(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಸಾವಿನ ಅನಂತರ ಕಂಸನು ಮುಕ್ತಿ ಪಡೆದನು ಮತ್ತು ವೈಕುಂಠ ಲೋಕಕ್ಕೆ ಹೋಗಲು ಭಡ್ತಿ ಪಡೆದನು. ಇದರಿಂದ ನಾವು ಏನನ್ನು ಅರ್ಥ ಮಾಡಿಕೊಳ್ಳಬಹುದು? ದೇವೋತ್ತಮ ಪರಮ ಪುರುಷನನ್ನು ಕುರಿತು ಶತ್ರುವಾಗಿ ಯೋಚಿಸುವ ವ್ಯಕ್ತಿಗೂ ಮುಕ್ತಿ ಅಥವಾ ವೈಕುಂಠ ಲೋಕದಲ್ಲಿ ನೆಲೆ ಸಿಗುವುದಾದರೆ ಸದಾ ಶ್ರೀ ಕೃಷ್ಣನ ಚಿಂತನೆಯಲ್ಲಿಯೇ ಮಗ್ನವಾಗಿರುವ ಶುದ್ಧ ಭಕ್ತರ ಬಗೆಗೆ ಹೇಳುವುದೇನು?
* * *
ನೀವು ಒಂದು ಸುಂದರವಾದ ತೋಟವನ್ನು ಪ್ರವೇಶಿಸುತ್ತೀರಿ ಎಂದುಕೊಳ್ಳಿ. ಚಂದವಾದ ಮರ, ಹೂವು, ಕಟ್ಟಡ. ಅಲ್ಲಿದ್ದ ಎಲ್ಲವೂ ಅತಿ ಸುಂದರ. ಆ ಮಾಲೀಕನು ತೋಟವನ್ನು ತೋರಿಸಲು ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಆಗ ನೀವು “ಓ, ಇವೆಲ್ಲ ಮಿಥ್ಯೆ” ಎಂದು ಹೇಳಿಬಿಟ್ಟರೆ ಅವನೆಷ್ಟು ನಿರುತ್ಸಾಹಗೊಳ್ಳುತ್ತಾನೆ ಎಂದು ನೋಡಿ. “ಈ ಸುಂದರ ತೋಟವನ್ನು ತೋರಿಸಲು ನನ್ನ ಗೆಳೆಯನನ್ನು ಕರೆದುಕೊಂಡು ಬಂದೆ. ಆದರೆ ಅವನು ಇದನ್ನು ಮಿಥ್ಯೆ ಎನ್ನುತ್ತಾನೆ.”
ಅದೇ ರೀತಿ ನಮಗೆ ಕೃಷ್ಣನನ್ನು ನಿರುತ್ಸಾಹಗೊಳಿಸುವುದು ಇಷ್ಟವಿಲ್ಲ. (ನಗೆ). ಅದು ನಮ್ಮ ಕೆಲಸವಲ್ಲ. ಕೃಷ್ಣನು ಈ ಸುಂದರ ಲೋಕವನ್ನು ಸೃಷ್ಟಿಸಿದ್ದಾನೆ. ಪ್ರತಿಯೊಂದೂ ಎಷ್ಟು ಚೆನ್ನಾಗಿದೆ. ಸೂರ್ಯನು ಸರಿಯಾದ ಸಮಯಕ್ಕೆ ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ. ಚಂದ್ರನು ಸರಿಯಾದ ಸಮಯಕ್ಕೆ ಉದಯಿಸುತ್ತಾನೆ. ಋತುಗಳು ಬದಲಾಗುತ್ತಿವೆ. ಕೃಷ್ಣನು ಈ ಸುಂದರ ಲೋಕವನ್ನು ಸೃಷ್ಟಿಸಿದ್ದಾನೆ. ಇದನ್ನು ಮಿಥ್ಯೆ ಎಂದು ನಾನು ಹೇಗೆ ಹೇಳಲಿ? ಇದು ಕೃಷ್ಣನ ಶಕ್ತಿಯ ಉಪ ಉತ್ಪನ್ನ.
* * *






Leave a Reply