜ್ಞಾ ಚಳವಳಿಯಲ್ಲಿ ನಾವು ಸ್ವಯಂ ಸ್ಫೂರ್ತಿ ಕೃಷ್ಣಪ್ರೇಮವನ್ನು ವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಉದಾಹರಣೆಗೆ ನಾವು ಅಡುಗೆ ಮಾಡಿದ ಪದಾರ್ಥಗಳನ್ನು ದೇವರ ಮುಂದೆ ನೈವೇದ್ಯಾರ್ಥವಾಗಿ ಇರಿಸುತ್ತೇವೆ. ಅಡುಗೆ ಮಾಡುವಾಗ ನಾವು, ”ಈ ಪದಾರ್ಥ ನನ್ನ ಸಂತೋಷಕ್ಕಾಗಿ’ ಎಂದು ನಾವು ಆಲೋಚಿಸುವುದಿಲ್ಲ.
ಕೊನೆಯ ಪಕ್ಷ ಹಾಗೆ ಯೋಚಿಸದೆ ಇರಲು ಪ್ರಯತ್ನಿಸುತ್ತೇವೆ. ಪದಾರ್ಥ ನನ್ನ ಹೆಂಡತಿಯ ಅಥವಾ ನನ್ನ ಗಂಡನ ಅಥವಾ ನನ್ನ ಮಗುವಿನ ಸಂತೋಷಕ್ಕೆ ಎಂಬುದಾಗಿ ನಾವು ಆಲೋಚಿಸುತ್ತಿರುವುದಿಲ್ಲ. ನಾವು ಈ ಅಡುಗೆಯನ್ನು ಭಗವಂತನ ಸಂತೋಷಕ್ಕೆ ಮಾಡುತ್ತಿದ್ದೇವೆ ಎಂದು ಆಲೋಚಿಸುತ್ತಿರುತ್ತೇವೆ.
ಪ್ರತಿ ಭಾನುವಾರ ದೇಗುಲಕ್ಕೆ ಬರುವ ಪ್ರತಿಯೊಬ್ಬರೂ ದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿ ತೃಪ್ತರಾಗುವುದು ನಿಜಕ್ಕೂ ವಿಸ್ಮಯ. “ನಾನು ಈವರೆಗೆ ರುಚಿ ನೋಡಿರುವ ಊಟದಲ್ಲಿ ಇದು ಅತ್ಯಂತ ಶ್ರೇಷ್ಠವಾದದ್ದು” ಎಂದು ಕೆಲವೊಮ್ಮೆ ಜನ ಹೇಳಿದ್ದಿದೆ. ಕೃಷ್ಣನಿಗಾಗಿ ಅಡುಗೆ ಮಾಡಿದಾಗ ಇತರರಿಗೆ ಕಷ್ಟ ಆಗುತ್ತದೆ ಎಂದಲ್ಲ, ವಸ್ತುತಃ ಇದರಿಂದ ಎಲ್ಲರಿಗೂ ಲಾಭವಿದೆ. ತಯಾರಿಸಿದ ಪದಾರ್ಥವನ್ನು ಉಂಡವರಿಗಷ್ಟೇ ಅಲ್ಲದೆ ಸ್ವತಃ ಆ ಪದಾರ್ಥಕ್ಕೇ ಲಾಭವುಂಟು.
ಈ ಮಾತು ಅಸಾಧಾರಣವಾದದ್ದಾಗಿ ಕೇಳಿಸಬಹುದು. ನೀವು ಸೇಬಿನ ಮರದಿಂದ ಒಂದು ಹಣ್ಣನ್ನು ಕಿತ್ತು ದೇವರಿಗೆ ಅರ್ಪಿಸುತ್ತೀರಿ ಎಂದಿಟ್ಟುಕೊಳ್ಳಿ. ದೇವರ ದೃಷ್ಟಿಯಲ್ಲಿ ಸೇಬಿನ ಹಣ್ಣನ್ನು ಪರೋಕ್ಷವಾಗಿ ಅರ್ಪಿಸಿದ್ದು ಮರ. ಒಂದು ಮರವು ನಮ್ಮ ನಿಮ್ಮಂತೆ ಒಂದು ಜೀವಾತ್ಮ. ಆ ಮರ ವೃಕ್ಷದ ದೇಹವುಳ್ಳ ಆಧ್ಯಾತ್ಮಿಕ ವ್ಯಕ್ತಿ.
ಆದ್ದರಿಂದ ಸೇಬಿನ ಹಣ್ಣು ದೇವರಿಗೆ ಅರ್ಪಿತವಾದಾಗ ಮರದಲ್ಲಿನ ಆತ್ಮ ಹಣ್ಣನ್ನು ಅರ್ಪಿಸುತ್ತಿದೆ ಎಂದರ್ಥ. ಕೃಷ್ಣನು ಹಾಗೆ ಭಾವಿಸುತ್ತಾನೆ. ಆದ್ದರಿಂದ ಮರದ ದೇಹದಲ್ಲಿನ ವ್ಯಕ್ತಿಗೆ ಹಿತವಾಗುತ್ತದೆ. ದೇಗುಲದ ವೇದಿಕೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸೇಬಿನ ಹಣ್ಣನ್ನು ದೇವರಿಗೆ ಅರ್ಪಿಸಿದಾಗ ಆ ಹೆಣ್ಣಿನಲ್ಲಿ ಪರಿವರ್ತನೆ ಕಂಡುಬರುತ್ತದೆ. ಹಣ್ಣಿಗೆ ಆಧ್ಯಾತ್ಮಿಕ ಗುಣ ಪ್ರಾಪ್ತವಾಗುತ್ತದೆ; ಹಣ್ಣು ಕೃಷ್ಣಮಯವಾಗುತ್ತದೆ.
ಒಂದು ಕಬ್ಬಿಣದ ತುಂಡನ್ನು ನೀವು ಬೆಂಕಿಗೆ ಹಾಕಿದಾಗ ಅದು ಕಾದು ಕೆಂಪಗಾಗಿ ಬೆಂಕಿಯ ಸ್ವರೂಪವನ್ನೇ ಪಡೆಯುತ್ತದೆ. ಆ ಕಬ್ಬಿಣದ ತುಂಡನ್ನು ನೀವು ಬೆಂಕಿಯಿಂದ ಹೊರತೆಗೆದಾಗ ಅದು ಬೆಂಕಿಯಂತೆಯೇ ಕಾರ್ಯ ನಿರ್ವಹಿಸುತ್ತದೆ. ಇದೇ ರೀತಿ ಒಂದು ಸೇಬಿನ ಹಣ್ಣು ಕೂಡ ಕೃಷ್ಣನಿಗೆ ಅರ್ಪಿಸಿದಾಗ ಆಧ್ಯಾತ್ಮಿಕ ರೂಪ ಪಡೆಯುತ್ತದೆ. ಅದು ಸಾಮಾನ್ಯ ಸೇಬಿನ ಹಣ್ಣಿನಂತೆಯೇ ಕಾಣಬಹುದು. ಆದರೆ ಅದನ್ನು ತಿನ್ನುವವರ ಮೇಲೆ ಅದು ಮಹತ್ತರ ಪರಿಣಾಮ ಮಾಡುತ್ತದೆ.
ಬೆಂಕಿಯಲ್ಲಿಟ್ಟ ಕಬ್ಬಿಣದ ಸಲಾಕೆಯನ್ನು ಹೊರತೆಗೆದಾಗ ಅದು ಸಾಮಾನ್ಯ ಸಲಾಕೆಯಂತೆ ಕಂಡರೂ ಅದನ್ನು ಬೇರೆ ವಸ್ತುವಿಗೆ ತಾಕಿಸಿದಾಗ ಅದು ಕಾರ್ಯನಿರ್ವಹಿಸಿರುವ ರೀತಿಯೇ ಬೇರೆ. ಅಂತೆಯೇ ಕೃಷ್ಣನಿಗೆ ಅರ್ಪಿತವಾದ ಖಾದ್ಯ ವಸ್ತುವು ಆಧ್ಯಾತ್ಮಿಕವಾಗುತ್ತದೆ ಮತ್ತು ಅದನ್ನು ತಿನ್ನುವ ಯಾರೇ ಆಗಲಿ ತಮ್ಮ ಪ್ರಜ್ಞೆ ಪರಿಶುದ್ಧವಾದಂತೆ ಹಾಗೂ ಆಧ್ಯಾತ್ಮಿಕವಾದಂತೆ ಅನುಭವ ಪಡೆಯುತ್ತಾರೆ.
ಭಗವಂತನು ಆಧ್ಯಾತ್ಮಿಕ ಸ್ವರೂಪಿಯಾದ್ದರಿಂದ ಮತ್ತು ಪ್ರತಿಯೊಂದೂ ಅವನಿಂದಲೇ ಬರುವುದರಿಂದ ಪ್ರತಿಯೊಂದೂ ನಿಜವಾಗಿ ಆಧ್ಯಾತ್ಮಿಕವೇ. ಆ ವಸ್ತುವಿಗೆ ಲೌಕಿಕತೆಯ ಮುಸುಕು ಕವಿದಿರುತ್ತದೆ ಅಷ್ಟೆ. ವಸ್ತುವೊಂದನ್ನು ಒಮ್ಮೆ ಭಗವಂತನಿಗೆ ಸಮರ್ಪಿಸಿದಾಗ ಆ ಲೌಕಿಕ ಮುಸುಕು ಹರಿಯುತ್ತದೆ ಹಾಗೂ ಅರ್ಪಿತವಾದ ವಸ್ತುವಿನ ನೈಜ ಆಧ್ಯಾತ್ಮಿಕ ಶಕ್ತಿಯು ಪ್ರದರ್ಶಿತವಾಗುತ್ತದೆ.

ಅಣುಗಳಂಥ ಸೂಕ್ಷ್ಮ ಲೌಕಿಕ ವಸ್ತುಗಳು ಕೂಡ ಅನಿಯಮಿತವನಿಸುವಷ್ಟು ಶಕ್ತಿಯನ್ನು ಹೊರಹಾಕಬಲ್ಲವು. ಪರಿಮಾಣ ಚಲನಶಾಸ್ತ್ರದ ಅಧ್ಯಯನದಿಂದ, ಅರ್ಥಮಾಡಿಕೊಳ್ಳುವ ನಮ್ಮ ಶಕ್ತಿಯನ್ನು ಮೀರಿದ ಅನೇಕ ಅದ್ಭುತಗಳು ಅಧೀನ ಪರಮಾಣುಗಳ ಮಟ್ಟದಲ್ಲಿ ಘಟಿಸುತ್ತವೆ ಎಂದು ತಿಳಿದುಬರುತ್ತದೆ. ಹೀಗೆ ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅಂತಿಮವಾಗಿ ಎಲ್ಲವೂ ಆಧ್ಯಾತ್ಮಿಕವೇ. ಆದರೆ ಯಾವುದೇ ವಸ್ತುವನ್ನು ದೇವರಿಂದ ಬೇರ್ಪಡಿಸಿದಾಗ ಅದು ಲೌಕಿಕ ರೂಪ ತಾಳುತ್ತದೆ.
ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಇದು ಪ್ರಜ್ಞೆಗೆ ಸಂಬಂಧಿಸಿದ ಪ್ರಶ್ನೆ. ಒಂದು ವಸ್ತುವನ್ನು ನಾನು ನನಗೆ ಸಂಬಂಧಿಸಿದಂತೆ ಅವಲೋಕಿಸಿದಾಗ ನಾನು ಅದನ್ನು ಲೌಕಿಕವೆಂಬಂತೆ ಕಾಣುತ್ತೇವೆ. ಏಕೆಂದರೆ ನಾನು ಮಿತಿಗೊಳಪಟ್ಟವನು ಆಧ್ಯಾತ್ಮಿಕವಾಗಿಯೇ ನಾನು ಮಿತಿಯುಳ್ಳವ ಎಂದ ಮೇಲೆ ಲೌಕಿಕವಾಗಿ ಎಷ್ಟು ಮಿತಿಯುಳ್ಳವ ಎಂದು ಹೇಳುವುದೇನಿದೆ?
ಆತ್ಮವು ಬಹಳವೇ ಚಿಕ್ಕದು ಅಥವಾ ಸೂಕ್ಷ್ಮಾತಿಸೂಕ್ಷ್ಮ, ಅತ್ಯಂತ ಮಿತ ಗಾತ್ರದ್ದು. ಅದೇ ಭಗವಂತನು ಬೃಹತ್ತಾದವನು ಅಥವಾ ಮಿತಿಯಿಲ್ಲದವ. ನಿಜದಲ್ಲಿ ಭಗವಂತನು ಅನಂತ ಅಥವಾ ಸೂಕ್ಷ್ಮಾತಿಸೂಕ್ಷ್ಮ. ಎಲ್ಲ ಜೀವಿಗಳು – ಮನುಷ್ಯರೇ ಆಗಲಿ, ಮರಗಳೇ ಆಗಲಿ, ಕೀಟಗಳೇ ಆಗಲಿ – ಭಗವಂತನ ಸೂಕ್ಷ್ಮಾತಿ ಸೂಕ್ಷ್ಮ ಮಗ್ಗುಲುಗಳೆಂದು ವೈದಿಕ ಸಾಹಿತ್ಯದಲ್ಲಿ ವರ್ಣಿಸಲಾಗಿದೆ.
ಸೂಕ್ಷ್ಮಾತಿ ಸೂಕ್ಷ್ಮ ಆದದ್ದನ್ನು ಅಪರಿಮಿತವಾದದ್ದರ ಜೊತೆ ಸೇರಿಸಿದಾಗ ಸೂಕ್ಷ್ಮಾತಿ ಸೂಕ್ಷ್ಮವಾದದ್ದಕ್ಕೆ ಅಪರಿಮಿತ ಶಕ್ತಿ ಇರುತ್ತದೆ. ಆದರೆ ಭಗವಂತನ ಸೂಕ್ಷ್ಮಾತಿ ಸೂಕ್ಷ್ಮ ಭಾಗವು ಭಗವಂತನಿಂದ ಬೇರ್ಪಟ್ಟಾಗ ಆ ಭಾಗವನ್ನು ಅದರ ಪರಿಮಿತ ಕಾರ್ಯಕ್ಷೇತ್ರಕ್ಕೆ ಬಿಟ್ಟಂತೆ. ದೊಡ್ಡ ಬೆಂಕಿಯಲ್ಲಿನ ಒಂದು ಕಿಡಿಯು ಬೆಂಕಿಯ ಒಟ್ಟು ಶಾಖದಲ್ಲಿ ಪಾಲು ಪಡೆಯುತ್ತದೆ. ಆದರೆ ಅದೇ ಕಿಡಿಯು ಬೆಂಕಿಯಿಂದ ಹೊರಬಿದ್ದಾಗ ಅದು ಕೆಂಡವಾಗಿ ಸಾಯುತ್ತದೆ.
ತಾತ್ವಿಕವಾಗಿ ಕಿಡಿಯನ್ನು ಪುನಃ ಬೆಂಕಿಗೆ ದೂಡಿ ಅದು ಹೊಳೆಯುವಂತೆ ಮಾಡಬಹುದು. ಆದರೆ ಸ್ವತಂತ್ರವಾಗಿದ್ದರೆ ಆ ಕಿಡಿಯು ತನ್ನ ಪ್ರಕಾಶಿಸುವ ಗುಣವನ್ನು ಕಳೆದುಕೊಳ್ಳುತ್ತದೆ. ಇದೇ ರೀತಿ ಆತ್ಮವು ಹೆಚ್ಚು ಕಡಿಮೆ ಮೃತ ಶಿಲೆಯಂತೆ ಆಗಬಹುದು. ಉದಾಹರಣೆಗೆ ಮರವೊಂದರ ದೇಹದಲ್ಲಿ ಆತ್ಮವು ಒಂದು ತೆರನ ತಡೆಹಿಡಿದ ಉತ್ಸಾಹದಲ್ಲಿರುತ್ತದೆ. ಆದರೂ ಅದು ಮಹತ್ತರ ಆಧ್ಯಾತ್ಮಿಕ ಶಕ್ತಿಯನ್ನು ಪಡೆದಿರುತ್ತದೆ.
ಕೃಷ್ಣ ಪ್ರಜ್ಞೆಯು ನಮ್ಮ ಆಧ್ಯಾತ್ಮಿಕತೆಯನ್ನು ಪುನರುಜ್ಜೀವಿಸಿಕೊಳ್ಳಲು ಒಂದು ಕಾರ್ಯಸಾಧ್ಯ ವಿಧಾನ. ಆದ್ದರಿಂದ ನೀವು ಕೃಷ್ಣನಿಗೆ ಅರ್ಪಿಸಿದ ದೇಹವೂ ಕೂಡ ಆಧ್ಯಾತ್ಮೀಕೃತವಾಗುತ್ತಾ ಬರುತ್ತದೆ ಮತ್ತು ನೀವು ದೇವರನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮರ್ಥರಾಗುತ್ತೀರಿ.
ಬಹುಜನರು ತಮಗೊಂದು ಆತ್ಮವಿದೆಯೆಂಬುದನ್ನೇ ಅರ್ಥಮಾಡಿಕೊಳ್ಳಲಾರರು ಎಂದ ಮೇಲೆ ದೇವರನ್ನು ಅರ್ಥಮಾಡಿಕೊಳ್ಳುವ ಬಗೆಗೆ ಹೇಳುವುದೇನಿದೆ. ಬಹಳವೇ ಲೌಕಿಕರಾದ ಜನರಿಗೆ, ಉದಾಹರಣೆಗೆ ಒಂದೇ ಸಮನೆ ಮಾಂಸ ಭಕ್ಷಣೆ ಮಾಡುವವರಿಗೆ – ಜಡ ಹಾಗೂ ಚೇತನಗಳ ನಡುವಣ ವ್ಯತ್ಯಾಸ ತಿಳಿದುಕೊಳ್ಳುವುದು ತುಂಬ ಕಷ್ಟ – “ನಾನು ದೇವರನ್ನು ಪ್ರೀತಿಸುವೆ’ ಎಂದೋ ಇಲ್ಲವೆ, ನಾನು ದೇವರನ್ನು ಬಲ್ಲೆ ಎಂದೋ ಯಾರು ಬೇಕಾದರೂ ಹೇಳಬಹುದು.
ಆದರೆ ವಾಸ್ತವವಾಗಿ ದೇವರನ್ನು ಅರ್ಥ ಮಾಡಿಕೊಳ್ಳುವುದು ಬೇರೆಯದೇ ಆದ ಮಾತು. ಆಧ್ಯಾತ್ಮಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿಗೆ ಆಧ್ಯಾತ್ಮೀಕೃತ ಬುದ್ಧಿ ಇರಬೇಕು. ಆದ್ದರಿಂದ ಭಗವಂತನಿಗೆ ನಿವೇದಿತವಾದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ಬದುಕಿನ ಒಂದು ಬಹುಮುಖ್ಯ ಮಗ್ಗುಲು.ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದಲ್ಲಿ ಪ್ರಭು ಕೃಷ್ಣನು ಹೇಳುತ್ತಾನೆ:
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಾಕ್ತ್ಯಾ ಪ್ರಯಚ್ಛತಿ |
ತದ್ ಅಹಂ ಭಕ್ತ್ಯುಪಾ ಹೃತಮ್ ಅಶ್ನಾಮಿ ಪ್ರಯತಾತ್ಮನಃ ||
ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ. ಏಕೆಂದರೆ ಭಗವಂತನು ಈಗಾಗಲೇ ಸರ್ವಸ್ವಕ್ಕೂ ಒಡೆಯನಾಗಿದ್ದಾನೆ ದೇವರು ಭುಂಜಿಸಲು ಇಚ್ಛಿಸುತ್ತಾನೆ ಎಂದೇನಿಲ್ಲ.
ಯೋಗಿಗಳು ಆಹಾರ ಸ್ವೀಕಾರವನ್ನು ಸಂಪೂರ್ಣವಾಗಿ ತ್ಯಜಿಸುವುದನ್ನು ಕೂಡ ನಾವು ಕೆಲವೊಮ್ಮೆ ನೋಡುತ್ತೇವೆ. ಭಗವಾನ್ ಚೈತನ್ಯರ ಕಾಲದಲ್ಲಿ ರಘುನಾಥ ದಾಸ ಎನ್ನುವ ಬಹು ದೊಡ್ಡಭಕ್ತರಿದ್ದರು. ಅವರು ದಿನ ಬಿಟ್ಟು ದಿನ ಸ್ವಲ್ಪ ಮಜ್ಜಿಗೆಯನ್ನು ಸ್ವೀಕರಿಸುತ್ತಾ ಜೀವಿಸುತ್ತಿದ್ದರು. ಅವರು ಸುಮಾರು ನೂರಿಪತ್ತು ವರುಷಗಳ ಕಾಲ ಬದುಕಿದ್ದರು.
ನಮಗೆ ಆಹಾರ ಬೇಕೆಂಬುದು ನಿಜಕ್ಕೂ ಒಂದು ಕಟ್ಟು ಕಥೆ. ಏಕೆಂದರೆ ಅಂತಿಮವಾಗಿ ನಾವು ಆಧ್ಯಾತ್ಮಿಕರು. “ನನಗೆ ಕುಡಿಯಲು ಮದ್ಯ ಸಿಕ್ಕ ಹೊರತು ನಾನು ಸಾಯುತ್ತೇನೆ” ಎಂದೋ, ಅಥವಾ “ನಾನು ಇನ್ನೊಂದು ಹೊಗೆ ಬತ್ತಿ ಸೇದಬೇಕು. ಅದು ಸಿಗದಿದ್ದರೆ ನಾನು ನಾಳೆ ಬೆಳಗಿನ ತನಕ ಬದುಕಿರುವುದಿಲ್ಲ” ಎಂದು ಯಾರೋ ಒಬ್ಬಾತ ಹೇಳಬಹುದು.
ಒಂದು ಬಟ್ಟಲು ಚಹಾವನ್ನು ಕುರಿತದ್ದಾಗಬಹುದು. “ಓ ಏನು ಹೇಳಲಿ ನಾನು ಒಂದು ಕಪ್ ಚಹಾಕ್ಕಾಗಿ ಪರಿತಪಿಸುತ್ತಾ ಸಾಯುತ್ತಿದ್ದೇನೆ” ಎಂದೋ, ಅಥವಾ “ನಾನು ಹಸಿದುಕೊಂಡಿದ್ದೇನೆ” ಎಂದೋ ನಾವು ಕೆಲವು ಸಲ ಹೇಳಬಹುದು. ಆದರೆ ನಿಜವಾಗಿ ನಾವು ಹಸಿದಿರುವುದಿಲ್ಲ. ಈ ಎಲ್ಲವೂ ಸಿಗದಿದ್ದಲ್ಲಿ ನಾವು ಸಾಯುವುದಿಲ್ಲ.
ಅದೇ ರೀತಿ ನಮಗೆ ಬೇಕಾದ ವಸ್ತುಗಳಲ್ಲಿ ಆಹಾರವು ಒಂದೆಂದು ನಾವು ಭಾವಿಸುತ್ತೇವೆ. ಏಕೆಂದರೆ ನಾವು ಎಂದರೆ ನಮ್ಮ ದೇಹ ಎಂಬುದು ನಮ್ಮ ಆಲೋಚನೆ ಆಗಿರುತ್ತದೆ. ನಿಜ, ನಾವು ಆಹಾರ ಸೇವಿಸದೆ ಇರಬಹುದು ಎಂದೇನಿಲ್ಲ ದೇಹಕ್ಕೆ ಅಷ್ಟಿಷ್ಟು ಆಹಾರದ ಅಗತ್ಯವಿದೆ. ದೇಹಕ್ಕೆ ಆಹಾರ ಬೇಡವೆಂದು ನಾವು ಹೇಳುತ್ತಿಲ್ಲ.
ಆದರೆ ದೇಹದಿಂದ ಬಿಡುಗಡೆ ಪಡೆವ ವಿಷಯಕ್ಕೆ ಬಂದಾಗ ವಾಸ್ತವವಾಗಿ ತನಗೆ ಆಹಾರದ ಅಗತ್ಯ ಇಲ್ಲವೆಂಬುದನ್ನು ವ್ಯಕ್ತಿಯು ಅಳೆಯಬಹುದು. ತಾನು ಬೆಳೆಯಲು ಆಹಾರದ ಅಗತ್ಯ ಇರುವುದು ದೇಹಕ್ಕೆ ಮಾತ್ರ. ಆದರೆ ಒಮ್ಮೆ ದೇಹವು ಸಾಕಷ್ಟು ಬೆಳೆದು ನಿಂತಾಗ ಆಶ್ಚರ್ಯಕರ ಎನ್ನುವಷ್ಟು ಅಲ್ಪ ಆಹಾರದಿಂದ ಬದುಕಬಹುದೆಂಬುದೂ ನಿಜ. ಅನೇಕ ಜನ ಇದನ್ನು ಮಾಡಿದ್ದಾರೆ.
ನಾನು ಹೀಗೆ ಹೇಳುತ್ತಿರುವುದು ಸ್ವಲ್ಪ ಆಶ್ಚರ್ಯದ ಮಾತೇ ಆಯಿತು ಎಂದು ತೋರುವುದು ಸರಿಯೇ ಹೌದು. ಏಕೆ೦ದರೆ ನಮ್ಮ ಕೃಷ್ಣಪ್ರಜ್ಞಾ ಚಳುವಳಿಯಲ್ಲಿ ಕೆಲವು ಸಲ- ವಿಶೇಷವಾಗಿ ಹಬ್ಬದ ದಿನಗಳಲ್ಲಿ – ಸ್ವಲ್ಪ ಹೆಚ್ಚಾಗಿಯೇ ಆಹಾರ ಸೇವಿಸುತ್ತೇವೆ.
ಆದರೆ ಇಲ್ಲಿನ ತತ್ತ್ವವೆಂದರೆ ಈ ಜಗತ್ತಿನಲ್ಲಿ ಒಬ್ಬವ್ಯಕ್ತಿಯು ಆಹಾರ ಸೇವಿಸದೆ ಇರುವ ಹಂತಕ್ಕೆ ನಿಜವಾಗಿಯೂ ಏರಬಹುದು, ಎಂದಮೇಲೆ ದೇವರ ವಿಚಾರ ಹೇಳುವುದೇನಿದೆ? ಅವನು ಆಹಾರ ಸೇವಿಸುವುದೇ ಬೇಡ. ನಿಜದಲ್ಲಿ ಪ್ರಭುವು ಪರಮ ಸ್ವತಂತ್ರ. ಹೀಗಿದ್ದೂ ಆತ ನಾವು ಸಮರ್ಪಿಸಿದ್ದನ್ನು ಸ್ವೀಕರಿಸುತ್ತಾನೆ ಹಾಗೂ ಅದನ್ನು ಭುಂಜಿಸುತ್ತಾನೆ.
ಪ್ರೀತಿ ಇದ್ದಲ್ಲಿ ನಾವು ಸಮರ್ಪಿಸಿದ ಆಹಾರ ರುಚಿಕರವಾದದ್ದಾಗಿರುತ್ತದೆ. ಪ್ರೇಮವಿದ್ದಲ್ಲಿ ಅರ್ಪಿಸಿದ ಯಾವ ವಸ್ತುವೂ ರುಚಿಕರವಾಗಿರುತ್ತದೆ. ಉದಾಹರಣೆಗೆ ಒಬ್ಬ ಚೆಲುವ ಹುಡುಗಿಯ ಕಥೆಯೊಂದಿದೆ. ಒಬ್ಬ ಚೆಲುವೆ ಹುಡುಗಿಯು ಗಂಡನಿಗೆ ಒಂದು ಹಾರವನ್ನು ಸಮರ್ಪಿಸಿದಳು. ಆ ಹಾರಕ್ಕೆ ಒಂದಿಷ್ಟು ಮಣ್ಣು ಮೆತ್ತಿಕೊಂಡಿತ್ತು. ಆ ಗಂಡ ಹಾರವನ್ನು – ಅದಕ್ಕೆ ಮಣ್ಣು ಮೆತ್ತಿಕೊಂಡಿದ್ದರೂ – ಸ್ವೀಕರಿಸಿ ಕೊರಳಿಗೆ ಧರಿಸಿದ. ಅವನು ಹಾರವನ್ನು ಸ್ವೀಕರಿಸಿದ್ದು ಅವನ ಹೆಂಡತಿ ಅವನಲ್ಲಿಟ್ಟಿದ್ದ ಪ್ರೀತಿಯಿಂದಾಗಿ.
ಕೃಷ್ಣನು ಒಮ್ಮೆ ಪರಮ ಭಕ್ತನಾಗಿದ್ದ ವಿದುರನ ಮನೆಗೆ ಅನಿರೀಕ್ಷಿತ ಭೇಟಿ ನೀಡಿದ, ವಿದುರ ತನ್ನ ಸ್ಥಾನ ಬಿಟ್ಟು ಲಗುಬಗನೆ ಎದ್ದು ಕೃಷ್ಣನನ್ನು ಕುಳ್ಳಿರಿಸಿ ಅವನ ಪಾದಗಳನ್ನು ತೊಳೆದ. ಬಳಿಕ ಕೃಷ್ಣನಿಗೆ ಬಾಳೆ ಹಣ್ಣುಗಳನ್ನು ನೀಡಲು ವಿದುರ ಪ್ರಯತ್ನಿಸಿದ. ಆದರೆ ವಿದುರನು ಕೃಷ್ಣ ಪ್ರೇಮದಿಂದ ಎಷ್ಟು ದಿಗ್ಭ್ರಮೆಗೆ ಒಳಗಾಗಿದ್ದನೆಂದರೆ, ಸುಲಿದ ಬಾಳೆಯ ಹಣ್ಣಿನ ತಿರುಳನ್ನು ಬಿಸುಟು ಕೃಷ್ಣನಿಗೆ ಸಿಪ್ಪೆಯನ್ನು ನೀಡಿದ.
ಇತ್ತ ಕೃಷ್ಣನು ತನ್ನ ಭಕ್ತನ ಪ್ರೀತಿಯಿಂದ ಎಷ್ಟು ತೊಯ್ದು ಹೋದನೆಂದರೆ, ಭಕ್ತನ ಕಾಣಿಕೆಯನ್ನು ಒಪ್ಪಿಕೊಂಡ.

ನಿಜ ನಾವು ಕೃಷ್ಣನಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ನೀಡಬಾರದು. ಅದು ತಪ್ಪು. ಆದರೆ ಪ್ರೀತಿ ವಿನಿಮಯದ ಒಂದು ಸಾಮ್ರಾಜ್ಯವಿದೆ. ಈ ಲೋಕವನ್ನು ಮುಟ್ಟಲು ಅಥವಾ ಅರ್ಥ ಮಾಡಿಕೊಳ್ಳಲು ನಾವು ವಿಫಲರಾಗುತ್ತೇವೆ. ಇದು ಎಂಥ ಶುದ್ಧ ಪ್ರೇಮ ವಿನಿಮಯವೆಂದರೆ, ಇಲ್ಲಿ ಸ್ವಲ್ಪವೂ ಸ್ವಾರ್ಥ ಇರುವುದಿಲ್ಲ.
ವ್ಯಕ್ತಿ ತನ್ನನ್ನು ಕುರಿತು ಯೋಚಿಸುವುದೇ ಇಲ್ಲ ತಾನು ಪ್ರಭುವನ್ನು ಸಂತೋಷಪಡಿಸಲು ಇಚ್ಛಿಸುವುದಾಗಿ ಭಗವದ್ಭಕ್ತನು ಆಲೋಚಿಸುತ್ತಾನೆ. ಅದೇ ರೀತಿ ಪ್ರಭುವು, ‘ನಾನು ಭಕ್ತನನ್ನು ಸಂತೋಷ ಪಡಿಸಲು ಇಚ್ಛಿಸುತ್ತೇನೆ’ ಎಂದು ಯೋಚಿಸುತ್ತಾನೆ.
ಇಷ್ಟೆಲ್ಲ ಒಂದು ಸರಳ ವಿಚಾರದಿಂದ ಆರ೦ಭವಾಗುತ್ತದೆ. ಆ ಸರಳ ವಿಚಾರವೆಂದರೆ, ಭಗವಂತನಿಗೆ ಏನನ್ನಾದರೂ ಅರ್ಪಿಸುವುದು. ನಾವು ಹಾಡುವುದರ ಮೂಲಕ ಕೃಷ್ಣನಿಗೆ ನಮ್ಮ ಧ್ವನಿಯನ್ನು ಅರ್ಪಿಸಬಹುದು. ಇತರ ವಸ್ತುಗಳನ್ನೂ ನಾವು ಅರ್ಪಿಸಬಹುದು. ಪತ್ರಂ ಪುಷ್ಪಂ ಫಲಂ ತೋಯಂ ಎನ್ನುತ್ತಾನೆ ಕೃಷ್ಣ.
”ನೀವು ನನಗೊಂದು ಎಲೆಯನ್ನು ಇಲ್ಲವೆ ಒಂದು ಹೂವನ್ನು ಅಥವಾ ಹಣ್ಣನ್ನು ಅಥವಾ ಒಂದಿಷ್ಟು ನೀರನ್ನು ಅಥವಾ ಹಣ್ಣಿನ ರಸವನ್ನು – ಅಲ್ಪ ಪ್ರಮಾಣದ್ದು – ಅರ್ಪಿಸಬಹುದು, ನಾನದನ್ನು ಸ್ವೀಕರಿಸುತ್ತೇನೆ.” ಪ್ರತಿಯೊಬ್ಬರೂ ಒಂದು ಮರದಿಂದ ಒಂದು ಎಲೆಯನ್ನು ಕಿತ್ತುಕೊಳ್ಳಬಹುದು ಅಥವಾ ಸೊಪ್ಪಿನಂಥ ತರಕಾರಿಯನ್ನು ಬೆಳೆಯಬಹುದು.
ಪ್ರತಿಯೊಬ್ಬರೂ ಒ೦ದು ಹಣ್ಣನ್ನು ಒದಗಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಒಂದು ಹೂವನ್ನು ಸಂಪಾದಿಸಬಹುದು. ಹೂವುಗಳು ಎಲ್ಲೆಡೆ ಬೆಳೆಯುತ್ತವೆ. ನೀವು ಭಗವಂತನಿಗೆ ಚೆಂದದ ಗುಲಾಬಿ ಹೂವನ್ನು ನೀಡಬಹುದು ಇಲ್ಲವೆ ಯಾವುದಾದರೂ ಕಾಡು ಹೂವನ್ನು ಅರ್ಪಿಸಬಹುದು; ಸೇವಂತಿಗೆ ಹೂವನ್ನು ನೀಡಿ, ಇಲ್ಲವೆ ಬಟ್ಟಲಿನ ಆಕಾರದ ಹಳದಿ ಹೂವನ್ನು ಅರ್ಪಿಸಿ.
ಪ್ರತಿಯೊಬ್ಬರೂ ಸ್ವಲ್ಪ ನೀರನ್ನು ಅಥವಾ ಹಣ್ಣಿನ ರಸವನ್ನು ಹೊಂದಿಸಿಕೊಳ್ಳಬಹುದು. ಹೀಗೆ ನೀವು ನೀಡುವ ವಸ್ತು ಇಲ್ಲಿ ಮುಖ್ಯವಾಗುವುದಿಲ್ಲ; ಲೆಕ್ಕಕ್ಕೆ ಬರುವುದು ನಿಮ್ಮ ಪ್ರೀತಿ.
ನೀವು ಒಬ್ಬತಂದೆ ಎಂದುಕೊಳ್ಳೋಣ. ನೀವು ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ನಿಮ್ಮ ಮಗುವಿಗೆ ನೀಡಲು ಒಂದು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ತರುತ್ತೀರಿ ಎಂದಿಟ್ಟುಕೊಳ್ಳಿ. ನೀವು ನಿಮ್ಮ ಮನೆಯ ಬಳಿ ಬರುತ್ತಿದ್ದಂತೆಯೇ ನಿಮ್ಮ ಮಗು ನೀವು ನಿನ್ನೆ ನೀಡಿದ್ದ ಸಿಹಿ ತಿಂಡಿಯನ್ನು ಚಪ್ಪರಿಸುತ್ತಾ ಬರುತ್ತಾಳೆ.
ಆ ಮಗು ಸಿಹಿ ತಿಂಡಿಯನ್ನು ತನ್ನ ಬಾಯಿಂದ ಹೊರತೆಗೆಯುತ್ತಾಳೆ ಎನ್ನೋಣ. ಆಗೇನು ಮಾಡುತ್ತಾಳೆ ಆ ಮಗು? “ಅಪ್ಪ ಈ ಸಿಹಿತಿಂಡಿ ತುಂಬ ರುಚಿಯಾಗಿದೆ. ನೀನೂ ಸ್ವಲ್ಪ ತಿನ್ನಬಹುದೆ? ಎನ್ನುತ್ತಾಳೆ.
ನಿಮ್ಮ ಪ್ರೇಮವನ್ನು ಹಿಂತಿರುಗಿಸುತ್ತಿರುವ ಹುಡುಗಿಯ ಬಗೆಗೆ ನಿಮ್ಮ ಮಮತೆ ಎಷ್ಟೊಂದು ತುಂಬಿ ಬರುತ್ತದಲ್ಲವೆ? ನೀವು ಒಂದು ಚೀಲದ ತುಂಬ ಸಿಹಿ, ತಿಂಡಿ ತಂದಿರಿ. ಸ್ವತಃ ನೀವೇ ಸಿಹಿ ತಿಂಡಿ ತಿನ್ನುವುದಿಲ್ಲ. ನಿಮ್ಮ ಮಗು ನಿಮಗೆ ನೀಡುತ್ತಿರುವ ಅಂಟಂಟಾದ ತಿಂಡಿ ನಿಶ್ಚಯವಾಗಿಯೂ ನಿಮಗೆ ಬೇಡ.
ಆದರೆ ಅದನ್ನು ಸ್ವೀಕರಿಸದೆ ಹೇಗೆ ಇದ್ದೀರಿ? ಬಹುತರ ಮಕ್ಕಳಂತೆ ಸ್ವಾರ್ಥಿಯಾದ ನಿಮ್ಮ ಮಗು ಸ್ವಾರ್ಥ ತ್ಯಜಿಸಿ ನಿಮ್ಮ ಬಗೆಗೆ ಆಲೋಚಿಸುವ ರೀತಿ ತಂದೆ-ತಾಯಿಗಳಾದವರಿಗೆ ಅತ್ಯಾಶ್ಚರ್ಯ ತರುವ ವಿಚಾರ.
ಇದೇ ರೀತಿ ಭಗವಂತನು ಈ ಬ್ರಹ್ಮಾಂಡದ ಪ್ರತಿಯೊಬ್ಬರ ತಂದೆ ಮತ್ತು ಅವನಿಗೆ ಯಾರಾದರೂ ಏನನ್ನಾದರೂ ಅರ್ಪಿಸಿದಾಗ ಆತ ತತ್ಕ್ಷಣವೇ ಮಮತೆಯಿಂದ ತುಂಬಿಹೋಗುತ್ತಾನೆ. ದೇವರನ್ನು ಸಂತೋಷಗೊಳಿಸಲು ನಾವು ಬಯಸುತ್ತೇವೆ. ವೈದಿಕ ಸಾಹಿತ್ಯದಲ್ಲಿ ಹೇಳಿದಂತೆ ಯಸ್ಮಿನ್ ತುಷ್ಟೇ ಜಗತ್ ತುಷ್ಟಮ್ – “ನೀವು ಭಗವಂತನನ್ನು ತೃಪ್ತಿ ಪಡಿಸಿದಿರಾದರೆ, ಬೇರೆ ಯಾರನ್ನಾಗಲಿ ತೃಪ್ತಿಪಡಿಸುವ ಬಗೆಗೆ ನೀವು ಯೋಚಿಸಬೇಕಾದ್ದಿಲ್ಲ.
” ನೀವು ಮರವೊಂದರ ಬೇರುಗಳಿಗೆ ನೀರು ಸುರಿದಿರಾದರೆ, ಚಿಗುರೆಲೆಗಳ ಬಗೆಗೆ, ರೆಂಬೆ ಕೊಂಬೆಗಳ ಬಗೆಗೆ ಯೋಚಿಸಬೇಕಾದ್ದಿಲ್ಲ. ಪ್ರಪಂಚದಲ್ಲಿ ಯಾರೋ ಒಬ್ಬರಿಗೆ ನೀವು ಏನೋ ಸೇವೆ ಮಾಡಬೇಕೆಂದಿದ್ದರೆ ಅದನ್ನು ದೇವರಿಗೆ ಮಾಡಿ. ಆಗ ಎಲ್ಲವೂ ಪರಿಪೂರ್ಣವಾಗಿ ಸಾಧಿತವಾಗುತ್ತದೆ.
ಆದ್ದರಿಂದ ನಾವು ನಮ್ಮ ಭಕ್ತಿಯನ್ನು ದೇವರೊಬ್ಬನಿಗೆ ಮಾತ್ರ ಅರ್ಪಿಸಲು ಪ್ರಯತ್ನಿಸುತ್ತೇವೆ. ನೀವು ದೇವರ ಸೇವೆ ಮಾಡಿದರೆ ಅವನ ಬಗೆಗೆ ಒಂದಿಷ್ಟು ಪ್ರೇಮವನ್ನು ಜಾಗೃತಗೊಳಿಸುವಿರಿ ಮತ್ತು ಸಹಜವಾಗಿಯೇ ಇತರರನ್ನು ಪ್ರೀತಿಸಿ ಅವರ ಸೇವೆ ಮಾಡಲು ಬಯಸುತ್ತೀರಿ.
ದೇವರು ಇಷ್ಟಪಡುವ ವಸ್ತುಗಳನ್ನು ಸ್ವೀಕರಿಸುವ ಮೂಲಕ ಹಾಗೂ ಅವನು ಇಷ್ಟಪಡದ ವಸ್ತುಗಳನ್ನು ತಿರಸ್ಕರಿಸುವ ಮೂಲಕ ನಾವು ನಮ್ಮ ದೈವ ಪ್ರೇಮವನ್ನು ವೃದ್ಧಿಸಿಕೊಳ್ಳುತ್ತೇವೆ. “ನನ್ನನ್ನು ಪ್ರೀತಿಸಿ, ನನ್ನ ನಾಯಿಯನ್ನು ಪ್ರೀತಿಸಿ’ ಎನ್ನುವ ಗಾದೆ ಮಾತೊಂದಿದೆ. ನನಗೆ ನಾಯಿಗಳನ್ನು ಕಂಡರ ಆಗದೆಯೇ ಇರಬಹುದು.
ಆದರೆ ನಾನು ನಿಮ್ಮನ್ನು ಪ್ರೀತಿಸುತ್ತೇನಾದರೆ, “ನಿಮ್ಮ ಬಳಿ ಎಂತಹ ಸುಂದರವಾದ ನಾಯಿಯಿದೆ” ಎನ್ನುತ್ತೇನೆ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ, ತನ್ನಂತೆ ತಾನೆ ನೀವು ಆ ವ್ಯಕ್ತಿಗೆ ಸಂಬಂಧಪಟ್ಟ ಎಲ್ಲದರ ಬಗ್ಗೆ ಪ್ರೀತಿಸಲು ಪ್ರಾರಂಭಿಸುತ್ತೀರಿ. ಈ ಮೊದಲು ನಿಮಗಿಲ್ಲದಿದ್ದ ಹವ್ಯಾಸವೊಂದನ್ನು ಬೆಳೆಸಿಕೊಳ್ಳಲು ನೀವು ಪ್ರಯತ್ನಿಸಬಹುದು.
ನೀವು ಪ್ರೀತಿಸುತ್ತಿರುವ ವ್ಯಕ್ತಿ ಬೆಳಗಿನ ಹೊತ್ತು ಓಡಲು ಹೋಗಬಹುದು. ನಿಮಗರಿವಿಲ್ಲದೆಯೇ ನೀವು ಓಡಲು ಹೋಗಿರುತ್ತೀರಿ. ಏಕೆಂದರೆ ಬಹು ಸಹಜವಾಗಿಯೇ ನಿಮ್ಮ ಪ್ರೀತಿಯ ವ್ಯಕ್ತಿ ಮಾಡುತ್ತಿರುವ ಕೆಲಸವನ್ನು ನೀವೂ ಮಾಡಲು ಬಯಸುತ್ತೀರಿ.
ಇದೇ ರೀತಿ ನಾವು ಆಧ್ಯಾತ್ಮಿಕ ಜೀವನವನ್ನು ಕೈಗೆತ್ತಿಕೊಂಡು ನಮ್ಮ ಬದುಕನ್ನು ದೇವರಿಗೆ ಮಿಸಲಿಡಲು ಪ್ರಯತ್ನಿಸಿದಾಗ ನಮ್ಮ ಆಸಕ್ತಿಗಳು ಸ್ವಲ್ಪ ಬದಲಾವಣೆ ಪಡೆಯುತ್ತವೆ. “ಏನು ಮಾಡಿದರೆ ದೇವರು ಸಂಪ್ರೀತನಾಗುತ್ತಾನೆ” ಎಂದು ಆಲೋಚಿಸಲು ನಾವು ಪ್ರಯತ್ನಿಸುತ್ತೇವೆ. ನಾವು ನಮ್ಮ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ.
ಆದರೆ ಅದನ್ನು ದೇವರಿಗೆ ಒಪ್ಪಿಸುತ್ತೇವೆ. ಇಲ್ಲೊಂದು ವ್ಯತ್ಯಾಸವಿದೆ. ನೀವು ಹಾಕಿ ಆಟ ಆಡಲು ಇಷ್ಟಪಡಬಹುದು, ಆದರೆ ನಿಮ್ಮ ಪ್ರೀತಿ ಪಾತ್ರರು ಹಾಕಿ ಆಟ ಆಡಲು ಸುತರಾಂ ಆಸಕ್ತಿ ತೋರದಿರಬಹುದು. ಆಗಲೂ ನೀವು ಹಾಕಿ ಆಟದಲ್ಲಿ ಸಮರ್ಥರೇ ಇರುತ್ತೀರಾದರೂ, ಪ್ರೀತಿಯ ದೆಸೆಯಿಂದ ನೀವು ನಿಮ್ಮ ಬದುಕಿನ ವಿಧಾನವನ್ನು ಬದಲಾಯಿಸಿಕೊಳ್ಳುತ್ತೀರಿ.
ಇದು ಇಲ್ಲಿನ ಮುಖ್ಯ ವಿಚಾರ. ಆದ್ದರಿಂದ ಕೃಷ್ಣ ಪ್ರಜ್ಞೆಗೆ ಸೇರಲು ಒಂದಿಷ್ಟು ಅಭ್ಯಾಸಬೇಕು; ನಮ್ಮ (ದೈವ) ಪ್ರೇಮವು ಕ್ರಮೇಣ ಉದ್ದೀಪನೆಗೊಳ್ಳಲು ಅಭ್ಯಾಸ ಮುಂದುವರಿಯಬೇಕು.
ಉದಾಹರಣೆಗೆ ಒಂದು ಮಗುವಿಗೆ ನಡೆಯುವ ಶಕ್ತಿಯು ಪ್ರಕೃತಿದತ್ತವಾಗಿರುತ್ತದೆ – ಆದರೂ ಅದು ನಡೆಯುವುದನ್ನು ಅಭ್ಯಾಸ ಮಾಡಬೇಕು. ಮಗು ಮೊದ ಮೊದಲು ಏನನ್ನಾದರೂ ಆಧಾರ ಮಾಡಿಕೊಂಡು ಎದ್ದು ನಿಲ್ಲುತ್ತದೆ. ಬಳಿಕ ಅದು ಮೊದಲ ಹೆಜ್ಜೆ ಇಡುತ್ತದೆ. ಪ್ರತಿ ಮಗುವೂ ಇದೇ ರೀತಿ ಮಾಡುತ್ತದೆ.

ಮತ್ತು ಮಗು ನಡೆಯುವುದು ಸಾಧ್ಯವಾದೊಡನೆ, ಅದರ ನಡೆ ಸ್ವಯಂಪ್ರೇರಿತವಾಗಿರುತ್ತದೆ. ತಾನು ಓಡುತ್ತಿರುವುದನ್ನು ಮನಸ್ಸಿಗೂ ತಂದುಕೊಳ್ಳದೆ ಅದು ಎಲ್ಲೆಲ್ಲೂ ಓಡುತ್ತದೆ. ಮೋಟಾರು ಕಾರನ್ನು ನಡೆಸುವುದನ್ನು ಕಲಿಯುವಾಗಲೂ ಹೀಗೇ ಆಗುತ್ತದೆ.
ಮೊದಲು ನೀವು ಅಭ್ಯಾಸ ಮಾಡಬೇಕು, ಕಾರು ನಡೆಸುವುದು ನಿಮಗೆ ಬಂದೊಡನೆ ಆ ಕೆಲಸ ನಿಮ್ಮ ಸ್ವಭಾವದ ಒಂದು ಅಂಗವಾಗಿ ಬಿಡುತ್ತದೆ – ಅದೇ ರೀತಿ ನಮ್ಮೊಳಗೆ ದೈವಪ್ರೇಮ ಇದೆ – ನಿತ್ಯಸಿದ್ಧ ಕೃಷ್ಣಪ್ರೇಮ ಇದೆ. ಕೃಷ್ಣನನ್ನು ಕುರಿತು ಶ್ರವಣ ಮಾಡಿ ನಮ್ಮ ಪ್ರಜ್ಞೆಯು ಪರಿಶುದ್ಧವಾದಾಗ ನಾವು ಅವನ ಸೇವೆ ಮಾಡುವ ಅಪೇಕ್ಷೆ ಬೆಳೆಸಿಕೊಳ್ಳುತ್ತೇವೆ. ಇದು ಕೆಲ ಕಾಲಾನಂತರ ಸ್ವಯಂ ಪ್ರೇರಿತವಾಗಿ ನಡೆಯುತ್ತದೆ.
ಕೃಷ್ಣಪ್ರಜ್ಞಾ ಚಳವಳಿಯಲ್ಲಿ ನಾವು ಸ್ವಯಂ ಸ್ಫೂರ್ತಿ ಕೃಷ್ಣಪ್ರೇಮವನ್ನು ವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಉದಾಹರಣೆಗೆ ನಾವು ಅಡುಗೆ ಮಾಡಿದ ಪದಾರ್ಥಗಳನ್ನು ದೇವರ ಮುಂದೆ ನೈವೇದ್ಯಾರ್ಥವಾಗಿ ಇರಿಸುತ್ತೇವೆ. ಅಡುಗೆ ಮಾಡುವಾಗ ನಾವು, ”ಈ ಪದಾರ್ಥ ನನ್ನ ಸಂತೋಷಕ್ಕಾಗಿ’ ಎಂದು ನಾವು ಆಲೋಚಿಸುವುದಿಲ್ಲ.
ಕೊನೆಯ ಪಕ್ಷ ಹಾಗೆ ಯೋಚಿಸದೆ ಇರಲು ಪ್ರಯತ್ನಿಸುತ್ತೇವೆ. ಪದಾರ್ಥ ನನ್ನ ಹೆಂಡತಿಯ ಅಥವಾ ನನ್ನ ಗಂಡನ ಅಥವಾ ನನ್ನ ಮಗುವಿನ ಸಂತೋಷಕ್ಕೆ ಎಂಬುದಾಗಿ ನಾವು ಆಲೋಚಿಸುತ್ತಿರುವುದಿಲ್ಲ. ನಾವು ಈ ಅಡುಗೆಯನ್ನು ಭಗವಂತನ ಸಂತೋಷಕ್ಕೆ ಮಾಡುತ್ತಿದ್ದೇವೆ ಎಂದು ಆಲೋಚಿಸುತ್ತಿರುತ್ತೇವೆ.
ಪ್ರತಿ ಭಾನುವಾರ ದೇಗುಲಕ್ಕೆ ಬರುವ ಪ್ರತಿಯೊಬ್ಬರೂ ದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿ ತೃಪ್ತರಾಗುವುದು ನಿಜಕ್ಕೂ ವಿಸ್ಮಯ. “ನಾನು ಈವರೆಗೆ ರುಚಿ ನೋಡಿರುವ ಊಟದಲ್ಲಿ ಇದು ಅತ್ಯಂತ ಶ್ರೇಷ್ಠವಾದದ್ದು” ಎಂದು ಕೆಲವೊಮ್ಮೆ ಜನ ಹೇಳಿದ್ದಿದೆ. ಕೃಷ್ಣನಿಗಾಗಿ ಅಡುಗೆ ಮಾಡಿದಾಗ ಇತರರಿಗೆ ಕಷ್ಟ ಆಗುತ್ತದೆ ಎಂದಲ್ಲ, ವಸ್ತುತಃ ಇದರಿಂದ ಎಲ್ಲರಿಗೂ ಲಾಭವಿದೆ. ತಯಾರಿಸಿದ ಪದಾರ್ಥವನ್ನು ಉಂಡವರಿಗಷ್ಟೇ ಅಲ್ಲದೆ ಸ್ವತಃ ಆ ಪದಾರ್ಥಕ್ಕೇ ಲಾಭವುಂಟು.
ಈ ಮಾತು ಅಸಾಧಾರಣವಾದದ್ದಾಗಿ ಕೇಳಿಸಬಹುದು. ನೀವು ಸೇಬಿನ ಮರದಿಂದ ಒಂದು ಹಣ್ಣನ್ನು ಕಿತ್ತು ದೇವರಿಗೆ ಅರ್ಪಿಸುತ್ತೀರಿ ಎಂದಿಟ್ಟುಕೊಳ್ಳಿ. ದೇವರ ದೃಷ್ಟಿಯಲ್ಲಿ ಸೇಬಿನ ಹಣ್ಣನ್ನು ಪರೋಕ್ಷವಾಗಿ ಅರ್ಪಿಸಿದ್ದು ಮರ. ಒಂದು ಮರವು ನಮ್ಮ ನಿಮ್ಮಂತೆ ಒಂದು ಜೀವಾತ್ಮ. ಆ ಮರ ವೃಕ್ಷದ ದೇಹವುಳ್ಳ ಆಧ್ಯಾತ್ಮಿಕ ವ್ಯಕ್ತಿ.
ಆದ್ದರಿಂದ ಸೇಬಿನ ಹಣ್ಣು ದೇವರಿಗೆ ಅರ್ಪಿತವಾದಾಗ ಮರದಲ್ಲಿನ ಆತ್ಮ ಹಣ್ಣನ್ನು ಅರ್ಪಿಸುತ್ತಿದೆ ಎಂದರ್ಥ. ಕೃಷ್ಣನು ಹಾಗೆ ಭಾವಿಸುತ್ತಾನೆ. ಆದ್ದರಿಂದ ಮರದ ದೇಹದಲ್ಲಿನ ವ್ಯಕ್ತಿಗೆ ಹಿತವಾಗುತ್ತದೆ. ದೇಗುಲದ ವೇದಿಕೆಯಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸೇಬಿನ ಹಣ್ಣನ್ನು ದೇವರಿಗೆ ಅರ್ಪಿಸಿದಾಗ ಆ ಹೆಣ್ಣಿನಲ್ಲಿ ಪರಿವರ್ತನೆ ಕಂಡುಬರುತ್ತದೆ.
ಹಣ್ಣಿಗೆ ಆಧ್ಯಾತ್ಮಿಕ ಗುಣ ಪ್ರಾಪ್ತವಾಗುತ್ತದೆ; ಹಣ್ಣು ಕೃಷ್ಣಮಯವಾಗುತ್ತದೆ. ಒಂದು ಕಬ್ಬಿಣದ ತುಂಡನ್ನು ನೀವು ಬೆಂಕಿಗೆ ಹಾಕಿದಾಗ ಅದು ಕಾದು ಕೆಂಪಗಾಗಿ ಬೆಂಕಿಯ ಸ್ವರೂಪವನ್ನೇ ಪಡೆಯುತ್ತದೆ. ಆ ಕಬ್ಬಿಣದ ತುಂಡನ್ನು ನೀವು ಬೆಂಕಿಯಿಂದ ಹೊರತೆಗೆದಾಗ ಅದು ಬೆಂಕಿಯಂತೆಯೇ ಕಾರ್ಯ ನಿರ್ವಹಿಸುತ್ತದೆ. ಇದೇ ರೀತಿ ಒಂದು ಸೇಬಿನ ಹಣ್ಣು ಕೂಡ ಕೃಷ್ಣನಿಗೆ ಅರ್ಪಿಸಿದಾಗ ಆಧ್ಯಾತ್ಮಿಕ ರೂಪ ಪಡೆಯುತ್ತದೆ. ಅದು ಸಾಮಾನ್ಯ ಸೇಬಿನ ಹಣ್ಣಿನಂತೆಯೇ ಕಾಣಬಹುದು. ಆದರೆ ಅದನ್ನು ತಿನ್ನುವವರ ಮೇಲೆ ಅದು ಮಹತ್ತರ ಪರಿಣಾಮ ಮಾಡುತ್ತದೆ.
ಬೆಂಕಿಯಲ್ಲಿಟ್ಟ ಕಬ್ಬಿಣದ ಸಲಾಕೆಯನ್ನು ಹೊರತೆಗೆದಾಗ ಅದು ಸಾಮಾನ್ಯ ಸಲಾಕೆಯಂತೆ ಕಂಡರೂ ಅದನ್ನು ಬೇರೆ ವಸ್ತುವಿಗೆ ತಾಕಿಸಿದಾಗ ಅದು ಕಾರ್ಯನಿರ್ವಹಿಸಿರುವ ರೀತಿಯೇ ಬೇರೆ. ಅಂತೆಯೇ ಕೃಷ್ಣನಿಗೆ ಅರ್ಪಿತವಾದ ಖಾದ್ಯ ವಸ್ತುವು ಆಧ್ಯಾತ್ಮಿಕವಾಗುತ್ತದೆ ಮತ್ತು ಅದನ್ನು ತಿನ್ನುವ ಯಾರೇ ಆಗಲಿ ತಮ್ಮ ಪ್ರಜ್ಞೆ ಪರಿಶುದ್ಧವಾದಂತೆ ಹಾಗೂ ಆಧ್ಯಾತ್ಮಿಕವಾದಂತೆ ಅನುಭವ ಪಡೆಯುತ್ತಾರೆ.
ಭಗವಂತನು ಆಧ್ಯಾತ್ಮಿಕ ಸ್ವರೂಪಿಯಾದ್ದರಿಂದ ಮತ್ತು ಪ್ರತಿಯೊಂದೂ ಅವನಿಂದಲೇ ಬರುವುದರಿಂದ ಪ್ರತಿಯೊಂದೂ ನಿಜವಾಗಿ ಆಧ್ಯಾತ್ಮಿಕವೇ. ಆ ವಸ್ತುವಿಗೆ ಲೌಕಿಕತೆಯ ಮುಸುಕು ಕವಿದಿರುತ್ತದೆ ಅಷ್ಟೆ. ವಸ್ತುವೊಂದನ್ನು ಒಮ್ಮೆ ಭಗವಂತನಿಗೆ ಸಮರ್ಪಿಸಿದಾಗ ಆ ಲೌಕಿಕ ಮುಸುಕು ಹರಿಯುತ್ತದೆ ಹಾಗೂ ಅರ್ಪಿತವಾದ ವಸ್ತುವಿನ ನೈಜ ಆಧ್ಯಾತ್ಮಿಕ ಶಕ್ತಿಯು ಪ್ರದರ್ಶಿತವಾಗುತ್ತದೆ.
ಅಣುಗಳಂಥ ಸೂಕ್ಷ್ಮ ಲೌಕಿಕ ವಸ್ತುಗಳು ಕೂಡ ಅನಿಯಮಿತವನಿಸುವಷ್ಟು ಶಕ್ತಿಯನ್ನು ಹೊರಹಾಕಬಲ್ಲವು. ಪರಿಮಾಣ ಚಲನಶಾಸ್ತ್ರದ ಅಧ್ಯಯನದಿಂದ, ಅರ್ಥಮಾಡಿಕೊಳ್ಳುವ ನಮ್ಮ ಶಕ್ತಿಯನ್ನು ಮೀರಿದ ಅನೇಕ ಅದ್ಭುತಗಳು ಅಧೀನ ಪರಮಾಣುಗಳ ಮಟ್ಟದಲ್ಲಿ ಘಟಿಸುತ್ತವೆ ಎಂದು ತಿಳಿದುಬರುತ್ತದೆ. ಹೀಗೆ ಅರ್ಥಮಾಡಿಕೊಳ್ಳಲು ಕಷ್ಟವಾದರೂ ಅಂತಿಮವಾಗಿ ಎಲ್ಲವೂ ಆಧ್ಯಾತ್ಮಿಕವೇ. ಆದರೆ ಯಾವುದೇ ವಸ್ತುವನ್ನು ದೇವರಿಂದ ಬೇರ್ಪಡಿಸಿದಾಗ ಅದು ಲೌಕಿಕ ರೂಪ ತಾಳುತ್ತದೆ.
ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಇದು ಪ್ರಜ್ಞೆಗೆ ಸಂಬಂಧಿಸಿದ ಪ್ರಶ್ನೆ. ಒಂದು ವಸ್ತುವನ್ನು ನಾನು ನನಗೆ ಸಂಬಂಧಿಸಿದಂತೆ ಅವಲೋಕಿಸಿದಾಗ ನಾನು ಅದನ್ನು ಲೌಕಿಕವೆಂಬಂತೆ ಕಾಣುತ್ತೇವೆ. ಏಕೆಂದರೆ ನಾನು ಮಿತಿಗೊಳಪಟ್ಟವನು ಆಧ್ಯಾತ್ಮಿಕವಾಗಿಯೇ ನಾನು ಮಿತಿಯುಳ್ಳವ ಎಂದ ಮೇಲೆ ಲೌಕಿಕವಾಗಿ ಎಷ್ಟು ಮಿತಿಯುಳ್ಳವ ಎಂದು ಹೇಳುವುದೇನಿದೆ?
ಆತ್ಮವು ಬಹಳವೇ ಚಿಕ್ಕದು ಅಥವಾ ಸೂಕ್ಷ್ಮಾತಿಸೂಕ್ಷ್ಮ, ಅತ್ಯಂತ ಮಿತ ಗಾತ್ರದ್ದು. ಅದೇ ಭಗವಂತನು ಬೃಹತ್ತಾದವನು ಅಥವಾ ಮಿತಿಯಿಲ್ಲದವ. ನಿಜದಲ್ಲಿ ಭಗವಂತನು ಅನಂತ ಅಥವಾ ಸೂಕ್ಷ್ಮಾತಿಸೂಕ್ಷ್ಮ. ಎಲ್ಲ ಜೀವಿಗಳು – ಮನುಷ್ಯರೇ ಆಗಲಿ, ಮರಗಳೇ ಆಗಲಿ, ಕೀಟಗಳೇ ಆಗಲಿ – ಭಗವಂತನ ಸೂಕ್ಷ್ಮಾತಿ ಸೂಕ್ಷ್ಮ ಮಗ್ಗುಲುಗಳೆಂದು ವೈದಿಕ ಸಾಹಿತ್ಯದಲ್ಲಿ ವರ್ಣಿಸಲಾಗಿದೆ.
ಸೂಕ್ಷ್ಮಾತಿ ಸೂಕ್ಷ್ಮ ಆದದ್ದನ್ನು ಅಪರಿಮಿತವಾದದ್ದರ ಜೊತೆ ಸೇರಿಸಿದಾಗ ಸೂಕ್ಷ್ಮಾತಿ ಸೂಕ್ಷ್ಮವಾದದ್ದಕ್ಕೆ ಅಪರಿಮಿತ ಶಕ್ತಿ ಇರುತ್ತದೆ. ಆದರೆ ಭಗವಂತನ ಸೂಕ್ಷ್ಮಾತಿ ಸೂಕ್ಷ್ಮ ಭಾಗವು ಭಗವಂತನಿಂದ ಬೇರ್ಪಟ್ಟಾಗ ಆ ಭಾಗವನ್ನು ಅದರ ಪರಿಮಿತ ಕಾರ್ಯಕ್ಷೇತ್ರಕ್ಕೆ ಬಿಟ್ಟಂತೆ. ದೊಡ್ಡ ಬೆಂಕಿಯಲ್ಲಿನ ಒಂದು ಕಿಡಿಯು ಬೆಂಕಿಯ ಒಟ್ಟು ಶಾಖದಲ್ಲಿ ಪಾಲು ಪಡೆಯುತ್ತದೆ. ಆದರೆ ಅದೇ ಕಿಡಿಯು ಬೆಂಕಿಯಿಂದ ಹೊರಬಿದ್ದಾಗ ಅದು ಕೆಂಡವಾಗಿ ಸಾಯುತ್ತದೆ.
ತಾತ್ವಿಕವಾಗಿ ಕಿಡಿಯನ್ನು ಪುನಃ ಬೆಂಕಿಗೆ ದೂಡಿ ಅದು ಹೊಳೆಯುವಂತೆ ಮಾಡಬಹುದು. ಆದರೆ ಸ್ವತಂತ್ರವಾಗಿದ್ದರೆ ಆ ಕಿಡಿಯು ತನ್ನ ಪ್ರಕಾಶಿಸುವ ಗುಣವನ್ನು ಕಳೆದುಕೊಳ್ಳುತ್ತದೆ. ಇದೇ ರೀತಿ ಆತ್ಮವು ಹೆಚ್ಚು ಕಡಿಮೆ ಮೃತ ಶಿಲೆಯಂತೆ ಆಗಬಹುದು. ಉದಾಹರಣೆಗೆ ಮರವೊಂದರ ದೇಹದಲ್ಲಿ ಆತ್ಮವು ಒಂದು ತೆರನ ತಡೆಹಿಡಿದ ಉತ್ಸಾಹದಲ್ಲಿರುತ್ತದೆ. ಆದರೂ ಅದು ಮಹತ್ತರ ಆಧ್ಯಾತ್ಮಿಕ ಶಕ್ತಿಯನ್ನು ಪಡೆದಿರುತ್ತದೆ.
ಕೃಷ್ಣ ಪ್ರಜ್ಞೆಯು ನಮ್ಮ ಆಧ್ಯಾತ್ಮಿಕತೆಯನ್ನು ಪುನರುಜ್ಜೀವಿಸಿಕೊಳ್ಳಲು ಒಂದು ಕಾರ್ಯಸಾಧ್ಯ ವಿಧಾನ. ಆದ್ದರಿಂದ ನೀವು ಕೃಷ್ಣನಿಗೆ ಅರ್ಪಿಸಿದ ದೇಹವೂ ಕೂಡ ಆಧ್ಯಾತ್ಮೀಕೃತವಾಗುತ್ತಾ ಬರುತ್ತದೆ ಮತ್ತು ನೀವು ದೇವರನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮರ್ಥರಾಗುತ್ತೀರಿ.
ಬಹುಜನರು ತಮಗೊಂದು ಆತ್ಮವಿದೆಯೆಂಬುದನ್ನೇ ಅರ್ಥಮಾಡಿಕೊಳ್ಳಲಾರರು ಎಂದ ಮೇಲೆ ದೇವರನ್ನು ಅರ್ಥಮಾಡಿಕೊಳ್ಳುವ ಬಗೆಗೆ ಹೇಳುವುದೇನಿದೆ. ಬಹಳವೇ ಲೌಕಿಕರಾದ ಜನರಿಗೆ, ಉದಾಹರಣೆಗೆ ಒಂದೇ ಸಮನೆ ಮಾಂಸ ಭಕ್ಷಣೆ ಮಾಡುವವರಿಗೆ – ಜಡ ಹಾಗೂ ಚೇತನಗಳ ನಡುವಣ ವ್ಯತ್ಯಾಸ ತಿಳಿದುಕೊಳ್ಳುವುದು ತುಂಬ ಕಷ್ಟ – “ನಾನು ದೇವರನ್ನು ಪ್ರೀತಿಸುವೆ’ ಎಂದೋ ಇಲ್ಲವೆ, ನಾನು ದೇವರನ್ನು ಬಲ್ಲೆ ಎಂದೋ ಯಾರು ಬೇಕಾದರೂ ಹೇಳಬಹುದು.
ಆದರೆ ವಾಸ್ತವವಾಗಿ ದೇವರನ್ನು ಅರ್ಥ ಮಾಡಿಕೊಳ್ಳುವುದು ಬೇರೆಯದೇ ಆದ ಮಾತು. ಆಧ್ಯಾತ್ಮಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿಗೆ ಆಧ್ಯಾತ್ಮೀಕೃತ ಬುದ್ಧಿ ಇರಬೇಕು. ಆದ್ದರಿಂದ ಭಗವಂತನಿಗೆ ನಿವೇದಿತವಾದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ಬದುಕಿನ ಒಂದು ಬಹುಮುಖ್ಯ ಮಗ್ಗುಲು.

Leave a Reply