(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಈ ಉದ್ದೇಶಕ್ಕಾಗಿ, (ಪ್ರವೃತ್ತಿ ಮಾರ್ಗ) ಮಾನವ ಜೀವನವನ್ನು ಬಳಸಿದರೆ ಅದು ಸುಡಲು ಗಂಧದ ಮರವನ್ನು ಬಳಸಿದಂತೆ. ಕಾಡಿನಲ್ಲಿ ಅನೇಕ ರೀತಿಯ ಮರಗಳಿವೆ. ಅವುಗಳಿಂದ ಸೌದೆ ಮಾಡಿಕೊಳ್ಳಬಹುದು. ಆದರೆ ಅಮೂಲ್ಯವಾದ, ಅದರ ಬೆಲೆಯನ್ನರಿಯದೆ ಅಡುಗೆ ಮಾಡಲು ಅಥವಾ ಸುಡಲು ಗಂಧದ ಮರವನ್ನು ಬಳಸಿದರೆ? ಅದೇ ರೀತಿ ಮಾನವ ಜೀವನವನ್ನು ಬೆಕ್ಕು ಮತ್ತು ನಾಯಿಗಳ ಬದುಕಿನಂತೆ, ಅಂದರೆ ಕೇವಲ ಇಂದ್ರಿಯ ಸುಖಕ್ಕಾಗಿ ಬಳಸಿದರೆ… ಅದು ಆತ್ಮಘಾತಕ.
* * *
ಜನರು ದೈಹಿಕ ಸುಖದಲ್ಲಿಯೇ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ಆದರೆ, ನಾವು ಈ ದೇಹವಲ್ಲ, ನಾವು ಆಧ್ಯಾತ್ಮಿಕ ಆತ್ಮ, ಮತ್ತು ದೈಹಿಕ ಆಸಕ್ತಿಗಿಂತ ನಮಗೆ ಆಧ್ಯಾತ್ಮಿಕ ಆತ್ಮದ ಭಿನ್ನ ಆಸಕ್ತಿ ಇದೆ. ಬೆಕ್ಕು ಮತ್ತು ನಾಯಿಗಳಿಗೂ ದೇಹದ ಆಸಕ್ತಿ ಇದೆ. ಅವೂ ಕೂಡ ಸಾಧ್ಯವಾದಷ್ಟೂ ತಮ್ಮ ದೇಹಗಳ ಕಾಳಜಿ ವಹಿಸುತ್ತವೆ. ಅದೇ ರೀತಿ, ನಾವು ನಮ್ಮ ದೇಹದ ಬಗೆಗಷ್ಟೇ ಕಾಳಜಿ ವಹಿಸಿದರೆ, ಮತ್ತು ನಾನು ಏನು, ನನ್ನ ಅಗತ್ಯಗಳೇನು ಎನ್ನುವುದರತ್ತ ಗಮನ ಕೊಡದಿದ್ದರೆ ಅದು ಆತ್ಮಘಾತಕ. ಅದು ಈ ಲೋಕಾದ್ಯಂತ ನಡೆಯುತ್ತಲೇ ಇದೆ. ಜನರು ದೈಹಿಕ ಸುಖದಲ್ಲಿಯೇ ಆಸಕ್ತಿ ಹೊಂದಿದ್ದಾರೆ. ದೇಹದೊಳಗೆ ಆಧ್ಯಾತ್ಮಿಕ ಆತ್ಮವಿದೆ ಮತ್ತು ತನಗೆ ಭಿನ್ನ ರೀತಿಯ ಧ್ಯೇಯವಿದೆ ಎನ್ನುವುದು ಅವರಿಗೆ ಗೊತ್ತಿಲ್ಲ.
* * *
ನಾವು ಕೃಷ್ಣನ ಬಗೆಗೆ ಯೋಚಿಸಿದರೆ, ಆಗ ಕ್ರಮೇಣ, ಚೇತೋ ದರ್ಪಣ ಮಾರ್ಜನಂ, ನಮ್ಮ ಹೃದಯದ ಕನ್ನಡಿಯು ಸ್ವಚ್ಛಗೊಳ್ಳುತ್ತದೆ. ರಜ ಎಂದರೆ ಧೂಳು ಮತ್ತು ತಮ ಎಂದರೆ ಕತ್ತಲು. ನೀವು ಕನ್ನಡಿಯಲ್ಲಿ ನೋಡಬೇಕೆಂದುಕೊಳ್ಳುತ್ತೀರಿ. ಅದರಲ್ಲಿ ಧೂಳು ತುಂಬಿರುತ್ತದೆ. ನಿಮಗೆ ಕಾಣಿಸುವುದಿಲ್ಲ. ಅದು ಕತ್ತಲು. ಅದು ತಮ. ಆದರೆ ಭಕ್ತಿ ಯೋಗದಲ್ಲಿ ನೀವು ಮನಸ್ಸಿನೊಳಗೆ ಎಲ್ಲವನ್ನೂ ಸ್ಪಷ್ಟವಾಗಿ ನೋಡುವುದು ಸಾಧ್ಯ.
* * *






Leave a Reply