ಶ್ರೀ ವೇಂಕಟೇಶ ಸುಪ್ರಭಾತ

ಕೌಸಲ್ಯಾಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ  (1)

ಕೌಸಲ್ಯೆಯ ಸತ್ಪುತ್ರನಾದ ಓ ರಾಮನೇ, ಪೂರ್ವದಿಕ್ಕಿನಲ್ಲಿ ಸಂಧ್ಯೆ ಅರಳುತ್ತಿದೆ. ಪುರುಷೋತ್ತಮನೇ, ಎದ್ದೇಳು. ದೈವಿಕವಾದ ನಿತ್ಯಕರ್ಮಗಳನ್ನು ನೆರವೇರಿಸಬೇಕಿದೆ.

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ

ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು (2)

ಗೋವಿಂದನೇ ಎದ್ದೇಳು, ಗರುಡಧ್ವಜನೇ (ಬಾವುಟದಲ್ಲಿ ಗರುಡನನ್ನು ಹೊಂದಿರುವವನು) ಎದ್ದೇಳು, ಕಮಲಾಕಾಂತನೇ (ಲಕ್ಷ್ಮಿಯ ಪತಿಯೇ) ! ಮೂರು ಲೋಕಕ್ಕೂ ಶುಭವನ್ನು ಮಾಡು.

ಮಾತಸ್ಸಮಸ್ತ ಜಗತಾಂ ಮಧುಕೈಟಭಾರೇಃ

ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ

ಶ್ರೀಸ್ವಾಮಿನಿ ಶ್ರಿತಜನಪ್ರಿಯ-ದಾನಶೀಲೇ

ಶ್ರೀ ವೇಂಕಟೇಶ ದಯಿತೇ ತವ ಸುಪ್ರಭಾತಮ್‌ (3)

ಸಮಸ್ತ ಜಗತ್ತಿಗೂ ತಾಯಿಯಾದವಳೇ, ಮಧುಕೈಟಭರಿಗೆ ಶತ್ರುವಾದ ವಿಷ್ಣುವಿನ ಹೃದಯದಲ್ಲಿ ಸದಾ ವಿಹರಿಸುವವಳೇ, ಮನೋಹರವಾದ ದಿವ್ಯ ರೂಪವನ್ನುಳ್ಳವಳೇ, ಆಶ್ರಿತರಿಗೆ ಕೇಳಿದ್ದನ್ನು ಕೊಡುವ ಶೀಲವುಳ್ಳವಳೇ, ಹೇ ಲಕ್ಷ್ಮೀ, ನಿನಗೂ ಸುಪ್ರಭಾತವು.

ತವ ಸುಪ್ರಭಾತಮ್‌ ಅರವಿಂದಲೋಚನೇ

ಭವತು ಪ್ರಸನ್ನ ಮುಖಚಂದ್ರ ಮಂಡಲೇ

ವಿ ಶಂಕರೇಂದ್ರ ವನಿತಾಭಿರರ್ಚಿತೇ

ವೃಷಶೈಲನಾಥ ದಯಿತೇ ದಯಾನಿಧೇ (4)

ತಾವರೆದಳದಂಥ ಕಣ್ಣುಳ್ಳವಳೆ, ಚಂದ್ರಮಂಡಲದಂತೆ ಶೋಭಿಸುವ ಮುಖವುಳ್ಳವಳೆ, ಬ್ರಹ್ಮ, ಶಿವ, ಇಂದ್ರರ ಪತ್ನಿಯರಿಂದ (ವಾಣಿ, ಗಿರಿಜ, ಪುಲೋಮಜಾ) ಪೂಜಿಸಲ್ಪಡುವವಳೇ, ವೃಷಶೈಲದ ಒಡೆಯನಾದ ವಿಷ್ಣುವಿನ ಪ್ರಿಯಳೇ,
ದಯಾನಿಯೇ ನಿನಗೆ ಸುಪ್ರಭಾತವು.

ಅತ್ರ್ಯಾದಿ ಸಪ್ತಋಷಯಸ್ಸಮುಪಾಸ್ಯ ಸಂಧ್ಯಾಂ

ಆಕಾಶಸಿಂಧು-ಕಮಲಾನಿ ಮನೋಹರಾಣಿ

ಆದಾಯ ಪಾದಯುಗಮ್‌-ಅರ್ಚಯಿತುಂ ಪ್ರಪನ್ನಾಃ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (5)

ಅತ್ರಿ ಮುಂತಾದ ಏಳು ಋಷಿಗಳು ಅರುಣೋದಯವನ್ನು ಪೂಜಿಸಿ (ಬೆಳಗಿನ ಪ್ರಾರ್ಥನೆಯಾದ ಸಂಧ್ಯಾವಂದನೆಯನ್ನು ಮಾಡಿ) ನಿನ್ನ ಪಾದಗಳನ್ನು ಪೂಜಿಸಲು ದೇವಗಂಗೆಯಿಂದ ಸುಂದರವಾದ ಕಮಲಗಳನ್ನು ತಂದಿದ್ದಾರೆ. ಶೇಷಾಚಲದ ಒಡೆಯನೇ, ನಿನಗೆ ಸುಪ್ರಭಾತವು.

ಪಂಚಾನನಾಬ್ಜ ಭವ–ಷಣ್ಮುಖ–ವಾಸವಾದ್ಯಾಃ

ತ್ರೈವಿಕ್ರಮಾದಿ–ಚರಿತಮ್‌ ವಿಬುಧಾಃ ಸ್ತುವಂತಿ

ಭಾಷಾಪತಿಃ ಪಠತಿ ವಾಸರಶುದ್ಧಿಮ್‌-ಆರಾತ್‌

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (6)   

ಈಶ್ವರ (ಐದು ಮುಖವುಳ್ಳವನು), ಬ್ರಹ್ಮ (ಕಮಲದಲ್ಲಿ ಹುಟ್ಟಿದವನು), ಸುಬ್ರಹ್ಮಣ್ಯ (ಆರು ಮುಖವುಳ್ಳವನು), ಇಂದ್ರ ಮುಂತಾದವರು ನಿನ್ನ ತ್ರಿವಿಕ್ರಮಾವತಾರದ ಚರಿತ್ರೆಯನ್ನು ಹೊಗಳುತ್ತಿದ್ದಾರೆ. ಬಳಿಯಲ್ಲಿ ಬೃಹಸ್ಪತಿಯು ಇಂದಿನ ಪಂಚಾಂಗವನ್ನು ಓದಿ ಹೇಳುತ್ತಿದ್ದಾನೆ. ಶೇಷಾಚಲ ದೇವನೇ ! ನಿನಗೆ ಸುಪ್ರಭಾತವು.

ಈಶತ್ಪ್ರಲ್ಲ–ಸರಸೀರುಹ-ನಾರಿಕೇಲ

ಪೂಗದ್ರುಮಾದಿ–ಸುಮನೋಹರ-ಪಾಲಿಕಾನಾಮ್‌

ಆವಾತಿ ಮಂದಮ್‌-ಅನಿಲಃ ಸಹ ದಿವ್ಯಗಂಧೈಃ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (7)

ಅರೆತೆರೆದ ತಾವರೆಗಳ ಮಧುರ ಸುವಾಸನೆಯನ್ನೂ ಅಡಕೆ, ತೆಂಗು ಮರಗಳ ಸುಂದರವಾದ ಪಾಲಿಕೆಗಳ ಸುಗಂಧವನ್ನೂ ಹೊತ್ತ ಮಂದಾನಿಲವು ನಿಧಾನವಾಗಿ ಬೀಸುತ್ತಿದೆ. ಶೇಷಾಚಲದ ಒಡೆಯನೇ ! ನಿನಗೆ ಸುಪ್ರಭಾತವು.

ಉನ್ಮೀಲ್ಯ ನೇತ್ರಯುಗಮ್‌-ಉತ್ತಮ ಪಂಜರಸ್ಥಾಃ

ಪಾತ್ರಾವಶಿಷ್ಟ–ಕದಲೀಲ ಪಾಯಸಾನಿ

ಭುಕ್ತ್ವಾಸಲೀಲಂ ಅಥ ಕೇಲಿಶುಕಾಃ ಪಠಂತಿ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (8)

ಉತ್ತಮವಾದ ಪಂಜರಗಳಲ್ಲಿರುವ ಗಿಳಿಗಳು ಪಾತ್ರೆಯಲ್ಲಿ ಉಳಿದ ಬಾಳೆಹಣ್ಣು ಮತ್ತು ಪಾಯಸವನ್ನು ಸೇವಿಸಿ ಕಣ್ತೆರೆದು ಹಾಡುತ್ತಿವೆ. ಶೇಷಾಚಲದೇವನೇ, ನಿನಗೆ ಸುಪ್ರಭಾತವು.

ತಂತ್ರೀಪ್ರಕರ್ಷ ಮಧುರಾಸ್ವನಯಾ ವಿಪಂಚ್ಯಾ

ಗಾಯತಿ ಅನಂತಚರಿತಂ ತವ ನಾರದೋ ಧಿಪಿ

ಭಾಷಾಸಮಗ್ರಂ ಅಸಕೃತ್‌ ಕರಚಾರರಮ್ಯಂ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (9)   

ನಾರದ ಮುನಿಯು, ಬಿಗಿಯಾದ ತಂತಿಗಳ ತನ್ನ ವೀಣೆಯಿಂದ ಮಧುರನಾದವನ್ನು ಹೊಮ್ಮಿಸುತ್ತ, ಉತ್ತಮ ಭಾಷೆಯಲ್ಲಿ, ಕೈಗಳನ್ನು ಸುಂದರವಾಗಿ ಬೀಸುತ್ತ, ನಿನ್ನ ಅನಂತಚರಿತೆಯನ್ನು ಹಾಡುತ್ತಿದ್ದಾರೆ. ಶೇಷಾಚಲದ ಒಡೆಯನೇ, ನಿನಗೆ ಸುಪ್ರಭಾತವು.

ಭೃಂಗಾವಲೀ  ಚ ಮಕರಂದ ರಸಾನುವಿದ್ಧ

ಝಂಕಾರಗೀತ ನಿನದೈಃ ಸಹ ಸೇವನಾಯ

ನಿರ್ಯಾತ್ಯುಪಾಂತ ಸರಸೀ-ಕಮಲೋದರೇಭ್ಯಃ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (10)

ಮಧುವನ್ನು ಹೀರುವಾಗ ಝೇಂಕಾರವನ್ನು ಮಾಡುವ ದುಂಬಿಗಳ ಗುಂಪು, ಅಕ್ಕಪಕ್ಕದ ಕೊಳಗಳ ಕಮಲದ ಹೂಗಳೊಳಗಿಂದ, ನಿನ್ನ ಸೇವೆ ಮಾಡಲೆಂದು ಹೊರಬರುತ್ತಿವೆ. ಶೇಷಾಚಲದ ದೇವನೆ, ನಿನಗೆ ಸುಪ್ರಭಾತವು.

ಯೋಶಾಗಣೇನ ವರದ್ನ ವಿಮಥ್ಯಮಾನೇ

ಘೋಶಾಲಯೇಷು ದಮಂಥನ ತೀವ್ರಘೋಷಾಃ

ರೋಷಾತ್‌ ಕಲಿಂ ವಿದಧತೇ ಕಕುಭಶ್ಚ ಕುಂಭಾಃ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (11)

ಸೀಯರು ಮೊಸರನ್ನು ಕಡೆಯುತ್ತಿರಲು, ಮಡಕೆಗಳಿಂದ ಹೊಮ್ಮುವ ಶಬ್ದ ಹಾಗೂ ಅದರ ಪ್ರತಿಧ್ವನಿಯು ಮಡಕೆಗಳು ಮತ್ತು ಅಷ್ಟ ದಿಕ್ಕುಗಳು ಜಗಳವಾಡುತ್ತಿರುವಂತೆ ಕೇಳುತ್ತದೆ. ಶೇಷಾಚಲದ ದೇವನೆ, ನಿನಗೆ ಸುಪ್ರಭಾತವು.

ಪದ್ಮೇಶ-ಮಿತ್ರ ಶತಪತ್ರ ಗತಾಲಿವರ್ಗಾಃ

ಹರ್ತುಂ ಶ್ರಿಯಂ ಕುವಲಯಸ್ಯ ನಿಜಾಂಗ ಲಕ್ಷ್ಯಾ

ಭೇರೀ-ನಿನಾದಮ್‌ ಇವ ಬಿಭ್ರತಿ ತೀವ್ರ ನಾದಂ

ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್‌ (12)

ಸೂರ್ಯನ ಮಿತ್ರರಾದ ತಾವರೆಗಳೊಳಗಿರುವ ದುಂಬಿಗಳ ಸಮೂಹವು ಆ ನೀಲಿತಾವರೆಗಳ ಮೈಕಾಂತಿಯನ್ನು ಸೂರೆಗೊಳ್ಳಲು ಭೇರಿಯ ನಿನಾದದಂತೆ ಶಬ್ದ ಮಾಡುತ್ತಿವೆ. ಶೇಷಾಚಲ ದೇವನೆ, ನಿನಗೆ ಸುಪ್ರಭಾತವು.

ಶ್ರಿಮನ್‌ ಅಭೀಷ್ಟ ವರದಾಖಿಲ ಲೋಕಬಂಧೋ

ಶ್ರೀ ಶ್ರೀನಿವಾಸ ಜಗದೇಕ ದಯೈಕ ಸಿಂಧೋ

ಶ್ರೀ ದೇವತಾ-ಗೃಹ-ಭುಜಾಂತರ ದಿವ್ಯಮೂರ್ತೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (13)

ಲಕ್ಷ್ಮೀಪತಿಯೆ, ಕೇಳಿದ ವರಗಳನ್ನು ಕೋಡುವವನೆ, ಅಖಿಲ ಲೋಕಬಂಧುವೆ, ಲಕ್ಷ್ಮಿಯ ನಿವಾಸನೇ, ಅನನ್ಯವಾದ ದಯಾಸಾಗರನೆ, ವಕ್ಷಸ್ಥಳದಲ್ಲಿ ಲಕ್ಷ್ಮಿ ಇರುವುದರಿಂದ ದಿವ್ಯಮೂರ್ತಿಯಾಗಿರುವವನೆ, ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಶ್ರೀಸ್ವಾಮಿ-ಪುಷ್ಕರಿಣಿಕಾ-ಪ್ಲವ ನಿರ್ಮಲಾಂಗಾಃ

ಶ್ರೇರ್ಯೋಥಿನೋ ಹರ ವಿರಿಂಚಿ ಸನಂದನಾದ್ಯಾಃ

ದ್ವಾರೇ ವಸಂತಿ ವರವೇತ್ರ ಹತೋತ್ತಮಾಂಗಾಃ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (14)

ಬ್ರಹ್ಮ, ಮಹೇಶ್ವರ, ಸನಂದನಮುನಿ ಮುಂತಾದ ಶ್ರೇಯೋಭಿಲಾಷಿಗಳು ಶ್ರೀಸ್ವಾಮಿ ಪುಷ್ಕರಿಣಿಯಲ್ಲಿ ಮಿಂದು ಪವಿತ್ರ ದೇಹಿಗಳಾಗಿ ನಿನ್ನ ದ್ವಾರದಲ್ಲಿ ಶಿರಕ್ಕೆ ಬೆತ್ತದ ಹೊಡೆತಗಳನ್ನು ಪಡೆಯುತ್ತ ಕಾದಿದ್ದಾರೆ. ವೆಂಕಟಾಚಲಪತಿಯೆ ನಿನಗೆ ಸುಪ್ರಭಾತವು.

ಶ್ರೀ ಶೇಷ ಶೈಲ ಗರುಡಾಚಲ ವೆಂಕಟಾದ್ರಿ

ನಾರಾಯಣಾದ್ರಿ ವೃಷಭಾದ್ರಿ ವೃಷಾದ್ರಿ ಮುಖ್ಯಾಂ

ಆಖ್ಯಾಮ್‌ ತ್ವದೀಯ ವಸತೇರ್‌ ಅನಿಶಂ ವದಂತಿ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (15)

ವೆಂಕಟಾಚಲಪತಿಯೆ, ನಿನ್ನ ನಿವಾಸವು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಶ್ರೀ ಶೇಷ ಶೈಲ, ಗರುಡಾಚಲ, ವೆಂಕಟಾದ್ರಿ, ನಾರಾಯಣಾದ್ರಿ, ವೃಷಭಾದ್ರಿ, ಮತ್ತು ವೃಷಾದ್ರಿ. ನಿನಗೆ ಸುಪ್ರಭಾತವು.

ಸೇವಾಪರಾಃ ಶಿವ ಸುರೇಶ ಕೃಶಾನು-ಧರ್ಮ

ರಕ್ಷೋಂಬುನಾಥ ಪವಮಾನ ಧನಾನಾಥಾಃ

ಬದ್ಧಾಂಜಲಿ-ಪ್ರವಿಲಸನ್‌-ನಿಜ ಶೀರ್ಷ-ದೇಶಾಃ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (16)

ಶಿವ, ಇಂದ್ರ, ಅಗ್ನಿ, ಯಮ, ನೈರುತಿ, ವರುಣ, ವಾಯು ಮತ್ತು ಕುಬೇರರು ನಿನ್ನ ಸೇವೆ ಮಾಡುವ ಆಸೆಯಿಂದ ಶಿರದ ಮೇಲೆ ಕೈಮುಗಿದು ನಿಂತಿದ್ದಾರೆ. ನಿನಗೆ ಸುಪ್ರಭಾತವು.

ಧಾಟೀಶು ತೇ ವಿಹಗರಾಜ ಮೃಗಾರಾಜ

ನಾಗಾರಾಜ ಗಜರಾಜ ಹಯಾರಾಜಾಃ

ಸ್ವಸ್ವಾಧಿಕಾರ ಮಹಿಮಾದಿಕಮ್‌ ಅಥರ್ಯಂತೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (17)

ನಿನ್ನ ವಿಹಾರ ಕಾಲದಲ್ಲಿ ನಿನಗೆ ಉತ್ತಮ ಸೇವೆ ಮಾಡಲು ನಿನ್ನ ವಾಹನಗಳಾದ ಪಕ್ಷಿರಾಜ (ಗರುಡ),ಮೃಗರಾಜ (ಸಿಂಹ), ಸರ್ಪರಾಜ (ಆದಿಶೇಷ), ಗಜರಾಜ (ಐರಾವತ), ಅಶ್ವರಾಜ (ಉಚ್ಚೈಶ್ರವಸ್‌) ಇವುಗಳು ತಮತಮಗೆ ಅಕಾರ ಶಕ್ತಿಗಳನ್ನು ನೀಡೆಂದು ನಿನ್ನನ್ನು ಬೇಡಿಕೊಳ್ಳುತ್ತಿವೆ. ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಸೂರ್ಯೇಂದು ಭೌಮ ಬುಧ ವಾಕ್ಪತಿ ಕಾವ್ಯ ಸೌರಿ

ಸ್ವರ್ಭಾನು ಕೇತು ದಿವಿಶತ್‌ ಪರಿಶತ್‌ ಪ್ರಧಾನಾಃ

ತ್ವದ್ದಾಸ ದಾಸ ಚರಮಾವ ದಾಸದಾಸಾಃ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (18)

ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ (ಅಂಗಾರಕ), ಬುಧ, ಗುರು (ಬೃಹಸ್ಪತಿ), ಶುಕ್ರ, ಶನಿ, ರಾಹು ಮತ್ತು ಕೇತುಗಳು ನಿನ್ನ ಸೇವಕರಾಗಿರಲು ಸಂತೋಷಿಸುತ್ತಾರೆ. (ಅವರು ನಿನಗೆ ವಿಧೇಯರಾಗಿರುತ್ತಾರೆ) ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ತ್ವತ್‌-ಪಾದಧೂಲಿ-ಭರಿತ-ಸುರಿತೋತ್ತಮಾಂಗಾಃ

ಸ್ವರ್ಗಾಪವರ್ಗ-ನಿರಪೇಕ್ಷ-ನಿಜಾಂತರಂಗಾಃ

ಕಲ್ಪಾಗಮಾಕಲನಯಾಕುಲತಾಂ ಲಭಂತೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (19)

ಹೇ ವೆಂಕಟಾಚಲಪತಿಯೇ, ನಿನ್ನ ಪಾದಧೂಳಿಯಿಂದ ಪವಿತ್ರವಾದ ನೆತ್ತಿಯುಳ್ಳ (ನಿನ್ನ ಭಕ್ತರ ಸೇವಕರು) (ನಿನ್ನ ಬಳಿ ಇದ್ದಾಗ) ಸ್ವರ್ಗ ಅಥವಾ ಮುಕ್ತಿಯನ್ನು ಬಯಸುವುದಿಲ್ಲ. (ವೆಂಕಟಾಚಲದ ವೈಭವವಿರದ) ಮತ್ತೊಂದು ಕಲ್ಪ ಆರಂಭವಾಗುವ ಬಗ್ಗೆ ಅವರು ಚಿಂತಿತರಾಗಿದ್ದಾರೆ. ನಿನಗೆ ಸುಪ್ರಭಾತವು.

ತ್ವದ್‌ ಗೋಪುರಾಗ್ರ ಶಿಖರಾಣಿ ನಿರೀಕ್ಷಮಾನಾಃ

ಸ್ವರ್ಗಾಪವರ್ಗ ಪದವೀಂ ಪರಮಾಂಶ್ರಯಂತಃ

ಮರ್ತ್ಯಾ ಮನುಷ್ಯ ಭುವನೇ ಮತಿಮ್‌ ಆಶ್ರಯಂತೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (20)

ಸ್ವರ್ಗ ಮತ್ತು ಮುಕ್ತಿಯ ಮಾರ್ಗವನ್ನು ಕ್ರಮಿಸುತ್ತಿರುವಾಗಲೂ ಈ ಮರ್ತ್ಯರು ನಿನ್ನ ದೇಗುಲದ ಗೋಪುರವನ್ನು ಕಂಡಾಗ (ನಿನ್ನ ಪೂಜೆ ಮಾಡುವ ಅವಕಾಶಕ್ಕಾಗಿ) ಈ ಮರ್ತ್ಯ ಲೋಕದಲ್ಲೇ ಇರಬಯಸುತ್ತಾರೆ. ವೆಂಕಟಾಚಲಪತಿಯೇ, ನಿನಗೆ ಸುಪ್ರಭಾತವು.

ಶ್ರೀ ಭೂಮಿ ನಾಯಕ ದಯಾದಿ ಗುಣಾಮೃತಾಬ್ಧೇ

ದೇವಾದೇವ ಜಗದೇಕ ಶರಣ್ಯಮೂರ್ತೇ

ಶ್ರೀಮನ್ನನಂತ ಗರುಡಾದಿಭಿರ್‌ ಅರ್ಚಿತಾಂಘ್ರೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (21)

ಶ್ರೀದೇವಿ ಮತ್ತು ಭೂದೇವಿಯ ನಾಯಕನೆ, ದಯೆ ಹಾಗೂ ಗುಣಗಳ ಸಾಗರನೆ, ದೇವಾದೇವನೆ, ಇಡೀ ಜಗತ್ತಿನ ಶರಣ್ಯಮೂರ್ತಿಯೆ, ಲಕ್ಷ್ಮಿಗೆ ಒಡೆಯನೆ, ಅನಂತ, ಗರುಡರಿಂದ ಪೂಜಿಸಲ್ಪಡುವ ಪಾದಗಳುಳ್ಳವನೆ, ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಶ್ರೀ ಪದ್ಮನಾಭ ಪುರುಷೋತ್ತಮ ವಾಸುದೇವ

ವೈಕುಂಠ ಮಾಧವ ಜನಾರ್ದನ ಚಕ್ರಪಾಣೇ

ಶ್ರೀವತ್ಸ-ಚಿಹ್ನ  ಶರಣಾಗತ-ಪಾರಿಜಾತ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (22)

ಪದ್ಮನಾಭ, ಪುರುಷೋತ್ತಮ, ವಾಸುದೇವ, ವೈಕುಂಠ, ಮಾಧವ, ಜನಾದರ್ನ, ಚಕ್ರಪಾಣಿ, ಶ್ರೀವತ್ಸ ಚಿಹ್ನೆಯನ್ನು ಧರಿಸಿದವನೆ, ಶರಣಾದವರಿಗೆ ಪಾರಿಜಾತನೆ (ಸ್ವರ್ಗದ ಮರ), ವೆಂಕಟಾಚಲಪತಿ, ನಿನಗೆ ಸುಪ್ರಭಾತವು.

