ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಎಲ್ಲೋ ಒಂದು ಕಡೆ ಏನೋ ಸೇವೆಯನ್ನು ಮಾಡಿದರೆ ನಿಮಗೆ ಒಂದಷ್ಟು ಹಣವನ್ನು, ವೇತನವನ್ನು ಕೊಡುತ್ತಾರೆ. ಆದುದರಿಂದ ಕೃಷ್ಣನ ಸೇವೆಯಲ್ಲಿ ತೊಡಗಿದರೆ ನೀವೇನು ಹಸಿವಿನಿಂದ ಇರುವಿರಾ? ಯಾಕೆ? ನೀವು ಹಸಿವಿನಿಂದ ಸಂಕಟ ಪಡಬೇಕಾಗಿಲ್ಲ. ಅವನು ಎಲ್ಲ ಜೀವಿಗಳ ಶುಭಾಕಾಂಕ್ಷಿ. ನಿಮಗೆ ಯಾಕೆ ಅಲ್ಲ? ಈ ವಿಶ್ವಾಸ ಇರಬೇಕು.

* * *

ಅಸೂಯೆ ಎಂದರೆ ಅಯೋಗ್ಯತನ. ಅದು ಲೌಕಿಕ ಗುಣ. ಆಧ್ಯಾತ್ಮಿಕ ಗುಣ ಎಂದರೆ ಒಳ್ಳೆಯ ಗುಣವನ್ನು ಕೊಂಡಾಡುವುದು, “ಓ, ನೀನೆಷ್ಟು ಒಳ್ಳೆಯವನು. ನಿನಗೆಷ್ಟು ಒಳ್ಳೆಯತನವಿದೆ.” ಅದು ಆಧ್ಯಾತ್ಮಿಕ.

* * *

ಈಗಂತೂ ಎಷ್ಟೊಂದು ಸೇವೆಗಳು… ರಾಷ್ಟ್ರೀಯ ಸೇವೆ, ಸಮುದಾಯ ಸೇವೆ, ಈ ಸೇವೆ, ಆ ಸೇವೆ. ಆದರೆ ಯಾರೂ ಕೂಡ ಭಗವಂತನ ಸೇವೆಯನ್ನು ಶಿಫಾರಸು ಮಾಡುತ್ತಿಲ್ಲ. ಇದು ರೋಗದ ಸ್ಥಿತಿ. ಆದುದರಿಂದಲೇ ನಾವು ನೋವು ಅನುಭವಿಸುತ್ತಿರುವುದು. 

* * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi