ಇದೊಂದು ಅಪೂರ್ವಗ್ರಂಥ. ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಅಪೇಕ್ಷೆಯುಳ್ಳ ಎಲ್ಲರೂ ಅಗತ್ಯವಾಗಿ ಓದಬೇಕಾದ ಪುಸ್ತಕ.

ಕೃಷ್ಣ ಪ್ರಜ್ಞೆ ಎಂಬ ಸರ್ವಸಮರ್ಥ ಚೈತನ್ಯವನ್ನು ಗಳಿಸುವುದಕ್ಕೂ ಅದನ್ನು ಸದಾ ಅನುಭವಿಸಿ ಅನಂದಿಸುವುದಕ್ಕೂ ಮಾರ್ಗದರ್ಶಕ ಕೃತಿ ಇದು. ಸ್ವಾಮಿ ಪ್ರಭುಪಾದರ ಭಕ್ತಿವೇದಾಂತದ ಸಾರವನ್ನು ಈ ಗ್ರಂಥದ ಉಪನ್ಯಾಸಗಳು ಸರಳವಾಗಿ ನಿರೂಪಿಸುತ್ತವೆ.
ಆಧುನಿಕ ಮಾನವನ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನೂ ಶಾಂತಿ ಸಮಾಧಾನಗಳ ಆಧ್ಯಾತ್ಮಿಕ ಬದುಕಿಗೆ ಮಾರ್ಗವನ್ನು ತಿಳಿಸುವ ಈ ಸಂಪನ್ನ ಕೃತಿ ಓದುಗರ ಬಾಳ ಸಂಗಾತಿಯಾಗಿ ಬೆಳಗಲಿ.
ಶ್ರೀಲ ಪ್ರಭುಪಾದರು ನಮಗೆ ಬಿಟ್ಟುಕೊಟ್ಟ ಅನರ್ಘ್ಯ ರತ್ನಗಳೆಂದರೆ ಅವರ ಪುಸ್ತಕಗಳು. ತಮ್ಮ ಪುಸ್ತಕಗಳನ್ನು ರೆಕಾರ್ಡೆಡ್ ಚಾಂಟಿಂಗ್ ಅಂದರೆ ಭಗವದ್ ಕೀರ್ತನೆ ಎಂದೇ ವರ್ಣಿಸಿದ್ದರು. ತಮ್ಮ ಪುಸ್ತಕಗಳನ್ನು ಅನುವಾದ ಮಾಡಲು ಅಹರ್ನಿಶಿ ಕಾರ್ಯೋನ್ಮಖರಾಗಿದ್ದರು.

ಇಸ್ಕಾನ್‌ನಂಥ ದೊಡ್ಡ ಸಂಸ್ಥೆಯನ್ನು ನಡೆಸುವ ಸುದೀರ್ಘ ಜವಾಬ್ದಾರಿಯೊಡನೆ ಪುಸ್ತಕ ಪ್ರಕಾಶನಕ್ಕೆ ಎಂದೂ ಮಲತಾಯಿ ಧೋರಣೆಯನ್ನು ನೀಡಲಿಲ್ಲ.
ಪ್ರತಿ ರಾತ್ರಿ ಸುಮಾರು ಒಂದು ಗಂಟೆಗೆ ಎದ್ದು ನಾಲ್ಕು ಗಂಟೆಗಳ ಕಾಲ ಅನುವಾದದಲ್ಲಿ ತೊಡಗುತ್ತಿದ್ದರು. ಹೀಗೆ ಅವರ ಲೇಖನಿಯಿಂದ ಸುಮಾರು 90 ಪುಸ್ತಕಗಳು ಹೊರಬಂದವು. ಅವುಗಳ ಪರಿಚಯವನ್ನು ನಿಮಗೆ ನೀಡಲಾಗುವುದು.






Leave a Reply