ತಮ್ಮೆಲ್ಲ ಲೌಕಿಕ ಯೋಜನೆಗಳಿದ್ದರೂ ಸಮಾಜದ ನಾಯಕರು ತಪ್ಪುದಾರಿಗೆಳೆಯುವವರೇ ಆಗಿರುತ್ತಾರೆ. ಏಕೆಂದರೆ ದೇವೋತ್ತಮ ಪರಮ ಪುರುಷನೊಂದಿಗೆ ನಮ್ಮ ಬಾಂಧವ್ಯವನ್ನು ಪುನರ್ ಸ್ಥಾಪಿಸಲು ಅವರ ಬಳಿ ಯಾವುದೇ ಯೋಜನೆ ಇರುವುದಿಲ್ಲ.
– ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಮುಕುಂದ ಮಾಲಾ ಸ್ತೋತ್ರ, ಶ್ಲೋಕ 1, ಭಾವಾರ್ಥ
* * * *
ಯಾವುದೇ ಅಪರಾಧವಿಲ್ಲದಂತೆ ಶ್ರೀ ಚೈತನ್ಯ ಮಹಾಪ್ರಭುಗಳ ಪವಿತ್ರ ನಾಮ ಸ್ಮರಣೆ ಮಾಡಿದರೆ ಬದ್ಧಾತ್ಮಗಳ ಎಲ್ಲ ಲೌಕಿಕ ಆಸೆಗಳು ಕಡಮೆ ಆಗುತ್ತವೆ. ಇದನ್ನು ಕಾಣಬಹುದು, ಅರಿಯಬಹುದು, ಅಳವಡಿಸಬಹುದು, ಅದೂ ಎಲ್ಲ ಕಾಲ, ಸ್ಥಳ ಮತ್ತು ವ್ಯಕ್ತಿಗಳಲ್ಲಿ. ಅಂದರೆ, ಲೌಕಿಕ ಆಮೋದ ಮತ್ತು ಮಾನಸಿಕ ಊಹಾಪೋಹಗಳಂತಹ ಅಪೇಕ್ಷೆಗಳ ಬೇಡಿಕೆಯಿಂದ ಬದ್ಧಾತ್ಮಗಳು ಬಿಡುಗಡೆ ಹೊಂದಬಹುದು.
– ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ,
ಶ್ರೀ ಚೈತನ್ಯ ಭಾಗವತ, ಆದಿ ಖಂಡ, 14.89-90. ವ್ಯಾಖ್ಯಾನ
* * * *
ಎಲೈ ಭರತ ವಂಶಜನೇ, ಎಲ್ಲ ಕ್ಲೇಶಗಳಿಂದ ಬಿಡುಗಡೆ ಹೊಂದಬಯಸುವವನು, ಪರಮಾತ್ಮನೂ ನಿಯಾಮಕನೂ ಸಕಲ ಕ್ಲೇಶನಿವಾರಕನೂ ಆದ ಭಗವಂತನನ್ನು ಕುರಿತು ಶ್ರವಣ ಮಾಡಬೇಕು, ಕೀರ್ತಿಸಬೇಕು ಮತ್ತು ಸ್ಮರಣೆ ಮಾಡಬೇಕು.
– ಶ್ರೀಲ ಶುಕದೇವ ಗೋಸ್ವಾಮಿ, ಶ್ರೀಮದ್ ಭಾಗವತ, 2.1.5
* * * *
ವ್ಯಕ್ತಿಯು ಅಸಹಾಯಕ ಸ್ಥಿತಿಯಲ್ಲಿ ಅಥವಾ ಇಚ್ಛೆಯಿಲ್ಲದೆಯೂ ಕೂಡ ಭಗವಂತನ ಪುಣ್ಯನಾಮವನ್ನು ಕೀರ್ತಿಸಿದರೆ, – ಸಿಂಹವು ಗರ್ಜಿಸಿದ ಮಾತ್ರಕ್ಕೆ ಎಲ್ಲ ಚಿಕ್ಕ ಪ್ರಾಣಿಗಳು ಬೆದರಿ ಓಡುವಂತೆ, ಅವನ ಪಾಪಮಯ ಜೀವನದ ಸಕಲ ಪ್ರತಿಕ್ರಿಯೆಗಳೂ ಹೊರಟು ಹೋಗುತ್ತವೆ.
– ಗರುಡ ಪುರಾಣ, ಶ್ರೀಮದ್ ಭಾಗವತದಲ್ಲಿ ಉಲ್ಲೇಖ 6.2.7. ಭಾವಾರ್ಥ
* * * *
ಶ್ರೀ ಚೈತನ್ಯ ಮಹಾಪ್ರಭುಗಳ ಲೀಲಾವಿನೋದಗಳು ಅಮೃತಮಯವಾದವು. ಹಾಗೆಯೇ ಭಗವಾನ್ ಶ್ರೀಕೃಷ್ಣನ ಲೀಲಾವಿನೋದಗಳು ಪಚ್ಚಕರ್ಪೂರವಿದ್ದಂತೆ. ಯಾವಾಗ ಒಬ್ಬ ಭಕ್ತ ಇವೆರಡನ್ನೂ ಬೆರೆಸುತ್ತಾನೆಯೋ ಅವು ಬಹು ಮಧುರವಾಗಿ ರುಚಿಯೊಡಗೂಡುತ್ತವೆ. ಪರಿಶುದ್ಧ ಭಕ್ತರ ಕೃಪೆಯಿಂದ ಅವುಗಳನ್ನು ಯಾರೇ ಆಸ್ವಾದಿಸಲಿ, ಅವರು ಆ ಮಾಧುರ್ಯದ ಆಳವನ್ನು ಅರಿಯಬಲ್ಲರು.
– ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ,
ಶ್ರೀ ಚೈತನ್ಯ ಚರಿತಾಮೃತ, ಮಧ್ಯಲೀಲ, 25.277
* * * *






Leave a Reply