ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಪ್ರತಿಪದ  ದಿನದಂದು  ಒಂದು  ಗೆರೆಯಂತಿರುವ  ಚಂದ್ರನನ್ನು  ನೀವು ನೋಡುವಿರಿ. ಆದರೆ ಅದು ಕ್ರಮೇಣ ಬೆಳೆಯುತ್ತ ಹೋಗುತ್ತದೆ ಮತ್ತು ಸುಂದರವಾದ ಪೂರ್ಣ ಚಂದ್ರನಾಗುತ್ತದೆ. ಅದೇ ರೀತಿ ನೀವು ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ, ನಿಮ್ಮ ಸ್ವರೂಪ ಸ್ಥಿತಿಯ ಒಂದು ಗೆರೆ ಕಾಣುತ್ತದೆ. ಆದರೆ ನೀವು ಮುಂದುವರಿಸಿದಂತೆ ಒಂದು ದಿನ ನೀವು ಪ್ರಜ್ವಲಿಸುವ ಪೂರ್ಣಚಂದ್ರನಂತೆ ನಿಮ್ಮ ಪೂರ್ಣ ಗುರುತನ್ನು ಕಾಣುವಿರಿ. ನೀವು ನಿಮ್ಮ ಬದುಕನ್ನು ಅತ್ಯದ್ಭುತವಾಗಿ, ಆನಂದವಾಗಿ ಮತ್ತು ಆಶಾಪೂರ್ಣವಾಗಿ ಆಸ್ವಾದಿಸುವಿರಿ.

* * * *

ಭಾರತದಲ್ಲಿ ಜನಿಸಿದವರು ತಮ್ಮ ಹಿಂದಿನ ಜನ್ಮದಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಅರ್ಥಮಾಡಿಕೊಳ್ಳಬಹುದು. ಆದುದರಿಂದ ಅವರಿಗೆ ಭಾರತದಲ್ಲಿ ಹುಟ್ಟುವ ಸದವಕಾಶ ನೀಡಲಾಯಿತು. ಭಾರತವು ಎಷ್ಟು ಭಾಗ್ಯಶಾಲಿ. ಆದರೆ ವ್ಯಕ್ತಿಯು ಹುಟ್ಟಿದ ಕೂಡಲೇ ಮೂರ್ಖ ನಾಯಕನು ಅವನನ್ನು ಹಾಳು ಮಾಡುತ್ತಾನೆ. ಮೂರ್ಖ ತಂದೆಯು ಮುದ್ದು ಮಾಡಿ ಹಾಳು ಮಾಡುತ್ತಾನೆ. ಮೂರ್ಖ ಶಿಕ್ಷಕನು ಅವನನ್ನು ಹಾಳುಮಾಡುತ್ತಾನೆ. ಆದುದರಿಂದ, ಪಾಪ! ಯುವಜನರೇನು ಮಾಡುತ್ತಾರೆ? ಅವರಿಗೆ “ಆಧ್ಯಾತ್ಮಿಕ ಸಂಸ್ಕೃತಿ ನಿಷ್ಪ್ರಯೋಜಕ. ನಾವು ಆಧ್ಯಾತ್ಮಿಕವಾಗಿ ಎಷ್ಟು ಮಗ್ನರಾಗಿಬಿಟ್ಟಿದ್ದೇವೆಂದರೆ, ವಿದೇಶಿಯರು ಬಂದು ನಮ್ಮನ್ನು ಆಳಿದರು. ಈಗ ಈ ಎಲ್ಲ ಅವಿವೇಕವನ್ನು ಬಿಟ್ಟುಬಿಡಿ. ತಂತ್ರಜ್ಞರಾಗಿ” ಎಂದು ಬೋಸಲಾಗುತ್ತದೆ.

* * *

ನಮ್ಮ ಲೌಕಿಕ ಕಣ್ಣು ಮತ್ತು ಇಂದ್ರಿಯಗಳಿಂದ ಪರಮ ಚಿನ್ಮಯನಾದ ಭಗವಂತನನ್ನು ನೋಡುವುದು ಸಾಧ್ಯವಿಲ್ಲ ಎನ್ನುವುದು ದೃಢಪಟ್ಟಿದೆ. ಜೀವಿಯ ಭೌತಿಕ ದೇಹದಲ್ಲಿ ಇರುವ ಆಧ್ಯಾತ್ಮಿಕ ಕಿಡಿಯನ್ನೂ ಕೂಡ ಪತ್ತೆ ಮಾಡುವುದು ನಮಗೆ ಸಾಧ್ಯವಿಲ್ಲ. ನಾವು ದೇಹದ ಹೊರಭಾಗದ ಹೊದಿಕೆಯನ್ನಷ್ಟೇ ನೋಡುತ್ತೇವೆ. ಅಥವಾ ಜೀವಿಯ ಸೂಕ್ಷ್ಮ ಮನಸ್ಸನ್ನು ಮಾತ್ರ ಗ್ರಹಿಸುತ್ತೇವೆ. ಆದರೆ ನಮಗೆ ದೇಹದೊಳಗಿರುವ ಆಧ್ಯಾತ್ಮಿಕ ಕಿಡಿಯನ್ನು ನೋಡುವುದು ಸಾಧ್ಯವಿಲ್ಲ. ಆದುದರಿಂದ ಜೀವಿಯ ಸ್ಥೂಲ ದೇಹದ ಅಸ್ತಿತ್ವದಿಂದಲೇ ನಾವು ಅವನ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕಾಗಿದೆ. ಅದೇ ರೀತಿ, ಯಾರಿಗೆ ತಮ್ಮ ಪ್ರಸ್ತುತದ ಲೌಕಿಕ ಕಣ್ಣುಗಳಿಂದ ಅಥವಾ ಲೌಕಿಕ ಇಂದ್ರಿಯಗಳಿಂದ ದೇವರನ್ನು ನೋಡಬೇಕೆಂಬ ಅಪೇಕ್ಷೆ ಇದೆಯೋ ಅವರಿಗೆ ವಿರಾಟ್‌ ರೂಪವೆಂದು ಕರೆಯುವ ಬೃಹತ್‌ ಬಾಹ್ಯ ಲಕ್ಷಣದ ಮೇಲೆ ಧ್ಯಾನಿಸಲು ಸಲಹೆ ಮಾಡಲಾಗುತ್ತದೆ.  ಉದಾಹರಣೆಗೆ, ಒಬ್ಬ ವ್ಯಕ್ತಿಯು ಸುಲಭವಾಗಿ ನೋಡಬಹುದಾದ ತನ್ನ ಕಾರಿನಲ್ಲಿ ಹೋದಾಗ ನಾವು ಕಾರನ್ನೇ ಕಾರಿನೊಳಗಿರುವ ವ್ಯಕ್ತಿಯೊಂದಿಗೆ ಗುರುತಿಸುತ್ತೇವೆ. ರಾಷ್ಟ್ರಪತಿಯು ತಮ್ಮ ನಿರ್ದಿಷ್ಟ ಕಾರಿನಲ್ಲಿ ಹೋದರೆ, ನಾವು “ಅಲ್ಲಿ ನೋಡಿ, ರಾಷ್ಟ್ರಪತಿ” ಎಂದು ಹೇಳುತ್ತೇವೆ. ಸದ್ಯಕ್ಕೆ ನಾವು ಕಾರನ್ನು ರಾಷ್ಟ್ರಪತಿಯೊಂದಿಗೆ ಗುರುತಿಸುತ್ತೇವೆ. ಅದೇ ರೀತಿ, ಅಗತ್ಯ ಅರ್ಹತೆ ಇಲ್ಲದೆ ದೇವರನ್ನು ತತ್‌ಕ್ಷಣ ನೋಡಬೇಕೆಂದು ಬಯಸುವ ಕಡಮೆ ಬುದ್ಧಿವಂತರಿಗೆ ಮೊದಲು ಬೃಹತ್ತಾದ ಭೌತಿಕ ಬ್ರಹ್ಮಾಂಡವನ್ನು ಭಗವಂತನ ರೂಪವೆಂದು ತೋರಿಸಲಾಗುತ್ತದೆ.

* * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi