ಸರ್ವ ಶಕ್ತನಾದ ದೇವೋತ್ತಮ ಪರಮ ಪುರುಷನು ತನ್ನ ಕಾರಣ ರಹಿತ ಕೃಪೆಯಿಂದ ಭೂಮಿಯ ಮೇಲೆ ಆವಿರ್ಭವಿಸುತ್ತಾನೆ. ಆತನ ಕಾರ್ಯಗಳು ಬಹುಮಟ್ಟಿಗೆ ಐಹಿಕ ಮನುಜರ ವಿಧಾನದಲ್ಲೇ ಇರುತ್ತವೆ. ಆದರೆ ಅದೇ ಸಮಯದಲ್ಲಿ ಅವು ಅಸಾಧಾರಣವಾಗಿಯೂ ಇರುತ್ತವೆ. ಏಕೆಂದರೆ ಭಗವಂತ ಸರ್ವಶಕ್ತ. ಅವನು ಬದ್ಧಾತ್ಮರ ಒಳಿತಿಗಾಗಿ ಹೀಗೆ ಮಾಡುತ್ತಾನೆ. ಅದರಿಂದ ಲೌಕಿಕರು ತಮ್ಮ ಗಮನವನ್ನು ದಿವ್ಯದತ್ತ ಹರಿಸಬಹುದಾಗಿದೆ. ಹೀಗೆ ಮಾಡುವುದರಿಂದ ಬದ್ಧಾತ್ಮರು ಹಂತ ಹಂತವಾಗಿ ಅಲೌಕಿಕ ಸ್ಥಿತಿಗೆ ಏರುವರು: ಸಕಲ ಆಪತ್ತುಗಳ ತವರಾದ ಅವಿದ್ಯಾ ಸಾಗರವನ್ನು ಸುಲಭವಾಗಿ ದಾಟುವರು.
– ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀಮದ್ ಭಾಗವತ, 1.6.34, ಭಾವಾರ್ಥ
* * * *
ಓ! ರಾಜಶ್ರೇಷ್ಠನೇ, ಶ್ರದ್ಧೆ ಉಳ್ಳವನು, ದೇವೋತ್ತಮ ಪರಮ ಪುರುಷನ ಮಹಾ ಮಹಿಮೆಗಳನ್ನು ಸತತವಾಗಿ ಕೇಳುವವನು, ಸದಾ ಕೃಷ್ಣಪ್ರಜ್ಞೆ ಸಂಸ್ಕಾರದಲ್ಲಿ ತೊಡಗುವವನು ಮತ್ತು ಭಗವಂತನ ಲೀಲೆಗಳ ಶ್ರವಣದಲ್ಲಿ ನಿರತನಾಗಿರುವವನು ಅತಿ ಶೀಘ್ರವಾಗಿ ದೇವೋತ್ತಮನನ್ನು ಮುಖಾಮುಖಿಯಾಗಿ ಕಾಣಲು ಅರ್ಹನು.
– ಶ್ರೀಲ ಶುಕದೇವ ಗೋಸ್ವಾಮಿ, ಶ್ರೀಮದ್ ಭಾಗವತ 4.29.38
* * * *
ಶಿರದ ಪರಿಪೂರ್ಣತೆಯು ದೇವೋತ್ತಮನಿಗೆ ಸಾಷ್ಟಾಂಗ ಗೌರವ ಸಲ್ಲಿಸುವುದು, ಉಸಿರಾಟದ ಪರಿಪೂರ್ಣತೆಯು ಭಗವಂತನನ್ನು ಪೂಜೆ ಮಾಡುವುದು, ಮನಸ್ಸಿನ ಪರಿಪೂರ್ಣತೆಯು ಅವನ ಅಲೌಕಿಕ ಗುಣಗಳ ವಿವರವನ್ನು ಶೋಧಿಸುವುದು ಮತ್ತು ಮಾತಿನ ಪರಿಪೂರ್ಣತೆಯು ಅವನ ಗುಣಗಳ ವೈಭವವನ್ನು ಜಪಿಸುವುದು ಎಂದು ಸ್ವರ್ಗ ಪ್ರದೇಶಗಳ ನಿವಾಸಿಗಳಿಗೆ ಗೊತ್ತು.
– ರಾಜ ಕುಲಶೇಖರ, ಮುಕುಂದ ಮಾಲಾ ಸೋತ್ರ – 46
* * * *
ಕಾಮ, ಕ್ರೋಧ, ಗೊಂದಲ, ಮರೆಯುವಿಕೆ, ಬುದ್ಧಿವಂತಿಕೆಯ ನಾಶ ಮತ್ತು ಸಂಪೂರ್ಣ ಅನಾಹುತಕ್ಕೆ ಲೌಕಿಕ ಸಂಗವೇ ಕಾರಣ. ಐಹಿಕ ಸಂಗದಿಂದ ಅಲೆಗಳಂತೆ ಮೇಲೇಳುವ ಈ ಕೆಟ್ಟ ಪರಿಣಾಮಗಳು ಸಂಕಷ್ಟದ ಸಾಗರವಾಗಿಬಿಡುತ್ತವೆ. ಯಾರು ಮಾಯೆಯ ಆಚೆಗೆ ದಾಟುವರು? ಯಾರು ಲೌಕಿಕ ಸಂಗವನ್ನು ಬಿಡುವರೋ, ಯಾರು ಋಷಿಗಳ ಸೇವೆ ಮಾಡುವರೋ ಮತ್ತು ನಿಸ್ವಾರ್ಥಿಗಳಾಗುವರೋ ಅವರು.
– ಶ್ರೀ ನಾರದ ಮುನಿ, ನಾರದ ಭಕ್ತಿಸೂತ್ರ, 44-46
* * * *
ಓ ನನ್ನ ನಾಲಗೆಯೇ, ನಿನಗೆ ಸಿಹಿ ಪದಾರ್ಥ ಮತ್ತು ವಿವಿಧ ರುಚಿಗಳೆಂದರೆ ತುಂಬ ಇಷ್ಟ. ನಾನು ನಿನಗೆ ಅತಿ ಶ್ರೇಷ್ಠವಾದ ನಿಜವನ್ನು ತಿಳಿಸುವೆ, ಅದು ಅತ್ಯಂತ ಲಾಭದಾಯಕ ಕೂಡ. ದಯೆಯಿಟ್ಟು ಈ ಸಿಹಿಯಾದ ಪದಗಳ ಉಚ್ಚಾರಣೆ ಮಾಡು – ಗೋವಿಂದ, ದಾಮೋದರ ಮತ್ತು ಮಾಧವ.
– ಶ್ರೀಲ ಬಿಲ್ವಮಂಗಳ ಠಾಕೂರ, ಗೋವಿಂದ ದಾಮೋದರ ಸ್ತೋತ್ರ, 40
* * * *






Leave a Reply