(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಹಣವನ್ನು ಸಂಪಾದಿಸಿದರೆ ನಿಮಗೆ ದೈಹಿಕ ಅಗತ್ಯದ ಸೌಕರ್ಯಗಳು ಲಭಿಸುತ್ತವೆ ಎಂದು ಅರ್ಥವಲ್ಲ. ಸುಖ, ನೆಮ್ಮದಿ ಇಲ್ಲದ ಎಷ್ಟೊಂದು ಶ್ರೀಮಂತರು ಇದ್ದಾರೆ. ಅವರು ನಿದ್ರೆ ಗುಳಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಶಾರೀರಕ ಸೌಕರ್ಯವು ನಿಮ್ಮ ಕರ್ಮಕ್ಕೆ ಅನುಗುಣವಾಗಿ ನಿರ್ಧಾರವಾಗಿರುತ್ತದೆ. ಆದುದರಿಂದ ಶಾರೀರಕ ಸೌಕರ್ಯಗಳ ಸುಧಾರಣೆಗಾಗಿ ನಿಮ್ಮ ಸಮಯವನ್ನು ಹಾಳು ಮಾಡಬೇಡಿ. ಸುಮ್ಮನೆ ಹೆಚ್ಚು ಹೆಚ್ಚು ಕೃಷ್ಣ ಪ್ರಜ್ಞಾವಂತರಾಗಲು ಪ್ರಯತ್ನಿಸಿ. ಕೃಷ್ಣ ಪ್ರಜ್ಞಾವಂತರಾದವರಿಗೆ ಸ್ವಲ್ಪ ದೈಹಿಕ ಸೌಕರ್ಯದ ಅಪೇಕ್ಷೆ ಇತ್ತೆಂದ್ದರೆ, ಅದೂ ಲಭಿಸುತ್ತದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಆದರೆ ಕೃಷ್ಣ ಪ್ರಜ್ಞಾವಂತರಾಗದೆ ಪ್ರಯತ್ನಿಸಿದರೆ ಅದು ಸಾಧ್ಯವಿಲ್ಲ. ನಿಮಗೆ ಸ್ವಲ್ಪ ಲೌಕಿಕ ಸುಧಾರಣೆಯ ಅಪೇಕ್ಷೆ ಇದ್ದರೆ ಕೃಷ್ಣನು ಅದನ್ನು ಈಡೇರಿಸುತ್ತಾನೆ. ಆದರೆ ನೀವು ಕೃಷ್ಣಪ್ರಜ್ಞೆಯಲ್ಲಿ ತೊಡಗಿಕೊಂಡಿರಬೇಕು. ಅದರ ಅರ್ಥ ನೀವು ಎರಡು ರೀತಿ ಪ್ರಯೋಜನ ಪಡೆದುಕೊಳ್ಳುವಿರಿ. ನಿಮಗೆ ಕೃಷ್ಣಪ್ರಜ್ಞೆ ಲಭಿಸುತ್ತದೆ ಮತ್ತು ಲೌಕಿಕ ಲಾಭದ ನಿಮ್ಮ ಅಪೇಕ್ಷೆ ಕೂಡ ಈಡೇರುತ್ತದೆ.
* * *
ನಾನು ಹೇಳುವುದೇನೆಂದರೆ, ಶುದ್ಧ ತುಪ್ಪದಲ್ಲಿ ಮಾಡಿದ ಮಿಠಾಯಿಗಳನ್ನು ಅವನು ಮಾರಾಟ ಮಾಡುವುದರಿಂದ ನೂರಾರು ಗಿರಾಕಿಗಳು ಸದಾ ಕಾಯುತ್ತಿರುವುದನ್ನು ನೀವು ಕಾಣಬಹುದು. ಅಷ್ಟೇನೂ ಗಿರಾಕಿಗಳಿಲ್ಲದ ಡಾಲ್ಡಾ ಅಂಗಡಿಗಳೂ ಇವೆ. ಕೆಲವು ಕೀಳು ಜನರು ಅಲ್ಲಿಗೆ ಹೋಗುತ್ತಾರೆ. ಆದುದರಿಂದ ನೀವು ಶುದ್ಧವಾಗಿರುವುದನ್ನು ಪ್ರಸ್ತುತಪಡಿಸಿದರೆ, ಗಿರಾಕಿಗಳು ಸ್ವಯಂ ಪ್ರೇರಿತರಾಗಿ ಬರುತ್ತಾರೆ. ಅದನ್ನು ಸಾಬೀತು ಪಡಿಸಲಾಗುತ್ತಿದೆ. ನಾವು ಕೃಷ್ಣನನ್ನು ಅವನಿರುವಂತೆ ಪ್ರಸ್ತುತಪಡಿಸುತ್ತಿದ್ದೇವೆ. ಎಲ್ಲೆಡೆ, ಜಗತ್ತಿನಾದ್ಯಂತ ಅವನನ್ನು ಸ್ವೀಕರಿಸಲಾಗುತ್ತಿದೆ. ನೀವು ಕಲಬೆರಕೆ ಮಾಡಿ “ಕೃಷ್ಣ ಎಂದರೆ ಇದು, ಕುರುಕ್ಷೇತ್ರ ಎಂದರೆ ಇದು.” ಎಂದರೆ, ಎಲ್ಲ ತತ್‌ಕ್ಷಣ ಹೊರಟುಹೋಗುತ್ತದೆ. ನಾವು ಯಾಕೆ ಕಲಬೆರಕೆ ಮಾಡಬೇಕು?
* * *
ಶ್ವಾ ಯದೀ ಕ್ರಿಯತೇ ರಾಜಾ ಸಃ ಕಿಂ ನ ಸೋ ಉಪಾರ್ಹಣಂ. ನೀವು ಶ್ವಾನವನ್ನು ರಾಜನನ್ನಾಗಿ ಮಾಡಿದರೆ, ಅದು ಪಾದರಕ್ಷೆಯನ್ನು ನೆಕ್ಕುವುದಿಲ್ಲ ಎಂದು ಅರ್ಥವೇ? ಹೌದು, ಶೂಗಳನ್ನು ನೆಕ್ಕುವುದು ನಾಯಿಗಳ ಸ್ವಭಾವ. ಆದುದರಿಂದ ನೀವು ಅದಕ್ಕೆ ರಾಜನ ಉಡುಗೆ ಹಾಕಿ ಸಿಂಹಾಸನದ ಮೇಲೆ ಕೂರಿಸಿದರೂ ಶೂವನ್ನು ನೋಡಿದ ಕೂಡಲೇ ಅದು ಸಿಂಹಾಸನದಿಂದ ಹಾರುತ್ತದೆ ಮತ್ತು ಶೂವನ್ನು ನೆಕ್ಕುತ್ತದೆ. ಇದನ್ನು ಸ್ವಭಾವ ಎನ್ನುತ್ತಾರೆ. ಆದುದರಿಂದ ಲೌಕಿಕ ಪ್ರಕೃತಿಯು ನೀಡಿರುವ ಸ್ವಭಾವವನ್ನು ಪ್ರಾಣಿ ಜೀವನದಲ್ಲಿ ಬದಲಿಸುವುದು ಸಾಧ್ಯವಿಲ್ಲ.
* * *






Leave a Reply