ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ನಮ್ಮ ಬದುಕು, ಈ ಮಾನವ ರೂಪದ ಬದುಕನ್ನು ಶ್ರೇಯಸ್‌ಗಾಗಿ ಉಪಯೋಗಿಸಬೇಕು. ಪುಂಸಾಂ ಏಕಾಂತತಃ ಶ್ರೇಯಸ್‌. ನಾವು ಪ್ರೇಯಸ್‌ನ ಆಕರ್ಷಣೆಗೆ ಒಳಗಾಗಬಾರದು. ಆದರೆ ಆಧುನಿಕ ಶಿಕ್ಷಣವು ಎಷ್ಟು ದುರ್ಬಲವಾಗಿದೆ ಎಂದರೆ ಅದು ಪ್ರೇಯಸ್‌ ಅನ್ನು ಉತ್ತೇಜಿಸುತ್ತದೆ. ಹುಡುಗ ಹುಡುಗಿಯರಿಗೆ ಅಂಕೆಯೇ ಇಲ್ಲ, ಬದಲಿಗೆ ಅಪ್ರಾಪ್ತ ಲೈಂಗಿಕ ಬದುಕಿನ ವಿಷಯದಲ್ಲಿ ಉತ್ತೇಜಿಸಲಾಗುತ್ತಿದೆ. ಅಪ್ರಾಪ್ತ ಲೈಂಗಿಕ ಬದುಕು ಮಿದುಳನ್ನು ಹಾಳು ಮಾಡುತ್ತದೆ, ಶಕ್ತಿಯನ್ನು ಕುಂದಿಸುತ್ತದೆ ಎಂದು ಅವರಿಗೆ ಗೊತ್ತಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಬ್ರಹ್ಮಚಾರಿ ಪದ್ಧತಿ ತುಂಬ ಒಳ್ಳೆಯದು.  ಲೈಂಗಿಕ ಬದುಕು ಇಲ್ಲದೆ ಬ್ರಹ್ಮಚರ್ಯವನ್ನು ಪಾಲಿಸಿದರೆ ಅವನ ಮಿದುಳು ಬಲಗೊಳ್ಳುತ್ತದೆ. ಅವನ ನೆನಪಿನ ಶಕ್ತಿ ತೀಕ್ಷ್ಣವಾಗುತ್ತದೆ, ದೈಹಿಕ ಶಕ್ತಿಯು ಗಟ್ಟಿಯಾಗುತ್ತದೆ. ಈ ರೀತಿಯಲ್ಲಿ ಭವಿಷ್ಯದ ಶ್ರೇಯಸ್‌ಗಾಗಿ ಅವನ ಜೀವನವು ಶಕ್ತಿಯುತವಾಗುತ್ತದೆ. ಆದರೆ ಪ್ರಸ್ತುತದಲ್ಲಿ ಅದನ್ನು ಬೋಧಿಸುತ್ತಿಲ್ಲ.

* * *

ಈ ಬುದ್ಧಿವಂತಿಕೆಯು ಕೆಳ ಮಟ್ಟದ ಪ್ರಾಣಿಗಳಲ್ಲಿಯೂ, ಒಂದು ಇರುವೆಯಲ್ಲಿಯೂ ಇದೆ. ಈ ದೇಹಕ್ಕೆ ಹೇಗೆ ಸುಖ – ಸೌಕರ್ಯ ಕೊಡುವುದು – ಇದು ನಾಗರಿಕತೆಯ ಮುನ್ನಡೆಯಲ್ಲ. ಅಂತಹ ನಾಗರಿಕತೆಯು ಬೆಕ್ಕು ಮತ್ತು ನಾಯಿಗಳಲ್ಲಿಯೂ ಇದೆ. ಅವುಗಳಿಗೆ ಗೊತ್ತು. ಹೇಗೆ ತಿನ್ನಬೇಕು, ಹೇಗೆ ಮಲಗಬೇಕು, ಹೇಗೆ ಲೈಂಗಿಕ  ಜೀವನ ನಡೆಸಬೇಕು, ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ಕಲಿಯಲು ಯಾರೂ ಕೂಡ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿಲ್ಲ. ಅದಕ್ಕೆ ಶಿಕ್ಷಣದ ಅಗತ್ಯವಿಲ್ಲ. ಅದು ಈಗಾಗಲೇ ಇದೆ, ಪ್ರತಿಯೊಬ್ಬರಲ್ಲಿಯೂ. ನೀವು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ತತ್‌ಕ್ಷಣ ನನ್ನ ಕೈಗಳಿಂದ ರಕ್ಷಿಸಿಕೊಳ್ಳುವೆ. ಸ್ವಾಭಾವಿಕ. ಆದುದರಿಂದ ಪ್ರಾಣಿ ಪ್ರವೃತ್ತಿಯನ್ನು ತೃಪ್ತಿಪಡಿಸಲು ಬದುಕಿನ ಈ ಮಾನವ ಸ್ವರೂಪವನ್ನು ಹಾಳುಮಾಡಬೇಡಿ ಎಂದು ಅರ್ಥ. ಆಧ್ಯಾತ್ಮಿಕ ಪ್ರಜ್ಞೆಯಲ್ಲಿ, ಜ್ಞಾನದಲ್ಲಿ ಮುನ್ನಡೆಯಲು ಪ್ರಯತ್ನಿಸಿ.

* * *

ಮಗುವು ತನ್ನ ತಂದೆ, ಪೋಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದರೆ, ಪೋಷಕರಿಗೆ, “ಈ ಸಮಯದಲ್ಲಿ ನನ್ನ ಮಗುವಿಗೆ ಇದರ ಅಗತ್ಯವಿದೆ” ಎಂಬ ಅರಿವು ಇರುತ್ತದೆ. ಪೋಷಕರಿಂದ ಕೇಳಲು ಮಗುವಿಗೆ ಗೊತ್ತಿಲ್ಲ. ಅದೇ ರೀತಿ ಕೃಷ್ಣನು ಎಲ್ಲರಿಗೂ ಎಲ್ಲವನ್ನೂ ಪೂರೈಸುತ್ತಿದ್ದಾನೆ. ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್‌ (ಕಠ ಉಪನಿಷದ್‌ 2.2.13) ವಾಸ್ತವವಾಗಿ ಕೃಷ್ಣನು ಎಲ್ಲವನ್ನೂ, ನಿಮ್ಮ ಬಳಿ ಇರುವುದೆಲ್ಲವನ್ನೂ ಒದಗಿಸುತ್ತಿದ್ದಾನೆ. ನೀವು ಉಣ್ಣುತ್ತಿರುವಿರಿ… ನೀವು ಏನೇನು ಸೇವಿಸುವಿರೋ ಅದೆಲ್ಲವನ್ನೂ ಕಾರ್ಖಾನೆಯಲ್ಲಿ ತಯಾರಿಸಲಾಗುವುದಿಲ್ಲ. ಅದನ್ನು ಕೃಷ್ಣನು ಒದಗಿಸುತ್ತಿದ್ದಾನೆ.

* * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi