ಸಾಮಯಿಕ ಪ್ರಜ್ಞೆ

ಆಕರ : ಉಪನ್ಯಾಸ ಸಂಗ್ರಹ, ಮೇ 26, 1976

ಮಾನವನ ಬದುಕೆಂದರೆ ಇಷ್ಟೇ. ಯಾರಾದರೂ ಹತರಾದರೆಂದರೆ, ನಿಧನರಾದರೆಂದರೆ ಸಾಕು, ಏನೋ ಅವ್ಯಕ್ತ ಭಯ ಆವರಿಸಿಬಿಡುತ್ತದೆ.

ಮುಂದಿನ ಸರದಿ ನಮ್ಮದೆನ್ನುವ ಚಡಪಡಿಕೆ ಅದು, ಶ್ರೀಲ ಪ್ರಭುಪಾದರು ಉಪನ್ಯಾಸದಲ್ಲಿ ಈ ಮೇಲಿನ ಮಾತುಗಳನ್ನು ಹೇಳುತ್ತ, ಸಾವಿನ ಭಯದ ಸುಳಿಯಲ್ಲಿ ಸಿಲುಕದಂತೆ ಪಾರಾಗುವ ಉಪಾಯ ನೀಡುವಂಥ ಕಥೆಯೊಂದನ್ನು ಹೇಳಿದರು :

ಬೇಟೆಗಾರನೊಬ್ಬ ತನ್ನ ಬಲೆಯನ್ನು ಹರಡಿ, ಕಾಳುಗಳನ್ನೆಸೆದ. ಹೊಸತಾಗಿ ಹಾರಲು ಕಲಿತ ಕೆಲವು ಹಕ್ಕಿಮರಿಗಳು ಕಾಳಿನ ಆಸೆಗೆ ಅದರತ್ತ ಧಾವಿಸಿದವು, ಕಾಳು ಹೆಕ್ಕಲು ಹೋಗಿ, ಬಲೆಯಲ್ಲಿ ಸಿಕ್ಕಿಬಿದ್ದವು. ಗಾಬರಿಯಿಂದ ಕಿರುಚಾಡಲಾರಂಭಿಸಿದವು.

ಮರಿಗಳ ದುರವಸ್ಥೆ ಕಂಡ ತಾಯಿಹಕ್ಕಿ ಅವುಗಳತ್ತ ಹಾರಿಬಂತು. ಹಿಂದು ಮುಂದು ಯೋಚಿಸದೆ ಮರಿಗಳತ್ತ ಧಾವಿಸಿತು. ಅದೂ ಬಲೆಯಲ್ಲಿ ಸಿಕ್ಕಿಬಿತ್ತು.

ಅಲ್ಲೇ ಮರದ ಮೇಲೆ ಕುಳಿತಿದ್ದ ತಂದೆ ಹಕ್ಕಿ ಇದನ್ನು ನೋಡಿತು. ಬಲೆಯಲ್ಲಿ ಸಿಕ್ಕಿ ಬಿದ್ದ ಹಕ್ಕಿಗಳು ಕಲ್ಲು ಕರಗುವಂತೆ ರೋದಿಸುತ್ತಿದ್ದವು.

ಆದರೆ ಅಲ್ಲಿಗೆ ಹಾರುವ ಮುನ್ನ ತಂದೆ ಹಕ್ಕಿ ಯೋಚಿಸಿತು. ಈಗ ತಾನು ಅಲ್ಲಿಗೆ ಹೋದರೂ ಅವರನ್ನು ಆ ಬಲೆಯಿಂದ ಬಿಡಿಸುವುದು ಸಾಧ್ಯವಾಗದ ಮಾತು. ಅಷ್ಟೇ ಅಲ್ಲ, ಅವರೊಂದಿಗೆ ತಾನೂ ಸಿಕ್ಕಿಬೀಳುವುದು ಖಚಿತ.

ಹೀಗೆ ಚಿಂತಿಸಿದ ಅದು, ಅಲ್ಲಿ ನಿಲ್ಲದೆ, ತನ್ನ ಪಾಡಿಗೆ ತಾನು ಹಾರಿಹೋಯಿತು. ಎಲ್ಲ ಸಂಗವನ್ನು ತೊರೆದು ಮುಕ್ತವಾಯಿತು.

ಪ್ರಭುಪಾದರ ಮಾತಿನ ಆಶಯ ಇದು – ನೀನು ನಿನ್ನ ಸಂಸಾರಕ್ಕೆ ಸಮಾಜಕ್ಕೆ ರಕ್ಷಣೆ ನೀಡಲು ಸಾಧ್ಯವಿಲ್ಲ. ಏನು ಆಗಬೇಕೋ ಆಗಿಯೇ ತೀರುವುದು. ಮೋಹದಿಂದ ಕಳಚಿಕೊಳ್ಳುವುದೇ ನಿಜವಾದ ಜಾಣತನ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi