ಹರೇ ಕೃಷ್ಣ ಆಂದೋಲನದಲ್ಲಿ, ಹರೇ ಕೃಷ್ಣ ಮಹಾಮಂತ್ರದ ಜಪ, ಭಾವಾವೇಶದಲ್ಲಿ ನರ್ತಿಸುವುದು ಮತ್ತು ಭಗವಂತನಿಗೆ ಅರ್ಪಿಸಿ ಉಳಿದ ಆಹಾರವನ್ನು ಸೇವಿಸುವುದು ಇವು ತುಂಬ ಮುಖ್ಯ. ವ್ಯಕ್ತಿಯು ಅನಕ್ಷರಸ್ಥನಾಗಿರಬಹುದು ಇಲ್ಲವೇ ತತ್ತ್ವವನ್ನು ಅರಿಯಲು ಅಶಕ್ತನಾಗಿರಬಹುದು; ಹಾಗಿದ್ದೂ, ಈ ಮೂರನ್ನು ಅವನು ಸ್ವೀಕರಿಸಿದರೆ, ಅವನು ಖಂಡಿತವಾಗಿ ಬೇಗನೆ ಮುಕ್ತಿಪಡೆಯುವನು.
– ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀ ಚೈತನ್ಯ ಚರಿತಾಮೃತ, ಮಧ್ಯಲೀಲ, 15.237
* * * *
ಪ್ರತಿ ದಿನ ನೂರಾರು ಸಾವಿರಾರು ಜೀವಿಗಳು ಸಾವಿನ ಸಾಮ್ರಾಜ್ಯಕ್ಕೆ ಹೋಗುವವು. ಆದರೂ, ಉಳಿದವರು ಶಾಶ್ವತ ಸ್ಥಿತಿಯನ್ನು ಅಪೇಕ್ಷಿಸುವರು. ಇದಕ್ಕಿಂತ ಆಶ್ಚರ್ಯಕರ ಇನ್ನಾವುದಿದೆ?
– ಯುಧಿಷ್ಠಿರ ಮಹಾರಾಜ, ಮಹಾಭಾರತ, ವನ-ಪರ್ವ 313.116
* * * *
ಎಲ್ಲ ಗ್ರಹಗಳ ರಾಜ, ಸತ್ತ್ವ ಆತ್ಮದ ಪ್ರತಿಬಿಂಬ ಮತ್ತು ಅನಂತ ಪ್ರಭೆಯ ಸೂರ್ಯನು ಈ ಜಗತ್ತಿನ ಕಣ್ಣಾಗಿದ್ದಾನೆ. ಆದ್ದರಿಂದ ನಾನು ಆದಿ ಪುರುಷನಾದ ಗೋವಿಂದನನ್ನು (ಕೃಷ್ಣ) ಆರಾಧಿಸುವೆ. ಏಕೆಂದರೆ, ಅವನ ಆದೇಶದಂತೆಯೇ ಸೂರ್ಯನು ಸಮಯದ ಗಾಲಿಯ ಮೇಲೆ ಕೂತು ತನ್ನ ಯಾತ್ರೆ ಕೈಗೊಳ್ಳುವನು.
– ಶ್ರೀ ಬ್ರಹ್ಮ, ಶ್ರೀ ಬ್ರಹ್ಮ-ಸಂಹಿತಾ, 5.52
* * * *
ನಾನೇ ಗುರಿಯು, ನಾನೇ ಪೋಷಿಸುವವನು, ನಾನೇ ಯಜಮಾನನು, ನಾನೇ ಸಾಕ್ಷಿ, ನಾನೇ ನಿವಾಸ, ನಾನೇ ಆಶ್ರಯ, ನಾನೇ ಅತ್ಯಂತ ಆಪ್ತ ಗೆಳೆಯ, ನಾನೇ ಸೃಷ್ಟಿ, ನಾನೇ ಪ್ರಳಯ, ನಾನೇ ಎಲ್ಲಕ್ಕೂ ಆಧಾರ, ನಾನೇ ವಿಶ್ರಾಂತಿ ತಾಣ, ನಾನೇ ಶಾಶ್ವತವಾದ ಬೀಜ.
– ಶ್ರೀಕೃಷ್ಣ, ಭಗವದ್ಗೀತೆ, 9.18
* * * *
ಸ್ವತ್ತು, ಯೌವನ, ಪುತ್ರರು. ಮತ್ತು ಕುಟುಂಬದಲ್ಲಿ ನಿಜವಾದ ಸಂತೋಷ ಇದೆ ಎಂಬ ಭರವಸೆ ಎಲ್ಲಿದೆ? ಈ ಬದುಕು ಕಮಲ ದಳದ ಮೇಲಿನ ನೀರಿನ ಹನಿಯಂತೆ ತತ್ತರಿಸುತ್ತದೆ. ಆದುದರಿಂದ, ನೀವು ಯಾವಾಗಲೂ ಶ್ರೀ ಹರಿಯ ದಿವ್ಯ ಪಾದಗಳಿಗೆ ಸೇವೆ ಸಲ್ಲಿಸಿ ಪೂಜಿಸಬೇಕು.
– ಶ್ರೀಲ ಗೋವಿಂದ ದಾಸ ಕವಿರಾಜ, ಭಜಹುರೇ ಮನ, ಶ್ಲೋಕ 3
* * * *






Leave a Reply