ಕಂದರ್ಪ-ದರ್ಪ-ಹರ ಸುಂದರ ದಿವ್ಯಮೂರ್ತೇ

ಕಾಂತಾ-ಕುಚಾಂಬುರುಹ ಕುಟ್ಮಲ-ಲೋಲದೃಷ್ಟೇ

ಕಲ್ಯಾಣ ನಿರ್ಮಲ ಗುಣಾಕರ ದಿವ್ಯಕೀರ್ತೇ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (23)

ಮನ್ಮಥನ ದರ್ಪವನ್ನು ಮುರಿಯುವ ಸುಂದರ ಮತ್ತು ದಿವ್ಯರೂಪವುಳ್ಳವನೆ, ಕಾಂತಳ ತಾವರೆಯ ಮೊಗ್ಗಿನಂಥ ಸ್ತನಗಳ ಮೇಲೆ ಪ್ರೀತಿಯ ದೃಷ್ಟಿಯನ್ನು ನೆಟ್ಟವನೆ, ಶುಭವೂ ನಿರ್ಮಲವೂ ಆದ ಗುಣಗಳ ನಿವಾಸನೆ, ದಿವ್ಯವಾದ ಕೀರ್ತಿಯುಳ್ಳವನೆ, ವೆಂಕಟಾಚಲ, ನಿನಗೆ ಸುಪ್ರಭಾತವು.

ಮೀನಾಕೃತೇ ಕಮಠ ಕೋಲ ನೃಸಿಂಹ ವರ್ಣಿನ್‌

ಸ್ವಾಮಿನ್‌ ಪರಶ್ವಥ ತಪೋಧನ ರಾಮಚಂದ್ರ

ಶೇಷಾಂಶರಾಮ ಯದುನಂದನ ಕಲ್ಕಿರೂಪ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌  (24)

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಬಲರಾಮ, ಕೃಷ್ಣ, ಕಲ್ಕಿ ಮುಂತಾದ ದಶಾವತಾರ ಎತ್ತಿದ ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಏಲಾ-ಲವಂಗ-ಘನಸಾರ-ಸುಗಂ-ತೀರ್ಥಮ್‌

ದಿವ್ಯಂ ವಿಯತ್‌-ಸರಿತಿ  ಹೇಮ-ಘಟೇಷು  ಪೂರ್ಣಂ

ಧೃತ್ವಾದ್ಯ ವೈದಿಕ-ಶಿಖಾಮಣಯಃ ಪ್ರಹೃಷ್ಟಾಃ

ತಿಷ್ಠಂತಿ ವೇಂಕಟಪತೇ ತವ ಸುಪ್ರಭಾತಮ್‌ (25)

ವೇದಪಾರಂಗತರಾದ ಬ್ರಾಹ್ಮಣರು ಏಲಕ್ಕಿ, ಲವಂಗ, ಕರ್ಪೂರ ಮಿಶ್ರಿತ ಗಂಗಾಜಲವನ್ನು ಚಿನ್ನದ ಕೊಡಗಳಲ್ಲಿ ತುಂಬಿಕೊಂಡು (ನಿನ್ನನ್ನು ಪೂಜಿಸಲು) ಸಂತಸದಿಂದ ಕಾಯುತ್ತಿದ್ದಾರೆ. ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಭಾಸ್ವಾನ್‌ ಉದೇತಿ ವಿಕಚಾನಿ ಸರೋರುಹಾಣಿ

ಸಂಪೂರಯಂತಿ ನಿನದೈಃ ಕಕುಭೊ ವಿಹಂಗಾಃ

ಶ್ರೀ ವೈಷ್ಣವಾಸ್ಸತತಂ ಅರ್ಥಿತ ಮಂಗಲಾಸ್‌ ತೇ

ಧಾಮಾಶ್ರಯಂತಿ ತವ ವೇಂಕಟ ಸುಪ್ರಭಾತಮ್‌ (26)

ಸೂರ್ಯೋದಯವಾಗಿದೆ, ತಾವರೆಗಳು ಅರಳಿವೆ, ಹಕ್ಕಿಗಳು ಎಲ್ಲ ದಿಕ್ಕುಗಳನ್ನೂ ತಮ್ಮ ನಿನಾದದಿಂದ ತುಂಬಿವೆ. ಸದಾ ಮಂಗಳವನ್ನೇ ಬಯಸುವ ಶ್ರೀವೈಷ್ಣವರು ನಿನ್ನ ಧಾಮದಲ್ಲಿ ಕಾಯುತ್ತಿದ್ದಾರೆ. ವೆಂಕಟನೆ, ನಿನಗೆ ಸುಪ್ರಭಾತವು.

ಬ್ರಹ್ಮಾದಯಸ್‌ ಸುರವರಾಸ್‌ ಸಮಹರ್ಷಯಸ್‌ ತೇ

ಸಂತಸ್ಸನಂದನ ಮುಖಾಸ್ತ್ವಥ ಯೋಗಿವರ್ಯ್ಃ

ಧಾಮಾನ್ತಿಕೇ ತವ ಹಿ ಮಂಗಲ ವಸ್ತು ಹಸ್ತಾಃ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (27)

ತಮ್ಮ ಕೈಗಳಲ್ಲಿ ಮಂಗಳ ವಸ್ತುಗಳನ್ನು ಹಿಡಿದುಕೊಂಡು ಬ್ರಹ್ಮನೇ ಮುಂತಾದ ದೇವರುಗಳು, ಋಷಿಗಳು, ಸನಂದನರಂಥ ಯೋಗಿಗಳು ನಿನ್ನ ಧಾಮದಲ್ಲಿ ಕಾದಿದ್ದಾರೆ. ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಲಕ್ಷ್ಮೀ-ನಿವಾಸ ನಿರಾವದ್ಯ-ಗುಣೈಕ-ಸಿಂಧೋ

ಸಂಸಾರ-ಸಾಗರ-ಸಮುತ್ತರಣೈಕ-ಸೇತೋ

ವೇದಾಂತ-ವೇದ್ಯ ನಿಜವೈಭವ ಭಕ್ತಭೋಗ್ಯ

ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್‌ (28)

ಲಕ್ಷ್ಮೀ ನಿವಾಸನೆ, ಕಳಂಕವಿಲ್ಲದ ಪವಿತ್ರ ಗುಣಗಳ ಸಾಗರನೆ, ಸಂಸಾರ ಸಾಗರವನ್ನು ದಾಟಿಸುವ ಸೇತುವೆಯೇ, ಉಪನಿಷತ್ತಿನಲ್ಲಿ ಕೀರ್ತಿಸಲ್ಪಟ್ಟವನೇ, ಭಕ್ತರ ಪ್ರಿಯನೆ, ವೆಂಕಟಾಚಲಪತಿಯೆ, ನಿನಗೆ ಸುಪ್ರಭಾತವು.

ಇತ್ಥಂ ವೃಷಾಚಲಪತೇರಿಹ ಸುಪ್ರಭಾತಮ್‌

ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ

ತೇಷಾಂ ಪ್ರಭಾತ ಸಮಯೇ ಸ್ಮೃತಿರಂಗ ಭಾಜಾಂ

ಪ್ರಜ್ಞಾಂ ಪರಾರ್ಥ ಸುಲಭಾಂ ಪರಮಾಂ ಪ್ರಸೂತೇ (29)

ವೆಂಕಟೇಶ ಸುಪ್ರಭಾತವನ್ನು (ಅರ್ಥವನ್ನು ತಿಳಿದು) ಪ್ರತಿದಿನ ಬೆಳಗ್ಗೆ ಪಠನ ಮಾಡುವವರಿಗೆ ನಿನ್ನ ಸ್ಮರಣೆಯೇ ಬುದ್ಧಿಶಕ್ತಿಯನ್ನೂ ವಿವೇಕವನ್ನೂ ನೀಡಿ ಅವರನ್ನು ಪರಮಜ್ಞಾನಕ್ಕೆ ಒಯ್ಯುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi