(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ನಿರಾಕಾರವಾದಿಗಳು ಅಂತ್ಯದಲ್ಲಿ ಪರಮ ಸತ್ಯನನ್ನು ಅರಿಯದ ಅಪಾಯವಿರುವ ತೊಂದರೆಯ ಹಾದಿಯನ್ನು ಹಿಡಿದಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಆಕಾರವಾದಿಗಳು ಯಾವುದೇ ಅಪಾಯ, ತೊಂದರೆ ಅಥವಾ ಕಷ್ಟವಿಲ್ಲದೆ ದೇವೋತ್ತಮ ಪರಮ ಪುರುಷನನ್ನು ತಲಪುತ್ತಾರೆ.
* * *
ವ್ಯಕ್ತಿಯು ಅಂತಿಮವಾಗಿ ದೇವೋತ್ತಮ ಪರಮ ಪುರುಷನಿಗೆ ಶರಣಾಗಬೇಕು (ಈ ಶರಣಾಗತಿ ವಿಧಾನವನ್ನು ಭಕ್ತಿ ಎನ್ನುತ್ತಾರೆ). ಆದರೆ ಅದಕ್ಕೆ ಬದಲಾಗಿ ಬ್ರಹ್ಮನ್ ಎಂದರೆ ಏನು ಮತ್ತು ಬ್ರಹ್ಮನ್ ಎಂದರೆ ಏನಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿರಾಕಾರವಾದಿಯು ತೊಂದರೆ ತೆಗೆದುಕೊಳ್ಳುತ್ತಾನೆ. ಅದೇ ರೀತಿ ಇಡೀ ಜೀವನವನ್ನೇ ಕಳೆಯುತ್ತಾನೆ. ಫಲಿತಾಂಶವು ಕೇವಲ ತೊಂದರೆಯೇ. ಆದುದರಿಂದ ಅಂತಿಮ ಸಾಧನೆಯಲ್ಲಿ ಅನಿಶ್ಚಿತತೆ ಇರುವುದರಿಂದ ಆತ್ಮ ಸಾಕ್ಷಾತ್ಕಾರದ ಈ ತೊಂದರೆಯ ಹಾದಿಯನ್ನು ತುಳಿಯಬಾರದು.
* * *






Leave a Reply