ವೇದವಾಕ್ಯ

ಧಾರ್ಮಿಕ ಚಟುವಟಿಕೆಗಳ ಮೂಲಕ ಪರಿಶುದ್ಧ ಭಕ್ತಿಸೇವೆಯ ವೇದಿಕೆ ಏರಿದರೆ, ಶ್ರೀ ಕೃಷ್ಣನು ಅಂತಹವರ ಹೃದಯದಲ್ಲಿ ಸದಾ ನೆಲೆಸಿರುತ್ತಾನೆ. ಅಂತಹ ಪರಿಪೂರ್ಣತೆಯನ್ನು ಸಾಧಿಸಿದವರು ಅಲೌಕಿಕ ಆನಂದದಲ್ಲಿ ಅತ್ಯಂತ ಸುಂದರವಾಗಿರುತ್ತಾರೆ. ಪ್ರಸ್ತುತ ಕೃಷ್ಣ ಪ್ರಜ್ಞಾ ಆಂದೋಲನವು  ಕೃಷ್ಣನನ್ನು ಕೇಂದ್ರೀಕೃತಗೊಳಿಸುವ ಪ್ರಯತ್ನವಾಗಿದೆ. ಏಕೆಂದರೆ ಇದನ್ನು ಕಾರ್ಯರೂಪಗೊಳಿಸಿದರೆ, ಎಲ್ಲ ಚಟುವಟಿಕೆಗಳು ತನಗೆ ತಾನೇ ಸುಂದರ ಮತ್ತು ಆನಂದಮಯವಾಗಿಬಿಡುತ್ತವೆ.

– ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,

ಶ್ರೀಮದ್‌ ಭಾಗವತ, 10.13.8, ಭಾವಾರ್ಥ

* * * *

ಭಗವಂತನು ತನಗೆ ಶರಣಾದ ಭಕ್ತನನ್ನು ಎಂದಿಗೂ ತಿರಸ್ಕರಿಸುವುದಿಲ್ಲ ಅಥವಾ ಅವನ ಅಪೇಕ್ಷೆಗಳನ್ನು ಪೂರೈಸದೆ ಇರುವುದೂ ಇಲ್ಲ. ನಮ್ಮೆಲ್ಲ ಅಗತ್ಯಗಳನ್ನು ಪೂರೈಸುವ ಮತ್ತು ನಮಗೆ ಸಂಪೂರ್ಣ ರಕ್ಷಣೆ ನೀಡುವ ಏಕೈಕ ಶಕ್ತಿಯು ಭಗವಂತನಲ್ಲಿದೆ. ಇದನ್ನು ನಾವು ಅರಿತರೆ ನಾವು ನಿರ್ಭಯದಿಂದ ಇರಬಹುದು. ನಾವು ಆತಂಕದಿಂದ ಇರಬೇಕಾಗಿಲ್ಲ. ನಾವು ಸಂತೋಷವನ್ನು ಹೊಂದುತ್ತೇವೆ.

– ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ,

ಅಮೃತ ವಾಣಿ, `ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳು’

* * * *

`ಬ್ರಹ್ಮನ್‌’ ಎಂಬುವುದು ಸಂಪೂರ್ಣವಾಗಿ ದೇವೋತ್ತಮ ಪರಮ ಪುರುಷನನ್ನು ಸೂಚಿಸುತ್ತದೆ. ಅವನೇ ಶ್ರೀ ಕೃಷ್ಣ. ಇದು ಎಲ್ಲ ವೈದಿಕ ಸಾಹಿತ್ಯದ ತೀರ್ಪು.

– ಶ್ರೀ ಚೈತನ್ಯ ಮಹಾಪ್ರಭು, 

ಶ್ರೀ ಚೈತನ್ಯ-ಚರಿತಾಮೃತ, ಮಧ್ಯ-ಲೀಲ, 6.147

* * * *

ಓ! ಭರತ ವಂಶಜನಾದ ಅರ್ಜುನನೇ, ಯಾರು ನನ್ನನ್ನು ಸಂದೇಹವಿಲ್ಲದೆ ದೇವೋತ್ತಮ ಪರಮ ಪುರುಷನೆಂದು ತಿಳಿಯುತ್ತಾನೋ ಅವನು ಎಲ್ಲವನ್ನೂ ಬಲ್ಲವನೆಂದು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಅವನು ಸಂಪೂರ್ಣವಾಗಿ ಭಕ್ತಿಸೇವೆಯಲ್ಲಿ ನಿರತನಾಗಿರುತ್ತಾನೆ.

– ಶ್ರೀ ಕೃಷ್ಣ, ಭಗವದ್ಗೀತೆ, 15.19

* * * *

ಓ! ನನ್ನ ಪ್ರಭುವೇ, ನಿನ್ನ ಭಕ್ತರು ನಿಜವಾದ ಶ್ರವಣ ವಿಧಾನದ ಮೂಲಕ, ಕಿವಿಗಳ ಮೂಲಕ ನಿನ್ನನ್ನು ಕಾಣಬಹುದು. ಇದರಿಂದ ಅವರ ಹೃದಯಗಳು ಪರಿಶುದ್ಧವಾಗುತ್ತವೆ. ಆಗ ನೀನು ಅಲ್ಲಿ ನಿನ್ನ ಆಸನವನ್ನು ಸ್ವೀಕರಿಸುವೆ. ನಿನ್ನ ಭಕ್ತರ ಮೇಲೆ ಅದೆಷ್ಟು ಕರುಣೆ ಉಳ್ಳವನೆಂದರೆ, ಅವರು ಸದಾ ಧ್ಯಾನ ಮಾಡುತ್ತಿರುವ ನಿಶ್ಚಿತ ರೂಪದಲ್ಲಿಯೇ ನೀನು ಅವರಿಗೆ ವ್ಯಕ್ತವಾಗುವೆ.

– ಶ್ರೀ ಬ್ರಹ್ಮ, ಶ್ರೀಮದ್‌-ಭಾಗವತ , 3.9.11

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi