(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಕೃಷ್ಣಪ್ರಜ್ಞೆಯನ್ನು ಸಂಪೂರ್ಣವಾಗಿ ರೂಢಿಸಿಕೊಂಡಿರುವ ಪರಿಪಕ್ವ ಭಕ್ತರನ್ನು ಕೂಡಲೇ ಕೃಷ್ಣನು ಕಾಣಿಸಿಕೊಂಡಿರುವ ಬ್ರಹ್ಮಾಂಡಕ್ಕೆ ಕರೆದೊಯ್ಯಲಾಗುತ್ತದೆ. ಕೃಷ್ಣನೊಂದಿಗೆ ಸ್ವತಃ ಮತ್ತು ನೇರವಾಗಿ ಸಹವಾಸ ಪಡೆಯುವ ಮೊದಲ ಅವಕಾಶವನ್ನು ಭಕ್ತರು ಆ ಬ್ರಹ್ಮಾಂಡದಲ್ಲಿ ಪಡೆಯುತ್ತಾರೆ.
– ಕೃಷ್ಣ, ದೇವೋತ್ತಮ ಪರಮ ಪುರುಷ, ಅಧ್ಯಾಯ 28
ಒಮ್ಮೊಮ್ಮೆ ಪ್ರಾಪಂಚಿಕವಾಗಿ ಬಹು ಶ್ರೀಮಂತನಾದವನು ಪ್ರಭುವಿಗೆ ಭಕ್ತಿಪೂರ್ವಕ ಸೇವೆಯನ್ನು ಸಲ್ಲಿಸಿ ಅದರಿಂದ ಬಡವನಾಗುವುದನ್ನು ಕಾಣಬಹುದು. ಅವನು ಪರಮ ಪ್ರಭುವನ್ನು ಪೂಜಿಸಿದುದರಿಂದ ಬಡತನಕ್ಕೆ ಒಳಗಾದನು ಎಂದು ಭಾವಿಸಬಾರದು. ಇದರ ನಿಜವಾದ ಭಾವಾರ್ಥವೆಂದರೆ ಒಬ್ಬ ಮನುಷ್ಯನು ಪರಿಶುದ್ಧ ಭಕ್ತನಾಗಿದ್ದರೂ ತಪ್ಪು ಲೆಕ್ಕಾಚಾರದಿಂದ ಅವನು ಭೌತಿಕ ಪ್ರಕೃತಿಯ ಮೇಲೆ ತನ್ನ ದರ್ಪವನ್ನು ತೋರಿಸಲು ಬಯಸಿದರೆ, ಆ ಮನುಷ್ಯನು ಕಟ್ಟಕಡೆಗೆ ಪರಮ ಪ್ರಭುವಿಗೆ ಶರಣಾಗತನಾಗುವವರೆಗೆ ಅವನ ಎಲ್ಲ ಭೌತಿಕ ಸಿರಿಯನ್ನು ತೆಗೆದುಕೊಂಡು ಪ್ರಭುವು ತನ್ನ ವಿಶೇಷ ಕರುಣೆಯನ್ನು ತೋರುತ್ತಾನೆ.
– ಕೃಷ್ಣ, ದೇವೋತ್ತಮ ಪರಮ ಪುರುಷ, ಅಧ್ಯಾಯ 27






Leave a Reply