ವೇದವಾಕ್ಯ

ಶ್ರೀಕೃಷ್ಣನು, ತನ್ನ ಭಕ್ತರು ಭಕ್ತಿಸೇವೆಯ ಅತ್ಯುನ್ನತದ ಹಂತದಲ್ಲಿಲ್ಲವಾದರೂ ಅವರ ಮೇಲೆ ಅತ್ಯಂತ ಪ್ರೀತಿಯುಳ್ಳವನಾಗಿರುತ್ತಾನೆ. ವ್ಯಕ್ತಿಯು ಭಕ್ತಿಸೇವೆಯ ಕೆಳಗಣಹಂತದಲ್ಲಿದ್ದರೂ ದಿವ್ಯನಾಗಿರುತ್ತಾನೆ ಮತ್ತು ಅವನು ಭಕ್ತಿಯುತ ಜೀವನದಲ್ಲಿ ಮುಂದುವರಿದರೆ, ದೇವ ಅಥವಾ ಸುರನಾಗಿ ಮುಂದುವರಿಯುವನು. ಈ ರೀತಿಯಲ್ಲಿ ವ್ಯಕ್ತಿಯು ಮುಂದುವರಿದರೆ, ಕೃಷ್ಣನು ಅವನ ಮೇಲೆ ಸಂತೋಷ ತಾಳುವನು ಮತ್ತು ಅವನು ಸುಲಭವಾಗಿ ಭಗವದ್ಧಾಮಕ್ಕೆ ಹಿಂದಿರುಗಲು ಎಲ್ಲ ಉಪದೇಶಗಳನ್ನೂ ನೀಡುವನು.

– ಶ್ರೀಲ ಪ್ರಭುಪಾದರು, ಶ್ರೀಮದ್‌ ಭಾಗವತ  8.5.24, ಭಾವಾರ್ಥ

* * * *

ಒಬ್ಬನು ಪುಸ್ತಕದ ಹುಳುವಾಗಿ, ಅನೇಕ ಪುಸ್ತಕಗಳನ್ನೂ ಶಾಸ್ತ್ರಗಳನ್ನೂ ಓದುತ್ತಾ, ಅನೇಕ ವ್ಯಾಖ್ಯಾನಗಳನ್ನು ಕೇಳುತ್ತಾ, ಅನೇಕರ ಉಪದೇಶಗಳನ್ನು ಕೇಳುತ್ತಾ ಇದ್ದರೆ, ಅವನ ಹೃದಯದಲ್ಲಿ ಸಂಶಯ ಹುಟ್ಟುತ್ತದೆ.  ಈ ರೀತಿಯಲ್ಲಿ ವ್ಯಕ್ತಿಯು ಜೀವನದ ಗುರಿಯನ್ನು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ.

 – ಶ್ರೀಲ ಕೃಷ್ಣ ದಾಸ ಕವಿರಾಜ ಗೋಸ್ವಾಮಿ,

ಶ್ರೀ ಚೈತನ್ಯ ಚರಿತಾಮೃತ, ಆದಿಲೀಲ: 16.11

* * * *

ಮಹಾ  ಮೇಧಾವಿಯೊಬ್ಬನು,  ಬಹು  ಪ್ರಯತ್ನದಿಂದ ಧರೆಯ ಮೇಲಿನ ಧೂಳಿನ  ಕಣಗಳನ್ನು  ಎಣಿಸಿದರೂ  ಎಣಿಸಬಹುದು,  ಆದರೆ  ಆ  ಮೇಧಾವಿಯು  ಅಖಿಲ ಶಕ್ತಿಗಳೊಡೆಯನಾದ  ದೇವೋತ್ತಮ ಪುರುಷನ  ಮೋಹಕ  ಗುಣಗಳನ್ನು  ಎಂದಿಗೂ  ಎಣಿಕೆ ಮಾಡಲಾರನು.

– ಶ್ರೀ ದ್ರುಮೀಲ, ಶ್ರೀಮದ್‌ ಭಾಗವತ 11.4.2

* * * *

ಸಹಸ್ರಾರು ವರ್ಷಗಳಿಂದ ನಾನು ಭಗವಂತನ ವೈಭವವನ್ನು ಕೊಂಡಾಡುತ್ತಿದ್ದೇನೆ ಮತ್ತು ಧ್ಯಾನಿಸುತ್ತಿದ್ದೇನೆ. ಕೊನೆಗೂ ನನಗೆ ಗೋಪಾಲಕನ ವೇಷದ ಶ್ರೀಕೃಷ್ಣನ ಅಲೌಕಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು.

– ಬ್ರಹ್ಮ , ಶ್ರೀ ಗೋಪಾಲ-ತಾಪನಿ ಉಪನಿಷದ್‌: 1.27

* * * *

ಶ್ರೀ ಕೃಷ್ಣನ ಪವಿತ್ರ ನಾಮವು ಸಿಹಿಗಳಲ್ಲೆಲ್ಲ ಅತ್ಯಂತ ಸಿಹಿಯಾದುದು, ಪುಣ್ಯಗಳಲ್ಲೆಲ್ಲ ಅತ್ಯಂತ ಪುಣ್ಯವಾದುದು. ಮತ್ತು ಅದು ಎಲ್ಲ ವೇದ ಸಾಹಿತ್ಯದ ಅಲೌಕಿಕ ಫಲ. ಸಾಮಾನ್ಯ ಮನುಷ್ಯನು ನಂಬಿಕೆಯಿಂದಲೋ ಕುಚೋದ್ಯದಿಂದಲೋ ಶ್ರೀಕೃಷ್ಣನ ಪವಿತ್ರ ನಾಮವನ್ನು ಒಮ್ಮೆಯಾದರೂ ಪಠಿಸಿದರೂ ಸಾಕು, ಈ ಪವಿತ್ರನಾಮದ ಗಾಯನವು ಪುನರಪಿ ಜನನಂ ಪುನರಪಿ ಮರಣಂನ  ಬಂಧನದಿಂದ ಮುಕ್ತಗೊಳಿಸುತ್ತದೆ.

-ಸ್ಕಾಂದ ಪುರಾಣ, ಪ್ರಭಾಸ ಖಂಡ,

(ಶ್ರೀಲ ಜೀವ ಗೋಸ್ವಾಮಿ ಅವರ ತತ್ತ್ವ-ಸಂದರ್ಭ, 15.4 ರ ಉಲ್ಲೇಖ)

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi