ಇಂದ್ರಿಯ ನಿಯಂತ್ರಣ

ಗೃಹಾಣೈತಾನಿ ನಾಮಾನಿ ಸ್ಥಾನಾನಿ ಚ ಸಯೋಷಣಃ
ಏಭಿಃ ಸೃಜ ಪ್ರಜಾ ಬಹ್ವೀಃ ಪ್ರಜಾನಾಮಸಿ ಯತ್ಪತಿಃ ।।

ನನ್ನ ಪ್ರಿಯ ಬಾಲಕನೇ, ಈಗ ನೀನು ನಿನಗಾಗಿ ಮತ್ತು ನಿನ್ನ ವಿವಿಧ ಪತ್ನಿಯರಿಗಾಗಿ ಗೊತ್ತುಪಡಿಸಿದ ಹೆಸರುಗಳನ್ನು ಮತ್ತು ಸ್ಥಾನಗಳನ್ನು ಸ್ವೀಕರಿಸು. ನೀನು ಈಗ ಜೀವಿಗಳ ಒಡೆಯರಲ್ಲಿ ಒಬ್ಬನಾಗಿರುವೆ. ಆದುದರಿಂದ ಬಹಳ ಪ್ರಮಾಣದಲ್ಲಿ ಪ್ರಜಾಸಂಖ್ಯೆಯನ್ನು ಹೆಚ್ಚಿಸಬಹುದು.

 (ಶ್ರೀಮದ್‌ ಭಾಗವತ 3.12.14)

ನಾಲ್ವರು ಕುಮಾರರಿಂದ ಬ್ರಹ್ಮನ ಅಪೇಕ್ಷೆ ಸಾಕಾರಗೊಳ್ಳಲಿಲ್ಲ. ಆದುದರಿಂದ ಅವನು ಈಗ ಸಂತತಿ ಸೃಷ್ಟಿಸಲು ರುದ್ರನಿಗೆ ಹೇಳುತ್ತಿದ್ದಾನೆ. ಹೀಗಾಗಿ ಇದು ಸೃಷ್ಟಿಯ ಆರಂಭ. ಇದೆಲ್ಲಾ ಸಾಮಾನ್ಯ ಮಾರ್ಗದಲ್ಲಿ ನಡೆಯಲಿಲ್ಲ. ಅಂದರೆ ರುದ್ರನು ಬ್ರಹ್ಮನ ಎರಡು ಹುಬ್ಬುಗಳ ಮಧ್ಯದಿಂದ ಹುಟ್ಟಿದವನು, ಅದು ಸಾಮಾನ್ಯ ರೀತಿಯ ಸಂತಾನೋತ್ಪತ್ತಿಯಾಗಿರಲಿಲ್ಲ. ಲೌಕಿಕ ಶಕ್ತಿಯು ಅನೇಕ ನಿಗೂಢ ರೀತಿಯಲ್ಲಿ ಕಾರ್ಯಭಾರ ನಡೆಸಬಹುದು. ನಮಗೆ ಅದು ಗೊತ್ತಿಲ್ಲ. ಭಗವಂತನ ಸೃಷ್ಟಿ ಮತ್ತು ಶಕ್ತಿಗಳನ್ನು ಗ್ರಹಿಸಲಾಗದು. ನಾವು ಪುಟ್ಟ ಜೀವಿಗಳು.

ಮನುಷ್ಯನು ಏನೇ ಪ್ರಯತ್ನ ಮಾಡಿದರೂ ಕೂಡ ಅವನಿಗೆ ಈ ಐಹಿಕ ಲೋಕವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದನ್ನು ಅವರೋಹಣ ವಿಧಾನದಲ್ಲಿ ಸ್ವೀಕರಿಸಬೇಕು. ನಾಗರಿಕತೆಯ ಅನಂತರ ನಾಗರಿಕತೆಗಳು ಈ ಭೂಮಿಯ ಮೇಲೆ ಪ್ರಕಟಗೊಂಡಿವೆ. ಅವುಗಳಲ್ಲಿ ಪ್ರತಿಯೊಂದೂ ಅಂತ್ಯ ಕಂಡಿದೆ. ಸೃಷ್ಟಿಕರ್ತನ ಪ್ರಕಾರ ಮಾನವ ಜೀವಿಯ ಕೆಲಸವು ಲೌಕಿಕ ದೇಹದೊಂದಿಗೆ ಅವನ ಸಂಬಂಧ ಮತ್ತು ಅವನ ಮೇಲೆ ಪ್ರಭಾವ ಬೀರುವ ಲೌಕಿಕ ಪ್ರಕೃತಿಯ ಮೂರು ಗುಣಗಳ ಬಗೆಗೆ ಅರಿವುಹೊಂದುವುದಾಗಿದೆ. ಆದುದರಿಂದ ನಾವು ದೇಹ, ಇಂದ್ರಿಯಗಳು ಮುಂತಾದುವುಗಳ ಬಗೆಗೆ ದೇವೋತ್ತಮ ಮತ್ತು ಆಚಾರ್ಯರು ನೀಡಿರುವ ಅವರೋಹಣ ವಿಧಾನದಲ್ಲಿ ಜ್ಞಾನವನ್ನು ಪಡೆಯುತ್ತೇವೆ. ಈ ದೇಹವು ಬೇರೆ ಶಕ್ತಿಯಿಂದ ಮಾಡಲ್ಪಟ್ಟಿದೆ ಮತ್ತು ನೀನು ಭಿನ್ನ ಎಂದು ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂತಿಮವಾಗಿ ವ್ಯಕ್ತಿಯು ಸ್ವತಂತ್ರವಾಗಿ ಆನಂದಿಸುವ ತನ್ನ ಮನೋಭಾವವನ್ನು ಶುದ್ಧೀಕರಿಸಿಕೊಳ್ಳಬೇಕು. ಮತ್ತು ಭಗವದ್ಧಾಮಕ್ಕೆ ವಾಪಸಾಗಬೇಕು.

ಜ್ಞಾನವಿಲ್ಲದೆ ಭಕ್ತಿಯ ಅನುಷ್ಠಾನ ಸಾಧ್ಯವಿಲ್ಲ, ಅದಕ್ಕೆ ಅಲೌಕಿಕ ಜ್ಞಾನ ಅತ್ಯಗತ್ಯ. ನೀವು ಹೆಚ್ಚು ಓದಿದ್ದರೂ, ನಿಮಗೆ ಅದರಿಂದ ಜ್ಞಾನ ಸಿಗದಿರಬಹುದು. ನೀವು ಪ್ರಭುಪಾದರ ಭಾವಾರ್ಥಗಳನ್ನು ಓದಿದರೆ ನಿಮಗೆ ಜ್ಞಾನ ಲಭ್ಯವಾಗುತ್ತದೆ. ಕೃಷ್ಣ ಪ್ರಜ್ಞೆ ಕುರಿತ ಮಾಹಿತಿಗೆ ವಸ್ತು ಮತ್ತು ಆತ್ಮವನ್ನು ಪ್ರತ್ಯೇಕಿಸುವ ಶಕ್ತಿ ಇಲ್ಲ. ಕೃಷ್ಣನು ಹೇಳುತ್ತಾನೆ, “ಭಕ್ತಿ ಸೇವೆಯಲ್ಲಿ ತೊಡಗಲು ಪ್ರಯತ್ನಿಸುತ್ತಿರುವ ಪ್ರಾಮಾಣಿಕ ಆತ್ಮಗಳ ಬಗೆಗೆ ಕರುಣೆಯಿಂದ ನಾನು ಆ ಅಲೌಕಿಕ ಜ್ಞಾನವನ್ನು ಪ್ರಕಾಶಗೊಳಿಸುತ್ತೇನೆ ಮತ್ತು ಆಗ ಮಾತ್ರ ವ್ಯಕ್ತಿಯು ಈ ಲೌಕಿಕ ಬಂಧನದಿಂದ ಮುಕ್ತರಾಗುವುದು ಸಾಧ್ಯ.”

ಸ್ವಯಂ ನಿಯಂತ್ರಣ

ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ನಮಗೆ ಸತತವಾಗಿ ಬೋಧನೆಯಾಗುತ್ತಿರುವುದು, ನಿಜ. ಆದರೆ ಹೆಚ್ಚು ಮುಖ್ಯವಾದುದು ಸ್ವಯಂ ನಿಯಂತ್ರಣ. ವ್ಯಕ್ತಿಗೆ ತನ್ನ ಗಮನಶಕ್ತಿಯನ್ನು ಕೃಷ್ಣನಿಗೆ ಅಥವಾ ಮಾಯಾಗೆ ನೀಡುವ ಸ್ವತಂತ್ರವಿದೆ. ಇಗ್ನೀಷನ್‌ ಸ್ವಿಚ್‌ ಇಡೀ ಕಾರನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುವಂತೆ. ಗಮನ ಹರಿಸುವ ಹಂತದಲ್ಲಿಯೇ ನಿಮಗೆ ಮುಕ್ತ ಮನವಿದ್ದರೆ ಸ್ವಯಂ ನಿಯಂತ್ರಣ ತುಂಬ ಸುಲಭ. ಸ್ವಿಚ್‌ ಹಾಕಿದ ಕೂಡಲೇ ಎಂಜಿನ್‌ ಓಡಲಾರಂಭಿಸುತ್ತದೆ ಮತ್ತು ನೀವು ವಾಹನದಲ್ಲಿ ಕುಳಿತಿದ್ದರೆ ನೀವು ಅದರ ಪರಿಣಾಮಗಳನ್ನು ಎದುರಿಸಬೇಕು. ವಾಹನ ಓಡುತ್ತದೆ ಮತ್ತು ನೀವೂ ಚಲಿಸಬೇಕು. ನಾವು ಈ ದೇಹದಲ್ಲಿ ಕುಳಿತಿದ್ದೇವೆ ಮತ್ತು ಮೂರು ಗುಣಗಳು ಚಾಲನೆಯಲ್ಲಿದ್ದರೆ ನಾವು ಆ ಗುಣಗಳಂತೆ ಚಲಿಸುತ್ತೇವೆ. ಮೂರು ಗುಣಗಳಂತೆ ಈ ದೇಹವು ಜೀವವನ್ನು ಒಯ್ಯುತ್ತದೆ.

ಕೃಷ್ಣ ಪ್ರಜ್ಞೆಯಲ್ಲಿ ಕೆಲವು ವರ್ಷಗಳು ತೊಡಗಿಕೊಂಡ ಮೇಲೆ ಮಾಯಾ ಮತ್ತು ಕೃಷ್ಣನ ಬಗೆಗೆ ಕಂಡುಕೊಳ್ಳುವುದು ಕಷ್ಟವಿಲ್ಲ. ಹಾಗಾದರೆ ಏನು? ನಿಮ್ಮ ಮುಕ್ತ ಮನಸ್ಸು, ಮಾಯಾಗೆ ಅಲ್ಲ ಕೃಷ್ಣನಿಗೆ ಗಮನ ಕೊಡಿ. ಮನ್‌ ಮನ ಭವ ಮದ್‌ ಭಕ್ತೋ ಮದ್‌ ಯಾಜಿ ಮಾಂ ನಮಸ್ಕುರು – ಮನಸ್ಸನ್ನು ಸದಾ ಕೃಷ್ಣನಲ್ಲಿ ನೆಡಬೇಕು. ಭಕ್ತಿಯು ಗುರು ಹೇಳಿದ್ದನ್ನು ಶಿಷ್ಯನು ಅನುಸರಿಸುವ ವಿಧಾನವಾಗಿದೆ. ಅವನು ಸುಮ್ಮನೆ ಅನುಸರಿಸುತ್ತಾನೆ, ಅನಂತರ ಇಂದ್ರಿಯ ನಿಯಂತ್ರಣ ತುಂಬ ಸುಲಭ. ನೀವು ಕೊಳವೆ ಒಳಗೆ ನೀರು ಹರಿಸಿದಾಗ ಕೊಳವೆಯು ಎಲ್ಲಿಗೆ ಹೋಗುತ್ತಿದೆಯೋ ಅದರಂತೆ ನೀರು ಹರಿಯುತ್ತದೆ. ಅದೇ ರೀತಿ ನೀವು ಮಾಯಾಗೆ ಗಮನ ನೀಡಿದ ಕೂಡಲೇ ನಿಮ್ಮ ಮೆದುಳಿನಲ್ಲಿ ವಿದ್ಯುತ್‌ ಜಾಲ ಉಂಟಾಗುತ್ತದೆ, ನಿಮ್ಮ ಗಮನ ಅದೆಲ್ಲದರ ಮೂಲಕ ಸಾಗುತ್ತದೆ, ಅನಂತರ ಕಾಮ, ಮನೋ ವೇಗ, ಇಂದ್ರಿಯ ವೇಗದ ಶಕ್ತಿಗಳು ಪ್ರಕಟಗೊಳ್ಳತೊಡಗುತ್ತವೆ / ರೂಪುಗೊಳ್ಳುತ್ತವೆ. ಭಕ್ತಿ ಪ್ರಕ್ರಿಯೆಯಲ್ಲಿ ನಿರಂತರವಾಗಿ ಕೃಷ್ಣನತ್ತ ಗಮನ ಹರಿಸಿ. ಇದೇ ರಹಸ್ಯ.

ನಾಲ್ವರು ಕುಮಾರರು ಹೇಗೆ ವೈವಾಹಿಕ ಜೀವನವನ್ನು ನಿರಾಕರಿಸಿದರೆಂಬುದರ ಬಗೆಗೆ ನಾವು ಮಾತನಾಡುತ್ತಿದ್ದೆವು. ಬಂಧನಕ್ಕೆ ಒಳಪಡಲು ನಾವು ಇಷ್ಟಪಡುವುದಿಲ್ಲ. ಆದುದರಿಂದ ಆ ನಾಲ್ವರು ಕುಮಾರರ ತತ್ತ್ವವನ್ನು ಅನುಸರಿಸಿ ನಾವು ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮದ್ಯವಿಲ್ಲ, ಅನೈತಿಕ ಲೈಂಗಿಕ ಕ್ರಿಯೆ ಇಲ್ಲ ಮತ್ತು ಜೂಜು ಇಲ್ಲ. ಲೈಂಗಿಕ ಆಕರ್ಷಣೆಯನ್ನು ನಿಯಂತ್ರಿಸಿಕೊಳ್ಳುವುದೇ ಕಷ್ಟ. ನೀವು ಪುರುಷರಾಗಿದ್ದರೆ, ಕೆಲವು “ಸ್ವಚ್ಛಂದ ಪ್ರವೃತ್ತಿ ನಿಮ್ಮಲ್ಲಿ ರೂಪಿಸಲ್ಪಟ್ಟಿರುತ್ತದೆ. ಮತ್ತು ಅವುಗಳೆಲ್ಲವೂ ಹವ್ಯಾಸವಾಗುವಂತೆ ಮಾಡಲಾಗುತ್ತದೆ. ಇದಕ್ಕೆ ಮೂಲದಲ್ಲಿಯೇ ತಡೆ ಹಾಕಬೇಕು.” ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ ಏಕೆ? ಏನಾದರೂ ಲಾಭವಿದ್ದರೇನೇ ಜನರು ತಮ್ಮ ಹವ್ಯಾಸವನ್ನು ಮುಂದುವರಿಸುತ್ತಾರೆ. ನಿಮ್ಮ ಮುಂದೆ ಮಹಿಳೆಯೊಬ್ಬರು ಹೋಗುವುದನ್ನು ನೀವು ಗಮನಿಸುವಿರಿ. ನೋಡುವುದು ಭಿನ್ನವಾದುದು. ಅದು ತೃಪ್ತಿ ನೀಡುವಂತಹುದು. ಆದರೆ ಅಲ್ಲಿಂದಲೇ ಎಲ್ಲವೂ ಆರಂಭವಾಗುವುದು. ಅನಂತರ ಸಂಯಮ ಕಷ್ಟ. ನಮಗೆ ಇದಕ್ಕೆಲ್ಲ ಸಮಯವಿಲ್ಲ. ಗುರು ಮತ್ತು ಕೃಷ್ಣನಿಗೆ ಶಾಂತಿಯಿಂದ ಸೇವೆ ಮಾಡಬೇಕೆಂಬ ಅಪೇಕ್ಷೆ ನನಗಿದ್ದಾಗ ನಾನು ಏಕೆ ನನ್ನ ಸಮಯವನ್ನು ಹಾಳು ಮಾಡಲಿ? ಅದಕ್ಕೆ ಬದಲಾಗಿ ಭಗವಂತನ ಸೇವೆಯಲ್ಲಿ ಕೆಲವು ಮಾರ್ಗದರ್ಶನಗಳಿವೆ. ಎಲ್ಲ ಮಹಿಳೆಯರಿಂದಲೂ ಓಡಿಹೋಗಬೇಕಾಗಿಲ್ಲ. ತಾಯಿಯಂತೆ ನೋಡಿದರೆ, ಅದು ವಾತ್ಸಲ್ಯ ರಸ. ತಾಯಿಯನ್ನು ದೈಹಿಕ ತೃಪ್ತಿಯ ಭಾವನೆಯಿಂದ, ಮಾಧುರ್ಯ ರಸದಿಂದ, ಎಂದೂ ನೋಡುವುದಿಲ್ಲ.

ತಾಯಿಯಂತೆ ನೋಡಿ

ಈ ವ್ಯಕ್ತಿ ನಿಮ್ಮ ತಾಯಿಯಲ್ಲವೆಂದು ನಿಮಗೆ ಗೊತ್ತು. ಆದರೆ ಅವಳನ್ನು ತಾಯಿಯಂತೆ ನೋಡೆಂದು ಶಾಸ್ತ್ರಗಳು ಹೇಳುತ್ತವೆ. ಪ್ರತಿಯೊಬ್ಬರನ್ನೂ ತಾಯಿಯಂತೆ ನೋಡುವುದು ಸತ್ಯವಲ್ಲ, ಅದೊಂದು ತಂತ್ರ. ನಿಮಗೆ ಸತ್ಯ ಬೇಕಾದರೆ, ನೀವು ಪ್ರತಿಯೊಬ್ಬರನ್ನೂ ಆಧ್ಯಾತ್ಮಿಕ ಆತ್ಮವಾಗಿ ನೋಡಬೇಕು. ನೀವು ಒಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕ ಆತ್ಮವಾಗಿ ನೋಡಿದಾಗ ಅಲ್ಲಿ ವಯಸ್ಸು, ಲಿಂಗವನ್ನು ಗಮನಿಸುವುದಿಲ್ಲ. ಸ್ತ್ರೀ ಪುರುಷ ಎಂದರೆ ನೀವು ದೇಹವನ್ನು ನೋಡುತ್ತಿರುವಿರಿ. ಆಧ್ಯಾತ್ಮಿಕ ಆತ್ಮವಾಗಿ ನೋಡಬೇಕು. ಅದೇ ಸತ್ಯ. ಇಂದ್ರಿಯ ತೃಪ್ತಿ, ಅಕ್ರಮ ಲೈಂಗಿಕ ಕ್ರಿಯೆ ಇಲ್ಲದೆ ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ತಂತ್ರವಿದೆ. ಜಪ ಮಾಡದಿದ್ದರೆ ಇದು ತುಂಬ ನಿಧಾನವಾಗುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ಇವುಗಳೆಲ್ಲ ದೊಡ್ಡ ಅಡ್ಡಿಗಳು. ಆದುದರಿಂದ ನಾವು ಅವರೋಹಣ ವಿಧಾನದಲ್ಲಿ ಜ್ಞಾನವನ್ನು ಪಡೆಯಬೇಕು. ನಮ್ಮ ಇಂದ್ರಿಯಗಳ ಬಗೆಗೆ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ. ದೇಹವನ್ನು ಮನಸ್ಸಿನಿಂದ, ಮನಸ್ಸನ್ನು ಬುದ್ಧಿಯಿಂದ, ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿಡುವ ಬಗೆಗೆ ಕೃಷ್ಣನು ಹೇಳಿದ್ದಾನೆ.

ಗುರುವನ್ನು ಅನುಸರಿಸಿ

ಅವೆಲ್ಲವನ್ನೂ ಅನುಸರಿಸುವುದರಿಂದ ಸಂಪೂರ್ಣ ರಕ್ಷಣೆ ದೊರೆಯುತ್ತದೆ. ಆಧ್ಯಾತ್ಮಿಕ ಜೀವನವು ಬರೀ ವಿಚಾರ ಮಂಥನವಲ್ಲ. ಅಂದರೆ, ಗುರು ಹೇಳಿದ್ದನ್ನು ನೀವು ಅನುಸರಿಸುತ್ತಿಲ್ಲ ಎಂದು. ನೀವು ಬೋಧನೆ 1ನ್ನು ಅನುಸರಿಸದೆ ಬೋಧನೆ 2ನ್ನು ಅನುಸರಿಸಲು ಆರಂಭಿಸಿದರೆ ಬೋಧನೆ 2 ಹೋರಾಟವಾಗುತ್ತದೆ. ದಯೆಯಿಟ್ಟು ತತ್‌ಕ್ಷಣ ಹಿಂದಿರುಗಿ. ನಿಮ್ಮ ಇಂದ್ರಿಯಗಳನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸಿ. ಆಗ ಇಂದ್ರಿಯಗಳ ನಿಯಂತ್ರಣದ ಅಗತ್ಯವೇ ಇರುವುದಿಲ್ಲ. ಕೃಷ್ಣನ ಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಾಗ ನೀವು ಇಂದ್ರಿಯಗಳ ಮಾಲೀಕರಾಗುವಿರಿ. ಅದು ಗೋಸ್ವಾಮಿಯ
ಅರ್ಥ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi